ಗಾನ ನಮನ
Team Udayavani, Feb 18, 2017, 7:29 AM IST
ಗುರುವಾಯನಕೆರೆ ಹವ್ಯಕ ಸಭಾ ಭವನದಲ್ಲಿ ಶ್ರೀ ಪುರಂದರ ದಾಸರ ಹಾಗೂ ಶ್ರೀ ತ್ಯಾಗರಾಜರ ಸಂಸ್ಮರಣೆ ನಿಮಿತ್ತ ಈಚೆಗೆ ಗಾನ ನಮನ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ತಾಲೂಕಿನ ಎಲ್ಲ ಸಂಗೀತ ಶಿಕ್ಷಕರು, ಕಲೋಪಾಸಕರು, ವಿದ್ಯಾರ್ಥಿಗಳು ಕಲೆತು ಗಾನ ನಮನಗೈದರು. ಉತ್ತರಾರ್ಧದಲ್ಲಿ ಗಾನಕೇಸರಿ ವಿ| ಕುದ್ಮಾರು ಎಸ್. ವೆಂಕಟ್ರಾಮನ್ ಅವರಿಂದ ಉನ್ನತ ಮಟ್ಟದ ಸಂಗೀತ ಕಛೇರಿ ನಡೆಯಿತು. ವಯಲಿನ್‌ನಲ್ಲಿ ಟಿ.ಜಿ. ಗೋಪಾಲ ಕೃಷ್ಣನ್, ಮೃದಂಗದಲ್ಲಿ ಸುನಿಲ್ ಸುಬ್ರಹ್ಮಣ್ಯ ಹಾಗೂ ಮೋರ್ಸಿಂಗ್‌ನಲ್ಲಿ ಬಾಲಕೃಷ್ಣ ಹೊಸಮನೆ ಕಛೇರಿಗೆ ಕಳೆ ತಂದುಕೊಟ್ಟರು.
ಪೂರ್ಣಚಂದ್ರಿಕ ರಾಗದಲ್ಲಿ ಸ್ವಂತ ರಚನೆ ಉರುವಾರುಕ ಕ್ಷೇತ್ರಾಧಿಪ, ಜಯ ಮನೋಹರಿ ರಾಗದಲ್ಲಿ ಶ್ರೀರಮ್ಯ ಚಿತ್ತ, ಸಿಂಧುಕನ್ನಡ ರಾಗದಲ್ಲಿ ನನ್ನು ಗನ್ನ ತಲ್ಲಿ, ರಾಮಪ್ರಿಯ ರಾಗದ ಸ್ವಂತ ರಚನೆ ಶ್ರೀರಾಮಪ್ರಿಯ, ಜನರಂಜನಿಯಲ್ಲಿ ಅಂಬಾ ಪಾಹಿ ರಾಜೇಶ್ವರೀ, ಆರಭಿಯ ಓ ರಾಜೀವಾಕ್ಷ, ಅಭೋಗಿಯಲ್ಲಿ ಅಪರಾಧಿ ನಾನಲ್ಲ, ಕೋಕಿಲ ಪ್ರಿಯ ರಾಗದ ದಾಶರಥೆ, ಹಿಂದೋಳ ರಾಗ ದಲ್ಲಿ ಸ್ವಂತ ರಚನೆ ದಯ ದೀದ್ ತೂಲ ಮತ್ತು ಭೈರವಿ ಕೃತಿಯೊಂದಿಗೆ ಕಛೇರಿ ಸಂಪನ್ನಗೊಂಡಿತು. ಕುದ್ಮಾರು ಅವರ ಗಾನಾಭಿವ್ಯಕ್ತಿ ಕಿವಿಗೆ ಹೇಗೆ ಸುಮಧುರವೋ ಅಂತೆಯೇ ಅವರ ಹಾವಭಾವದ ಮೂಲಕ ಒಂದು ದಿವ್ಯವಾದ ಸೌಂದರ್ಯದ ವರ್ತುಲ ನಿರ್ಮಾಣವಾಗುತ್ತದೆ.
ಸಂಸ್ಕಾರ ಭಾರತಿ ಹಳೆಕೋಟೆ ಇವರ ಆಶ್ರಯದಲ್ಲಿ ಪ್ರತೀ ವರುಷವು ಇಂತಹ ಶ್ರೇಷ್ಠ ಕಾರ್ಯಕ್ರಮಗಳು ಮೂಡಿ ಬರುತ್ತಿವೆ.
ಎ.ಡಿ. ಸುರೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.