ರಂಜಿಸಿದ ಕೊಂಕಣಿ ನಾಟಕ ದೇವಾಲೇ ಖೇಳು
Team Udayavani, Feb 7, 2020, 4:00 AM IST
ಕೊಂಕಣಿ ನಾಟಕಗಳ ಪ್ರಯೋಗವು ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಇತ್ತೀಚಿಗೆ ಮಂಗಳೂರಿನಲ್ಲಿ ಪ್ರದರ್ಶನಗೊಂಡ ದೇವಾಲೆ ಖೇಳು ಕಿರು ನಾಟಕ ಆ ಕೊರತೆಯನ್ನು ನೀಗಿಸಲು ಸಫಲವಾಯಿತು . ಎಂ.ಶಾಂತರಾಮ ಕುಡ್ವರು ರಚಿಸಿದ ಈ ಕಿರು ನಾಟಕವನ್ನು ಜಿ.ಎಸ್.ಬಿ.ಮಹಿಳಾ ವೃಂದ ಮಂಗಳೂರು ಇದರ ಸದಸ್ಯರು ಅಭಿನಯಿಸಿದರು .
ದೇವು ಹಾಗೂ ವಿನುತಾ ಪರಸ್ಪರ ಪ್ರೇಮಿಸುತ್ತಾರೆ . ಆದರೆ ಹೆತ್ತವರು ತಾವು ಹೇಳಿದ ನೆಂಟಸ್ತಿಕೆಯೇ ಆಗಬೇಕೆಂದು ಇವರ ಪ್ರೇಮಕ್ಕೆ ತಣ್ಣೀರೆರಚುತ್ತಾರೆ. ಯುವ ಪ್ರೇಮಿಗಳು ಆ ನೆಂಟಸ್ತಿಕೆ ತಪ್ಪಿಸಲು ಉಪಾಯ ಹೂಡುತ್ತಾರೆ. ವಿನುತಾಳು ತನ್ನನ್ನು ನೋಡಲು ಬರುವ ವರನಿಗೆ ಜ್ಯೂಸ್‌ನಲ್ಲಿ ಬೇಧಿಯ ಮಾತ್ರೆ ಹಾಕಿ ಬೇಧಿಯಾಗುವಂತೆ ಮಾಡುವುದು , ದೇವು ಹೆಣ್ಣು ನೋಡುವಾಗ ಫಿಟ್ಸ್ ಬಂದಂತೆ ನಟಿಸಿ ಬೀಳುವುದು , ಆ ಮೂಲಕ ವರನ ಆರೋಗ್ಯ ಸರಿಯಲ್ಲ ಎಂದು ಹೆತ್ತವರೇ ನಿರಾಕರಿಸುವಂತೆ ಮಾಡುವುದು ಎಂಬ ಉಪಾಯ ಮಾಡುತ್ತಾರೆ .
ಆದರೆ , ಇಲ್ಲೊಂದು ಅನಿರೀಕ್ಷಿತ ಸನ್ನಿವೇಶ , ನಾಟಕದ ಹೆಸರೇ ಹೇಳುವಂತೆ ದೇವರ ಆಟ ಪ್ರಾರಂಭವಾಗುತ್ತದೆ . ಇಬ್ಬರ ಹೆತ್ತವರೂ ನೋಡಿದ ನೆಂಟಸ್ಥಿಕೆ ದೇವು ವಿನುತಾರೇ ಆಗಿರುತ್ತಾರೆ . ಆದರೆ , ಈ ಸಂದರ್ಭದಲ್ಲಿ ದೇವು ವಿನುತಾರು ಪರಸ್ಪರರನ್ನು ನೋಡಿರದ ಕಾರಣ , ಅವರ ಪೂರ್ವಯೋಜಿತ ಉಪಾಯ ಪ್ರಯೋಗವಾಗುತ್ತದೆ. ದೇವು ತಲೆ ತಿರುಗಿ ಬಿದ್ದಾಗ ವಿನುತಾಳು ದೇವುನನ್ನು ನೋಡಿ , ಹೆದರಿ ತಾವು ಮಾಡಿದ ಉಪಾಯವನ್ನು ಹೇಳುತ್ತಾಳೆ .ದೇವರ ಆಟದಂತೆ ದೇವು ವಿನುತಾರ ಮದುವೆಯಾಗಿ ಸುಖಾಂತವಾಗುತ್ತದೆ .
ಉತ್ತಮ ಕಥೆಯನ್ನು ಹೊಂದಿರುವ ಕಿರು ನಾಟಕ ಸಂಪೂರ್ಣ ಹಾಸ್ಯಮಯ ವಾಗಿದ್ದು , ಪಾತ್ರಧಾರಿಗಳೂ ಚೆನ್ನಾಗಿ ನಿರ್ವಹಿಸಿದರು . ದೇವು ಪಾತ್ರದಲ್ಲಿ ರಾಧಿಕಾ ಕಾಮತ್ ಉತ್ತಮವಾಗಿ ಅಭಿನಯಿಸಿದರು . ಕಥಾನಾಯಕನ ಗತ್ತು , ಶೈಲಿ ಎಲ್ಲವೂ ಸಮರ್ಪಕವಾಗಿತ್ತು . ವಿನುತಾಳ ಪಾತ್ರದಲ್ಲಿ ನಯನಾ ರಾವ್ ನಾಯಕಿಯ ಮಾನಸಿಕ ತುಮುಲವನ್ನು ಚೆನ್ನಾಗಿ ಚಿತ್ರಿಸಿದರು . ವಿನುತಾಳ ತಂದೆ ರಾಮರಾಯನಾಗಿ ಜಯಂತಿ ನಾಯಕ್ , ತಾಯಿ ಸುನಂದಾಳಾಗಿ ಗೀತಾ ಕಾಮತ್ ಹೆತ್ತವರ ಕಾಳಜಿ ಹೇಗಿರಬೇಕು ಎಂಬುದರ ಉತ್ತಮ ಚಿತ್ರಣ ನೀಡಿದರು . ದೇವು ತಂದೆ ಶ್ರೀನಿವಾಸನಾಗಿ ಸಬಿತಾ ಕಾ ಮತ್ ಮರೋಳಿಯವರು ಮಿಂಚಿದರು . ತಾಯಿ ಕಿವುಡಿ ರಮಾಬಾಯಿ ಯಾಗಿ ವಿಮಲಾ ಕಾಮತ್ ಹಾಸ್ಯದ ಕಡಲಲ್ಲಿ ತೇಲಿಸಿದರು . ಕಿವಿ ಸರಿಯಾಗಿ ಕೇಳಿಸದೇ , ಎದುರು ಪಾತ್ರ ಧಾರಿಗಳ ಸಂಭಾಷಣೆಯ ಶಬ್ದಗಳನ್ನು ತಿರುವಿ ಹೇಳಿದ ಕ್ರಮ ನಾಟಕದ ಟ್ರಂಪ್‌ಕಾರ್ಡ್ ಆಯಿತು .
ಶ್ರೀನಿವಾಸ – ರಮಾ ಅವರ ಸಂಭಾಷಣೆ ನೈಜ ದಂಪತಿಗಳನ್ನು ನೆನಪಿಸಿತು ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಕಡಿಮೆ ಎಂಬ ಅಭಿಪ್ರಾಯ ಇದೆ . ಆದರೆ ಈ ನಾಟಕದಲ್ಲಿ ಬಳಸಿದ ಕೊಂಕಣಿ ಭಾಷೆಯ ಸೊಗಡು ಆಕರ್ಷಿಸಿತು . ಹಾಸ್ಯದ ಕೆಲವೊಂದು “ಪಂಚಿಂಗ್ ಡೈಲಾಗ್’ಗಳಿಗೆ ಕರತಾಡನ ಸಾಕ್ಷಿಯಾಯಿತು . ನಾಟಕದಲ್ಲಿ ಹಾಡುಗಳೇ ಇರದಿರುವುದು ಕೊರತೆಯಾಗಿ ಕಂಡಿತು.
ಎಂ.ಗಿರಿಧರ ಪಿ.ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.