ಕಳಚಿದ ಮಲೆನಾಡ ಯಕ್ಷಗಾನದ ಕೊಂಡಿ ಗೋಪಾಲಕೃಷ್ಣಯ್ಯ
Team Udayavani, Aug 23, 2019, 5:00 AM IST
ಮಲೆನಾಡಿನ ಭಾಗಗಳಲ್ಲಿ ಮದ್ದಳೆಯ ನಾದವನ್ನು ಪಸರಿಸಿದ ಬಡಗುತಿಟ್ಟಿನ ಶ್ರೇಷ್ಠ ಮದ್ದಳೆಗಾರ, ನಾದ ಗಾರುಡಿಗ ಹೊನ್ನೆಕುಡಿಗೆ ಗೋಪಾಲಕೃಷ್ಣ ಮದ್ದಳೆಗಾರರು ಇನ್ನಿಲ್ಲ.ಇವರ ನಿಧನದಿಂದ ಮಲೆನಾಡ ಭಾಗದ ಯಕ್ಷಗಾನದ ಹಿರಿಯ ಕೊಂಡಿಯೊಂದು ಕಳಚಿದೆ.
ಶೃಂಗೇರಿ ಸಮೀಪ ಕಿಗ್ಗದ ಹೊನ್ನೆಕುಡಿಗೆಯ ಗೋಪಾಲಕೃಷ್ಣಯ್ಯನವರು ಅಜ್ಜ ಸುಬ್ಬಣ್ಣಯ್ಯನವರಿಂದ ಬಾಲ್ಯದಲ್ಲಿಯೇ ಮದ್ದಳೆ ಅಭ್ಯಾಸ ಮಾಡಿ ತಾಳಮದ್ದಳೆ ಕೂಟಗಳಲ್ಲಿ ಮದ್ದಳೆಗಾರರಾಗಿ ಗುರುತಿಸಿಕೊಂಡರು.ಬಳಿಕ ಕಿಗ್ಗ ಮೇಳದಲ್ಲಿ ಬಾಲಗೋಪಾಲರಾಗಿ ಸೇರಿಕೊಂಡ ಇವರಿಗೆ ಹಿಮ್ಮೇಳದ ಆಸಕ್ತಿಯೇ ಪ್ರಧಾನವಾಗಿ ಮದ್ದಳೆವಾದನವನ್ನುಕರಗತಮಾಡಿಕೊಂಡರು.ಕಿಗ್ಗ,ರಂಜದಕಟ್ಟೆ,ಮೇಗರವಳ್ಳಿ ಬಾಳೆಹೊಳೆ,ಹೆಗ್ಗೊàಡು,ಕಮಲಶಿಲೆ,ಗೋಳಿಗರಡಿ, ಪೆರ್ಡೂರು,ಮಾರಣಕಟ್ಟೆ,ಅಮೃತೇಶ್ವರಿ,ಮಡಾಮಕ್ಕಿ,ಹಾಲಾಡಿ,ಮಂದರ್ತಿ,ಸೀತೂರು ಮುಂತಾದ ಮೇಳಗಳಲ್ಲಿ ಸುದೀರ್ಘ 50 ವರ್ಷ ತಿರುಗಾಟ ಮಾಡಿದರು.
ಮಾರ್ವಿ ಹೆಬ್ಟಾರ್,ನೆಲ್ಲೂರು ಮರಿಯಪ್ಪ ಅಚಾರ್,ಗುಂಡ್ಮಿ ರಾಮಚಂದ್ರ ನಾವಡ ಮರವಂತೆ ದಾಸದ್ವಯರು,ಉಪ್ಪೂರರು, ಕಾಳಿಂಗ ನಾವಡರಂಥ ಘಟಾನುಘಟಿ ಭಾಗವತರಿಗೆ ಚಂಡೆ-ಮದ್ದಳೆ ವಾದಕರಾಗಿ ಕಾಣಿಸಿಕೊಂಡು ಮನ್ನಣೆಗೆ ಪಾತ್ರರಾಗಿದ್ದರು.ಪ್ರಸಿದ್ಧ ಮದ್ದಳೆಗಾರ ತಿಮ್ಮಪ್ಪ ನಾಯ್ಕರು ನಿಧನ ಹೊಂದಿದಾಗ ಅಮೃತೇಶ್ವರಿ ಮೇಳದಲ್ಲಿ ಗುರು ನಾರ್ಣಪ್ಪ ಉಪ್ಪೂರರಿಗೆ ಸಮರ್ಥ ಮದ್ದಳೆಗಾರರಾಗಿ ಅವರ ರಂಗತಂತ್ರ,ಪಾತ್ರಧಾರಿಯ ಸಾಮರ್ಥ್ಯವರಿತು ಬಾರಿಸುವ ವಿದ್ಯೆ, ಉಪ್ಪೂರರಿಂದ ಕರಗತವಾಯಿತು.ಮರವಂತೆ ಶೀನ ದಾಸ ಮತ್ತು ವಡ್ಡರ್ಸೆ ನರಸಿಂಹ ಆಚಾರ್ಯರ ಮಾರ್ಗದರ್ಶನವು ಅವರಿಗೆ ಮಂದಾರ್ತಿ ಮೇಳದಲ್ಲಿ ಆಗಿತ್ತು.ಬಾಲ್ಯದಿಂದಲೇ ಗೆಳೆಯರಾದ ಮರಿಯಪ್ಪ ಆಚಾರ್ಯರ ಭಾಗವತಿಕೆಗೆ ಇವರ ಮದ್ದಳೆವಾದನ ಹೊಸ ಕ್ರಾಂತಿಯನ್ನೇ ಮಾಡಿತ್ತು.ಮರಿಯಪ್ಪಾಚಾರರಿಂದ ನಾನು ಮದ್ದಳೆಗಾರನಾದೆ ಎಂದು ಹೆಮ್ಮೆಯಿಂದ ಹೇಳುತಿದ್ದರು.ನಿಜಜೀವನದಲ್ಲೂ ಉತ್ತಮ ಗೆಳೆಯರಾದ ಇವರಿಬ್ಬರ ಒಟ್ಟು ಸಾಧನೆ ಬಡಗುತಿಟ್ಟಿನ ಕುಂಜಾಲು ಶೈಲಿಗೆ ಬಹುದೊಡ್ಡ ಕೊಡುಗೆ.
ತನ್ನ ಸುದೀರ್ಘ ಯಕ್ಷ ತಿರುಗಾಟದಲ್ಲಿ ಗುರು ವೀರಭದ್ರ ನಾಯಕ್,ಪೆರ್ಡೂರು ರಾಮ ಸೇರೆಗಾರ್,ವಂಡಾರು ಬಸವ,ಕೋಟ ವೈಕುಂಠ,ಅರಾಟೆ ಮಂಜುನಾಥ,ಎಂ.ಎ. ನಾಯ್ಕ, ನಗರ ಜಗನ್ನಾಥ ಶೆಟ್ಟಿ,ಚಿಟ್ಟಾಣಿ ,ಗೋಡೆ ನಾರಾಯಣ ಹೆಗಡೆ,ಹಾರಾಡಿ ಕಲಾವಿದರಂಥ ಘಟಾನುಘಟಿ ಕಲಾವಿದರನ್ನು ಸುಮಾರು ಐದು ದಶಕಗಳ ಕಾಲ ವಿವಿಧ ಮೇಳಗಳಲ್ಲಿ ತಮ್ಮ ಮದ್ದಳೆಯ ಪೆಟ್ಟುಗಳಿಂದ ಕುಣಿಸಿದ್ದಾರೆ. ಮಲೆನಾಡಿನಲ್ಲಿ ಯಕ್ಷಗಾನ ಪಸರಿಸಲು ಇವರ ಕೊಡುಗೆ ಅಪಾರ.ಹರಿಹರಪುರದಲ್ಲಿ ಯಕ್ಷಗಾನ ಹಿಮ್ಮೇಳ ತರಗತಿ ಆರಂಬಿಸಿ ಹಿರಿಯ ಭಾಗವತ ಗೋರ್ಪಾಡಿ ವಿಠಲಯ್ಯನವರನ್ನು ಗುರುಗಳಾಗಿ ನೇಮಿಸಿ ತಾನು ಸ್ವತಹ ಮದ್ದಳೆಗಾರರಾಗಿ ದುಡಿದು ಅನೇಕ ಹಿಮ್ಮೇಳ ಕಲಾವಿದರನ್ನು ರೂಪಿಸಿದರು.
ಮೇಳದ ತಿರುಗಾಟದಲ್ಲಿ ಶಿಸ್ತಿನ ಸಿಪಾಯಿಯಾದ ಇವರು ತಮ್ಮಂದಿರಾದ ಶೇಷಗಿರಿಯಯ್ಯ ಮತ್ತು ಗಣೇಶ ಹಾಗೂ ಪುತ್ರನಾದ ರಘುವನ್ನು ಉತ್ತಮ ಮದ್ದಳೆಗಾರರಾಗಿ ರೂಪಿಸಿದ್ದಾರೆ.
ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.