ಜ. 21: ಅಭಿನಂದನ ಕಾರ್ಯಕ್ರಮ: ಬಹುಮುಖ ಪ್ರತಿಭೆಯ ಗಣೇಶ್ ಕೊಲೆಕಾಡಿ
Team Udayavani, Jan 19, 2018, 3:09 PM IST
ಪ್ರಸಂಗಕರ್ತ,ನಾಟಕ ರಚನೆಕಾರ, ಪತ್ರಕರ್ತ, ಜಾನಪದ ಅಧ್ಯಯನಕಾರ, ಸಾಹಿತಿ, ತಾಳಮದ್ದಲೆ ಅರ್ಥಧಾರಿ, ಸಂಘಟಕ ಹೀಗೆ ಬಹುಮುಖೀ ವ್ಯಕ್ತಿತ್ವವನ್ನು ಹೊಂದಿರುವವರು ಗಣೇಶ ಕೊಲೆಕಾಡಿ.ಪ್ರಸಂಗಕರ್ತರಾಗಿ ಅವರು ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವರು ರಚಿಸಿದ ಯಕ್ಷಗಾನ ಕೃತಿಗಳಲ್ಲಿ ಕಾಣುವ ಸೊÌàಪಜ್ಞತೆಗೆ ಮೂಲಕಾರಣ ಅವರು ಕಲೆಯನ್ನು ಕಾಣುವ ಆರೋಗ್ಯಪೂರ್ಣ ನೋಟ ಮತ್ತು ಸ್ವತ್ಛ ಆಲೋಚನೆ. ಶಬರ ಕುಮಾರದಲ್ಲಿ ವಿಶಿಷ್ಟ ತಾಳ ವೈವಿಧ್ಯ ಮತ್ತು ಛಂದೋ ವೈವಿಧ್ಯಗಳನ್ನು ಕಾಣಬಹುದಾಗಿದೆ .ಯಕ್ಷಗಾನದಲ್ಲಿ ಬಳಸದೇ ಇದ್ದ ಸಪ್ತ ತಾಳಾಂತರ್ಗತವಾದ ತಾಳಗಳಾದತಿಶ್ರ ಮಠ್ಯತಾಳ (ತಿಲಘು ದ್ರುತ ತಿ.ಲಘು),ಖಂಡ ಝಂಪೆ ( ಖ. ಲಘು ಅನುದ್ರುತ ದ್ರುತ)ಸಂಕೀರ್ಣ ರೂಪಕ
( ದ್ರುತ ಸಂಕೀರ್ಣ ಲಘು),ಖಂಡ ತ್ರಿಪುಟ ( ಖಂಡ ಲಘು ದ್ರುತ ದ್ರುತ ),ಅಲ್ಲದೇ ನವೀನ ಛಂದೋವೈವಿದ್ಯಗಳಾದ
ಕಲ್ಯಾಣಿ ಸಂಕೀರ್ಣರೂಪಕತಾಳ,ತೋಡಿ ಖಂಡ ತ್ರಿಪುಟತಾಳ,ನೀಲಾಂಬರಿ ತಿಶ್ರ ತ್ರಿಪುಟತಾಳ, ಪೂರ್ವಿಕಲ್ಯಾಣಿ ಚತುರಶ್ರ ಮಠ್ಯತಾಳ, ಕೇದಾರಗೌಳ ತ್ರಿವುಡೆ, ಹಂಸಧ್ವನಿ ತ್ರಿವುಡೆ ಮತ್ತು,ಶುದ್ದಸಾವೇರಿ ಚೌ ತಾಳವನ್ನು ಕಾಣಬಹುದು. ಹೊಸ ತಾಳ ಬಂಧಗಳಿಗೆ ಮದ್ದಳೆಯ ತತ್ಕಾರ ಇಲ್ಲದಿರುವ ಕಾರಣ ಅವರೇ ಮದ್ದಳೆಯ ತತ್ಕಾರವನ್ನು , ಬಿಡಿತ ಮತ್ತು ಮುಕ್ತಾಯಗಳ ಸೊಲ್ಕಟ್ಟುಗಳನ್ನು ಯಕ್ಷಗಾನೀಯವಾಗಿ ರೂಪಿಸಿದ್ದಾರೆ. ಕುಂಜಾರುಗಿರಿ ಕ್ಷೇತ್ರ ಮಹಾತ್ಮೆ, ಕುಂಜಿರಾಯ ಮಹಾತ್ಮೆ, ಪುನರೂರು ಕ್ಷೇತ್ರ ಮಹಾತ್ಮೆ, ಶ್ರೀ ದೇವಿ ಬನಶಂಕರಿ ಮಹಾತ್ಮೆ, ಸಮರ ಸೌಗಂಧಿಕೆ, ಶಿವಭಕ್ತ ಪುರುಷಾಮೃಗ, ಮೈಥಿಲಿ ವಿಜಯ ,ಮಲೆತ ಮಾಣಿಕ ಸೇರಿ 34 ತುಳು ಮತ್ತು ಕನ್ನಡ ಪ್ರಸಂಗಗಳು, ಭಕ್ತ ಸಿರಿಯಾಳ, ಹುಚ್ಚ, ಪ್ರತಿಹತ, ಭಾಷೆದ ಫಲ, ಮಸಣದ ಮಲ್ಲಿಗೆ ಸೇರಿ ಆರು ತುಳು ಮತ್ತು ಕನ್ನಡ ನಾಟಕಗಳನ್ನು ರಚಿಸಿದ್ದಾರೆ. ಕಲಾಮಾತೆಗೆ ಸಲ್ಲಿಸಿದ ಸೇವೆಗಾಗಿ ಅವರಿಗೆ ಹಲವು ಪ್ರಶಸ್ತಿ, ಬಿರುದು ಮತ್ತು ಸಮ್ಮಾನಗಳು ಸಂದಿವೆ. ತಂದೆ ಕೃಷ್ಣಪ್ಪ ಹಾಗು ತಾಯಿ ಪದ್ಮಾವತಿಯವರಿಗೆ ಯಕ್ಷಗಾನದ ಹಿನ್ನೆಲೆಯಿಲ್ಲದಿದ್ದರೂ ಕೊಲೆಕಾಡಿ ಬೆಳೆದ ಪರಿಸರ ಮಾತ್ರ ಸಮೃದ್ದವಾಗಿ ಯಕ್ಷಗಾನದ ಗಂಧವನ್ನು ಧರಿಸಿತ್ತು. ಈ ಗಂಧವೇ ಅವರಲ್ಲಿ ಕಲೆಯ ಅಭಿರುಚಿಯನ್ನು ಬೆಳೆಸಿತು.
ಜ. 21ರಂದು ಕುಂಜಾರಗಿರಿ ಶಾಸ್ತಾವು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಮುಲ್ಕಿ ಇಲ್ಲಿ ಗಣೇಶ ಕೊಲೆಕಾಡಿಯವರ ಅಭಿಮಾನಿಗಳು ಮತ್ತು ಶಿಷ್ಯರು ಸೇರಿಕೊಂಡು ಅವರ ಕಲಾಸೇವೆ ಮತ್ತು ಸಾರಸ್ವತ ಸೇವೆ ಅನುಲಕ್ಷಿಸಿ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಅಂದು ದಿನಪೂರ್ತಿ ಯಕ್ಷಗಾನದ ವಿವಿಧ ಮುಖಗಳ ಕಾರ್ಯಕ್ರಮವೂ ಇದೆ.
ಕೃಷ್ಣಪ್ರಕಾಶ ಉಳಿತ್ತಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.