ಕೆ.ಕೆ. ಶೆಟ್ಟಿ, ಕೇಶವ ಭಟ್ಟರಿಗೆ ಪೊಳಲಿ ಶಾಸ್ತ್ರಿ ಪ್ರಶಸ್ತಿ
Team Udayavani, Mar 9, 2018, 7:30 AM IST
ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಹಳೆ ತಲೆಮಾರಿನಲ್ಲಿ ಕೆ.ಪಿ.ವೆಂಕಪ್ಪ ಶೆಟ್ಟಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಮತ್ತು ನಾರಾಯಣ ಕಿಲ್ಲೆಯವರದು ಅಗ್ರಪಂಕ್ತಿಯ ಹೆಸರು. ಅಲ್ಲಿಂದ ವಿದ್ವಜ್ಜನ ವಲಯದಲ್ಲಿ ಜನಪ್ರಿಯವಾದ ತಾಳಮದ್ದಳೆ ಕಲಾ ಪ್ರಕಾರ ಶೇಣಿ, ಸಾಮಗರ ಯುಗದಲ್ಲಿ ವಿಸ್ತಾರಗೊಂಡು ಈಗ ವ್ಯಾಪಕವಾಗಿ ಬೆಳೆದು ನಿಂತಿದೆ. ಯಕ್ಷಗಾನದ ವಾಚಿಕ ವಿಭಾಗಕ್ಕೆ ಕಸುವು ತುಂಬಿದ ಹಿರಿಯರನ್ನು ಮರೆಯದೆ ಇರುವುದು ಈ ಕಾಲದವರ ಕರ್ತವ್ಯವೂ ಹೌದು. ಆದರೆ ಅಂತಹವರ ಸ್ಮರಣೆ ಮುಂದಿನ ತಲೆಮಾರಿಗೆ ದಾರಿ ತೋರುವಂತಿರಬೇಕು ಎಂಬ ಎಚ್ಚರ ಅಗತ್ಯ. ಪೊಳಲಿ ಸ್ಮಾರಕ ಸಮಿತಿ ಹುಟ್ಟು ವಡೆದದ್ದೇ ಈ ಎಚ್ಚರದಿಂದ.
ತಾಳಮದ್ದಳೆಯ ನವೋದಯದ ನೇತಾರರಲ್ಲಿ ಒಬ್ಬರಾದ ಯಕ್ಷಗಾನ ವಾಚಸ್ಪತಿ ದಿ| ಪೊಳಲಿ ಶಂಕರನಾರಾಯಣ ಶಾಸ್ತ್ರಿ ಅವರು ಯಕ್ಷಗಾನ ಅರ್ಥಗಾರಿಕೆ ಮತ್ತು ಪುರಾಣ ಪ್ರವಚನ ಕ್ಷೇತ್ರಕ್ಕೆ ಅಸಾಮಾನ್ಯ ಕೊಡುಗೆ ನೀಡಿದ ವಿದ್ವಾಂಸರು. 1930-1970ರ ಅವಧಿಯಲ್ಲಿ ಉಭಯ ಕ್ಷೇತ್ರಗಳಲ್ಲಿ ಅವರು ಮಾಡಿದ ಸೇವೆ ಅವಿಸ್ಮರಣೀಯ. ಅವರ ನಿಧನಾನಂತರ 1975ರಲ್ಲಿ ಆರಂಭಗೊಂಡ ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ ಯಕ್ಷಗಾನ ಮಕರಂದ ಎಂಬ ಸಂಸ್ಮರಣಾ ಗ್ರಂಥವನ್ನು ಪ್ರಕಟಿಸಿತು. ಅದು ಇಂದಿಗೂ ಯಕ್ಷಗಾನಕ್ಕೊಂದು ಆಕರ ಗ್ರಂಥವಾಗಿ ಉಳಿದಿದೆ. ಇದರೊಂದಿಗೆ ಪ್ರತಿ ವರ್ಷ ಯಕ್ಷಗಾನ ತಾಳಮದ್ದಳೆ ಮತ್ತು ಪ್ರವಚನ ಕ್ಷೇತ್ರದ ಅರ್ಹ ಕಲಾವಿದರೊಬ್ಬರನ್ನು ಪೊಳಲಿ ಶಾಸ್ತ್ರಿ ಪ್ರಶಸ್ತಿಯೊಂದಿಗೆ ಸಮಿತಿ ಗೌರವಿಸುತ್ತಾ ಬಂದಿದೆ.
ಈ ಹಿಂದೆ ಮಲ್ಪೆ ಶಂಕರ ನಾರಾಯಣ ಸಾಮಗ, ತಲ್ಲಂಗಡಿ ಪರಮೇಶ್ವರಿ ಶೆಡ್ತಿ, ಪೆರ್ಲ ಕೃಷ್ಣ ಭಟ್, ಕುಬೆೆವೂರು ಪುಟ್ಟಣ್ಣ ಶೆಟ್ಟಿ, ಕೆ.ಕಾಂತ ರೈ, ತೆಕ್ಕಟ್ಟೆ ಆನಂದ ಮಾಸ್ತರ್, ಜಿ. ಪರಮೇಶ್ವರ ಭಟ್, ಅಡ್ಡೆ ವಾಸು ಶೆಟ್ಟಿ,ಮಲ್ಪೆ ರಾಮದಾಸ ಸಾಮಗ, ಎಂ.ಆರ್.ಶಾಸ್ತ್ರಿ, ಬಾಳಗುತ್ತು ದೂಮಣ್ಣ ಶೆಟ್ಟಿ, ಹೊಸಬೆಟ್ಟು ನಾರಾಯಣ ರಾವ್, ಬಿ.ಜಯರಾಮ ಶೆಟ್ಟಿ ತೋಡಾರು, ಅಷ್ಟಾವಧಾನಿ ಡಾ| ಆರ್.ಗಣೇಶ್,ಎಂ.ಎಲ್. ರಾಮಚಂದ್ರ ರಾವ್, ಬೆಳ್ಳಾರೆ ಕಿಟ್ಟಣ್ಣ ರೈ, ಸೀತಾರಾಮ ಕರುಣಾಕರ, ಕುಂಬಳೆ ಸುಂದರರಾವ್, ಎಂ.ಆರ್. ಲಕ್ಷ್ಮೀನಾರಾಯಣ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಬಿ.ಚಂದ್ರಶೇಖರ ರಾವ್, ಅಂಬಾತನಯ ಮುದ್ರಾಡಿ, ಡಾ| ಡಿ. ಸದಾಶಿವ ಭಟ್, ಸಿದ್ಧಕಟ್ಟೆ ವಾಸು ಶೆಟ್ಟಿ, ಲಕ್ಷ್ಮೀಶ ತೋಳ್ಪಾಡಿ, ಡಾ| ರಮಾನಂದ ಬನಾರಿ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ, ಪಿ. ಪರಮೇಶ್ವರ ಐತಾಳ್ ಮೊದಲಾದ ಘಟಾನುಘಟಿಗಳಿಗೆ ಈ ಪ್ರಶಸ್ತಿ ಸಂದಿದೆ. ಅಲ್ಲದೆ ಉಡುಪಿಯ ಪಾವಂಜೆ ಗುರು ರಾವ್‌ಆ್ಯಂಡ್ ಸನ್ಸ್ ಪ್ರಕಾಶನ ಸಂಸ್ಥೆಗೆ ಶಾಸ್ತ್ರಿ ಶತಮಾನೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಇದೀಗ 2017 ಮತ್ತು 2018ರ ಸಾಲಿನಲ್ಲಿ ಪೊಳಲಿ ಶಾಸ್ತ್ರಿ ಪ್ರಶಸ್ತಿಯನ್ನು ಇಬ್ಬರು ಹಿರಿಯ ಸಾಧಕರು ಪಡೆದಿದ್ದಾರೆ. ಅವರಲ್ಲಿ ಒಬ್ಬರು ಮುಂಬಯಿಯ ಕೆ.ಕೆ. ಶೆಟ್ಟರು; ಇನ್ನೋರ್ವರು ಬರೆ ಕೇಶವ ಭಟ್ಟರು.
ಕೆ.ಕೆ. ಶೆಟ್ಟಿ
ಪಡುಬಿದ್ರಿ ನಡ್ಪಾಲಿನ ಕೃಷಿಕ ಕುಟುಂಬದಲ್ಲಿ ಜನಿಸಿದ ಕೆ.ಕುಟ್ಟಿ ಶೆಟ್ಟರು ಅವರಾಲ್ ಮಟ್ಟಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ 1950ರಲ್ಲಿ ತನ್ನ ಹದಿನಾಲ್ಕನೇ ವಯಸ್ಸಿಗೆ ಮುಂಬಯಿ ಮಹಾನಗರವನ್ನು ಸೇರಿದರು. ಅಲ್ಲಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ದುಡಿಯುತ್ತಾ ಮೊಗವೀರ ರಾತ್ರಿ ಶಾಲೆಯಲ್ಲಿ ಕಲಿಕೆಯನ್ನು ಮುಂದುವರಿಸಿದರು. ಮುಂದೆ ಸ್ವತಂತ್ರ ಉದ್ಯಮವನ್ನು ನಡೆಸುವುದರೊಂದಿಗೆ ಹಲವು ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡರು. ಯಕ್ಷಗಾನ ತಾಳಮದ್ದಳೆಯ ಕಡೆ ಆಸಕ್ತರಾಗಿದ್ದ ಕೆ.ಕೆ.ಶೆಟ್ಟರು ಮಾಣಿಯೂರು ಶಂಕರ ಶೆಟ್ಟರ ಪ್ರೇರಣೆಯಿಂದ ಅರ್ಥಧಾರಿಯಾಗಿ ಬೆಳೆದರು. ಶ್ರೀಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ರೇರೋಡ್ ಮತ್ತು ಶ್ರೀ ಶಾರದಾ ಯಕ್ಷಗಾನ ಮಂಡಳಿ ಬೈಕಲಾ ಮೂಲಕ ಹಿರಿಯ – ಕಿರಿಯ ಕಲಾವಿದರೊಂದಿಗೆ ತಮ್ಮ ಅರ್ಥಗಾರಿಕೆಯನ್ನು ಮುಂದುವರಿಸಿದರು. ಕರ್ಣ, ವಾಲಿ, ಜರಾಸಂಧ, ಕೌರವ, ಭೀಷ್ಮ, ಪರಶುರಾಮ, ಕೃಷ್ಣ, ಅರ್ಜುನ, ರಾವಣ ಮೊದಲಾದ ಪಾತ್ರಗಳಲ್ಲಿ ಖ್ಯಾತಿ ಗಳಿಸಿದರು.
ಮುಂಬಯಿಯಲ್ಲಿ ಯಕ್ಷಮಿತ್ರ ಎಂಬ ಸಂಘಟನೆಯನ್ನು ಸ್ಥಾಪಿಸಿ ಪೆರಣಂಕಿಲ ಹರಿದಾಸ್ ಭಟ್, ಬಳುRಂಜೆ ಗೋಪಾಲ ಶೆಟ್ಟಿ, ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮೊದಲಾದವರ ಸಹಕಾರದಿಂದ ಮಹಾನಗರದ ವಿವಿದೆಡೆ ತಾಳಮದ್ದಳೆ ಕೂಟಗಳನ್ನು ಆಯೋಜಿಸಿದ ಶೆಟ್ಟರು ಕಲಾವಿದರ ಸಮ್ಮಾನ, ಸಂಸ್ಮರಣೆಗಳನ್ನು ನಡೆಸಿ ಯಕ್ಷ ರಸಿಕರ ಮನಗೆದ್ದರು. ಮುಂಬಯಿಯ ಯಕ್ಷಗಾನ ಸಂಸ್ಥೆಗಳಿಗೆ, ಊರಿನ ಕಲಾವಿದರಿಗೆ ಆಪ್ತರೆನಿಸಿದರು.
ಕಲಾವಿದರಿಗೆ ಆಪತ್ಕಾಲದಲ್ಲಿ ನೆರವಾಗುವುದಲ್ಲದೆ ಹಲವು ಬಡ ಮಕ್ಕಳಿಗೆ ವಿದ್ಯಾರ್ಜನೆಗಾಗಿ ಸಹಕರಿಸಿರುವುದು ಅವರ ಔದಾರ್ಯಕ್ಕೆ ಸಾಕ್ಷಿ. 1967ರಲ್ಲಿ ನೇತ್ರಾವತಿ ಶೆಟ್ಟಿ ಪರಾರಿ ಬಳುಜೆೆ ಅವರನ್ನು ವಿವಾಹವಾಗಿ ಓರ್ವ ವೈದ್ಯ ಪುತ್ರಿ ಮತ್ತು ಉದ್ಯಮಶೀಲರಾದ ಈರ್ವರು ಗಂಡು ಮಕ್ಕಳೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿರುವ ಶೆಟ್ಟರು ಎಂಭತ್ತೆರಡರ ಹರೆಯದಲ್ಲೂ ಸಾರ್ವಜನಿಕ ರಂಗದಲ್ಲಿ ಸಕ್ರಿಯರು.
ಕೇಶವ ಭಟ್
ಕೈರಂಗಳ ಸಮೀಪದ ಬರೆ ಎಂಬ ಗ್ರಾಮೀಣ ಪ್ರದೇಶದವರಾದ ಕೇಶವ ಭಟ್ಟರು ಅಧ್ಯಾಪಕರಾಗಿ ನಿವೃತ್ತರಾದವರು. ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಅವರದು ಸುದೀರ್ಘ ಅನುಭವ. ಹಲವಾರು ಹಿರಿಯ, ಕಿರಿಯ ಅರ್ಥಧಾರಿಗಳ ಒಡನಾಟದಲ್ಲಿ ಸೊಗಸಾದ ಮಂಡನಾ ಕ್ರಮ ಹಾಗೂ ವಿದ್ವತೂ³ರ್ಣ ಅರ್ಥಗಾರಿಕೆಯಿಂದ ಮೆರೆದವರು. ಅವರ ಶ್ರೀರಾಮ, ಕೃಷ್ಣ, ಭೀಷ್ಮ, ದಶರಥ, ವಸಿಷ್ಠ, ಅತಿಕಾಯ, ಹನುಮಂತ, ಧರ್ಮರಾಜ, ಮಯೂರಧ್ವಜ, ಅರ್ಜುನ, ಹಂಸಧ್ವಜ ಮೊದಲಾದ ಪಾತ್ರಗಳು ಪ್ರಸಿದ್ಧವಾಗಿವೆ.
ಬರೆ ಕೇಶವ ಭಟ್ಟರು ಓರ್ವ ಅತ್ಯುತ್ತಮ ಪ್ರವಚನಕಾರ ಮತ್ತು ಲೇಖಕ. ಶ್ರೀ ಸತ್ಯನಾರಾಯಣ ವ್ರತ ಕಥೆಯ ನಿರೂಪಣೆಯಲ್ಲಿ ಅವರು ಖ್ಯಾತರು. ವಿಶಾಲ ಪುರಾಣ ಜ್ಞಾನ ಮತ್ತು ವಿಶಿಷ್ಟ ಶೈಲಿಯಿಂದ ತೂಕವುಳ್ಳ ಮಾತುಗಾರಿಕೆ ಅವರದು. ಅಡ್ಯನಡ್ಕದಲ್ಲಿ ಕಲಾಭಿಮಾನ ಬಳಗವೆಂಬ ಸಂಘಟನೆಯ ಸ್ಥಾಪಕರಾಗಿ, ಕೈರಂಗಳ ಶ್ರೀ ಗೋಪಾಲ ಕೃಷ್ಣ ಭಜನಾ ಮಂಡಳಿಯ ಸ್ಥಾಪಕ ಕಾರ್ಯದರ್ಶಿಯಾಗಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆರು ದಶಕಗಳ ಸೇವೆ ಸಲ್ಲಿಸಿದ ಸಾಧಕ ಬರೆ ಅವರು ಎಪ್ಪತ್ತಾರರ ಹರೆಯದಲ್ಲೂ ಪ್ರಸ್ತುತರು.
ಪ್ರಶಸ್ತಿ ಪ್ರದಾನ ತಾಳಮದ್ದಳೆ
ಪೊಳಲಿ ಶಾಸ್ತ್ರಿ ಪ್ರಶಸ್ತಿ ಪ್ರದಾನ ಸಮಾರಂಭ ಮಾ. 1 ರಂದು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಿತು. ಸಮಿತಿ ಸಂಚಾಲಕ ಡಾ| ಎಂ. ಪ್ರಭಾಕರ ಜೋಶಿಯವರು ಶಾಸ್ತ್ರಿಗಳ ಬದುಕು-ಸಾಧನೆಗಳನ್ನು ವಿವರಿಸಿ ನುಡಿನಮನ ಸಲ್ಲಿಸಿದರು. ಪ್ರಶಸ್ತಿ ಸ್ವೀಕರಿಸಿದ ಕೆ.ಕೆ. ಶೆಟ್ಟರು, ಜಿಲ್ಲೆಯಿಂದ ಹೊರಗಿದ್ದು ಯಕ್ಷಗಾನಕ್ಕೆ ಸಲ್ಲಿಸಿದ ಅಳಿಲ ಸೇವೆಯನ್ನು ಗುರುತಿಸಿ ಶಾಸ್ತ್ರಿಗಳ ಹೆಸರಿನಲ್ಲಿ ನೀಡಿರುವ ಗೌರವ ತನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದರು. ಬರೆ ಕೇಶವ ಭಟ್ಟರು ತಮ್ಮನ್ನು ಸಪತ್ನಿಕರಾಗಿ ಸನ್ಮಾನಿಸಿದುದಕ್ಕಾಗಿ ಭಾವುಕ ಉತ್ತರ ನೀಡಿದ್ದು, ಹೃದಯ ಸ್ಪರ್ಶಿಯಾಗಿತ್ತು.
ಈ ಕಾರ್ಯಕ್ರಮಕ್ಕಾಗಿಯೇ ಮುಂಬಯಿಯಿಂದ ಆಗಮಿಸಿದ ಹಿರಿಯ ಭಾಗವತ ಪೊಲ್ಯ ಲಕ್ಷ್ಮಿನಾರಾಯಣ ಶೆಟ್ಟರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದುದು ವಿಶೇಷ. ಆ ಮೇಲೆ ಜರಗಿದ ಶ್ರೀ ಕೃಷ್ಣ ಸಂದೇಶ ತಾಳಮದ್ದಳೆಯಲ್ಲಿ ಅವರು ಭಾಗವತಿಕೆ ಮಾಡಿದ್ದು, ಪ್ರಮುಖ ಆಕರ್ಷಣೆಯಾಯಿತು. ಬಹಳ ಕಾಲದ ಬಳಿಕ ಪಿ. ವೆಂಕಟ್ರಮಣ ಐತಾಳರೂ ಹಾಡುಗಾರಿಕೆಯಲ್ಲಿ ಜತೆ ಗೂಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸಮಿತಿಯ ಕಾರ್ಯದರ್ಶಿ ಮತ್ತು ಪೊಳಲಿ ಶಾಸ್ತ್ರಿಯವರ ಪುತ್ರರೂ ಆಗಿರುವ ಕಲಾವಿದ-ಪ್ರಸಂಗತಕರ್ತ ಪೊಳಲಿ ನಿತ್ಯಾನಂದ ಕಾರಂತರ ಸಂಯೋಜನೆಯಲ್ಲಿ ಒಟ್ಟು ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.
ಭಾಸ್ಕರ ರೈ ಕುಕ್ಕುವಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.