ಹಿಂದಿಯಲ್ಲಿ ಸಂದಾಯವಾಯಿತು ಗುರುದಕ್ಷಿಣಾ
Team Udayavani, Oct 4, 2019, 4:15 AM IST
ಮಂಗಳೂರು ಅಧಿಕೃತ ಭಾಷಾ ಅನುಷ್ಠಾನ ಸಮಿತಿ ಹಾಗೂ ಆಕಾಶವಾಣಿ ಮಂಗಳೂರು ಸಹಯೋಗದಲ್ಲಿ ಹಿಂದಿ ದಿವಸ್ ಆಚರಣೆ “ಇಂದ್ರ ಧನುಷ್’ ಅಂಗವಾಗಿ ಸರಯೂ ಮಕ್ಕಳ ಮೇಳದಿಂದ ಹಿಂದಿ ಯಕ್ಷಗಾನ “ಗುರುದಕ್ಷಿಣಾ’ ಏರ್ಪಡಿಸಲಾಗಿತ್ತು.
ಶ್ರೀಕೃಷ್ಣ – ಬಲರಾಮರು ಗುರು ಸಾಂದೀಪನಿಯವರ ಪುತ್ರನನ್ನು ಆತ್ಮಸ್ವರೂಪದಲ್ಲಿ ತಂದು ಗುರುದಕ್ಷಿಣೆ ನೀಡುವುದೇ ಈ ಕಥೆಯ ಸಾರ. ಕೃಷ್ಣ , ಪಂಚಜನನನ್ನು ಕೊಂದು ಅವನ ಬೆನ್ನ ಮೂಳೆಯ ಎಲುಬಿನಿಂದ ಶಂಖವನ್ನು ಸೃಷ್ಟಿಸಿ ಆ ರಾಕ್ಷಸನ ನೆನಪು ಉಳಿಯುವಂತೆ ಅದಕ್ಕೆ “ಪಾಂಚಜನ್ಯ’ ಎಂಬ ಹೆಸರನ್ನಿರಿಸುತ್ತಾನೆ. ದುಷ್ಟನ ವಧೆಯಿಂದ ಧರ್ಮಸಂಸ್ಥಾಪನೆಯ ಕೂಗಿಗಾಗಿ ಪಾಂಚಜನ್ಯ ಮೊಳಗಿತು. ಶೈಮಿನಿಯರಸನನ್ನು ಕಂಡು ಅವನಲ್ಲಿಂದ ಬಾಲಕನ ಆತ್ಮವನ್ನು ತಂದು ಗುರುಗಳ ಪಾದಕ್ಕೊಪ್ಪಿಸುವುದೇ ಈ ಪಾಂಚಜನ್ಯೋತ್ಪತ್ತಿ. ಡಾ| ದಿನಕರ ಪಚ್ಚನಾಡಿಯವರ ಪ್ರಸಂಗವನ್ನು ಹಾಗೂ ಬಿ.ಪ್ರಕಾಶ ಪೈಯವರ ಭಾಷಾಂತರವನ್ನು ಸರಯೂ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಪದ್ಯಗಳೂ ಹಿಂದಿ ಭಾಷೆಯಲ್ಲೇ ಇದ್ದದ್ದು ಪ್ರಸಂಗದ ಹೈಲೈಟ್. ಇದರ್ ಇಸ್ ತರಹ್ ರಾಮಕೃಷ್ಣನೆ ಅನುಜ್ ತು ಸುನು ಮೋರೇ … ಎಂಬಿತ್ಯಾದಿ ಹಾಡುಗಳು ಸತೀಶ್ ಶೆಟ್ಟಿ ಬೋಂದೇಲ್‌ರವರ ಮಧುರ ಕಂಠದಿಂದ ಬಹಳ ಸುಂದರವಾಗಿ ಮೂಡಿ ಬಂದು ಪ್ರಸಂಗದ ಅಂದವನ್ನು ಹೆಚ್ಚಿಸಿದುವು.
ವರ್ಕಾಡಿ ರವಿ ಅಲೆವೂರಾಯರ ನಿರ್ದೇಶನ ಈ ಯಕ್ಷ ಕಾಣೆಗಿತ್ತು. ಬಲರಾಮನಾಗಿ ಪ್ರಥಮ್ ರೈ, ವರುಣನಾಗಿ ಚಿಂತನ್ ಆರ್.ಕೆ., ಸಾನ್ವಿ ಜೆ. ಮತ್ತು ಅದ್ವಿತ್ ಸೇನಾವೀರರಾಗಿದ್ದರು. ವಿಜಯಲಕ್ಷ್ಮೀ ಎಲ…. ಪಂಚಜನನಾದರೆ ಚಿರಾಗ್ ಆರ್.ಕೆ., ಸಂಜನಾ ಜೆ. ರಾವ್, ಪೂರ್ವಿ ಎಸ್., ಹರ್ಷಿತ್ ಶೆಟ್ಟಿ ಬಲಗಳಾದರು. ಯಮಧರ್ಮನಾಗಿ ಅಕ್ಷಯ್ ಸಿ., ಮೃತ್ಯುವಾಗಿ ನಚಿತ್ ಕೆ., ಯಮಭಟರಾಗಿ ಸಾನ್ವಿ ಬಿ.ಕೆ., ಸಾರ್ಥಕ್ ಶೆಣೈ, ಹರಿಚರಣ್ ಆರ್.ಪಿ.ಯವರಿದ್ದರು. ಸುರೇಖಾ ಶೆಟ್ಟಿಯವರು ಗುರುವಾದರೆ, ಮಲ್ಲಿಕಾ ಜೀವನ್ ಗುರುಪತ್ನಿಯಾಗಿದ್ದರು. ಒಟ್ಟಂದದಲ್ಲಿ ಸುಂದರವಾದ ಪ್ರಸ್ತುತಿಯಾಗಿತ್ತು ಹಿಂದಿ ಯಕ್ಷಗಾನ “ಗುರುದಕ್ಷಿಣಾ’.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.