ಯಕ್ಷಲಲನೆ – ಪ್ರಸಂಗಕರ್ತೆ ಅರ್ಪಿತಾ ಹೆಗಡೆ


Team Udayavani, Jan 7, 2017, 12:58 AM IST

Arpitha-600.jpg

ಯುವಜನತೆ ಸಂಸ್ಕೃತಿ – ಕಲೆಗಳಿಂದ ದೂರ ಸರಿಯುತ್ತಿದೆ, ತಂತ್ರಜ್ಞಾನ ಮೂಲದ ಆಕರ್ಷಣೆಯ ಮಾಯೆಯಲ್ಲಿ ದಿಕ್ಕುತಪ್ಪುತ್ತಿದೆ ಅನ್ನುವುದು ಸಾಮಾನ್ಯವಾಗಿ ಕೇಳಿಬರುವ ಒಂದು ಆರೋಪ. ಆದರೆ, ಯಕ್ಷಗಾನದಂತಹ ಕಲಾಕ್ಷೇತ್ರದಲ್ಲಿ ಮೂಡುತ್ತಿರುವ ಹೊಸ ಬೆಳೆಯನ್ನು ಗಮನಿಸಿದರೆ ಅಂಥ ನಿರಾಶಾಭಾವನೆಗೆ ಅರ್ಥವಿಲ್ಲ ಅನ್ನಿಸುತ್ತದೆ. ಉದಾಹರಣೆಗೆ ಇಪ್ಪತ್ತೈದರ ಆಸುಪಾಸು ವಯಸ್ಸಿನ ಯುವತಿ ಅರ್ಪಿತಾ ಹೆಗಡೆ ಅವರನ್ನೇ ನೋಡಿ. ಬರೇ ಯಕ್ಷಗಾನ ನಾಟ್ಯಾಭಿನಯದಲ್ಲಿ ಮಾತ್ರ ಅಲ್ಲ; ಪ್ರಸಂಗ ರಚನೆಯಲ್ಲೂ ಕೈಯಾಡಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಡತೋಕಾದ ಅರ್ಪಿತಾ ಅವರು ಸುರೇಶ್‌ ಹೆಗಡೆ ಕಡತೋಕ ಮತ್ತು ಶ್ರೀದೇವಿ ಹೆಗಡೆಯವರ ಪುತ್ರಿ. ಈಕೆಯ ತಂದೆ ತಾಯಿಯರು ಸ್ವತಃ ಯಕ್ಷಗಾನ ಕಲಾವಿದರಲ್ಲ. ಆದರೆ, ತಮ್ಮ ಮಗಳಿಗೆ ಬಾಲ್ಯದಿಂದಲೇ ಯಕ್ಷಗಾನದ ವಾತಾವರಣವನ್ನು ಕಲ್ಪಿಸಿಕೊಟ್ಟವರು. ಆಕೆಗೆ ಯಕ್ಷಗಾನದ ಮೇಲಿರುವ ಪ್ರೀತಿಯನ್ನು ಅರಿತು ಬಾಲ್ಯದಿಂದಲೇ ಯಕ್ಷಗಾನ ಪ್ರದರ್ಶನಗಳಿಗೆ ಕರೆದುಕೊಂಡು ಹೋಗಿ ಪಾತ್ರಗಳ ಹಾವಭಾವ, ಹೆಜ್ಜೆ- ಮಾತುಗಾರಿಕೆ ಇವೆಲ್ಲವುಗಳ ಬಗ್ಗೆ ಗಮನ ಹರಿಸುವಂತೆ ಮಾಡಿದರು. ಬಾಲ್ಯದಿಂದಲೇ ಚುರುಕಾಗಿದ್ದ ಅರ್ಪಿತಾ ಎಲ್ಲವನ್ನೂ ಬಲುಬೇಗ ಕಲಿತು ಬಾಲಪ್ರತಿಭೆಯಾಗಿ ರೂಪುಗೊಂಡರು. ದೊಡ್ಡಪ್ಪ ವಿ. ಆರ್‌. ಹೆಗಡೆಯವರ ಪ್ರೋತ್ಸಾಹದಿಂದಾಗಿ ತಮ್ಮೂರಿನ ಸಿರಿಕಲಾ ಮೇಳದಲ್ಲಿ ಪುಟಿದೆದ್ದು ಬಹುದೊಡ್ಡ ಪ್ರತಿಭೆಯಾಗುವತ್ತ ಹೆಜ್ಜೆಹಾಕಿದಳು. ತನ್ನ ಎಂಟನೇ ವಯಸ್ಸಿಗೆ ಯಕ್ಷಗಾನ ರಂಗದಲ್ಲಿ ಹೆಸರು ಮಾಡಿ ಅಮೆರಿಕದ ಅಕ್ಕ ಕನ್ನಡ ಕಾರ್ಯಕ್ರಮದಲ್ಲಿ ಆಹ್ವಾನಿತ ಕಲಾವಿದೆಯಾಗಿ ಭಾಗವಹಿಸಿ ಬಂದವರು ಅರ್ಪಿತಾ. ಅನಂತರ ಸಿರಿಕಲಾ ಮೇಳದ ವತಿಯಿಂದ ನಡೆದ ಸುಮಾರು ಇನ್ನೂರೈವತ್ತು ಪ್ರಸಂಗಗಳಲ್ಲಿ ಹೆಜ್ಜೆ ಹಾಕಿ ಮಹಿಳಾ ಕಲಾವಿದೆಯಾಗಿ ರೂಪುಗೊಂಡರು. ಇತ್ತೀಚೆಗೆ ಚೀನದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲೂ ಕನ್ನಡ ನಾಡಿನ ಯಕ್ಷಗಾನದ ಕಂಪು ಸೂಸಿ 
ಬಂದವರು ಈಕೆ.

ಯಕ್ಷಗಾನವನ್ನು ಸಾಮಾನ್ಯವಾಗಿ ಗಂಡುಮಕ್ಕಳ ಕಲೆ ಎಂದು ಹೇಳುವುದುಂಟು. ಆದರೆ ಅರ್ಪಿತಾ ತನ್ನ ಪ್ರತಿಭೆಯ ಮೂಲಕ ಯಾವುದೇ ಪಾತ್ರವಿರಲಿ, ಆಯಾ ಪಾತ್ರಕ್ಕೆ ತಕ್ಕ ಹಾವಭಾವ, ಕುಣಿತ ಮತ್ತು ಮಾತುಗಾರಿಕೆಯ ಮೂಲಕ ಛಾಪು ಮೂಡಿಸುತ್ತಾರೆ. ಇಂದು ಕರ್ನಾಟಕದ ಯಕ್ಷಗಾನ ತಂಡಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಹಿಳೆಯರು ಪಾತ್ರಧಾರಿಗಳಾಗಿದ್ದಾರೆ. ಅವರಲ್ಲಿ ಬಹುಶಃ ಟಾಪ್‌ 5ರಲ್ಲಿರುವ ಕಲಾವಿದೆ ಈಕೆ ಎಂದು ಬಲ್ಲವರಿಂದ ಹೊಗಳಿಸಿಕೊಂಡವರು ಅರ್ಪಿತಾ.

ಈಕೆ ಪ್ರಸಂಗಕರ್ತೆಯೂ ಹೌದು. ಈಗಾಗಲೇ ‘ಪೂರ್ಣಚಂದ್ರ’, ‘ನಾಗಪಂಚಮಿ’, ‘ಪ್ರೇಮಸಾರಂಗ’, ‘ರಾಧಾಂತರಂಗ’ ಪ್ರಸಂಗಗಳನ್ನು ರಚಿಸಿದ್ದಾರೆ. ಇದುವರೆಗೆ ಮಹಿಳೆಯೊಬ್ಬರು ಐದು ಪ್ರಸಂಗಗಳನ್ನು ರಚಿಸಿ ಯಶಸ್ವಿಯಾಗಿ ಪ್ರದರ್ಶನ ನಡೆಸಿದ್ದು ಪ್ರಥಮ ಹಾಗೂ ಯಕ್ಷಗಾನದಲ್ಲಿ ಒಂದು ಮೈಲಿಗಲ್ಲೂ ಹೌದು. ಈಗ ಈಕೆ ರಚಿಸಿರುವ, ಐತಿಹಾಸಿಕ ಕಥಾಹಿನ್ನೆಲೆಯುಳ್ಳ ‘ಗಂಡುಗಲಿ ದೇವರಾಯ’ ಅಗ್ರ ಪ್ರಸಂಗವಾಗಿ ಪ್ರದರ್ಶಿಸಲ್ಪಡುತ್ತ ಪ್ರೇಕ್ಷಕರ ಮೆಚ್ಚುಗೆಗೆ ಭಾಜನವಾಗಿದೆ. ಬೆಂಗಳೂರಿನಲ್ಲಿ ನಡೆದ ಅದರ ಪ್ರದರ್ಶನ ಯಕ್ಷರಸಿಕರ ಶ್ಲಾಘನೆಗೆ ಪಾತ್ರವಾಗಿದೆ. ಉದಯೋನ್ಮುಖ ಪ್ರತಿಭೆಯಾಗಿ ಛಾಪು ಮೂಡಿಸಿರುವ ಅರ್ಪಿತಾ ಇದುವರೆಗೆ 200ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಷ್ಟು ಮಾತ್ರ ಅಲ್ಲ, ಓದಿನಲ್ಲಿಯೂ ಹಿಂದೆ ಬೀಳದ ಈಕೆ ಇದೀಗ ಪದವಿ ತರಗತಿಯತ್ತ ಹೆಜ್ಜೆ ಹಾಕಿದ್ದಾರೆ.

– ಮೋಹನ

ಟಾಪ್ ನ್ಯೂಸ್

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವುMadikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು

Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್‌ ತೀರ್ಪು

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

High-Court

High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್‌

Nagendra-ED

Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ

CS-Shadakshari

Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್‌.ಷಡಾಕ್ಷರಿ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.