ಸ್ತ್ರೀ ಪಾತ್ರಗಳಿಗೆ ಮಾನ ತಂದ ಕೊಕ್ಕಡ ಈಶ್ವರ ಭ‌ಟ್‌ 


Team Udayavani, Feb 10, 2017, 3:45 AM IST

10-KALA-6.jpg

ಸುಮಾರು 1988-90ರ ಕಾಲಮಾನ. ಮಂಗಳೂರು ಪುರಭವನದಲ್ಲಿ ಟಿಕೆಟ್‌ ಆಟಗಳದ್ದೇ ಸುಗ್ಗಿ. ತಿಂಗಳಿಗೆರಡು ದಕ್ಷಾಧ್ವರ ಪ್ರಸಂಗ ಇದ್ದೇ ಇರುತ್ತಿತ್ತು. ಎಂಪೆಕಟ್ಟೆ ರಾಮಯ್ಯ ರೈಗಳ ದೇವೇಂದ್ರ, ಶೇಣಿ ಗೋಪಾಲಕೃಷ್ಣ ಭಟ್ಟರ ದಕ್ಷ, ಕುಂಬಳೆ ಸುಂದರ ರಾಯರ ಈಶ್ವರ, ಕೊಕ್ಕಡ ಈಶ್ವರ ಭಟ್ಟರ ದಾಕ್ಷಾಯಿಣಿ, ಬಣ್ಣದ ಮಾಲಿಂಗರ ವೀರಭದ್ರ… ಇದು ಖಾಯಂ ಸೆಟ್‌. ಒಂದೊಂದು ಪ್ರದರ್ಶನವೂ ಭಿನ್ನ. ಕೊಕ್ಕಡ ಈಶ್ವರ ಭಟ್ಟರ ಸ್ತ್ರೀ ಪಾತ್ರದ ಲಾಲಿತ್ಯಕ್ಕೆ ವಿದ್ವದ್ರಸಿಕರು ಅಂದೇ ಮಾರುಹೋಗಿದ್ದರು. 

    ಕೊಕ್ಕಡ ಈಶ್ವರ ಭಟ್ಟರಿಗೆ ಈಗ ಎಪ್ಪತ್ತೈದರ ಹರೆಯ. ಈಗ ಕೊಕ್ಕಡ-ಪಟ್ರಮೆ ಸಮೀಪದ ಹೆನ್ನಳದಲ್ಲಿ ವಾಸ. ಪತ್ನಿ ಶಕುಂತಳೆ. ಮೂವರು ಮಕ್ಕಳು. ಮೊನ್ನೆಯಷ್ಟೇ ರತಿಕಲ್ಯಾಣ ಪ್ರಸಂಗದಲ್ಲಿ ದ್ರೌಪದಿಯಾಗಿ ತನ್ನ ಪಾತ್ರಾಭಿವ್ಯಕ್ತಿಯ ಹಿಂದಿನ ಛಾಪನ್ನು ನೆನಪಿಸಿ ಕೊಟ್ಟರು. “”ಈ ಆಟಕ್ಕಾಗಿಯೇ ಮಣಿಸಾಮಾನುಗಳನ್ನು ರಿಪೇರಿ ಮಾಡಿಸಬೇಕಾಯಿತು” ಎನ್ನುತ್ತಾ ಸ್ತ್ರೀಪಾತ್ರದ ಪರಿಕರಗಳು ತುಂಬಿದ ಸೂಟ್‌ಕೇಸನ್ನು ತೋರಿಸಿ ಬಾಯಿತುಂಬಾ ನಕ್ಕರು. ಬಣ್ಣದ ಬದುಕಿನ ಬಿಡಲಾಗದ ಬಂಧ, ಸಂಬಂಧವು ಆ ನಗುವಿನಲ್ಲಿತ್ತು. ನಗುವಿನೊಂದಿಗೆ ವರ್ತಮಾನ ರಂಗದ ಸ್ತ್ರೀಪಾತ್ರಗಳು ಗೌರವದ ಸ್ಥಾನದಿಂದ ಹಳಿ ತಪ್ಪುತ್ತಿರುವ ವಿಷಾದವೂ ಇತ್ತು.

    ಕೊಕ್ಕಡ ಈಶ್ವರ ಭಟ್ಟರಿಗೆ ಅರ್ಧ ಶತಮಾನದ ಮೇಳ ತಿರುಗಾಟ. ಸಖೀ ಯಿಂದ ತೊಡಗಿ ಚಂದ್ರಮತಿ, ದಾಕ್ಷಾಯಿಣಿ, ಶ್ರೀದೇವಿ ಪಾತ್ರಗಳ ತನಕ. ದಿಢೀರ್‌ ಕಲಾವಿದರಾದವರಲ್ಲ; ಹಂತ ಹಂತವಾಗಿ ಮೇಲೇರಿದವರು. ಯಕ್ಷಯಾನದುದ್ದಕ್ಕೂ ಅನೇಕ ಹಿರಿಯರ ಒಡನಾಟವು ಪಾತ್ರಶಿಲ್ಪಗಳಿಗೆ ಉಸಿರಾಯಿತು. ಅಂಗಸೌಷ್ಟವವು ಅಭಿವ್ಯಕ್ತಿಗೆ ಪೂರಕವಾಯಿತು.  
    ಈಶ್ವರ ಭಟ್ಟರು ಹೆಚ್ಚು ಓದಿದವರಲ್ಲ. ಜಾಗೃತ ಗ್ರಹಿಕೆಯ ಶಕ್ತಿ. ಕ್ಷಿಪ್ರವಾಗಿ ಮನನಿಸುವ ಸ್ವ-ಸಾಮರ್ಥ್ಯಗಳು ಬೌದ್ಧಿಕವಾಗಿ ಗಟ್ಟಿಗೊಳಿಸಿ ದುವು. ನಾಟ್ಯಕ್ಕೆ ಕುಡಾನ ಗೋಪಾಲಕೃಷ್ಣ ಭಟ್ಟರು ಗುರು. ಈ ಮಧ್ಯೆ ಭರತನಾಟ್ಯ ಕಲಿಕೆ. ದಯಾನಂದ ನಾಗೂರು, ಮೊಳಹಳ್ಳಿ ಕೃಷ್ಣರಿಂದ ಬಡಗಿನ ಹೆಜ್ಜೆಗಳ ಅಭ್ಯಾಸ. ಪರಂಪರೆಗೆ ಹೆಸರಾದ ಕೆರೆಮನೆ ಮೇಳದಲ್ಲಿ ತಿರುಗಾಟ. 

    ಅಳಿಕೆ ಸನಿಹದ ಮುಳಿಯದಲ್ಲಿ ಜನನ. ಕಡೆಂಗೋಡ್ಲಿನಲ್ಲಿ ಬದುಕು. ಬಣ್ಣದ ಸಹವಾಸದ ಬಳಿಕ ಪುತ್ತೂರಿನ ಪೆರುವಡಿಯವರ ನೂಜಿ ಮನೆಯಲ್ಲಿದ್ದುಕೊಂಡು ಬದುಕಿನ ಬಣ್ಣಕ್ಕೆ ಶ್ರೀಕಾರ. ಪೆರುವಡಿ ಕೃಷ್ಣ ಭಟ್ಟರ ನೇತೃತ್ವದ ಮೂಲ್ಕಿ ಮೇಳದಿಂದ ಬಣ್ಣದ ನಂಟು. ಬಾಲಕೃಷ್ಣ ಪಾತ್ರದ ಮೂಲಕ ಮೊದಲ ಹೆಜ್ಜೆ. ಪುಟ್ಟ ಪಾದ ಹಿರಿದಾಯಿತು. ರಂಗದಲ್ಲಿ ತ್ರಿವಿಕ್ರಮವಾಯಿತು. ಕೂಡ್ಲು, ಸುರತ್ಕಲ್‌, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಎಡನೀರು ಮೇಳಗಳಲ್ಲಿ ವ್ಯವಸಾಯ. ಚಂದ್ರಮತಿಯ ವಿಲಾಪ, ಶಾರದೆಯ ಮೋಹ, ಚಿತ್ರಾಂಗದೆಯ ಸಂತಸ,  ದ್ರೌಪದಿಯ ಅಸಹಾಯಕತೆ, ಸುಭದ್ರೆಯ ದೈನ್ಯ, ಪ್ರಭಾವತಿಯ ದೂರದೃಷ್ಟಿ, ಮಾಯಾ ಶೂರ್ಪನಖೀಯ ಕೃತಕತೆ, ಮೋಹಿನಿಯ ಮೋಹಪಾಶ… ಈಶ್ವರ ಭಟ್ಟರು ನಿರ್ವಹಿಸುವ ಪಾತ್ರಗಳಲ್ಲೆಲ್ಲ ಆಯಾಯ ಪಾತ್ರದ ಸ್ವ-ಸ್ವರೂಪಗಳು. ಕೂಡ್ಲು ಮೇಳದಲ್ಲಿ ಪ್ರದರ್ಶನವಾಗುತ್ತಿದ್ದ ಶ್ರೀದೇವಿ ಲಲಿತೋಪಾಖ್ಯಾನ ಪ್ರಸಂಗದ ಶ್ರೀಲಲಿತೆ ಪಾತ್ರವು ಈಶ್ವರ ಭಟ್ಟರ ನೆಚ್ಚಿನ, ಮೆಚ್ಚಿನ ಪಾತ್ರ. “”ಈ ಪಾತ್ರವನ್ನು ಪ್ರಥಮವಾಗಿ ಮಾಡಿದ್ದು ನಾನೇ” ಎನ್ನುವಾಗ ಭಟ್ಟರ ಕಣ್ಣುಗಳಲ್ಲಿ ಕಣ್ಣೀರು! ಇದರಲ್ಲಿ ಕಳೆದ ಕಾಲದ ಕಥನದ ನೆರಳುಗಳು ಮೂಡಿದುವು. ಆ ಕಾಲಘಟ್ಟದಲ್ಲಿ ಕೂಡ್ಲು ಮೇಳವನ್ನು ಆಧರಿಸಿದ ಪ್ರಸಂಗವಿದು. 

    ವೈಯಾರದ ನಾಟ್ಯ, ನಯನಾಜೂಕಿನ ಅಭಿವ್ಯಕ್ತಿ. ಮನಮೋಹಕ ಚಿತ್ರ. ಪಾತ್ರಕ್ಕನುಚಿತವಾದ ಸಂಭಾಷಣೆ ಇವರದು. ಮಾತಿನ ಲಾಲಿತ್ಯ ಕೊಕ್ಕಡದವರ ವಿಶೇಷ. ವಾಕ್ಯವೊಂದರ ಏರಿಳಿತಗಳು, ಪದ ಪದಗಳ ಮಧ್ಯೆ ಅಂತರ, ಆಡುವ ಮಾತಿನೊಂದಿಗೆ ಮಿಳಿತವಾಗುವ ಭಾವಗಳು, ಅದಕ್ಕೆ ಒಪ್ಪುವ ರಂಗಚಲನೆಗಳು ಪ್ರೇಕ್ಷಕರ ಮೇಲೆ ಪರಿಣಾಮ ಬೀರಿವೆ. ಚಂದ್ರಮತಿ, ದಮಯಂತಿ, ಗುಣಸುಂದರಿ… ಪಾತ್ರಗಳು ಅಳುವ ದೃಶ್ಯದಲ್ಲಿ ಪ್ರೇಕ್ಷಕರ ಅಳು ಸಾಥಿಯಾಗುತ್ತಿತ್ತು. ಈ ಕುರಿತು ಅವರನ್ನು ಪ್ರಶ್ನಿಸಿದಾಗ, “”ಪಾತ್ರವು ನಮ್ಮೊಳಗೆ ಪರಕಾಯ ಪ್ರವೇಶವಾಗಬೇಕು. ಪಾತ್ರವೇ ನಾವಾಗಬೇಕು. ರಂಗದಲ್ಲಿ ಮನೆಯ ವಿದ್ಯಮಾನ, ವ್ಯವಹಾರ ನೆನಪಾದರೆ ಪಾತ್ರ ಯಶಸ್ಸಾಗದು” ಎನ್ನುತ್ತಾರೆ. 

ಅನುಭವದ ಪಕ್ವತೆಯಿಂದ ಮಾಗಿರುವ ಕೊಕ್ಕಡ ಈಶ್ವರ ಭಟ್ಟರ ಅಭಿನಂದನ ಸಮಾರಂಭವು  ಫೆಬ್ರವರಿ 11ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ದಿನಪೂರ್ತಿ ಜರಗಲಿದೆ. ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಅಭಿನಂದನ ಕೃತಿಯ ಅನಾವರಣ ಜರಗ ಲಿದೆ. ನವರಸವಾಹಿನಿ, ನವರಸ ಅರ್ಥ ವೈಭವ, ಯಕ್ಷಗಾನ ವಿಹಾರ ಮತ್ತು ಎಡನೀರು ಮೇಳದವರಿಂದ ಸೀತಾ ಪರಿತ್ಯಾಗ-ಗದಾಯುದ್ಧ ಪ್ರಸಂಗದ ಯಕ್ಷಗಾನವಿದೆ. 

ನಾ. ಕಾರಂತ ಪೆರಾಜೆ

ಟಾಪ್ ನ್ಯೂಸ್

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.