ಸುವರ್ಣ ಸಂಭ್ರಮದಲ್ಲಿ: ಶ್ರೀ ಸಾಲಿಗ್ರಾಮ ಮೇಳ


Team Udayavani, Nov 17, 2017, 7:31 PM IST

17-18.jpg

ಪುಣ್ಯಭೂಮಿ ಎನಿಸಿದ ಶ್ರೀ ಸಾಲಿಗ್ರಾಮ ಕ್ಷೇತ್ರದಿಂದ 50 ವರ್ಷಗಳ ಹಿಂದೆ ಪ್ರಾರಂಭಗೊಂಡ ಸಾಲಿಗ್ರಾಮ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿಗೆ ಇದು ಸುವರ್ಣ ಮಹೋತ್ಸವ ವರ್ಷ. ಪ್ರಾಯಶಃ ಯಕ್ಷಗಾನದ ವೃತ್ತಿ ಮೇಳವೊಂದು ಇಷ್ಟು ದೀರ್ಘ‌ಕಾಲ ತಿರುಗಾಟ ನಡೆಸಿದ್ದು ಯಕ್ಷಗಾನದ ಇತಿಹಾಸದಲ್ಲಿ ದಾಖಲೆ ಎನ್ನಿಸಬಹುದು. ಕಳೆದ 50 ವರ್ಷ ಗಳಲ್ಲಿ ತೆಂಕು- ಬಡಗಿನಲ್ಲಿ ಅನೇಕ ವೃತ್ತಿ ಮೇಳಗಳು ತಿರುಗಾಟ ನಡೆಸಿದರೂ ಇಷ್ಟು ದೀರ್ಘ‌ಕಾಲ ಮೆರೆದದ್ದು ವಿರಳ. ವೃತ್ತಿಮೇಳವನ್ನು ನಡೆಸುವುದೇ ಒಂದು ಸವಾಲಾಗಿರುವ ಈ ಕಾಲಘಟ್ಟದಲ್ಲಿ ಸಾಲಿಗ್ರಾಮ ಮೇಳದ ಐವತ್ತರ ತಿರುಗಾಟ ಒಂದು ದಾಖಲೆಯಾಗಿ ಯಕ್ಷಗಾನದ ಇತಿಹಾಸವನ್ನು ಸೇರುತ್ತಿದೆ. ಕೋಟದ ಯಜಮಾನ ಹಂದೆಯವರಿಂದ ಪ್ರಾರಂಭಗೊಂಡ ಸಾಲಿಗ್ರಾಮ ಮೇಳ ಅನಿವಾರ್ಯವಾಗಿ ಮಾರನೇ ವರ್ಷವೇ ಪಳ್ಳಿ ಸೋಮನಾಥ ಹೆಗ್ಡೆಯವರ ಸುಪರ್ದಿಗೆ ಬಂದು ಬಡಗುತಿಟ್ಟಿನ ಪ್ರಸಿದ್ಧ ಮೇಳವಾಗಿ ಇಷ್ಟು ದೀರ್ಘ‌ಕಾಲ ತಿರುಗಾಟ ನಡೆಸಿದೆ. ಬಡಗುತಿಟ್ಟಿನ ಅತಿರಥ ಮಹಾರಥ ಕಲಾವಿದರಿಗೆ ವೇದಿಕೆಯಾಗಿ ಕಲಾವಿದರ ಮತ್ತು ಮೇಳದ ಹೆಸರು ಜಗಜ್ಜಾಹೀರಾಗಿದೆ. ನಡುತಿಟ್ಟು ಮತ್ತು ಬಡಾಬಡಗಿನ ಮೇರು ಕಲಾವಿದರ ಪೈಕಿ ಸಾಲಿಗ್ರಾಮ ಮೇಳ ದಲ್ಲಿ ಹೆಜ್ಜೆ ಹಾಕದ ಕಲಾವಿದರೇ ಇಲ್ಲವೆಂದರೆ ತಪ್ಪಿಲ್ಲ. 

ಸುದೀರ್ಘ‌ 50 ವರ್ಷಗಳ ತಿರುಗಾಟದಲ್ಲಿ ಮೇಳ ಹಲವಾರು ಏಳುಬೀಳುಗಳನ್ನು ಕಂಡಿದೆ. ಪ್ರಾರಂಭದ ವರ್ಷದಲ್ಲಿ ದಿಗ್ಗಜ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ “ಸಮಗ್ರ ಭೀಷ್ಮ’ ತಿರುಗಾಟದುದ್ದಕ್ಕೂ ಪ್ರದರ್ಶಿತವಾದ ಪ್ರಸಂಗ. ಮುಂದಿನ ತಿರುಗಾಟದಲ್ಲಿ “ಬೇಡರ ಕಣ್ಣಪ್ಪ’, “ಚಂದ್ರಹಾಸ’ ಪ್ರಸಂಗಗಳು ರಂಜಿಸಿದವು. “ಸತೀ ಸುಶೀಲೆ’ ಎಪ್ಪತ್ತರ ದಶಕದ ಯಶಸ್ವೀ ಪ್ರಸಂಗವಾಯಿತು. ಮುಂದೆ ಅಮೃತೇಶ್ವರಿ, ಅನಂತರ ಇಡಗುಂಜಿ ಡೇರೆಮೇಳಗಳು ಪ್ರಾರಂಭಗೊಂಡು, ಭಾಗವತ ನಾರ್ಣಪ್ಪ ಉಪ್ಪೂರರ ಸಹಿತ ಅನೇಕ ಮೇರು ಕಲಾವಿದರು ಅನಿವಾರ್ಯವಾಗಿ ಮೇಳ ತೊರೆದಾಗ ಮತ್ತು ವೀರಭದ್ರ ನಾಯ್ಕರು ಯಕ್ಷಗಾನ ಕೇಂದ್ರದ ಗುರುವಾಗಿ ಹೋದಾಗ ಮೇಳ ಸಂಕಷ್ಟಕ್ಕೆ ಸಿಲುಕಿತು. ಆಗಿನ ಸಾಮಾಜಿಕ ವ್ಯವಸ್ಥೆಗೆ ವಿರುದ್ಧವಾಗಿ ಬಿಲ್ಲವ ಕಲಾವಿದರನ್ನು ಮೇಳಕ್ಕೆ ಸೇರಿಸಿಕೊಂಡು ಅಂದಿನ ಯಜಮಾನರಾದ ಪಳ್ಳಿ ಸೋಮನಾಥ ಹೆಗ್ಡೆಯವರು ಸಾಮಾಜಿಕ ಕ್ರಾಂತಿಯೊಂದಕ್ಕೆ ಮುನ್ನುಡಿ ಬರೆದರು. ಮುಂದೆ ಅದು ಬಿಲ್ಲವ ಕಲಾವಿದರು ಇತರ ಮೇಳಗಳಿಗೆ ಸೇರ್ಪಡೆಗೊಳ್ಳುವುದಕ್ಕೂ ಕಾರಣವಾಯಿತು. ಅಂದಿನ ಪ್ರಸಿದ್ಧ ಕಲಾವಿದರಿಂದ ಐತಿಹಾಸಿಕ ಪ್ರಸಂಗ “ಮೃತ್ಛಕಟಿಕ’ ರಂಗಕ್ಕೇರುವಂತಾಯಿತು. ಹಿರಿಯ ಪ್ರಸಂಗ ಕರ್ತ ಸೀತಾನದಿ ಗಣಪಯ್ಯ ಶೆಟ್ಟಿಯವರ “ವೀರ ವಜ್ರಾಂಗ’ ಅಂದಿನ ಇನ್ನೊಂದು ಯಶಸ್ವೀ ಪ್ರಸಂಗ. ಇದೇ ಸಮಯದಲ್ಲಿ ಪ್ರಸಂಗಕರ್ತ ಡಾ| ವೈ. ಚಂದ್ರಶೇಖರ ಶೆಟ್ಟರು “ಮಹಾಸತಿ ಮಂಗಳೆ’ ಸಹಿತ ಅನೇಕ ಪ್ರಸಂಗಗಳನ್ನು ನೀಡಿದರು.

ಎಂಬತ್ತರ ದಶಕದಲ್ಲಿ ಮೇಳದಲ್ಲಿ ಕಾಳಿಂಗ ನಾವಡ ಮತ್ತು ಜಲವಳ್ಳಿ ವೆಂಕಟೇಶ ರಾಯರ ವಿಜೃಂಭಣೆಯ ಕಾಲ. ಮೂರು ವರ್ಷಗಳ ಕಾಲ ರಂಗದಲ್ಲಿ ಮೆರೆದ ಕಾಳಿಂಗ ನಾವಡರ “ನಾಗಶ್ರೀ’ ಕ್ರಾಂತಿ ಮಾಡಿದ ಪ್ರಸಂಗ. ಇಂದಿಗೂ ಮಹಿಳೆಯರು ಮಕ್ಕಳು ಸುಶಿಕ್ಷಿತರು ಯಕ್ಷಗಾನ ನೋಡುವಂತಾಗಲು ಆಗಿನ ಸಾಲಿಗ್ರಾಮ ಮೇಳ ಮತ್ತು ಕಲಾವಿದರ ಕೊಡುಗೆ ಅಪಾರ. ಮುಂದೆ ಡಾ| ವೈ. ಚಂದ್ರ ಶೇಖರ ಶೆಟ್ಟಿಯವರ ಯಶಸ್ವೀ ಪ್ರಸಂಗಗಳಾದ “ಜ್ವಾಲಾ’ ಮತ್ತು “ಲೀಲಾಮೂರ್ತಿ ಶ್ರೀಕೃಷ್ಣ’ ದೊಂದಿಗೆ “ಚೈತ್ರ ಪಲ್ಲವಿ’, ಕಂದಾವರ ರಘುರಾಮ ಶೆಟ್ಟರ “ಸತೀ ಸೀಮಂತಿನಿ’, “ಚೆಲುವೆ ಚಿತ್ರಾವತಿ’, “ರತಿರೇಖಾ’ ಮುಂತಾದ ಪ್ರಸಂಗಗಳು ಅತ್ಯಂತ ಯಶಸ್ವಿಯಾದವು. ಅನೇಕ ಹಿರಿಯ ಕಲಾವಿದರು ಆಗ ತಾನೇ ಡೇರೆ ಮೇಳವಾಗಿ ಪ್ರಾರಂಭಗೊಂಡ ಮೂಲ್ಕಿ ಮೇಳಕ್ಕೆ ಹೋದಾಗ ಸ್ವಲ್ಪ ಹಿನ್ನಡೆಯಾದರೂ ಕಾಳಿಂಗ ನಾವಡರು ಮತ್ತು ಹೊಸ ಕಲಾವಿದರ ಸೇರ್ಪಡೆಯಿಂದ ಸಾಲಿಗ್ರಾಮ ಮೇಳ ಮುನ್ನಡೆಯಿತು. ಇದಕ್ಕೆಲ್ಲ ಅಂದಿನ ದಕ್ಷ ಯಜಮಾನರಾದ ಸೋಮನಾಥ ಹೆಗ್ಡೆಯವರ ಕಾರ್ಯ ವೈಖರಿಯೇ ಕಾರಣ ಎಂದರೆ ತಪ್ಪಿಲ್ಲ. ಎರಡನೇ ತಲೆಮಾರಿನ ಕಲಾವಿದರ ಸೇರ್ಪಡೆಯೊಂದಿಗೆ 90ರ ದಶಕದ ಅನಂತರ ಮೇಳ ಅದ್ದೂರಿಯ ತಿರುಗಾಟ ನಡೆಸಿತು. “ಸತೀಸೀಮಂತಿನಿ’, “ಪದ್ಮಪಾಲಿ’, “ಭಾನುತೇಜಸ್ವಿ’, ಶೃಂಗ ಸಾರಂಗ’, “ಮೇಘ ಮಯೂರಿ’, “ಸಿಂಧುಭೈರವಿ’, “ಧರ್ಮಸಂಕ್ರಾಂತಿ’, “ರಂಗನಾಯಕಿ’, “ಈಶ್ವರಿ ಪರಮೇಶ್ವರಿ’, “ಅಗ್ನಿನಕ್ಷತ್ರ’, “ವಜ್ರಮಾನಸಿ’ ಮುಂತಾದವು ಆ ಕಾಲದಲ್ಲಿ ಯಶಸ್ವಿಯಾದ ಪ್ರಸಂಗಗಳು.

ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿದ ಸಾಲಿಗ್ರಾಮ ಮೇಳಕ್ಕೆ ಯಶಸ್ಸಿನೊಂದಿಗೆ ಮಾನಸಿಕ ಸ್ಥೈರ್ಯ ಕುಂದಿಸುವ ಒಂದೆರಡು ಘಟನೆಗಳು ಈ ಕಾಲದಲ್ಲಿ ನಡೆದವು. ಶಿರಿಯಾರ ಮಂಜು ನಾಯ್ಕರು ರಂಗಸ್ಥಳದಲ್ಲೇ ಅಸ್ತಂಗತರಾದದ್ದು, ಕಾಳಿಂಗ ನಾವಡರ ಅಕಾಲಿಕ ಮರಣ ಮತ್ತು ಮೇಳದ ಲಾರಿ ಅಪಘಾತಕ್ಕೀಡಾಗಿ ಪ್ರಾಣನಷ್ಟದೊಂದಿಗೆ ಆರ್ಥಿಕ ಸಂಕಷ್ಟ ಉಂಟಾದದ್ದು ಯಜಮಾನರಿಗೂ ಕಲಾಭಿಮಾನಿಗಳಿಗೂ ಸಹಿಸಲಾರದ ನೋವಾಗಿತ್ತು. ಆದರೆ ಸೋಮನಾಥ ಹೆಗ್ಡೆಯವರು ಹಾಗೂ ಕಿಶನ್‌ ಹೆಗ್ಡೆಯವರು ಈ ಘಟನೆಗಳ ವಿಶೇಷ ಪರಿಣಾಮ ಮೇಳದ ಮೇಲೆ ಬೀಳದ ಹಾಗೆ ಪರಿಸ್ಥಿತಿಯನ್ನು ಅತೀವ ಚಾಕಚಕ್ಯತೆಯಿಂದ ನಿಭಾಯಿಸಿದ್ದಾರೆ.

ಸಾಲಿಗ್ರಾಮ ಮೇಳದ 50ರ ತಿರುಗಾಟದ ಮಧ್ಯೆ ಅನೇಕ ಡೇರೆ ಮೇಳಗಳು ಪ್ರಾರಂಭ ಗೊಂಡಿವೆ, ಕೆಲವು ಅಲ್ಪಕಾಲದ ತಿರುಗಾಟದ ಬಳಿಕ ವಿರಮಿಸಿವೆ. ಶ್ರೀ ಮಂದಾರ್ತಿ ಮೇಳದಲ್ಲಿ ಗೆಜ್ಜೆಕಟ್ಟಿ ಯಶಸ್ವಿಯಾಗಿ ಕೆಲವು ವರ್ಷಗಳಲ್ಲಿ ಸಾಲಿಗ್ರಾಮ ಮೇಳ ಸೇರಿ ತಾರಾಮೌಲ್ಯ ಗಳಿಸಿ ಕೊಂಡ ಅನೇಕ ಕಲಾವಿದರು ಅಂದಿನಿಂದ ಇಂದಿನವರೆಗೆ ಮೇಳದಲ್ಲಿದ್ದಾರೆ. ಸೋಮನಾಥ ಹೆಗ್ಡೆಯವರು ಮಂದಾರ್ತಿ ಮೇಳವನ್ನೂ ಮುನ್ನಡೆಸಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಅಂದಿನಿಂದ ಇಂದಿನವರೆಗೆ ಮೇಳಕ್ಕೆ ಯಶಸ್ವೀ ಪ್ರಸಂಗಗಳನ್ನು ನೀಡಿದವರಲ್ಲಿ ಕುಬೆವೂರು ಪುಟ್ಟಣ್ಣ ಶೆಟ್ಟಿ, ಸೀತಾನದಿ ಗಣಪಯ್ಯ ಶೆಟ್ಟಿ, ಬೆಳಸಲಿಗೆ ಗಣಪತಿ ಹೆಗಡೆ, ಡಾ| ವೈ. ಚಂದ್ರಶೇಖರ ಶೆಟ್ಟಿ, ಕಂದಾವರ ರಘುರಾಮ ಶೆಟ್ಟಿ, ದೇವದಾಸ ಈಶ್ವರಮಂಗಲ, ಗುಂಡೂ ಸೀತಾರಾಮ ರಾವ್‌, ಅಮೃತ ಸೋಮೇಶ್ವರ ಮುಂತಾದವರು ಪ್ರಮುಖರು. ದೀರ್ಘ‌ ಕಾಲ ಮೇಳದ ಪ್ರಬಂಧಕರಾಗಿ ಎಂ.ಎಸ್‌. ಹೆಬ್ಟಾರ್‌, ಎನ್‌.ಜಿ. ಹೆಗಡೆ ಮತ್ತು ಪ್ರಶಾಂತ ಶೆಟ್ಟಿಯವರು ಸೇವೆ ಸಲ್ಲಿಸಿದ್ದಾರೆ.                                                                    

 ಶ್ರೀ ಸಾಲಿಗ್ರಾಮ ಮೇಳ ಎಂದಾಗ ಅದರ ಸಂಸ್ಥಾಪಕ ಯಜಮಾನ ಪಾರಂಪಳ್ಳಿ ಶ್ರೀಧರ ಹಂದೆ, ಅನಂತರ ಸುಮಾರು 16 ವರ್ಷ ಮೇಳವನ್ನು ಮುನ್ನಡೆಸಿದ ಪಳ್ಳಿ ಸೋಮನಾಥ ಹೆಗ್ಡೆ, ಆ ಬಳಿಕ ಸಾರಥ್ಯ ವಹಿಸಿಕೊಂಡಿರುವ ಸೋಮನಾಥ ಹೆಗ್ಡೆಯವರ ಪುತ್ರ ಪಿ. ಕಿಷನ್‌ ಹೆಗ್ಡೆಯವರ ಕೊಡುಗೆಯನ್ನು ಉಲ್ಲೇಖೀಸಲೇ ಬೇಕು. ಮೇಳಕ್ಕೆ ರಾಜ್ಯಾದ್ಯಂತ ಅಭಿಮಾನಿಗಳಿರುವಲ್ಲಿ ಪ್ರಸಿದ್ಧ ಕಲಾವಿದರೊಂದಿಗೆ ಈ ಮೂವರ ಕೊಡುಗೆಯೂ ಗಮನಾರ್ಹವಾಗಿದೆ.

ಈ ವರ್ಷ ಮೇಳ ಇದೇ ನ.19ರಂದು ಸಾಲಿಗ್ರಾಮದಲ್ಲಿ ಸೇವೆಯಾಟವಾಡಿ 50ನೆಯ ವರ್ಷದ ತಿರುಗಾಟಕ್ಕೆ ಮುನ್ನಡೆಯಲಿದೆ. ಅನೇಕ ಯುವಪ್ರತಿಭೆಗಳಿರುವ ಈ ತಿರುಗಾಟದಲ್ಲಿ ಭಾಗವತರಾಗಿ ರಾಘವೇಂದ್ರ ಮಯ್ಯ, ಉದಯ ಹೊಸಾಳ ಮತ್ತು ಆನಂದ ಅಂಕೋಲ; ಮದ್ದಳೆಯಲ್ಲಿ ಕರ್ಕಿ ಪರಮೇಶ್ವರ ಭಂಡಾರಿ, ನಾಗರಾಜ ಭಂಡಾರಿ, ಚೆಂಡೆಯಲ್ಲಿ ಶಿವಾನಂದ ಕೋಟ ಮತ್ತು ರಾಕೇಶ ಮಲ್ಯ ಇದ್ದಾರೆ. ಪ್ರಧಾನ ಸ್ತ್ರೀಪಾತ್ರದಲ್ಲಿ ಶಶಿಕಾಂತ ಶೆಟ್ಟಿ, ವಂಡಾರು ಗೋವಿಂದ, ಷಣ್ಮುಖ ಗೌಡ, ಹಾಸ್ಯದಲ್ಲಿ ಮಹಾಬಲೇಶ್ವರ ಭಟ್‌ ಮತ್ತು ಅರುಣ್‌ ಜಾರ್ಕಳ, ಮುಖ್ಯ ಪಾತ್ರಧಾರಿಗಳಾಗಿ ಬಳ್ಕೂರು ಕೃಷ್ಣಯಾಜಿ, ತುಂಬ್ರಿ ಬಾಸ್ಕರ, ಪ್ರಸನ್ನ ಶೆಟ್ಟಿಗಾರ್‌, ಮಂಕಿ ಈಶ್ವರ ನಾಯಕ್‌, ರಾಜೇಶ ಭಂಡಾರಿ, ಚಂದ್ರಹಾಸ ಗೌಡ, ಜಪ್ತಿ ಹರೀಶ, ನರಸಿಂಹ ಗಾಂವ್ಕರ್‌, ನಾಗರಾಜ ಭಂಡಾರಿ ಮುಂತಾದವರಿದ್ದಾರೆ.

ಪ್ರೊ| ಎಸ್‌.ವಿ. ಉದಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.