ಗುರು ಮಾಂಬಾಡಿಯವರಿಗೆ ಸಮ್ಮಾನ
Team Udayavani, Sep 7, 2018, 6:00 AM IST
ಮಾಂಬಾಡಿ ಸುಬ್ರಹ್ಮಣ್ಯ ಭಟ್ 50 ವರ್ಷಗಳಿಂದ ಹಿಮ್ಮೇಳ ತರಬೇತಿ ನಡೆಸುತ್ತಾ ಬಂದಿದ್ದಾರೆ. ತೀರ್ಥರೂಪರಿಂದಲೇ ಹಿಮ್ಮೇಳ ಕರಗತ ಮಾಡಿಕೊಂಡ ಬಳಿಕ ಕಟೀಲು, ಕದ್ರಿ, ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟ ನಡೆಸಿ ಇದೀಗ ಮೇಳದ ಬದುಕಿಗೆ ವಿರಾಮ ಹಾಡಿ ಆಸಕ್ತರಿಗೆ ಹಿಮ್ಮೇಳ ಕಲಿಸುತ್ತಿದ್ದಾರೆ.
ಚೆಂಡೆ ಮದ್ದಳೆ ಎರಡರಲ್ಲೂ ಅವರದ್ದು ಪಳಗಿದ ಕೈ. ಕಲಿಯಲು ಬರುವ ಪ್ರತಿಯೋರ್ವ ವಿದ್ಯಾರ್ಥಿಯನ್ನೂ ಹುರಿದುಂಬಿಸುತ್ತಾ ಆತನಿಗೆ ಧೈರ್ಯ ಆತ್ಮವಿಶ್ವಾಸ ತುಂಬುತ್ತಾ ಕಲಿಸುವ ಪರಿ ಅಮೋಘವಾದದ್ದು. ಆದ್ಧರಿಂದಲೇ ಇಂದು ಒಂದು ಸಾವಿರಕ್ಕೂ ಮಿಕ್ಕ ಯಕ್ಷಗಾನ ಶಿಷ್ಯರನ್ನು ಹೊಂದಿರುವ ನಿಜಾರ್ಥದ ಗುರು.
ಮೀಯಪದವು ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ದೇಗುಲದಲ್ಲಿ ಸೆಪ್ಟಂಬರ್ 8 ರಂದು ಜರಗುವ ವೇದಮೂರ್ತಿ ಗಣೇಶ ನಾವಡ ಹಾಗೂ ಬಳಗದವರ ಸೇವಾರೂಪದ ಉದಯೋನ್ಮುಖ ಭಾಗವತರ ಯಕ್ಷಗಾನಾರ್ಚನೆ ಜರಗಲಿದ್ದು ಈ ಸಂದರ್ಭ ಸುಬ್ರಹ್ಮಣ್ಯ ಭಟ್ ಅವರ ಕಲಾ ಸಾಧನೆಯನ್ನು ಸಮ್ಮಾನಿಸಿ ಗೌರವಿಸುವ ಮೂಲಕ ಗುರುವಂದನೆ ಸಲ್ಲಿಸಲಾಗುವುದು.
ಯೋಗೀಶ ರಾವ್ ಚಿಗುರುಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.