ಕುಡ್ಲ ಕಲಾಮೇಳದ ವರ್ಣ ಕಲರವ


Team Udayavani, Apr 28, 2017, 3:45 AM IST

28-KALA-5.jpg

ಕಲಾ ತಪಸ್ವಿಗಳ ಆರಾಧನೆಯಲ್ಲಿ ಸೃಜನಶೀಲ ಚಿತ್ತ-ಚಿತ್ತಾರಗಳ ಚೌಕಟ್ಟುಗಳೊಂದಿಗೆ ಬಣ್ಣಗಳ ಕಲರವವು ಮೌನವನ್ನು ಮುರಿದಾಗ ಸೃಷ್ಟಿಯಾಯಿತು ಮತ್ತೂಂದು ಕಲಾಮೇಳ. ವರ್ಣಕುಂಚದ ಕದ ತೆರೆದು ಒಂದಿಷ್ಟು ಕಲಾವಿದರ ಒಂದಷ್ಟು ಕಲಾಕೃತಿಗಳು ಪ್ರದರ್ಶನವಾದದ್ದು ಮಂಗಳೂರಿನ ಕದ್ರಿ ಪಾರ್ಕ್‌ನ ರಸ್ತೆಯ ಇಕ್ಕಡೆಗಳಲ್ಲಿ. ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿ (ರಿ.) ಮತ್ತು ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿದ ಐದನೇ ಕುಡ್ಲ ಕಲಾಮೇಳದ 142 ಮಳಿಗೆಗಳಲ್ಲಿ ಸುಮಾರು 8 ಸಾವಿರ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು. ಈ ಕಲಾ ಹಬ್ಬವು ಕಲಾವಿದರ ಮತ್ತು ಕಲಾ ಪೋಷಕರ ನಡುವೆ ನೇರ ಸ್ನೇಹ ಬೆಸೆಯುವಂತಹ ಪ್ರಯತ್ನ, ಹೊರಾಂಗಣ ಪರಿಸರದಲ್ಲೂ ಕಲಾ ಪ್ರದರ್ಶನ ಮಾಡಬಹುದೆಂಬುದಕ್ಕೆ ಸಾಕ್ಷಿಯಾಗಿತ್ತು. 

ಕಲಾಮೇಳವು ಕಲಾಕೃತಿಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ ಕಲಾಕೃತಿ ರಚನೆಯ ಪ್ರಾತ್ಯಕ್ಷಿಕೆ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ಕಲಾವಿದರಿಂದ ತರಬೇತಿ ಕಾರ್ಯಾಗಾರ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನೂ ಒಳಗೊಂಡಿತ್ತು. ಭಾವಾಂತ ರಂಗ, ರೇಖಾಂತರಂಗ ವೆಂಬ ಕಮ್ಮಟಗಳಲ್ಲಿ ಥರ್ಮೊಫೋಮ್‌ ಕಲಾಕೃತಿ ರಚನೆ, ಕಾಟೂìನ್‌, ರೇಖಾಚಿತ್ರಗಳ ತರಬೇತಿಯನ್ನು ಸುಧೀರ್‌ ಕಾವೂರು, ಪೂರ್ಣೇಶ್‌, ಬಾಲಕೃಷ್ಣ ಶೆಟ್ಟಿ, ಜಾನ್‌ಚಂದ್ರನ್‌, ಚಿತ್ರಮಿತ್ರ ನೀಡಿದರು. ಶಭರಿ ಗಾಣಿಗ ತನ್ನ ಸ್ವಶೈಲಿಯ ಕಲಾಕೃತಿಯನ್ನು ರಚಿಸಿದರೆ, ಉಡುಪಿಯ ಖ್ಯಾತ ಕಲಾವಿದ ಪಿ. ಎನ್‌. ಆಚಾರ್ಯರವರು ದಾರದಲ್ಲಿ ಚಿತ್ರಿಸಿ ತನ್ನ ಕಲಾಪ್ರತಿಭೆಯನ್ನು ವ್ಯಕ್ತಪಡಿಸಿದರು.

ಕುಡ್ಲ ಕಲಾಮೇಳದ ಈ ಸಲದ ವೈಶಿಷ್ಟ್ಯ ಪ್ರತಿಷ್ಠಾಪನಾ ಕಲೆ. ಇದು ಕಲಾಮೇಳಕ್ಕೊಂದು ವಿಶೇಷ ಮೆರುಗು ನೀಡಿತ್ತು. 18 ಅಡಿ ಎತ್ತರದ ಗೀಜಗನ ಗೂಡು ಎಂಬ ಕಲಾಕೃತಿಯನ್ನು ಸುಧೀರ್‌ ಕಾವೂರು, ಪೂರ್ಣೇಶ್‌, ಬಾಲಕೃಷ್ಣ ಶೆಟ್ಟಿ, ನವೀನ್‌ ಬಂಗೇರ ರಚಿಸಿದ್ದರು. ಕಲಾವಿದ ತನ್ನ ಮನಸ್ಸಿನ ವಸ್ತುವಿಚಾರಗಳನ್ನು ಹೇಗೆ ಎಳೆಎಳೆಯಾಗಿ ಕ್ಯಾನ್ವಾಸಿಗೆ ಧಾರೆ ಎರೆಯುವನೋ ಅದೇ ರೀತಿ ಗೀಜಗ ಹಕ್ಕಿಯು ಹುಲ್ಲು ಕಡ್ಡಿಗಳನ್ನು ಎಳೆಎಳೆಯಾಗಿ ಪೋಣಿಸಿ ಕಲಾತ್ಮಕವಾಗಿ ಗೂಡನ್ನು ನಿರ್ಮಿಸುತ್ತದೆ ಎಂಬುದನ್ನು ಈ ಪ್ರತಿಷ್ಠಾಪನಾ ಕಲೆಯು ಹೇಳುತ್ತಿತ್ತು. ಅದಲ್ಲದೆ ಗೀಜಗ ಮತ್ತು ತುಳುನಾಡಿನ ಭತ್ತ ಕೃಷಿ ಕಣ್ಮರೆಯಾಗುತ್ತಿದೆ, ಅದನ್ನು ಉಳಿಸಬೇಕೆಂಬ ದೃಷ್ಟಿಕೋನದಿಂದ ಈ ಕಲಾಕೃತಿಯನ್ನು ರಚಿಸಲಾಗಿದೆ. ಐಸಿರಿ ಆರ್ಟ್ಸ್ನ ಕಲಾತಂಡವು ಎರಡು ಮರಗಳ ನಡುವೆ ಪ್ಲಾಸ್ಟಿಕ್‌ ಹಾಳೆಯನ್ನು ಕಟ್ಟಿ ಅದರಲ್ಲಿ ಬಣ್ಣದ ಗೋಸುಂಬೆಯನ್ನು ಚಿತ್ರಿಸಿ ಆಧುನೀಕರಣ, ಅಭಿವೃದ್ಧಿ ಎಂಬ ನೆಪದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್‌ಗಳನ್ನು ಉಪಯೋಗಿಸಿ ಪ್ರಕೃತಿಯನ್ನು ವಿಕೃತಿ ಮಾಡುತ್ತಿದ್ದೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದರು. ಎತ್ತಿನಹೊಳೆ ಯೋಜನೆಯ ಮೂಲಕ ನಿಸರ್ಗದ ಮೇಲೆ ಆಗುತ್ತಿರುವ ದಬ್ಟಾಳಿಕೆ ಹಾಗೂ ನದಿ ಮೂಲದಲ್ಲಿ ಧನಮೂಲ ಹುಡುಕುವ ರಾಜಕೀಯ ಕುತಂತ್ರವನ್ನು ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಕಲಾಕೃತಿಯ ಮೂಲಕ ಬಯಲಿಗೆಳೆದಿದ್ದರು. ಸಪ್ನಾ ನೊರೋನ್ಹ ಅವರು ನೀರನ್ನು ಮಲಿನ ಹಾಗೂ ವ್ಯರ್ಥ ಮಾಡಿ ನೈಸರ್ಗಿಕ ಸಂಪನ್ಮೂಲಗಳ ಬರಿದಾಗುವಿಕೆಗೆ ಮಾನವ ಹಾಗೂ ಆಧುನಿಕ ಪರಿಕಲ್ಪನೆಗಳೇ ಸಾಕ್ಷಿ ಎಂಬುದಕ್ಕೆ ಮರಕ್ಕೆ ಬಣ್ಣ ಬಣ್ಣದ ನೀರಿನ ಬಾಟಲ್‌ಗ‌ಳನ್ನು ಕಟ್ಟಿ ಜಾಗೃತಿ ಮೂಡಿಸಿದರು. ಸಯ್ಯದ್‌ ಝಯೀದ್‌ ಮತ್ತು ಆರ್ಷಿಯಾ ಇವರು ಮರಕ್ಕೆ ಪ್ಲಾಸ್ಟಿಕ್‌ಗಳನ್ನು ಕಟ್ಟಿ ಈ ನೆಲದಲ್ಲಿ ಬೆಳೆಯುವ ಮರಗಳಲ್ಲಿ ಮುಂದೊಂದು ದಿನ ಎಲೆ, ಹೂ, ಹಣ್ಣುಗಳ ಬದಲು ಪ್ಲಾಸ್ಟಿಕ್‌ಗಳೇ ಬೆಳೆಯಬಹುದೇನೋ ಎಂಬ ಆತಂಕವನ್ನು ಕಲಾಕೃತಿಯಾಗಿ ವ್ಯಕ್ತಪಡಿಸಿದ್ದರು. 

ಪ್ರಸಾದ್‌ ಆರ್ಟ್‌ ಗ್ಯಾಲರಿಯ ವೀರಣ್ಣ ಮತ್ತು ತಂಡದವರು ದೋಣಿಯ ಮೇಲೊಂದು ಮೀನನ್ನು ರಚಿಸಿ ಇದಕ್ಕೆ ಪೇಪರ್‌ಗಳನ್ನು ಅಂಟಿಸಿ ಈ ಅಸಂಬದ್ಧ ವ್ಯಾವಹಾರಿಕ ಜಗತ್ತು ಸಾಗರ ಹಾಗೂ ಮತ್ಸéಜೀವಿಗಳಿಗೆ ಯಾವ ರೀತಿ ಹಿಂಸೆ ನೀಡುತ್ತಿದೆ ಎಂಬುದನ್ನು ಭಾವನಾತ್ಮಕ ರೂಪದಲ್ಲಿ ಅಭಿವ್ಯಕ್ತಗೊಳಿಸಿದ್ದರು. ನೇತ್ರಾವತಿಯ ತಿರುವು ಬರೀ ನದಿಯ ತಿರುವಲ್ಲ, ತುಳುನಾಡಿನ ಸಂಸ್ಕೃತಿ, ಪ್ರಕೃತಿಯನ್ನೇ ವಿನಾಶಗೊಳಿಸಬಹುದೆಂಬುದನ್ನು ಸಹ್ಯಾದ್ರಿ ಸಂಚಯವು ಕಲಾಕೃತಿಯಲ್ಲಿ ಸೂಚಿಸಿದೆ. ರಾಜೇಂದ್ರ ಕೇದಿಗೆ, ರೇಶ್ಮಾ ಶೆಟ್ಟಿ, ಸಂತೋಷ ಅಂದ್ರಾದೆ ಇವರು ಮರಗಳು ಕೇವಲ ಮರಗಳಾಗಿರದೇ ಅಜರಾಮರವಾಗಿರಬೇಕೆಂಬ ಧೋರಣೆಯನ್ನು ಪ್ರತಿನಿಧಿಸಿದ್ದಾರೆ. ಆದಿತಣ್ತೀ ಕಲಾತಂಡದ ವಿಕ್ರಮ್‌ ಶೆಟ್ಟಿ ಮತ್ತು ಶೈಲೇಶ್‌ ಒಣಗಿದ ಮರಕ್ಕೆ ಬಣ್ಣ ಬಳಿದು ಅದರ ಕೊಂಬೆಗಳಲ್ಲಿ ಸ್ಲೇಟುಗಳನ್ನಿಟ್ಟು ಮರಗಳು ನಮ್ಮನ್ನು ಪೋಷಣೆ ಮಾಡುತ್ತಿದ್ದರೆ ನಾವು ಮರಗಳ ಶೋಷಣೆ ಮಾಡುತ್ತಿದ್ದೇವೆ ಎಂಬುದನ್ನು ಸಾಂಕೇತಿಕವಾಗಿ ಗ್ರಹಿಸಿದ್ದರು. 

ಪ್ರಾಣೇಶ್‌ ಕುದ್ರೋಳಿ ಹಾಗೂ ಜೀವನ್‌ ಸಾಲಿಯಾನ್‌ ಅವರ ತುಳುನಾಡಿನ ಸಾಂಸ್ಕೃತಿಕ ಚಿತ್ರಗಳಿರುವ ಬಜಾಜ್‌ ಸ್ಕೂಟರ್‌ ಹಾಗೂ ಪುನೀಕ್‌ ಅವರ ಆರ್ಟ್‌ ಫಾರ್‌ ಹಾರ್ಟ್‌ ಎಂಬ ಚೌಕಟ್ಟಿಗೆ ಕಲಾಮೇಳಕ್ಕೆ ಬಂದವರೆಲ್ಲರೂ ಬಣ್ಣ ಬಳಿಯುವ ಅವಕಾಶವಿರುವ ಕಲಾಕೃತಿಯು ವಿಶೇಷ ಆಕರ್ಷಣೆೆಯಾಗಿತ್ತು. ರಾಮಕೃಷ್ಣ ಮಿಶನ್‌ನ ಸ್ವತ್ಛ ಮಂಗಳೂರು ಕಮ್ಮಟದ ಕಲಾಕೃತಿಗಳು ಹಾಗೂ ವಾಮಂಜೂರಿನ ಯತೀಶ್‌ ಕುಮಾರ್‌ ಅವರ ಮೊಳೆ ಮತ್ತು ನೂಲಿನ ಕಲಾಕೃತಿಗಳು ವಿಶೇಷವಾಗಿದ್ದು ಜನಾಕರ್ಷಣೆ ಪಡೆದವು. ಗೋಪಾಡ್ಕರ್‌ ನೇತೃತ್ವದ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಅಭಿವ್ಯಕ್ತಗೊಂಡ ವರ್ಣಸ್ವರೂಪದಲ್ಲಿ ರಚನೆಗೊಂಡ ರೂಪಕವು ಮೇಳಕ್ಕೆ ಹೊಳಪನ್ನು ನೀಡಿತ್ತು. 

ಮುಂಬೈಯ ಮಧುಸೂದನ್‌ ಹಾಗೂ ಮಂಗಳೂರಿನ ವಿಶ್ವಾಸ್‌ಕೃಷ್ಣ ಅವರು ಮನೋತರಂಗದಲ್ಲಿ ಕಲೆಗೆ ಸಂಗೀತದ ನೆಲೆಯನ್ನು ಪೋಣಿಸಿ ವರ್ಣರಾಗ ನೀಡಿದರು. ಟೀಮ್‌ ಮಂಗಳೂರು ತಂಡದ ಪುಷ್ಪಕವಿಮಾನ ಗಾಳಿಪಟ ಬಾನಿಗೇರುವ ತವಕದಲ್ಲಿದ್ದರೆ, ಕದ್ರಿ ಪಾರ್ಕಿನ ಗೇಟಿನಲ್ಲಿ ನಿಂತಿರುವ ಕುಂಚವೀರ ಕುಂಚವನ್ನು ಬಾನಿಗೆ ತೋರಿಸಿ ಕಲಾವಿದರೆಲ್ಲರ ಪ್ರಗತಿಯನ್ನು, ಆರೋಹಣವನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತಿತ್ತು. 

ಕುಡ್ಲ ಕಲಾಮೇಳದ ಪ್ರತಿಷ್ಠಿತ “ಕಲಾಚಾವಡಿ ಪುರಸ್ಕಾರ’ವನ್ನು ಹಿರಿಯ ಕಲಾವಿದ, ಸಂಘಟಕ ಬಿ. ಗಣೇಶ್‌ ಸೋಮಯಾಜಿಯವರಿಗೆ ನೀಡಲಾಯಿತು. ಕೋಟಿಪ್ರಸಾದ್‌ ಆಳ್ವ, ಅನಂತ ಪದ್ಮನಾಭ ರಾವ್‌, ಗಣೇಶ ಸೋಮಯಾಜಿಯವರ ಸಂಘಟಿತ ಕಾರ್ಯನಿರ್ವಹಣೆಯೇ ಈ ಬೃಹತ್‌ ಕಲಾಮೇಳದ ಯಶಸ್ಸಿನ ಸೂತ್ರವಾಗಿತ್ತು.

ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.