ಸ್ವರ ಪ್ರತಿಭಾ ಪ್ರಶಸ್ತಿ ಪುರಸ್ಕೃತೆ ಕವಿತಾ ಶೆಣೈ

Team Udayavani, Dec 15, 2017, 3:15 PM IST

15-33.jpg

ಸಂಗೀತ ರಂಗವನ್ನು ಸಂಸಾರದೊಂದಿಗೆ ಸಮನ್ವಯಗೊಳಿಸಿ ಸಂಗೀತ ಆರಾಧನೆ, ಸಂಗೀತ ಸೇವೆ ಮಾಡುತ್ತಿರುವ ಮಂಗಳೂರಿನ ಹಿಂದೂಸ್ಥಾನಿ ಗಾಯಕಿ ಬಸ್ತಿ ಕವಿತಾ ಶೆಣೈ. ಅವರಿಗೆ ಕೊಚ್ಚಿನ್‌ ಜಿಎಸ್‌ಬಿ ಮಹಾಜನತೆ ಯಿಂದ “ಸ್ವರ ಪ್ರತಿಭಾ’ ಪ್ರಶಸ್ತಿ ಲಭಿಸಿದೆ. ಈಚೆಗೆ ಶ್ರೀ ಕಾಶೀ ಮಠಾಧೀಶ ಪರಮ ಪೂಜ್ಯ ಶ್ರೀಮತ್‌ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ಕೊಚ್ಚಿಯಲ್ಲಿ ಈ ಪ್ರಶಸ್ತಿ ನೀಡಿ ಆಶೀರ್ವದಿಸಿದ್ದಾರೆ.

ಕವಿತಾ ಶೆಣೈ, ಕೋಟೇಶ್ವರದ ಶ್ರೀಧರ್‌ ವಿ. ಕಾಮತ್‌ ಮತ್ತು ವೇದಾವತಿ ಕಾಮತ್‌ ಅವರ ಪುತ್ರಿ. ಬಾಲ್ಯದಲ್ಲಿ ಅಂಕುರಾವಸ್ಥೆಯಲ್ಲಿದ್ದ ಸಂಗೀತ ಆಸಕ್ತಿಯನ್ನು ಸ್ವತಃ ಗಾಯಕ -ಸಂಗೀತ ಕಲಾವಿದರಾಗಿರುವ ತಂದೆ ಶ್ರೀಧರ್‌ ಕಾಮತ್‌ ಪೋಷಿಸಿ, ಬೆಳೆಸಲಾರಂಭಿಸಿದರು.

ಅನಂತರ ಉಡುಪಿಯ ಪಂ| ಮಾಧವ ಭಟ್‌, ವಿ| ಗುರುದಾಸ ಶೆಣೈ, ಗೋವಾದ ಪಂ| ರಾಮರಾವ್‌ ನಾಯಕ್‌ ಮುಂತಾದ ವರಲ್ಲಿ ಗಾಯನ ಅಭ್ಯಸಿಸಿದರು. ಇವರ ಸಂಗೀತ ಕಲಿಕೆಯ ದಾಹ ಇನ್ನೂ ಇಂಗಿಲ್ಲ. ಈಗ ನಾಶಿಕ್‌ನ ಪಂಡಿತ್‌ ಪ್ರಸಾದ್‌ ಕಪಡೇì ಯವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. 

ಹಿಂದೂಸ್ಥಾನಿ ಗಾಯನದ ಜತೆಗೆ ಹಾರೊನಿಯಂ, ವೀಣಾ ವಾದನಗಳಲ್ಲೂ ನಿಪುಣರಾಗಿರುವ ಇವರು ಪ್ರಖ್ಯಾತ ಗಾಯಕ ಪಂ| ರಮಾಕಾಂತ್‌ ಗುಂಡೇಚಾರ ಮಾರ್ಗದರ್ಶನದಲ್ಲಿ ಭೂಪಾಲ್‌ನ ಗುರುಕುಲ ದ್ರುಪದ ಸಂಸ್ಥಾನದಲ್ಲಿ ಸ್ವರ ಅಧ್ಯಯನ ತರಬೇತಿ ಪಡೆದಿದ್ದು, ಅಖೀಲ ಭಾರತೀಯ ಗಂಧರ್ವ ವಿದ್ಯಾಲಯದ ಸಂಗೀತ ಪದವಿಯನ್ನು ಪಡೆದಿದ್ದಾರೆ. ಆಕಾಶವಾಣಿಯ “ಬಿ’ ಗ್ರೇಡ್‌ ಕಲಾವಿದೆಯಾಗಿದ್ದು, “ಸ್ವರ ಸೇವಾ’ ಹೆಸರಿನ ಸಂಗೀತ ಶಾಲೆ ನಡೆಸುತ್ತಿದ್ದಾರೆ. ನೂರಾರು ಸಂಗೀತಾಸಕ್ತರಿಗೆ ಸಂಗೀತ ಕಲಿಸಿದ್ದು, ಪ್ರಸ್ತುತ ನೂರರಷ್ಟು ಆಸಕ್ತರು ಅವರ ಬಳಿ ಸಂಗೀತ ಅಭ್ಯಸಿಸುತ್ತಿದ್ದಾರೆ. ಕವಿತಾ ಬರವಣಿಗೆಯಲ್ಲೂ ಕೈಯಾಡಿ ಸಿದ್ದು, “ಭಜನಮಾಲಾ” ಮತ್ತು “ಸ್ತ್ರೋತ್ರಮಾಲಾ’ ಪುಸ್ತಿಕೆಗಳ ಜತೆಗೆ ಕೆಲವು ಗೀತೆಗಳನ್ನು ರಚಿಸಿದ್ದಾರೆ. ಹಲವಾರು ಧ್ವನಿ ಮುದ್ರಿಕೆಗಳಲ್ಲಿ ಹಾಡಿದ್ದುಂಟು.

ನಾಡಿನ ಹಲವೆಡೆ ಈತನಕ ನೂರಾರು ಕಾರ್ಯಕ್ರಮ ನೀಡಿರುವ ಇವರಿಗೆ ಶ್ರೀ ಕಾಶೀ ಮಠದ ವೃಂದಾವನಸ್ಥ ಶ್ರೀಮತ್‌ ಸುಧೀಂದ್ರ ತೀರ್ಥ ಶ್ರೀಪಾದರಿಂದ, ಗೋಕರ್ಣಶ್ರೀ, ಪೇಜಾವರ ಶ್ರೀಗಳಿಂದ ಆಶೀರ್ವಾದ ಲಭಿಸಿವೆ. 

ಸಂದೀಪ್‌ ನಾಯಕ್‌ ಸುಜೀರ್‌

ಟಾಪ್ ನ್ಯೂಸ್

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.