ಗಾಯನ ಗಂಗೆ ಹರಿಸಿದ ಗುರುನಾಥ ನಾತು
Team Udayavani, Feb 2, 2018, 3:13 PM IST
ಕಳೆದ 18 ವರ್ಷಗಳಿಂದ ಉಜಿರೆಯ ಸಂಗೀತ ಸೌರಭ ಸಂಸ್ಥೆಯು ಹಿಂದೂಸ್ಥಾನಿ ಸಂಗೀತವನ್ನು ಪ್ರಚುರಪಡಿಸುವ ಉದ್ದೇಶದಿಂದ ಉಜಿರೆ ಜಾತ್ರೆಯ ಸಂದರ್ಭ ಹಿಂದೂಸ್ಥಾನಿ ಸಂಗೀತ ಸಾಧಕರನ್ನು ಪರಿಚಯಿಸುತ್ತಾ ಬಂದಿದೆ.
ಈ ಬಾರಿ ಜ. 19 ರಂದು ಪಂ| ಗುರುನಾಥ ನಾತು ಸವಣಾಲು ಇವರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಉಜಿರೆ ಶಾರದಾ ಮಂಟಪದಲ್ಲಿ ಪ್ರಸ್ತುತಗೊಂಡಿತು. ನಾತು ಜಯಪುರ್ ವಾಲೆಘರಾಣೆಯನ್ನು ಕರಗತ ಮಾಡಿಕೊಂಡವರು. ಕಛೇರಿಯನ್ನು ರಾಗ ಜಯಜಯವಂತಿಯ ಆಲಿ ಮೇರೋ ಪಿಯಾ ಎಂಬ ಖಯಾಲ್ನ್ನು ವಿಲಂಬಿತ ಏಕತಾಲ್ನಲ್ಲಿ ಆರಂಭಿಸಿ ಕೈಸೇ ಕಟೀ ಹೆ ದಿನ ರೈನಾ‰.. ಎಂಬ ಕೃತಿಯನ್ನು ಧತ್ತೀನ್ತಾಲ್ನಲ್ಲಿ ಕೊನೆಗೊಳಿಸಿದರು. ಬಳಿಕ ಅವರು ಆಯ್ದುಕೊಂಡದ್ದು ಭಜನ್ಗಳನ್ನು. ದರುಶನ ದೀ ಜೋ ಆಯಾ (ಮೀರಾ ಭಜನ್) ತಂಬೂರ ಮೀಟಿದವ ಭವಾಬ್ದಿದಾಟಿದವ‰.., ಎಂದು ಕಾಂಬೆನು ನಂದಗೋಪನ., ಭಲೆ ಬುರೇ ಸೋತೆರೆ ಹಮ್., ನಾನೇಕೆ ಪರದೇಶಿ ನಾನೇಕೆ ಬಡವನೋ‰., ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ, ಹಾಗೂ ಕೊನೆಯಲ್ಲಿ ಭೆ„ರವಿ ರಾಗದಲ್ಲಿನ ಭವಾನಿ ದಯಾನಿ ..
ಈ ಪೈಕಿ ತಂಬೂರ ಮೀಟಿದವ ಹಾಗೂ ಎಂದು ಕಾಂಬೆನು ಕೃತಿಗಳನು °ಭಾವಪೂರ್ಣತೆಯಿಂದ ಹಾಡಿದಾಗ ಶ್ರೋತಗಳಲ್ಲೂ ಭಕ್ತಿಭಾವದ ತರಂಗಗಳನ್ನು ಉಂಟುಮಾಡಿತು. ಗಾಯನಕ್ಕೆ ಹಾರ್ಮೋನಿಯಂನಲ್ಲಿ ಕೈಚಳಕ ತೋರಿದವರು ಕುಮಟಾದ ಗಂಧರ್ವ ಕಲಾ ಕೇಂದ್ರದ ನಿರ್ದೇಶಕ ವಾಸುದೇವತಾಮನ್ಕಾರ್ ಹಾಗೂ ತಬಲಾದಲ್ಲಿ ಉಜಿರೆ ಎಸ್ಡಿಎಂ ಕಾಲೇಜಿನ ಪ್ರಾಧ್ಯಾಪಕ ಗಣೇಶ್ ಶೆಂಡೆ ಇವರು. ಇವರಿಬ್ಬರೂ ನಾತು ಅವರ ಶಿಷ್ಯರು. ಇಬ್ಬರ ಸಾಥ್ ಗಾಯನಕ್ಕೆ ಸರಿಸಾಟಿಯಾಗಿ ಹಾಗೂ ಹೊಂದಾಣಿಕೆಯಿಂದ ಕೂಡಿತ್ತು.
ದೀಪಕ್ ಆಠವಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.