ಹುಂಬತನದ ವ್ಯಂಗ್ಯ ವಿಡಂಬನೆ ಪುಕ್ಕಟೆ ಸಲಹೆ

Team Udayavani, Oct 26, 2018, 12:23 PM IST

pukkate-salahe-1.jpg

ವರ್ತಮಾನ ಘಟನೆಗಳನ್ನು ಇರಿಸಿಕೊಂಡು, ಸಮಕಾಲೀನ ಸಮಾಜದ ಮನಸ್ಥಿತಿಯನ್ನು ಹಾಸ್ಯಭರಿತ ಮಾತುಗಳ ಮೂಲಕ ತಿವಿಯುವ ಕಲೆಯನ್ನು ಕರಗತ ಮಾಡಿಕೊಂಡಿರುವ ಎಚ್‌. ಡುಂಡಿರಾಜ್‌ ಅವರ ವಿಶಿಷ್ಟ ಶೈಲಿಯ ಮನಮುದಗೊಳಿಸುವ ನಾಟಕವನ್ನು ಲಾವಣ್ಯ(ರಿ.) ಬೈಂದೂರು ಇದರ ಹವ್ಯಾಸಿ ಯುವ ಕಲಾವಿದರು ಇತ್ತೀಚೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರದರ್ಶಿಸಿದರು. ಪ್ರಭಾವಶಾಲಿ ಇಲೆಕ್ಟ್ರಾನಿಕ್‌ ಮಾಧ್ಯಮಗಳ ಭರ್ಜರಿ ಪ್ರಚಾರವನ್ನು ಪಡೆದು ಯಶಸ್ಸಿನ ಶಿಖರದಲ್ಲಿ ಪ್ರತಿಷ್ಠಾಪಿಸಿಕೊಂಡಿರುವ ಜ್ಯೋತಿಷಿಗಳ ಭಂಡತನವನ್ನು ತೆರೆದಿಡುವ ನಾಟಕ ಸಭಿಕರನ್ನು ರಂಜಿಸಿತು.ಟಿವಿ ಜ್ಯೋತಿಷ್ಯ ಕಾರ್ಯಕ್ರಮಗಳಲ್ಲಿ ಪುಕ್ಕಟೆ ಸಲಹೆಗಾಗಿ ಮುಗಿಬೀಳುವ ಮೂರ್ಖ ಅಭಿಮಾನಿಗಳ ಹುಂಬತನವನ್ನು ತೆರೆದಿಡುವ ಡುಂಡಿರಾಜರ ಕಲ್ಪನೆಗೆ ಮೂರ್ತರೂಪ ಕೊಡಲು ಲಾವಣ್ಯ ಯುವ ಕಲಾವಿದರು ಶ್ರಮಿಸಿದರು.

ಆಕರ್ಷಕ ಉಡುಗೆ ತೊಟ್ಟು, ಕೈಗಳನ್ನು ಆಗಾಗ್ಗೆ ಹಿತಮಿತವಾಗಿ ಉಜ್ಜುತ್ತ ಹ್ಹಹ್ಹಹ್ಹ… ಎಂದು ಬಾಯಗಲಿಸಿ ಸೆಳೆಯುವ ಮೋಹಕ ನಗು ನಗುತ್ತಾ, ಠೀವಿಯಿಂದ ಕುಳಿತುಕೊಳ್ಳುವ ಭಂಗಿಗಳಿಂದ ಪ್ರೇಕ್ಷಕರ ಚಿತ್ತಾಕರ್ಷಿಸಿದ ಚಿನ್ನಾಭರಣಗಳಿಂದ ಅಲಂಕೃತ “ಟೈಮ್‌ ಪಾಸ್‌’ ಟಿವಿಯ ಪುಕ್ಕಟೆ ಜ್ಯೋತಿಷ್ಯ ಸಲಹೆಗಾರ ಲ್ಯಾಪಾನಂದ ಟಾಪಾನಂದ ಪರಮಾನಂದನಾಗಿ ಮೂರ್ತಿ ಬೈಂದೂರು ಭರಪೂರ ಮನರಂಜನೆ ನೀಡಿದರು. ಟಿವಿ ನಿರೂಪಕಿ ನೀರಾಳಾಗಿ ಸಲಹೆ ಪಡೆಯುವ ಮೂರ್ಖರ ದಡ್ಡತನಕ್ಕೆ ಕನ್ನಡಿ ಹಿಡಿದು ಪ್ರೌಢ ಅಭಿನಯದ ಮೂಲಕ ಚೈತ್ರಾ ನಾಟಕಕ್ಕೆ ಕಳೆಕಟ್ಟಿದರು.

ಪದಪುಂಜಗಳಿಂದಲೇ ಹಾಸ್ಯದ ಹೊನಲು ಹರಿಸುವ ಡುಂಡಿ ರಾಜ್‌ ಅವರ ಪಾತ್ರಗಳ ಸಂಭಾಷಣೆಗಳು, ಲ್ಯಾಪಾನಂದ ಟ್ಯಾಪಾನಂದ ಪರಮಾನಂದ, ತಲೆತಿಂತಾಯ ಎನ್ನುವಂತಹ ನಾಮಧೇಯಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದವು. ಬಸುರಿಯ ಸರ್ಜರಿ ಮಾಡಿ ಮಗು ತೆಗೆಯಲು ಶುಭ ಸಮಯ ಕೇಳುವ ಸಾವಿತ್ರಿ ಕತ್ರಿ(ಸ್ವಾತಿ ಅಡಿಗ), ತನಗೆ ಅವಾರ್ಡ್‌ ಯಾವಾಗ ಸಿಗಬಹುದು ಮತ್ತು ಅದಕ್ಕಾಗಿ ಏನು ಮಾಡಬೇಕು ಎಂದು ತಿಳಿಯಬಯಸುವ ಸಾಹಿತಿ ಚಿಕ್ಕ ಪುಟ್ಟಯ್ಯ (ಶಶಿಧರ ಕಾರಂತ್‌) ನಮ್ಮ ಸಮಾಜದಲ್ಲಿನ ವಿದ್ಯಾವಂತರ ಮೌಡ್ಯವನ್ನು ಗೇಲಿ ಮಾಡುತ್ತಾರೆ. ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿ ಜಂಪಣ್ಣ (ಗಣೇಶ ಪರಮಾನಂದ) ರಾಜಕಾರಣದ ಒಳಗುಟ್ಟನ್ನು ಬಯಲಿಗೆಳೆಯುತ್ತಾನೆ. ವರ್ಗಾವಣೆಗಾಗಿ ವರ್ಗ ಪೂಜೆ, ವರ್ಗಾವಣೆ ತಡೆಯಲು ತಿರ್ಗಾ ಪೂಜೆಯ ಡುಂಡಿಯವರ ಕಲ್ಪನೆಯ ಪ್ರವರಗಳು ನಗೆ ಉಕ್ಕಿಸುತ್ತದೆ. ಶರೀರದಲ್ಲಿ ಮಚ್ಚೆಯಿದೆಯೆಂಬುದನ್ನು ಒಪ್ಪಿಕೊಳ್ಳದ ಮಹಿಳೆಗೆ ಅದು ಮುಚ್ಚಿಕೊಂಡಿದೆಯೆಂದು ಮೂರ್ಖಳಾಗಿಸಿ ತಾನೇ ಆಕೆಯಲ್ಲಿಗೆ ಬರುವುದಾಗಿ ನಂಬಿಸಿ ವಿಳಾಸ ಕೇಳುವ ಜ್ಯೋತಿಷಿ ಅತ್ತ ಕಡೆಯಿಂದ ತನ್ನ ಮನೆಯ ಅಡ್ರೆಸ್‌ ಕೇಳಿ ಕುಸಿದು ಬೀಳುತ್ತಾನೆ. 

ಡುಂಡಿಯವರ ಹಾಸ್ಯಮಯ ನಾಟಕವನ್ನು ಲೇಖಕರ ಆಶಯಗಳಿಗನುಸಾರವಾಗಿ ರಂಗಕ್ಕೆ ಪರಿಚಯಿಸಿ ನಿರ್ದೇಶಿಸಿದ ಹಿರಿಯ ರಂಗಕರ್ಮಿ ಗಣೇಶ ಕಾರಂತರ ಶ್ರಮ ಎದ್ದು ಕಾಣುವಂತಿತ್ತು. ಉದಯ ಆಚಾರ್‌ ಅವರ ರಂಗ ಸಜ್ಜಿಕೆ ಮತ್ತು ಸುಮಂತ್‌ ಆಚಾರ್‌ ಅವರ ಬೆಳಕು ನಾಟಕದ ಯಶಸ್ಸಿಗೆ ಪೂರಕವಾದವು. ನಾಗೇಂದ್ರ ಕುಮಾರ್‌ ನೃತ್ಯ ಸಂಯೋಜನೆ ಮತ್ತು ತ್ರಿವಿಕ್ರಮ ಆರ್ಟ್ಸ್ ಉಪ್ಪುಂದ ಅವರ ಪ್ರಸಾಧನ ನಾಟಕಕ್ಕೆ ಮೆರುಗು ನೀಡಿತು. 

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.