ಇಂಡಿಯನ್ ಡ್ಯಾನ್ಸ್ ಡ್ರಾಮ ದೃಶ್ಯ ವಿಸ್ಮಯ
Team Udayavani, May 31, 2019, 6:00 AM IST
ವೈವಿಧ್ಯಮಯ ಕಲಾರೂಪಗಳಿಂದ ಸಂಪನ್ನವಾದ ದೇಶದ ವಿವಿಧ ರಾಜ್ಯಗಳ ಪರಂಪರಾಗತ ಜನಪದ ನೃತ್ಯಗಳನ್ನು ಹಾಗೂ ನಾಟಕಗಳನ್ನು ಒಂದೊಂದಾಗಿ ಆಕರ್ಷಕವಾಗಿ ಪೋಣಿಸಿ ಪ್ರಸ್ತುತ ಪಡಿಸಿದ ಇಂಡಿಯನ್ ಡ್ಯಾನ್ಸ್ ಡ್ರಾಮ ನೋಡುಗರಿಗೆ ದೃಶ್ಯವಿಸ್ಮಯವನ್ನು ಉಣಬಡಿಸುವಲ್ಲಿ ಯಶಸ್ವಿಯಾಯಿತು.
ಉದುಮ ಕಣ್ಣಿಕುಳಂಗರ ಕಲಾ-ಸಾಹಿತ್ಯ-ಸಾಂಸ್ಕೃತಿಕ ವೇದಿಕೆಯ ಮಕ್ಕಳ ರಂಗತರಬೇತಿ ಕೇಂದ್ರವಾದ ಪಾಠಶಾಲಾ ಆಯೋಜಿಸಿದ ಇಂಡಿಯನ್ ಡ್ಯಾನ್ಸ್ ಡ್ರಾಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ನƒತ್ಯ ಹಾಗೂ ನಾಟಕವನ್ನು ಒಂದೇ ವೇದಿಕೆಯಲ್ಲಿ ಏಕಕಾಲದಲ್ಲಿ ನೋಡಿ ಆನಂದಿಸುವ ಅವಕಾಶವನ್ನು ನೀಡಿತು. ಉದುಮ ಪ್ರದೇಶದ ಸುಮಾರು ಅರುವತ್ತರಷ್ಟು ಕಲಾವಿದರು ತೆರೆದ ವೇದಿಕೆಯಲ್ಲಿ ಎರಡು ಗಂಟೆಗಳ ಕಾಲ ಆಕರ್ಷಕ, ವೈವಿಧ್ಯಮಯ, ಕಾರ್ಯಕ್ರಮವನ್ನು ನೀಡಿ ಮನ ರಂಜಿಸಿದರು.
ವರ್ಣಮಯ ಪ್ರಪಂಚವನ್ನು ಸೃಷ್ಟಿಸಿದ ರಾಜಸ್ಥಾನದ ಗೂಮರ್, ಮಧ್ಯಪ್ರದೇಶದ ಆನಂದ ನೃತ್ಯ, ಕಲ್ ಬೇಲಿಯಾ, ಅಸ್ಸಾಂನ ಬಿಹು, ಕೇರಳದ ಕಥಕ್ಕಳಿ, ಕರ್ನಾಟಕದ ಯಕ್ಷಗಾನ ಸೇರಿದಂತೆ ವಿವಿಧ ರಾಜ್ಯಗಳ ನೃತ್ಯ ಪ್ರಕಾರಗಳೊಂದಿಗೆ ಸಾಂದರ್ಭಿಕವಾಗಿ ಪ್ರಸ್ತುತಪಡಿಸಿದ ನಾಟಕಗಳು ಕಲಾಭಿಮಾನಿಗಳಿಗೆ ವಿನೂತನ ಅನುಭವವನ್ನು ನೀಡುವ ಮೂಲಕ ಕಲಾ ಸಾಮ್ರಾಜ್ಯದ ಹೊಸ ಸಾಧ್ಯತೆಯ ಕದ ತೆರೆಯಿತು.
ಗೋಪಿ ಕುಟ್ಟಿಕ್ಕೋಲ್ ಅವರ ಪರಿಕಲ್ಪನೆಗೆ ದೇಶ ವಿದೇಶಗಳಲ್ಲಿ ಇಪ್ಪತೈದು ವರ್ಷಗಳಿಂದ ನೃತ್ಯ ಸಂಯೋಜನೆಯಲ್ಲಿ ಹೆಸರು ಮಾಡಿರುವ ಖ್ಯಾತ ಕೊರಿಯೋಗ್ರಾಫರ್ ಮಾಸ್ಟರ್ ಹರಿ ರಾಮಚಂದ್ರನ್ ಜೀವತುಂಬಿದಾಗ ಸೃಷ್ಟಿಯಾದ ಸಾಂಸ್ಕೃತಿಕ ರಂಗು ಇಂಡಿಯನ್ ಡ್ಯಾನ್ಸ್ ಡ್ರಾಮ.
ವಿದ್ಯಾಗಣೇಶ್ ಅಣಂಗೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.