ಜೂನ್‌ 9ಕ್ಕೆ “ರಾತ್ರಿ ಆಟ’


Team Udayavani, Jun 9, 2018, 6:00 AM IST

c-1.jpg

“ಕಲಾ ಪ್ರೇಕ್ಷಕರಿಗಾಗಿ’ ಎಂಬ ಘೋಷವಾಕ್ಯದೊಂದಿಗೆ ಸಮಾನ ಮನಸ್ಕ ಯಕ್ಷಗಾನ ಆಸಕ್ತರ ಕೂಡುವಿಕೆಯಿಂದ ಹುಟ್ಟಿಕೊಂಡ ಉಡುಪಿಯ ತೆಂಕುತಿಟ್ಟು ವೇದಿಕೆ ಈ ಬಾರಿ ಐದನೇ ವರ್ಷದ “ರಾತ್ರಿ ಆಟ’ಕ್ಕೆ ಸಜ್ಜಾಗುತ್ತಿದೆ. ಈ ಸಂಘಟನೆಯ ಮೂಲ ಉದ್ದೇಶ ಒಂದೇ – ವರ್ಷದಲ್ಲಿ ಒಂದು ಅಥವಾ ಎರಡು ಸದಭಿರುಚಿಯ ಯಕ್ಷಗಾನ ಪ್ರದರ್ಶನಗಳನ್ನು ಇಡೀ ರಾತ್ರಿ ಕಾಲ ಆಯೋಜಿಸಿ ಆಸಕ್ತ ಕಲಾಭಿಮಾನಿಗಳಿಗೆ ಯಕ್ಷಾನಂದವನ್ನು ಉಣಬಡಿಸುವುದು. 

ಕಳೆದ ನಾಲ್ಕು ವರ್ಷಗಳಿಂದ ಜೂನ್‌ ಆದಿಭಾಗದಲ್ಲಿ ಇಂತಹ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿದ ತೆಂಕುತಿಟ್ಟು ವೇದಿಕೆ ಈಗ ನಾಲ್ಕನೆಯ ವರ್ಷದ ಯಕ್ಷಗಾನ ಪ್ರದರ್ಶನವನ್ನು ಅರ್ಪಿಸಲು ಸಜ್ಜಾಗಿದೆ. ಉಡುಪಿ ಮತ್ತು ಆಸುಪಾಸಿನಲ್ಲಿ “ರಾತ್ರಿ ಆಟ’ ಎಂಬುದಾಗಿಯೇ ಹೆಸರನ್ನು ಗಳಿಸಿಕೊಂಡಿರುವ ಈ ಪ್ರದರ್ಶನ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜೂನ್‌ 9ರಂದು ಸಂಜೆ 7 ಗಂಟೆಗೆ ಆರಂಭವಾಗಿ ಮರುದಿನ ಪ್ರಾತಃ ಕಾಲದ ತನಕ ನಡೆಯಲಿದೆ. 

ಆರಂಭದಲ್ಲಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಬಾಲರಿಂದ ಸಾಂಪ್ರದಾಯಿಕ ಪೂರ್ವರಂಗದಲ್ಲಿ ಪರಂಪರೆಯ ಪಾಂಡವರ ಒಡ್ಡೋಲಗ ಪ್ರದರ್ಶನ ಕಾಣಲಿದೆ. ಆ ಬಳಿಕ ಬೆಳಗಿನ ತನಕ “ಅಕ್ಷಯಾಂಬರ- ಬಭುವಾಹನ- ರತಿ ಕಲ್ಯಾಣ’ ಪ್ರಸಂಗಗಳು ವೇದಿಕೆಯೇರಲಿವೆ. ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟರಿಗೆ ಈ ವರ್ಷದ ತೆಂಕು ತಿಟ್ಟು ವೇದಿಕೆ ಪ್ರಶಸ್ತಿ ಪ್ರದಾನದೊಂದಿಗೆ 10,000 ರೂ. ಗೌರವನಿಧಿ ಅರ್ಪಿಸಲಾಗುತ್ತದೆ.

ತೆಂಕುತಿಟ್ಟು ವೇದಿಕೆ ಹುಟ್ಟಿಕೊಂಡದ್ದು ಕುತೂಹಲಕರ ರೀತಿಯಲ್ಲಿ. ಯಕ್ಷಗಾನ ಆಸಕ್ತ ಉದ್ಯಮಿ ಸುಧಾಕರ ಆಚಾರ್ಯರು ಅನೇಕ ವರ್ಷಗಳಿಂದ “ಸ್ವಾತಂತ್ರೊéàತ್ಸವ ತಾಳಮದ್ದಲೆ’ಯನ್ನು ಆಯೋಜಿಸುತ್ತ ಬಂದಿದ್ದಾರೆ. ಇದರ ರಜತ ಮಹೋತ್ಸವದ ಸಂದರ್ಭದಲ್ಲಿ 2014ರ ಆಗಸ್ಟ್‌ 15ರಂದು ಸಮಾನಮನಸ್ಕ ಕಲಾಪೋಷಕರ ಸಹಕಾರದೊಂದಿಗೆ ಉದ್ಭವವಾದದ್ದು ತೆಂಕುತಿಟ್ಟು ವೇದಿಕೆ. ಪೌರಾಣಿಕ ಪ್ರಸಂಗಗಳ ಪೂರ್ಣರಾತ್ರಿಯ ಕಲಾಪ್ರದರ್ಶನವನ್ನು ಏರ್ಪಡಿಸುವುದರ ಜತೆಗೆ ಹಿರಿಯ, ಸಾಧಕ ಯಕ್ಷಗಾನ ಕಲಾವಿದರಿಗೆ ಗೌರವ ನಿಧಿಯ ಅರ್ಪಣೆಯ ಜತೆಗೆ ಪ್ರಶಸ್ತಿ ಪ್ರದಾನವನ್ನೂ ತೆಂಕುತಿಟ್ಟು ವೇದಿಕೆ ನಡೆಸುತ್ತ ಬಂದಿದೆ. ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಅನುಗ್ರಹ, ಶ್ರೀಕೃಷ್ಣ ಮಠದ ಆಶ್ರಯ, ಸುಧಾಕರ ಆಚಾರ್ಯ ಮತ್ತು ಅವರ ಸಮಾನಮನಸ್ಕ ಕಲಾ ಪೋಷಕರ ಸಹಕಾರಗಳಿಂದ ತೆಂಕುತಿಟ್ಟಿನ ಚತುರ ಕಲಾವಿದರ ಕೂಡುವಿಕೆಯಲ್ಲಿ ನಡೆಯುವ ಈ ವಿಶಿಷ್ಟ ಯಕ್ಷಗಾನ ಪ್ರದರ್ಶನ ರಸಿಕರ ಕಣ್ಮನಗಳನ್ನು ಸೆಳೆಯಲಿದೆ.

ಕಲಾಪ್ರಿಯ

ಟಾಪ್ ನ್ಯೂಸ್

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.