ಗುರುಪರಂಪರಾದಲ್ಲಿ ಭಕ್ತಿಭಾವ ಲಹರಿ


Team Udayavani, May 10, 2019, 5:50 AM IST

3

ಭಾರತೀಯ ಸಂಗೀತ ಶಿಕ್ಷಣಕ್ಕೆ ಪರಂಪರೆಯಲ್ಲಿ ಬಂದ ಪದ್ಧತಿಯೇ ಅತ್ಯುತ್ತಮವೆಂಬ ನಂಬಿಕೆಯಿಂದ ಕುಂದಾಪುರದಲ್ಲಿ ಸತೀಶ್‌ ಭಟ್‌ ಮತ್ತು ಪ್ರತಿಮಾ ಭಟ್‌ ಆರಂಭಿಸಿದ ಗುರುಪರಂಪರಾ ಸಂಗೀತ ಸಭಾದ ಆಶ್ರಯದಲ್ಲಿ ನಡೆದ ಒಂದು ದಿನದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಾಗಾರದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಶಾಸ್ತ್ರದ ಅಗತ್ಯ ಮತ್ತು ಬಳಕೆ, ಜೋಡ್‌ ರಾಗಗಳ ವೈಶಿಷ್ಟ್ಯ ಮತ್ತು ಪ್ರಯೋಗ ಹಾಗೂ ಸಂಗೀತದ ಕಲಿಕಾ ಕ್ರಮಗಳ ಕುರಿತು ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಪಂಡಿತ್‌ ಶ್ರೀಪಾದ ಹೆಗಡೆ, ಕಂಪ್ಲಿ ಅವರು ಭಕ್ತಿ-ಭಾವ ಲಹರಿ ಎಂಬ ಗಾಯನ ಕಾರ್ಯಕ್ರಮವನ್ನೂ ನಡೆಸಿ ಕೊಟ್ಟರು.

ಮಧುರ ಕಂಠದ ಹೆಗಡೆಯವರು ಕಾರ್ಯಕ್ರಮದ ಶೀರ್ಷಿಕೆಗೆ ತಕ್ಕಂತೆ ಭಾವಪೂರ್ಣ ಸಾಹಿತ್ಯವುಳ್ಳ ಹಾಡುಗಳನ್ನು ಲಘು ಧಾಟಿಯಲ್ಲಿ ಶುದ್ಧ ಶಾಸ್ತ್ರೀಯ ರಾಗಗಳನ್ನು ಬಳಸಿ ಹಾಡಿದರು. ಸಾಮಾನ್ಯವಾಗಿ ಭಾವಗೀತೆಗಳಲ್ಲಿ ಸಾಹಿತ್ಯ ಮತ್ತು ಅದು ಹೊಮ್ಮಿಸುವ ಭಾವಕ್ಕಷ್ಟೇ ಪ್ರಾಮುಖ್ಯವಿರುವುದಾದರೂ ಸಾವಧಾನ ಗತಿಯ ಶಾಸ್ತ್ರೀಯ ರಾಗಗಳ ಮೂಲಕ ಹಾಡಿದಾಗ ಇನ್ನಷ್ಟು ಅರ್ಥಸಾಧ್ಯತೆಗಳನ್ನು ಹೇಗೆ ಅರಳಿಸಬಹುದು ಎನ್ನುವುದಕ್ಕೆ ಗಾಯನ ಸಾಕ್ಷಿಯಾಯಿತು.

ಆರಂಭದಲ್ಲಿ ಶ್ರೀಧರ ಹೆಗಡೆಯವರು ಪರಮಪುರುಷ ಹರಿ ಗೋವಿಂದ ಎಂಬ ಭಕ್ತಿಗೀತೆಯನ್ನು ಪಹಾಡಿ ರಾಗದಲ್ಲಿ ಹಾಡಿದರು. ಮುಂದೆ ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಳಿಯನ್ನು ಮಿಶ್ರ ಖಮಾಚ್‌ ರಾಗದಲ್ಲಿ, ಅದರೊಳಗಿನ ತಾತ್ವಿಕ ಚಿಂತನೆಯ ಹಲವು ಆಯಾಮಗಳು ಕಣ್ಣಿಗೆ ಕಟ್ಟುವಂತೆ ಎಳೆಎಳೆಯಾಗಿ ಬಿಡಿಸಿ ಹಾಡಿದರು. ಮಧುವಂತಿ ರಾಗದಲ್ಲಿ ಹಾಡಿದ ಕರ್ತಾ ಕೃಷ್ಣಯ್ನಾ ನೀ ಬಾರಯ್ನಾ ಎಂಬ ಭಕ್ತಿಗೀತೆಯಲ್ಲಿ ಹೊರಹೊಮ್ಮಿದ ಆರ್ತತೆ , ಮಧ್ಯಮಾದಿ ಸಾರಂಗದಲ್ಲಿ ಶ್ರೀರಂಗನಾಟದ ಪರಿಯಾ ಮೂಡಿಬಂದ ಪದಲಾಲಿತ್ಯ, ಭೈರವಿಯಲ್ಲಿ ರಾಮ ರಾಮ ರಾಮ ಸೀತಾರಾಮ ಎನ್ನಿರೋ ಎಂಬ ಹಾಡಿನಲ್ಲಿ ಮೂಡಿದ ಭಕ್ತಿಭಾವ ರಸಗಳು ಮನಮುಟ್ಟುವಂತಿದ್ದವು. ಮುರಿದು ಬಿದ್ದ ಕೊಳಲು ನಾನು ಪ್ರೀತಿಯ ಜೀವವ ಎದೆಯಲಿ ಬೆಳೆಸಿ ಮರೆಗೆ ಸರಿದೆಯೇನೋ ಎಂಬ ಭಾವಗೀತೆಗಳ ವಿಷಾದ ಧ್ವನಿ ಕರುಣ ರಸವನ್ನು ಉಕ್ಕಿಸುವಂತಿದ್ದವು. ಭೈರವಿ ರಾಗದ ಏರಿಳಿತ ಸಂಚಾರದಲ್ಲಿ ವರ್ಷಧಾರೆಯಂತೆ ಹರಿದು ಬಂದ ತರಾನಾದೊಂದಿಗೆ ಗಾಯಕರು ಕಾರ್ಯಕ್ರಮÊವನ್ನು ಕೊನೆಗೊಳಿಸಿದರು. ಭಾರವಿ ದೇರಾಜೆಯವರ ತಬಲಾ ಸಾಥ್‌ ಗಾಯನಕ್ಕೆ ಪೂರಕವಾಗಿತ್ತು. ಒಟ್ಟಿನಲ್ಲಿ ಒಂದು ಸುಮಧುರ ಸಂಗೀತ ಸಂಜೆಯನ್ನು ಸವಿದ ಸಾರ್ಥಕ ಭಾವವನ್ನು ಈ ಕಾರ್ಯಕ್ರಮ ಮೂಡಿಸಿತು.

ಡಾ| ಪಾರ್ವತಿ ಜಿ.ಐತಾಳ್‌

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.