ಮನ ರಂಜಿಸಿದ ಕೊಂಕಣಿ ನಾಟಕ


Team Udayavani, Jun 30, 2017, 3:35 AM IST

KALA-5.jpg

ಮುಂಬಯಿ ಕೊಂಕಣಿಗರಿಗೆ ಬಹುದಿನಗಳ ಕಾಯುವಿಕೆಯ ಅನಂತರ ಒಂದು ಶ್ರೇಷ್ಠ ನಾಟಕವನ್ನು ವೀಕ್ಷಿಸುವ ಅವಕಾಶ ಮೇ 1ರಂದು ಒದಗಿಬಂದಿತು. ಅಂದು ಸಂಜೆ ವಡಾಲಾದ ಸುಪ್ರಸಿದ್ಧ ಶ್ರೀರಾಮಮಂದಿರ “ರಾಮ ಸೇವಕ ಸಂಘ’ದ ಪ್ರತಿಭಾವಂತ ಹವ್ಯಾಸಿ ಕಲಾವಿದರು “ಸರ್ವೇಜನಃ ಕಾಂಚನಮಾಶ್ರಯಂತೇ’ ಎಂಬ ಕೊಂಕಣಿ ಭಾಷೆಯ ಬೋಧಪ್ರದ, ಸಮಾಜಮುಖೀ ಸಾಮಾಜಿಕ ನಾಟಕದ 48ನೇ ಪ್ರಯೋಗವನ್ನು ಮಾಟುಂಗಾ, ಮುಂಬಯಿಯ ಮೈಸೂರ್‌ ಅಸೋಶಿಯೇಶನ್‌ನ ಸಭಾಗೃಹದಲ್ಲಿ ಪ್ರದರ್ಶಿಸಿದರು.

ಪ್ರಾಯೋಜಕ ಎನ್‌.ಎಸ್‌. ಕಾಮತ್‌ ಅವರ ಲಾಂಛನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಪುರಸ್ಕೃತ ಹಾಗೂ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಪ್ರಶಸ್ತಿ ಪುರಸ್ಕೃತ ಎ. ಜಿ. ಕಾಮತ್‌ ಅವರು ವಿರಚಿಸಿ ದಿಗªರ್ಶಿಸಿದ ನಾಟಕ “ಸರ್ವೇಜನಃ ಕಾಂಚನಮಾಶ್ರಯಂತೇ.’ ಇಂದಿನ ಯುವ ಪೀಳಿಗೆಯಲ್ಲಿ ಸಂಸ್ಕಾರ- ಸಂಸ್ಕೃತಿ, ಗುರು- ಹಿರಿಯರ ಮೇಲೆ ಭಕ್ತಿ- ಆದರ- ಪ್ರೀತಿ ಮೂಡಬೇಕು, ಅಂತೆಯೇ ವಯಸ್ಕರಾದ ತಂದೆ-ತಾಯಂದಿರು ತಮ್ಮ ನಿರಾತಂಕ ಬದುಕಿಗಾಗಿ ಆಪದ್ಧನವನ್ನು ಶೇಖರಿಸಿಡಬೇಕು ಎಂಬ ಸಂದೇಶವನ್ನು ಹೊತ್ತ ನಾಟಕ ಇದು. ಉತ್ತಮ ಕಥಾಸಾರಾಂಶ ವನ್ನು ಹೊಂದಿದ ಈ ನಾಟಕವನ್ನು ಪ್ರತಿಯೊಬ್ಬರೂ ವೀಕ್ಷಿಸಬಹುದಾದಂಥದು. ಈ ಕೊಂಕಣಿ ನಾಟಕದ ಲೇಖಕರು ಉತ್ತಮ ಸಂಭಾಷಣೆಯನ್ನು ನಾಟಕದುದ್ದಕ್ಕೂ ಪೋಣಿಸಿ ಅಂತ್ಯದವರೆಗೂ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದ್ದಾರೆ.

ನಾಟಕದ ಕಥಾನಾಯಕ “ಕಾಮತ್‌ ಸಾವಾರ್‌’ ಪಾತ್ರದಲ್ಲಿ ದಿಗªರ್ಶಕ ಎ.ಜಿ. ಕಾಮತ್‌ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. “ಹರಿ’ ಭೂಮಿಕೆಯಲ್ಲಿ ಮುಂಬೈಯ ಖ್ಯಾತ ಹಾಗೂ ಹಿರಿಯ ಕೊಂಕಣಿ ಕಲಾವಿದರಾದ, ಕನ್ನಡಿಗ ಕಲಾವಿದರ ಪರಿಷತ್ತು -ಮಹಾರಾಷ್ಟ್ರದ ಉಪಾಧ್ಯಕ್ಷ ಕಮಲಾಕ್ಷ ಸರಾಫ‌ರು ನಾಟಕದುದ್ದಕ್ಕೂ ಉತ್ತಮ ಹಾಸ್ಯಾಭಿನಯ ಪ್ರಸ್ತುತಪಡಿಸಿ, ಪ್ರೇಕ್ಷಕರನ್ನು ರಂಜಿಸಿ, ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ಖಳ ನಾಯಕರಾದ “ಬಾಳಿY’ ಪಾತ್ರದಲ್ಲಿ ಅಶೋಕ ಪ್ರಭು ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದರು.

“ನಾಣ್ಣಾ’ನ ಪಾತ್ರದಲ್ಲಿ ಮೇಲ್ಗಂಗೊಳ್ಳಿ ರವೀಂದ್ರ ಪೈ, “ಶ್ರೀಧರ್‌’ನ ಪಾತ್ರದಲ್ಲಿ ಹರೀಶ್‌ ಚಂದಾವರ್‌, “ನಂದನ್‌’ ಪಾತ್ರದಲ್ಲಿ ಶ್ರೀರಾಮಮಂದಿರ ಹಿರಿಯ ಸಂಸ್ಥಾಪಕಿ, ಕಲಾವಿದೆ ವಿನಯಾ ಪ್ರಭು, “ಲತಾ’ಳ ಪಾತ್ರದಲ್ಲಿ ಆಶಾ ನಾಯಕ್‌, ಡಾಕ್ಟರ್‌ ಭೂಮಿಕೆಯಲ್ಲಿ ಪ್ರಬುದ್ಧ ಕಲಾವಿದೆ, ದಿಗªರ್ಶಕಿ ಮತ್ತು ಕೊಂಕಣಿ ಸಿನೆಮಾ ನಟಿ ವಸುಧಾ ಪ್ರಭು ಹಾಗೂ ಶ್ರೀಪಾದ ಶೆಣೈ ಪಾತ್ರದಲ್ಲಿ ಬಾಲಕೃಷ್ಣ ಕಾಮತ್‌ ತಮ್ಮ ಕಲಾನೈಪುಣ್ಯವನ್ನು ಮೆರೆದರು.

ಅಶೋಕ ಪ್ರಭು ಅವರ ಇಂಪಾದ ಸಂಗೀತವನ್ನು ಆಲಿಸಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಗಣಪತಿ ಕಾಮತ್‌ – ಸುಧಾಕರ ಭಟ್ಟರ್‌ ರಂಗವಿನ್ಯಾಸ, ಬೆಳಕು, ಧ್ವನಿ ಸಂಯೋಜನೆ ಒಪ್ಪುವಂತಿತ್ತು. ನೇಪಥ್ಯದಲ್ಲಿ ಶ್ರೀಕಾಂತ ಪ್ರಭು, ವಸುಧಾ ಪ್ರಭು, ಮಾಯಾ ಸರಾಫ‌, ಮಾಲಿನಿ ಪೈ, ವಸಂತ ಪೈ ಇನ್ನಿತರರು ಸಹಕರಿಸಿದ್ದರು. ಡಾ| ಚಂದ್ರಶೇಖರ್‌ ಶೆಣೈಯವರು ವಿಶೇಷ ಮಾರ್ಗದರ್ಶಕರಾಗಿದ್ದರು. ಶಾಂತಾರಾಮ ಮಹಾಲೆ ವೇಷಭೂಷಣ  ನೀಡಿದ್ದರು.

ಸುಪ್ರಸಿದ್ಧ ಶ್ರೀ ರಾಮಮಂದಿರ ವಡಾಲಾದ ಅವಿಭಾಜ್ಯ ಅಂಗವಾದ ರಾಮ ಸೇವಕ ಸಂಘದ ಈ ಕೊಂಕಣಿ ನಾಟಕವು ನಿರೀಕ್ಷೆಗೂ ಮಿಗಿಲಾಗಿ ಪ್ರದರ್ಶನೆಗೊಂಡಿದೆ. ವಡಾಲಾ ಶ್ರೀರಾಮ ಮಂದಿರವು ಆಧ್ಯಾತ್ಮಿಕ ಕ್ಷೇತ್ರದೊಡನೆ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಹೆಸರು ಗಳಿಸಿದೆ. ಈ ನಾಟಕವು ಸುವರ್ಣ ಪ್ರಯೋಗದ ಹೊಸ್ತಿಲಲ್ಲಿದೆ.

ನಾಟಕಪ್ರಿಯ

ಟಾಪ್ ನ್ಯೂಸ್

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

9

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

8

Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.