ಹಿಂದುಸ್ಥಾನಿ ಸಂಗೀತ ಸಾಧಕಿ ವರ್ಷಾ ಪ್ರಭು
Team Udayavani, Apr 13, 2018, 6:00 AM IST
ಬಂಟ್ವಾಳದ ದಾಮೋದರ ಪ್ರಭು ಮತ್ತು ಅನಿತಾ ದಂಪತಿಗಳ ಪುತ್ರಿಯಾದ ವರ್ಷಾ ಪ್ರಭು ಎಂಟರ ಪ್ರಾಯದಲ್ಲೇ ಸಂಗೀತ ಯಾನ ಆರಂಭಿಸಿದ್ದಾರೆ. ಸ್ವತಃ ತಬಲಾ ಕಲಾವಿದೆಯಾಗಿರುವ ತಾಯಿ ಅನಿತಾ ಪ್ರಭು ಅವರೇ ಸ್ಪೂರ್ತಿ ಮತ್ತು ಮೊದಲ ಗುರು.ಕಾಶೀ ಮಠದ ವೃಂದಾವನಸ್ಥ ಶ್ರೀಮತ್ ಸುಧೀಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದ ತನ್ನ ಸಂಗೀತ ಯಾತ್ರೆಗೆ ಸ್ಫೂರ್ತಿಯಾಯಿತು ಎನ್ನುತ್ತಾರೆ ವರ್ಷಾ. ಸಂಸಾರ ಮತ್ತು ವೃತ್ತಿಯೊಂದಿಗೆ ಸಂಗೀತ ಸಾಧನೆಯನ್ನೂ ಮಾಡಿ ಮೂರನ್ನೂ ಸಂಭಾಳಿಸಿಕೊಂಡು ಹೋಗಿ ಯಶಸ್ಸಾಗಿರುವ ಅಪೂರ್ವ ಕಲಾವಿದೆ ಇವರು.
ಬಂಟ್ವಾಳದ ಎಸ್.ವಿ.ಎಸ್. ವಿದ್ಯಾಸಂಸ್ಥೆ ಮತ್ತು ಚಿಕ್ಕಮಗಳೂರಿನ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ವರ್ಷಾ ವಿದ್ಯಾಭ್ಯಾಸದೊಂದಿಗೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಕಲಿತರು. ಎರಡೂ ರಂಗದಲ್ಲೂ ಪ್ರತಿಭಾವಂತೆಯಾಗಿರುವ ಅವರು ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪತಿಯೊಂದಿಗೆ ನೆಲೆಸಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.
ಪಂ| ಅರ್ಕುಳ ಶ್ರೀನಿವಾಸ್ ಶೆಣೈ ಮತ್ತು ನಾಗವೇಣಿ ಹೆಗ್ಡೆ ಇವರ ಸಂಗೀತದ ಗುರುಗಳು ತಬಲಾ ಮತ್ತು ಹಾರೊ¾àನಿಯಂನಲ್ಲೂ ಪಳಗಿದ್ದಾರೆ. ಹಲವಾರು ಪ್ರತಿಷ್ಠಿತ ಸಂಗೀತ ಕಛೇರಿಗಳು ಸೇರಿದಂತೆ ನೂರಾರು ಕಾರ್ಯಕ್ರಮಗಳು, ಸಿ.ಡಿ.ಗಳಲ್ಲಿ ಗಾಯನ, ಸಂಗೀತ ಸಂಯೋಜನೆಗೂ ಸೈ ಇವೆಲ್ಲ ಇವರ ಸಂಗೀತದ ಸಾಧನೆಗಳು.ಬಹುಮುಖ ಪ್ರತಿಭೆಯ ಈ ಗಾಯಕಿಯನ್ನು ಇತ್ತೀಚೆಗೆ ಲಾೖಲ ಶ್ರೀ ವೆಂಕಟರಮಣ ದೇವಳದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಶ್ರೀಪಾದರು ಸನ್ಮಾನಿಸಿ ಆಶೀರ್ವದಿಸಿದ್ದಾರೆ. ಎ.1 ರಂದು ಚೇಂಪಿಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಶ್ರೀ ಕಾಶೀಮಠಾಧೀಶರ ವಸಂತ ಮಾಸಾಚರಣೆಯ ಸಂದರ್ಭ ಶ್ರೀಗಳು ಇವರು ಗಾಯನ ಮಾಡಿದ “ಶ್ರೀ ಸುಧೀಂದ್ರ ಸ್ಮರಣಾರ್ಥ’ ಸಿ.ಡಿ.ಯನ್ನು ಬಿಡುಗಡೆ ಮಾಡಲಿದ್ದಾರೆ.
ಸಂದೀಪ್ ನಾಯಕ್ ಸುಜೀರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.