ಕಡಬ ಸಾಂತಪ್ಪ ಕಲಾಲೀನ
Team Udayavani, Jan 18, 2019, 12:30 AM IST
ಇತ್ತೀಚೆಗೆ ನಮ್ಮನ್ನಗಲಿದ ಕಡಬ ಸಾಂತಪ್ಪ ಅವರು ಧರ್ಮಸ್ಥಳ ಮೇಳವೊಂದರಲ್ಲೇ ಸುಮಾರು ಮೂರು ದಶಕಗಳ ಕಾಲ ಕಲಾಸೇವೆ ಮಾಡಿದವರು. ಕೂಡ್ಲು ಮೇಳದಲ್ಲಿ ರಂಗವೇರಿ ಸುರತ್ಕಲ್, ಮುಚ್ಚಾರು ಮುಂತಾದ ಮೇಳಗಳಲ್ಲಿ ತಿರುಗಾಟ ಮಾಡಿದ ಇವರ ಕಲಾಯಾನದ ಅನುಭವ ಆರೇಳು ದಶಕಗಳದ್ದು. ಕನ್ಯಾನದ ಭಾರತ ಸೇವಾಶ್ರಮ ನಡೆಸುವ “ದ್ವಾರಕಮಯಿ’ ವೃದ್ಧಾಶ್ರಮದಲ್ಲಿ ಬಾಳ ಸಂಜೆಯನ್ನು ಕಳೆಯುತ್ತಾ ಕಾಲನ ಕರೆಗಾಗಿ ಕಾಯುತ್ತಿದ್ದ ಈ ಅನಿಕೇತನ ತನ್ನ “ನಿಜ ನಿಕೇತನ’ಕ್ಕೆ ತೆರಳುವಾಗ ಹರಯ 98.
ಸಾಂತಪ್ಪ ಆರಂಭದಲ್ಲಿ ಬದುಕಿಗಾಗಿ ಆರಿಸಿದ್ದು ಟೈಲರ್ ವೃತ್ತಿ. ಅನಂತರ ಸುಬ್ರಹ್ಮಣ್ಯದಲ್ಲಿ ಜವುಳಿ ಅಂಗಡಿ ಇಟ್ಟು ವ್ಯಾಪಾರ ಆರಂಭಿಸಿದರು. ಈ ಹೊತ್ತಿನಲ್ಲಿ ಬಣ್ಣದ ಲೋಕಕ್ಕೆ ಮರುಳಾದರು. ಸಂಪಾದನೆಯ ದಾರಿ ಬಿಟ್ಟು ರಂಗಸ್ಥಳದ ಕಡೆಗೆ ಹೆಜ್ಜೆ ಹಾಕಿದರು. ನೋಡಿ, ಕೂಡಿ, ಕೇಳಿ, ಕಲಿತು ಬೆಳೆಯುತ್ತಾ ಬಣ್ಣದ ಬದುಕನ್ನೇ ಶಾಶ್ವತವಾಗಿಸಿಕೊಂಡರು. ಕಡಬ ಸಾಂತಪ್ಪ ಅಸಾಮಾನ್ಯ ಪ್ರತಿಭಾವಂತ. ಸಾಂಕೇತಿಕ ರಂಗಭೂಮಿಯೆನಿಸಿದ ಯಕ್ಷಗಾನದಲ್ಲಿ ಅಭಿನಯದ ಸಹಜತೆ ಹೇಗೆಂಬುದೇ ಕಲಾವಿದರ ಮುಂದಿರುವ ಸವಾಲು. ಆದುದರಿಂದ ರಂಗಸ್ಥಳದ ಸಾತ್ವಿಕಾಭಿನಯದಲ್ಲಿ ಗೆಲ್ಲುವ ಕಲಾವಿದರ ಸಂಖ್ಯೆ ವಿರಳ. ಇಂತಹ ವಿರಳ ಪಂಕ್ತಿಯ ಕಲಾವಿದರಲ್ಲಿ ಕಡಬ ಅಗ್ರಮಾನ್ಯರು. ಕಡಬ ಪರಿಪೂರ್ಣ ಕಲಾವಿದ. ಯಾವುದೇ ಪಾತ್ರಗಳನ್ನು ಅವರು ನಿರ್ವಹಿಸಿದರೂ ನಡೆ, ನುಡಿ, ನೋಟ ಹೀಗೆ ಸರ್ವಾಂಗ ಅಭಿನಯಗಳಲ್ಲೂ ನೈಜತೆ ಎದ್ದು ತೋರುತ್ತಿತ್ತು. ಮಧುರ ಕಂಠದ ಕಡಬ ಸಾಂತಪ್ಪ ಅವರು ಸುಶ್ರಾವ್ಯವಾಗಿ ಭಾಗವತಿಕೆಯನ್ನು ಮಾಡುತ್ತಿದ್ದರು. ಧರ್ಮಸ್ಥಳ ಮೇಳದಲ್ಲಿ ಕಡತೋಕಾ ಅವರ ಅನುಪಸ್ಥಿತಿಯಲ್ಲಿ ಕಡಬ ಅನೇಕ ಆಟಗಳಿಗೆ ಭಾಗವತಿಕೆ ಮಾಡಿದ್ದುಂಟು.
ಯಕ್ಷಗಾನದ ರಾಜರುಗಳ ಉಡುಗೆಗಳನ್ನು ಹೊಲಿಯುವ ಕಲೆಯನ್ನು ಸಿದ್ಧಿಸಿಕೊಂಡ ಸಾಂತಪ್ಪ ಅವರು ಪ್ರಸಾದನ ಕಲೆಯಲ್ಲೂ ನಿಪುಣ. ಒಂದು ಕಾಲದ ಧರ್ಮಸ್ಥಳ ಮೇಳದ ವೇಷಭೂಷಣದ ರಚನೆಯನ್ನು ಕಡಬ ಅವರೇ ಮಾಡುತ್ತಿದ್ದರು. ತಿರುಗಾಟದಲ್ಲಿ ವೇಷ, ಮಳೆಗಾಲದಲ್ಲಿ ವೇಷಭೂಷಣ ಹೊಲಿಯುವುದು ಇವರ ಕಲಾಕಾಯಕವಾಗಿತ್ತು. ಮೇಳಬಿಟ್ಟ ಬಳಿಕ ಪೈವಳಿಕೆಯ ಶ್ರೀ ಗಣೇಶ ಕಲಾವೃಂದ ಸಂಸ್ಥೆಯಲ್ಲಿ ಕಲಾಸೇವೆ ನಡೆಸಿದರು.
ಕಡಬ ಸಾಂತಪ್ಪ ಅವರು ಕೇವಲ ಕಲಾವಿದ ಮಾತ್ರವಲ್ಲ; ಮೇಳದ ಆಪತºಂಧು ಸದಸ್ಯ. ಕಲಾವಿದರ ರಜೆಗೆ ಯಾವುದೇ ವೇಷಕ್ಕೆ ಸೈ. ಭಾಗವತಿಕೆ, ಸಂಗೀತಕ್ಕೂ ಸಿದ್ಧ. ಪ್ರಚಾರಕ ರಜೆ ಮಾಡಿದರೆ ಆಟ ಕರೆದು ಹೇಳುವ ಕೆಲಸಕ್ಕೂ ಹೋಗುತ್ತಿದ್ದರು. ಕ್ಯಾಂಪುಗಳು ಖಾಲಿ ಇದ್ದರೆ ಅವನ್ನು ತುಂಬಲು ಕಡಬ ಸಾಂತಪ್ಪರೇ ತೆರಳುತ್ತಿದ್ದರು. ಹೀಗೆ ಬಹುಮುಖದ ಕಲಾಸೇವೆ ಇವರದ್ದು.
ಎಂದೂ ಹಣಕ್ಕಾಗಿ ಹಂಬಲಿಸದೆ, ಕಲೆಯನ್ನೇ ಉಸಿರಾಗಿಸಿ ಬಾಳಿದ ಕಲೋಪಾಸಕ ಕಡಬ ಸಾಂತಪ್ಪ ಅವರ ಕೊನೆಗಾಲದ ನೆಲೆ “ವೃದ್ಧಾಶ್ರಮ’ವಾದುದು ವಿಷಾದನೀಯ. ಎಂದಿಗೂ ಯಾರಿಗೂ ತಲೆಬಾಗದೆ, ಯಾರ ಮುಂದೆಯೂ ಕೈ ಚಾಚದೆ ಸ್ವಾಭಿಮಾನದಿಂದಲೇ ಬಾಳಿದವರು. ಎಂದಿಗೂ ಬದುಕಿನ ಗುಲಾಮನಾಗದೆ ಬದುಕನ್ನು ಬಂದಂತೆ ಸ್ವೀಕರಿಸಿ ಸ್ಥಿತಪ್ರಜ್ಞನಾಗಿಯೇ ಬಾಳಿದ ಈ ಅಸಾಮಾನ್ಯ ಕಲಾವಿದನಿಗೆ ಕಲಾಜೀವನ ನೀಡಿದ್ದು ಮಾತ್ರ ಅನಾಥ ಬಾಳನ್ನು ಎಂಬುದು ಬಹಳ ಬೇಸರದ ಸಂಗತಿ.
ತಾರಾನಾಥ ವರ್ಕಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.