ಪೂಜೆಯ ಮನೆಯಲ್ಲಿ ಕರ್ಣಾರ್ಜುನ ಕಾಳಗ
Team Udayavani, Aug 3, 2018, 6:00 AM IST
ಹೊರಗೆ ಧೋ ಎಂದು ಸುರಿಯುತ್ತಿರುವ ಪುನರ್ವಸುವಿನ ಮಳೆ, ತಾರಸಿಯ ಮೇಲು ಮಾಡಿನ ನೆರಳಿನಲ್ಲಿ ತುಂಬಿಕೊಂಡ ಉಂಡು ಸಂತೃಪ್ತರಾದ ಅಭ್ಯಾಗತರು. ಮಧ್ಯಾಹ್ನ ಸತ್ಯನಾರಾಯಣ ಪೂಜೆಯ ಸಂತರ್ಪಣೆಯ ಬಳಿಕ ಅತಿಥಿಗಳ ಮನ ತಣಿಸಿದ್ದು ಕರ್ಣಾರ್ಜುನ ಕಾಳಗ ತಾಳ ಮದ್ದಲೆಯ ಸೊಬಗು. ಬೆಳ್ತಂಗಡಿಯ ಗೇರುಕಟ್ಟೆಯಲ್ಲಿರುವ ಕಲಾವಿದ, ಕಲಾಪೋಷಕ ಪ್ರೊ| ಮಧೂರು ಮೋಹನ ಕಲ್ಲೂರಾಯರ ಮನೆಯಲ್ಲಿ ಮಳೆಯ ಚಳಿಯಲ್ಲೂ ಮುದ ನೀಡಿತು ಕರ್ಣಾರ್ಜುನ ಕಾಳಗ ಪ್ರಸಂಗ.
ಯುವ ಭಾಗವತ ರಾಮಪ್ರಕಾಶರ ಗಟ್ಟಿ ದನಿಯ, “ಎಲವೋ ಸೂತನ ಮಗನೇ’ ಹಾಡಿಗೆ ಅಷ್ಟೇ ರಭಸದಿಂದ ಅರ್ಜುನನಾಗಿ ಕರ್ಣನನ್ನು ಮೂದಲಿಸಿದ ದಿನೇಶ ರಾವ್ ಅವರು ಸೂತನೊಬ್ಬನ ಅನರ್ಹತೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ನೀನು ಕದನದಲ್ಲಿ ಸಾಹಸಿಗನಲ್ಲ, ಜಗಳ ತಂದಿಡುವುದರಲ್ಲಿ ಮಾತ್ರ ನಿಸ್ಸೀಮ ಎಂಬ ಮಾತುಗಳಿಂದ ಕರ್ಣನ ಮರ್ಮವನ್ನು ಇರಿಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಬಹು ಸೊಗಸಾಗಿ ಕಟ್ಟಿಕೊಟ್ಟರು. ಅಷ್ಟೇ ಸಶಕ್ತವಾಗಿ ಅರ್ಜುನನ ಪ್ರತಿಯೊಂದು ಮಾತಿಗೂ ಉತ್ತರ ನೀಡುತ್ತ ಹೋದ ಮಧೂರು ಮೋಹನ ಕಲ್ಲೂರಾಯರು ಧೀರೋದಾತ್ತ ಕರ್ಣನ ವ್ಯಕ್ತಿಚಿತ್ರವನ್ನು ಒಂದು ಪ್ರಬಂಧದ ಹಾಗೆ ಪೋಣಿಸುತ್ತ ವಿಜೃಂಭಿಸಿದರು. ದ್ರೋಣರು ಆರಂಭದಿಂದಲೂ ಜಾತಿ ವ್ಯವಸ್ಥೆಯ ವೈರುಧ್ಯದಲ್ಲಿ ವಹಿಸಿದ ಪಾತ್ರವನ್ನು ಮುಖ್ಯವಾಗಿ ವಿಮರ್ಶಿಸುತ್ತ ಏಕಲವ್ಯನ ಬೆರಳನ್ನು ಕತ್ತರಿಸಿದ್ದು, ಕರ್ಣನಿಗೆ ಮಂತ್ರಾಸ್ತ್ರಗಳನ್ನು ಕೊಡದೆ ಹೋಗಿ, ಅರಳುವ ವ್ಯಕ್ತಿತ್ವವೊಂದರ ನಿರ್ನಾಮದಲ್ಲಿ ಎಂತಹ ದ್ರೋಹವೆಸಗಿದರು ಎಂಬುದನ್ನು ಹೇಳುತ್ತ ಹೋದಂತೆ ಕೇಳುಗರ ಕಣ್ಣುಗಳಲ್ಲಿ ಹನಿ ಮೂಡಿದ್ದು ಸಹಜವೇ ಆಗಿತ್ತು.
ಪೂತು ಮಝರೇ ಕರ್ಣ ಎಂಬ ಹಾಡಿನೊಂದಿಗೆ ಎರಡನೆಯ ಭಾಗವತರಾಗಿ ವಿಷ್ಣುಪ್ರಸಾದರು ತಮ್ಮ ಮೋಹಕ ಕಂಠ, ಬಳಸಿದ ರಾಗಗಳ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು. ಕೃಷ್ಣನಾಗಿ ರಾಧಾಕೃಷ್ಣ ಭಟ್ಟರದು ಸಂಯಮದ ಮಾತುಗಾರಿಕೆ, ಸೊಗಸಾದ ನಿರೂಪಣೆ. ವೃತ್ತಿಯಿಂದ ಶಿಕ್ಷಕರಾದರೂ ಮಾತುಗಾರಿಕೆ ಪಠ್ಯದ ರೀತಿಯಲ್ಲಿರದೆ ಪಾತ್ರದ ನಿಜ ಸ್ವರೂಪವಾಗಿ ಹೊರಹೊಮ್ಮಿತು. ಅರ್ಜುನನನ್ನು ಸಮಾಧಾನಪಡಿಸುವ ಸನ್ನಿವೇಶದಲ್ಲಂತೂ ಶಕ್ತಿಯುತವಾದ ಗಾಂಢೀವ, ರಥದ ಮೇಲಿರುವ ಹನುಮಂತ, ಭೂಮಿ ತೂಕದ ರಥವನ್ನು ಹಿಂದೆ ಸರಿಸಿದ ಕರ್ಣನನ್ನು ಹೊಗಳಿದುದರ ಔಚಿತ್ಯವನ್ನು ವಿವರಿಸುವ ಪರಿ ಅನನ್ಯವಾಗಿತ್ತು.
ಹಿರಿಯರೂ ಯಕ್ಷಕಲೆಯಲ್ಲಿ ಆಳವಾದ ಅನುಭವಿಗಳೂ ಆದ ರಮಾನಂದ ನೆಲ್ಲಿತ್ತಾಯರ ಶಲ್ಯ ಪ್ರವೇಶವಾದ ಮೇಲೆಯೇ ಪ್ರಸಂಗ ತನ್ನ ಪೂರ್ಣ ಸಣ್ತೀವನ್ನು ಪ್ರದರ್ಶಿಸಿದ್ದು. ಅರೆಕ್ಷಣ ತನ್ನ ರಥದಲ್ಲಿ ನೀನು ನಿಂತರೂ ಸಾಕು, ಅರ್ಜುನನ ಸದೆ ಬಡಿಯುತ್ತೇನೆಂದು ಅಂಗಲಾಚುವ ಕರ್ಣನ ಮೊರೆಯನ್ನು ಧಿಕ್ಕರಿಸಿ, ತೊಟ್ಟ ಬಾಣವನ್ನು ತೊಡಬೇಕು, ಸರ್ಪಾಸ್ತ್ರವನ್ನು ಮತ್ತೆ ಪ್ರಯೋಗಿಸಲೇಬೇಕೆಂಬ ತನ್ನ ಆದೇಶವನ್ನು ಧಿಕ್ಕರಿಸುವ ಕರ್ಣನೆಡೆಗೆ ತಿರಸ್ಕಾರದ ನೋಟ ಬೀರಿ ಚಮ್ಮಟಿಗೆಯನ್ನು ಎಸೆದು ರಥದಿಂದ ಕೆಳಗಿಳಿಯುವ ಶಲ್ಯನೂ ಆ ಕ್ಷಣದಲ್ಲಿ ಧೀರೋದ್ಧಾತನೇ ಅನಿಸಿದ್ದರೆ ಅದಕ್ಕೆ ಕಾರಣ ಅವರ ಮಾತುಗಾರಿಕೆ.
ಹಿಮ್ಮೇಳದಲ್ಲಿ ಪವನ್ ಎಂಬ ಕಲ್ಲೂರಾಯ ಕುಟುಂಬದ ಆರನೆಯ ತರಗತಿಯ ಬಾಲ ಪ್ರತಿಭೆಯ ಮೃದಂಗ ವಾದನವನ್ನು ಹೆಸರಿಸಲೇಬೇಕು. ಕಾಸರಗೋಡಿನ ಕನ್ನಡ ಶಾಲೆಯನ್ನು ಆಧರಿಸಿದ ಕತೆಯುಳ್ಳ ಚಲನಚಿತ್ರದಲ್ಲಿ ಆತ ಮುಖ್ಯ ಭೂಮಿಕೆ ವಹಿಸಿದ್ದಾನೆ. ಯಕ್ಷಗಾನ ಪಾತ್ರಗಳು, ಹಿಮ್ಮೇಳವಾದನದಲ್ಲೂ ನಿಪುಣ. ಪುಟ್ಟ ಬೆರಳುಗಳ ವಾದನ ಮೃದುಮಧುರವಾಗಿತ್ತು. ಅಮೋಘ ಕುಂಟಿನಿ ಮತ್ತು ಮೂರ್ತಿ ಕುಂಟಿನಿಯವರ ಚೆಂಡೆ ವಾದನ ತಾಳಮದ್ದಲೆಯ ಸೊಬಗು ಹೆಚ್ಚಿಸುವಲ್ಲಿ ಸಹಕರಿಸಿದವು. ಪೂಜೆಯ ಸಂದರ್ಭವಾದ ಕಾರಣ ಪ್ರಸಂಗವನ್ನು ಕುಂಠಿತಗೊಳಿಸಲಾಯಿತು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.