ಪಾದುಕಾ ಪಟ್ಟಾಭಿಷೇಕ ಸಂಕೀರ್ತನಾಮೃತ
Team Udayavani, Jan 31, 2020, 10:32 AM IST
ಮಂಗಳೂರಿನ ರಮಾ ಮಿಶನ್‌ನಲ್ಲಿ ಕಥಾ ಕೀರ್ತನಾ ರಂಗದ ಪ್ರತಿಭೆ ಮಂಜುಳಾ ಜಿ.ರಾವ್ ಇರಾ ಪಾದುಕಾ ಪಟ್ಟಾಭಿಷೇಕ ಸಂಕೀರ್ತನೆ ಯನ್ನು ಆಪ್ಯಾಯಮಾನ ವಾಗಿ ಮಂಡಿಸಿದರು.ಮಂಜುಳಾರಾವ್ ಶಂ ನ ಅಡಿಗ, ಭದ್ರಗಿರಿ ಅಚ್ಯುತದಾಸ್ ಮತ್ತು ಲಕ್ಷ್ಮಣದಾಸ ವೇಲಣ್‌ಕರ್‌ರವರ ಗುರುತ್ವದಲ್ಲಿ ಪಳಗಿದವರು. ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲೂ ನಿಪುಣರು.
ರಾಮ ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಟಾಗ ರಾಮನ ಸ್ವರ್ಣ ಪಾದುಕೆಗಳ ಪಟ್ಟಾಭಿಷೇಕವನ್ನು ಭರತನು ನಡೆಸುವ ಚಿತ್ರಣದ ಸಂಕೀರ್ತನೆ ಇದಾಗಿತ್ತು. ದೇವನನ್ನು ಜೀವ ಅನುಸರಿಸಬೇಕು ಎನ್ನುವ ಸಂದೇಶ ಹೊತ್ತ ಈ ಕಥಾಕೀರ್ತನೆಯನ್ನು ವಿದ್ವತ್ ಪೂರ್ಣವಾಗಿ ನಿರೂಪಿಸಿ ಕಾಲಕ್ಷೇಪವನ್ನು ಸಾರ್ಥಕ ಬದ್ಧಗೊಳಿಸಿದರು.
ನವರಸಗಳ ಭಾವಕ್ಕೆ ತಕ್ಕಂತೆ ರಾಗ, ಪೂರಕ -ಪ್ರಸ್ತುತ ವಿದ್ಯಮಾನ, ವಿನೋದಾವಳಿಗಳನ್ನು ಕತೆ ಉಪಕತೆಗಳೊಂದಿಗೆ ಏಕೀಕೃತಗೊಳಿಸಿ ಸುಮಧುರ ಶಾರೀರದೊಂದಿಗೆ ಅಲೌಕಿಕವನ್ನು ಲೌಕಿಕತೆಯಲ್ಲಿ ಸಂಲಗ್ನಗೊಳಿಸಿ, ಸುಜ್ಞಾನದ ಬೆಸುಗೆಯಲ್ಲಿ ಹಾವ-ಭಾವ, ನಿರರ್ಗಳ ವಾಕ್‌ಝರಿಯೊಂದಿಗೆ ವ್ಯಾಖ್ಯಾನಿಸಿ ಪರವಶಗೊಳಿಸಿದರು. ಹಾರ್ಮೋನಿಯಂನಲ್ಲಿ ರಮೇಶ್ ಹೆಬ್ಟಾರ್ ಮತ್ತು ತಬ್ಲಾದಲ್ಲಿ ಪ್ರಕಾಶ್ ಸಪ್ರ ಸಾಥ್ ನೀಡಿದರು.
– ಸಂದೀಪ್ ನಾಯಕ್ ಸುಜೀರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.