ಗೋಕುಲ ನಿರ್ಗಮನದ ದೃಶ್ಯ ಕಾವ್ಯ


Team Udayavani, Nov 24, 2017, 3:54 PM IST

24-34.jpg

ಮೌನದಲ್ಲಿ ವಿಕಾಸದ ದರ್ಶನವನ್ನು ಕಂಡವರು ಹಿರಿಯ ಕವಿ ಪು.ತಿ.ನ. ಅವರ ಎರಡು ಗೀತ ನಾಟಕಗಳಲ್ಲಿ ಒಂದಾದ ಗೋಕುಲ ನಿರ್ಗಮನ ಮಂಗಳೂರಿನ ಡಾನ್‌ ಬಾಸ್ಕೋ ಸಭಾಂಗಣದಲ್ಲಿ ನ.6ರಂದು ಪ್ರದರ್ಶನಗೊಂಡಿತು. ವಿದ್ದು ಉಚ್ಚಿಲ್‌ ನಿರ್ದೇಶನದಲ್ಲಿ ನಂದಗೋಕುಲ ತಂಡದ ಕಲಾವಿದೆಯರು ಪ್ರದರ್ಶಿಸಿದ ಈ ನಾಟಕ ಮಂಗಳೂರಿನಲ್ಲಿ ಭವಿಷ್ಯದ ರಂಗ ಚಟುವಟಿಕೆ ಗಳಿಗೆ ಅವಶ್ಯವಾದ ರಂಗಕರ್ಮಿಗಳನ್ನು ತಯಾರು ಮಾಡುವ ಪ್ರಯತ್ನ ದಂತೆಯೂ ಇತ್ತು. 

ನಾಟಕದಲ್ಲಿ ಪಾತ್ರ ವಹಿಸಿ ದವರಲ್ಲಿ ಇಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲ ಮೂರನೇ ತರಗತಿಯಿಂದ ಹಿಡಿದು ಪದವಿಯವರೆಗಿನ ತರಗತಿಗಳ ವಿದ್ಯಾರ್ಥಿಗಳು. ಬಹುತೇಕ ಮಂದಿ ನೃತ್ಯದ ಹಿನ್ನೆಲೆ ಇರುವವರಾದ್ದರಿಂದ ಪೂರ್ವಾರ್ಧದ ಉತ್ಸಾಹ, ಸಂಭ್ರಮದ ಚಲನೆ ರಂಗವನ್ನು ವ್ಯಾಪಿಸಿ ಚೇತೋಹಾರಿಯಾಗಿತ್ತು.

ನಂದಗೋಕುಲದಲ್ಲಿ ಇದ್ದ ಕೃಷ್ಣ ಮಥುರೆಗೆ ಪ್ರಯಾಣಿಸು ವವರೆಗಿನ ದೃಶ್ಯಾವಳಿಗಳನ್ನುಳ್ಳ ಈ ನಾಟಕ ಪೂರ್ವಾರ್ಧದಲ್ಲಿ ಸಂಪೂರ್ಣ ಉತ್ಸಾಹಭರಿತ. ಸೊಂಟಕ್ಕೆ ಕೊಳಲು ಕಟ್ಟಿಕೊಂಡ ಕೃಷ್ಣ, ಗೋಪಿಕೆಯರ ಒಡನಾಟದಲ್ಲಿ ಇಡೀ ಊರನ್ನೇ ಸಂಭ್ರಮದಲ್ಲಿರಿಸುತ್ತಾನೆ. ಗೋಪಿಕೆಯರ ಜತೆ ಆತನ ಬಾಂಧವ್ಯ, ಅದರಲ್ಲಿ ಕೊಳಲಿನ ಮಹತ್ವ, ಕೊನೆಯಲ್ಲಿ ಊರನ್ನು ತೊರೆದು ಹೋಗಬೇಕಾದಾಗ “ಬಿದಿರಿನ ಕೋಲಿನ’ ಬಗ್ಗೆ ಕೃಷ್ಣ ತೋರುವ ಭಾವನಾತ್ಮಕತೆ, ಅದನ್ನು ಕಸಿಯುವ ಅಣ್ಣ ಬಲರಾಮನಲ್ಲಿ ಅಂಗಲಾಚುವ ದೃಶ್ಯ, ಅದನ್ನು ಬಿಸುಟಾಗ ಪಡುವ ಯಾತನೆ, ಕೊನೆಗೆ ಅದನ್ನು ಕಾಪಾಡು ಎಂದು ವನದೇವಿ ಸಹಿತ ಪ್ರಕೃತಿಯಲ್ಲಿ ಕೃಷ್ಣನಿಡುವ ಮೊರೆ ಅದ್ಭುತ ಭಾವಕೋಶದ ಸೃಷ್ಟಿಗೆ ಕಾರಣವಾಗುತ್ತದೆ. ಕೊನೆಯಲ್ಲಿ ಆ ಕೊಳಲು ರಾಧೆಯ ಕೈಸೇರುವಲ್ಲಿಗೆ, ಕೃಷ್ಣ ಗೋಕುಲ ತೊರೆದು ಹೋಗುವಲ್ಲಿಗೆ ನಾಟಕದ ನಿಲುಗಡೆ.

ಪೂರ್ವಾರ್ಧದಲ್ಲಿದ್ದ ಸಂಭ್ರಮ ಕ್ರಮೇಣ ತೆಳ್ಳಗಾಗಿ ಕೃಷ್ಣ ಗೋಕುಲ ತೊರೆಯಬೇಕಾದ ಸಂದರ್ಭ ಕಾಣಿಸಿಕೊಳ್ಳುವ ವ್ಯಾಕುಲತೆ ಮತ್ತು ಆಮೇಲಿನ ವಿಷಣ್ಣತೆ ಅಭಿವ್ಯಕ್ತಿಯಲ್ಲಿ ಯಾವ ಕಲಾವಿದರೂ ಸೋಲಲಿಲ್ಲ ಎನ್ನುವುದರಲ್ಲಿ ಇಡೀ ನಾಟಕದ ಹೆಚ್ಚುಗಾರಿಕೆ ಇದೆ. ನಂದಗೋಕುಲದ ಪ್ರೇಮಭೂಮಿಯಿಂದ ಮಥುರೆಯ ಕರ್ಮಭೂಮಿಗೆ ತೆರಳುವ ಕೃಷ್ಣನ ಹಲವು ಭಾವಗಳಿಗೆ ಪಾತ್ರಧಾರಿ ಜೀವ ತುಂಬಿದ್ದಾರೆ. ಈ ನಾಟಕ ನಟ ವರ್ಗದಿಂದ ಹೆಚ್ಚಿನ ಶಕ್ತಿ ಉತ್ಸಾಹಗಳನ್ನು ಬೇಡುತ್ತದೆ, ಅದಕ್ಕೆ ಇಲ್ಲಿಯ ನಟರು ತಮ್ಮ ವಯಸ್ಸಿಗೆ ಮೀರಿ ನ್ಯಾಯ ಕೊಟ್ಟಿದ್ದಾರೆ. 

“ಬಿ.ವಿ. ಕಾರಂತರು ಕಟ್ಟಿದ ಗೋಕುಲ ನಿರ್ಗಮನಕ್ಕಿಂತ ಕೊಂಚ ಭಿನ್ನವಾಗಿ ಇದನ್ನು ರೂಪಿಸಿದ್ದೇವೆ, ಹಾಡುಗಳು ಬೇರೆ’ ಎನ್ನುವ ವಿದ್ದು ಉಚ್ಚಿಲ್‌ ಇಡೀ ನಾಟಕ ನಿರ್ವಹಣೆಯಲ್ಲಿ ತೋರಿರುವ ಎಚ್ಚರ, ಎಳೆಯ ಕಲಾವಿದರಿಗೆ ತಕ್ಕಂತೆ ಕಟ್ಟಿದ ದೃಶ್ಯಗಳು ನಾಟಕದ ಬಗೆಗಿನ ಅವರ ಶ್ರದ್ಧೆಯನ್ನು ತೋರಿಸುತ್ತವೆ. ನಾಟಕದಲ್ಲಿ ಮುಖ್ಯ ಪಾತ್ರವಾದ ಮೋಹನಮುರಳಿಯನ್ನು ನಿಶ್ಶಬ್ದವಾಗಿ ನುಡಿಸಿ ಗೀತ, ಸಂಗೀತ, ಅಭಿನಯಕ್ಕೆ ಪ್ರಾಧಾನ್ಯ ತುಂಬುವ ಮೂಲಕ ಕೊಳಲಿಗೆ ಧ್ವನಿ ಕೊಟ್ಟ ಬಗೆ ನಾಟಕದ ಧನಾತ್ಮಕ ಅಂಶ. ಗೋಕುಲದ ಜನತೆ, ರಾಧಾ-ಕೃಷ್ಣರ ಸಂಭ್ರಮ, ಸಂತಸ, ಅಸಹಾಯಕತೆ ಇವುಗಳನ್ನು ಎಳೆಯ ಕಲಾವಿದರ ಮೂಲಕ ಅಭಿವ್ಯಕ್ತಗೊಳಿಸುವಲ್ಲಿ ನಿರ್ದೇಶಕರ ಶ್ರಮ ಗಮನಿಸಬೇಕಾದುದು. ಏಕೆಂದರೆ ಎಳೆಯ ಬಾಲಕಿಯರು ರಂಗದಲ್ಲಿ ಜೀವಂತಿಕೆ ತುಂಬಿ ನಟಿಸಿದ್ದು, ನಂದಗೋಕುಲವನ್ನು ನಿಜವಾದ ಆರ್ಥದಲ್ಲಿ ಕಟ್ಟಿಕೊಟ್ಟದ್ದು, ರಂಗವನ್ನು ಪೂರ್ಣವಾಗಿ ಬಳಸಿಕೊಂಡದ್ದು ವಿಶೇಷ. ಗೋಕುಲ ನಿರ್ಗಮನ ನಾಟಕದ ಭಾಷೆ ಕಾವ್ಯಾತ್ಮಕವಾದುದು. ಗೀತ ನಾಟಕವಾದುದರಿಂದ ಗೀತದ ಮೂಲಕವೇ ದೃಶ್ಯವನ್ನು ಕಟ್ಟಿಕೊಡಬೇಕು. ಅಲ್ಲಿ ಪ್ರತಿಯೊಂದು ಪದವೂ ಹಾಡೇ ಆಗಿದೆ. ಎಳೆಯರಿಂದ ಈ ನಾಟಕವನ್ನು ರಂಗಕ್ಕೆ ಒಗ್ಗಿಸಿಕೊಳ್ಳುವುದು ಕಷ್ಟವಾಗಿದ್ದಾಗಲೂ ಅವರ ಉತ್ಸಾಹವನ್ನೇ ಬಂಡವಾಳವಾಗಿಸಿಕೊಂಡು ನಿರ್ದೇಶಕರೇ ಹೇಳಿದಂತೆ ಪ್ರಯೋಗವನ್ನು ಯಶಸ್ವಿಯಾಗಿಸಿದ್ದಾರೆ. ಸರಳ ರಂಗಸಜ್ಜಿಕೆ, ಬೆಳಕಿನ ವೈಭವದಲ್ಲಿ ದೃಶ್ಯ ಕಾವ್ಯವಾಗಿದೆ.

ಅನಿರೀಕ್ಷಿತವಾದ ಮಿಂಚು ಗುಡುಗು ಸಿಡಿಲು ಮಳೆ ಹೊರಗೆ ಸುರಿಯುತ್ತಿದ್ದರೆ, ಒಳಗಡೆ ವೃಂದಾವನದಲ್ಲಿ ರಾಧಾ ಕೃಷ್ಣರ ಪ್ರೇಮ, ನಂದಗೋಕುಲದ ಜನತೆಯ ಪ್ರೀತಿ ಕರಗಿ ಗೀತೆಯಾಗುತ್ತಿತ್ತು. ಕೃಷ್ಣನ ಮಾನವಪ್ರೇಮ, ಕರ್ತವ್ಯದ ನಿಷ್ಠುರತೆಯ ಮಿಂಚು ಮಿಂಚುತ್ತಿತ್ತು. ಒಂದೂಮುಕ್ಕಾಲು ಗಂಟೆಯ ಈ ನಾಟಕ ನೃತ್ಯ, ಸಂಗೀತ ಸಂಭಾಷಣೆಗಳ ಔಚಿತ್ಯಪೂರ್ಣ ಸಂಗಮದಿಂದ, ಎಳೆಯರ ಉತ್ಸಾಹದಿಂದ, ಗೀತಾ ಅರೆಹೊಳೆ ಅವರ ವಸ್ತ್ರವಿನ್ಯಾಸದ ಸೊಬಗಿನಿಂದ ರಸಿಕರ ಕಣ್ಣಿಗೆ ಹಬ್ಬ ನೀಡಿದೆ. ನಿರ್ಮಾಣ ನಿರ್ವಹಣೆ ಹೊತ್ತ ಸದಾಶಿವ ಅರೆಹೊಳೆ ಅವರ ಪ್ರಕಾರ 25 ಕುಟುಂಬಗಳ 30 ಕಲಾವಿದರು ಇದರೊಳಗಿದ್ದಾರೆ, 100 ಮಂದಿ ಇದಕ್ಕಾಗಿ ದುಡಿದಿದ್ದಾರೆ. ಆ ದುಡಿಮೆಗೆ ಈ ನಾಟಕ ಪ್ರದರ್ಶನ ನ್ಯಾಯ ಕೊಟ್ಟಿದೆ. ಬೆಳಕನ್ನು ಬೇಕಾದಂತೆ ದುಡಿಸಿಕೊಂಡ ತಂತ್ರಜ್ಞಾನ, ಧ್ವನಿ ತಂತ್ರಜ್ಞಾನಕ್ಕೆ ಜೀವ ತುಂಬುವಲ್ಲಿ ವಿಫ‌ಲವಾದುದರಿಂದ ಸಂಭಾಷಣೆಯ ಭಾಗಗಳು ಪ್ರೇಕ್ಷಕರ ಕಿವಿ ತಲುಪದೇ ಉಳಿದವು ಎನ್ನುವುದು ಸಿಹಿಯೊಳಗಿನ ಒಂದು ಕಹಿ ಒಗರು.

ಡಾ| ನಾಗವೇಣಿ ಮಂಚಿ

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.