ಯಕ್ಷಗಾನವಾದ ಕುವೆಂಪು ರಾಮಾಯಣ


Team Udayavani, Mar 8, 2019, 12:30 AM IST

q-3.jpg

ಕುವೆಂಪು ರಾಮಾಯಣ ಆಧುನಿಕ ಕನ್ನಡದ ಮಹಾಕಾವ್ಯ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಮತ್ತು ಸಂಸ್ಕೃತ ಶಬ್ದಗಳ ರಸಪಾಕವಾಗಿರುವ ಈ ಕಾವ್ಯದ ಭಾಷೆಯೇ ತನುಪುಳಕಗೊಳಿಸುವಂಥದ್ದು. ರಸಋಷಿ ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ’ ಕಾವ್ಯಕ್ಕೆ ಜ್ಞಾನಪೀಠ ದೊರೆತು ಐವತ್ತು ವರುಷಗಳಾದವು. ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ? ಎಂದು ಕವಿಯೇ ಹೇಳಿದಂತೆ ಹಳೆಯ ಶಿಲೆಯಲ್ಲಿ ಮೂಡಿಸಿದ ಹೊಸ ಅಕ್ಷರ ಶಿಲ್ಪವಿದು. ಇದು ಕೇವಲ ರಾಮಾಯಣದ ಕಥೆಯಲ್ಲ. ಇದೊಂದು ದರ್ಶನ. ಇದನ್ನು ರಂಗಸ್ಥಳದ ಪ್ರದರ್ಶನಕ್ಕೆ ಒಗ್ಗುವಂತೆ ಪ್ರಸಂಗಶಿಲ್ಪ ಮೂಡಿಸಿದವರು ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್‌.

 ಶ್ರೀ ರಾಮಾಯಣ ದರ್ಶನಂ ಮಹಾಛಂದಸ್ಸಿನ ಮಹಾಕಾವ್ಯ. ಖಂಡಜಾತಿಯ ಝಂಪೆತಾಳಕ್ಕೆ ಸುಲಲಿತವಾಗಿ ಹಾಡಬಹುದಾದ ಈ ರಚನೆ ಲಲಿತ ರಗಳೆಯ ಲಯವನ್ನು ಹೊಂದಿದೆ. ಯಕ್ಷಗಾನದ ಹಾಡುಗಳು ವೈವಿಧ್ಯಮಯ ತಾಳಬಂಧಗಳನ್ನು ಹೊಂದಿದೆ. ಕೇವಲ ಝಂಪೆ ತಾಳದ ಹಾಡುಗಳನ್ನೇ ಪ್ರಸಂಗದುದ್ದಕ್ಕೂ ಭಾಗವತರು ಹಾಡಿದರೆ ಅದು ಏಕತಾನತೆಯಿಂದ ನೀರಸವೆನಿಸದೆ ಇರಲಾರದು. ಆದುದರಿಂದ ಯಕ್ಷಗಾನದ ಪ್ರದರ್ಶನಕ್ಕೆ ವೈವಿಧ್ಯಮಯ ತಾಳಗಳು ಮತ್ತು ವಿಧವಿಧದ ರಾಗಪ್ರಯೋಗ ಅನಿವಾರ್ಯ. ಕಾವ್ಯದ ಸಾಲುಗಳನ್ನು ಯಕ್ಷಗಾನದ ಹಾಡುಗಳನ್ನಾಗಿ ಪರಿವರ್ತಿಸುವಾಗ ಇರುವ ಸವಾಲು ಇದೇ. ಈ ಸವಾಲನ್ನು ಭಾರದ್ವಾಜರು ಸಮರ್ಥವಾಗಿ ಎದುರಿಸಿದ್ದಾರೆ.

 ಕುಮಾರವ್ಯಾಸನ ಭಾರತ, ಲಕ್ಷ್ಮೀಶ ಕವಿಯ ಜೈಮಿನೀ ಭಾರತ ಇವೇ ಮುಂತಾದ ನಡುಗನ್ನಡದ ಕಾವ್ಯಗಳ ಭಾಮಿನಿ ಮತ್ತು ವಾರ್ಧಕ ಷಟ³ದದ ಹಾಡುಗಳು ಯಕ್ಷಗಾನ ಪ್ರಸಂಗಗಳಲ್ಲಿ ಧಾರಾಳವಿದೆ. ಕೆಲವು ಯಥಾರೀತಿ ಇನ್ನು ಕೆಲವು ರೂಪಾಂತರದಿಂದ. ಕಾವ್ಯ ಆಧಾರಿತ ಪ್ರಸಂಗಗಳೂ ಬಂದಿವೆ. ಆದರೆ ಸಮಗ್ರ ಕಾವ್ಯವೊಂದು ಈ ರೀತಿ ಯಕ್ಷಕವಿಯೊಬ್ಬನಿಂದ ಪ್ರಸಂಗಳಾದುದು ಇದೇ ಹೊಸತೆನ್ನಬಹುದು.

 “ಶ್ರೀ ರಾಮಾಯಣ ದರ್ಶನಂ’ ಕಾವ್ಯ ಆಧರಿಸಿ ಅನೇಕರು ವಿವಿಧ ನೃತ್ಯ ಪ್ರಯೋಗಗಳನ್ನು ಮಾಡಿದ್ದುಂಟು. ವೈದ್ಯೆಯೂ, ನೃತ್ಯಪಟುವೂ ಆಗಿರುವ ಡಾ.ಕೆ.ಎಸ್‌.ಪವಿತ್ರ ಈ ದೆಸೆಯಲ್ಲಿ ಹೆಚ್ಚಿನ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಸುಳ್ಯದ ವೈದ್ಯೆ, ಯಕ್ಷಗಾನ ಕಲಾವಿದೆ ಡಾ.ವೀಣಾ ಅವರು ಕುವೆಂಪು ಕಾವ್ಯದ “ಮಮತೆಯ ಸುಳಿ ಮಂಥರೆ’ ಎಂಬ ಭಾಗವನ್ನು “ಮಂಥರಾ ಮಂಥನಂ’ ಎಂಬ ಶೀರ್ಷಿಕೆಯಡಿ ಯಕ್ಷಗಾನದಲ್ಲಿ ಅಳವಡಿಸಿ ಜನಪ್ರಿಯಗೊಳಿಸಿದ್ದಾರೆ. ಕಬ್ಬಿನಾಲೆ ಇಡೀ ಕಾವ್ಯವನ್ನೇ ಯಕ್ಷಗಾನಕ್ಕೆ ತಂದಿದ್ದಾರೆ. 

 ಡಾ.ಕಬ್ಬಿನಾಲೆ ವಸಂತ ಭಾರದ್ವಾಜರ ಈ ಯಕ್ಷಗಾನ ಮಹಾಕಾವ್ಯದ ಹೆಸರು “ಶ್ರೀರಾಮ ಲೀಲಾದರ್ಶನಂ’ ಕಬ್ಬಿನಾಲೆಯವರು ಹಿರಿಯ ಛಾಂದಸರು. “ಯಕ್ಷಗಾನ ಛಂದಸ್ಸು’ ಎಂಬ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್‌ ಪದವಿಗೆ ಭಾಜನರಾದವರು. ಮೀಮಾಂಸಕರು. ಅಲಂಕಾರ ಶಾಸ್ತ್ರ ಪ್ರವೀಣರು. ಅಭಿಜಾತ ಕವಿ. ಆದುದರಿಂದ ಇವರ ಕವಿತೆಗಳೆಲ್ಲವೂ ಯಕ್ಷಗಾನದ ವೈವಿಧ್ಯಮಯ ಛಂದಸ್ಸುಗಳ ರೂಪದಲ್ಲಿ ಲೀಲಾಜಾಲವಾಗಿ ಹೊರಹೊಮ್ಮಿದೆ.

 ಶ್ರೀ ರಾಮಾಯಣ ದರ್ಶನಂ ಕಾವ್ಯದ ಸಾಲುಗಳನ್ನು ಸ್ಮರಿಸುತ್ತಾ ಕೆಳಗಿನ ಹಾಡುಗಳನ್ನು ಗುನುಗಿ ನೋಡಿ.
|| ಸಾರಂಗ ಅಟ ||
ಶ್ರೀ ವೀಣಾಪಾಣಿ ವಾಣಿ | ಸಂಗೀತ ಕ | ಲಾವಿನೋದಿನಿ ಕಲ್ಯಾಣಿ
ಕಾವ್ಯ ಕನ್ನಡದ ವಾ | ಗ್ದೇವಿ ಬ್ರಹ್ಮನ ರಾಣಿ 
ಪಾವನ ರಸತೀರ್ಥ | ಭಾವಗಂಗಾ ವೇಣಿ ||1||
|| ಬೇಗಡೆ ತ್ರಿವುಡೆ ||
ವೀರ ರಘುಕುಲವಾರ್ದಿಚಂದ್ರಮನೆ |
ದಿಟವೈಸೆ ಈ ಸಂ-|
ಸಾರ ತರುವಿನ ಫ‌ಲದ ಸುಖಸ್ಮರಣೆ
ಪೂರ್ವ ಪದ್ಧತಿವಿಡಿದು ಮಾಡುವ
ಘೋರತರ ದಿಗ್ವಿಜಯ ಸಮರದ
ಕ್ರೂರಹಿಂಸೆಯ ತ್ಯಜಿಸಿ ಕರುಣೆಯ
ತೋರುವುದು ಜಗದಾದಿ ಚೇತನ ||1||
ಈ ಹಾಡು ತ್ರಿವುಡೆ, ಏಕ, ಅಷ್ಟತಾಳಗಳಲ್ಲಿ ಹಾಡಲು ಅನುಕೂಲವಾಗಿದೆ

|| ಸಾಂಗತ್ಯ ರೂಪಕ ||
ಗುರುದೇವ ನಿಮ್ಮ ಕಾರುಣ್ಯದಿಂ ಲಭಿಸಿತು
ತರುಲತೆಗಳ ಹಸಿರುಸಿರು ||
ಪುರದ ಜೀವನೆ ದಾರಿದ್ರé ಸಂಕಟ ವನ್ಯ
ಸಿರಿಯ ಸಂಸ್ಕೃತಿ ಮುಂದೆಯಲು¤ ||1||

|| ಕಂದ ||
ಕ್ರತು ಸಂರಕ್ಷಣ ಗೌತಮ
ಸತಿಶಾಪ ವಿಮುಕ್ತಿ ಜಾನಕೀ ಪರಿಣಯ ತಾಂ ||
ಪ್ರತಿಮಾತ್ಮಕ ಕೌಸಲ್ಯಾ
ಸುತದರ್ಶನ ಯಕ್ಷಗಾನದ ಮಹಾಕಾವ್ಯಂ ||1||

ಭಾಮಿನಿ
ಕಾರೊದಲ ಬಿರುಗಾಳಿ ಬೀಸಲು
ಬೇರದುರಿ ತಲೆತಿರುಗಿ ತೊನೆಯುವ
ಭೂರುಹಕೆ ಸಿಡಿಲೊಂದು ಬಡಿಯಲು ನೆಲಕೆ ಬೀಳ್ವಂತೆ
ಕ್ರೂರವಾಕ್ಯವ ಕೇಳ್ದು ಭರತ ಕು-
ಮಾರ ತಾಯಡಿಗುರುಳೆ ಕಂದನ
ಸಾರಿನೆಗಹುತ ಸಂತವಿಟ್ಟಳು ಹೃದಯದೊಸಗೆಯೊಳು ||

ಹೀಗೆ ಮಾತ್ರಗಣ ಮತ್ತು ಅಂಶಗಣದ ಪದ್ಯಗಳು ಹೃದ್ಯವಾಗಿ ಮೂಡಿ ಬಂದಿದೆ. ಭಾಷೆಯ ಬನಿ ಮೋಹಕವಾಗಿದೆ. ಸ್ಥಾಲೀಪುಲಕ ನ್ಯಾಯದಂತೆ ಒಂದೆರಡು ಹಾಡುಗಳನ್ನು ಮುಂದಿಟ್ಟಿದ್ದೇನೆ. ಈ ಕೃತಿಯ ಸಮಗ್ರ ಸೌಂದರ್ಯವನ್ನು ಹೇಳಬೇಕಾದರೆ ಇಡೀ ಪುಸ್ತಕವನ್ನೇ ಹಾಸಬೇಕಾದೀತು. ಯಕ್ಷರಾಮಾಯಣದ ಮೊದಲ ಕತೃì ಪಾರ್ತಿಸುಬ್ಬ. ಇತ್ತೀಚೆಗೆ ಹೊಸ್ತೋಟ ಮಂಜುನಾಥ ಭಾಗವತರೂ ಯಕ್ಷಗಾನ ರಾಮಾಯಣ ಬರೆದಿದ್ದಾರೆ. ಇದಕ್ಕೊಂದು ಹೊಸ ಸೇರ್ಪಡೆ ಶ್ರೀರಾಮ ಲೀಲಾದರ್ಶನಂ. ಮೊದಲೇ ಪ್ರಸಿದ್ಧವಾಗಿದ್ದ ಕಾವ್ಯವೊಂದನ್ನು ಯಕ್ಷಗಾನದ ಹಾಡುಗಳಲ್ಲಿ ವಿವರಿಸುವುದೇ  ದೊಡ್ಡಸವಾಲು. ಭಾರದ್ವಾಜರ ಸೃಜನಶೀಲತೆ, ವಿರಾಟ್‌ ಪ್ರತಿಭೆ ಅತ್ಯದ್ಭುತವಾಗಿ ಕೆಲಸ ಮಾಡಿದೆ.

 ಪ್ರಸಂಗಗಳು ಪ್ರದರ್ಶನಗಳಾದರೆ ಸಾಲದು; ದರ್ಶನಗಳಾಗಬೇಕು. ಇದನ್ನು ಕೇವಲ ಕವಿಗಳು ತಿಳಿದರೆ ಸಾಲದು, ಕಲಾವಿದರೂ ತಿಳಿಯಬೇಕು. ಪ್ರದರ್ಶನ ಯೋಗ್ಯವಾದ ಈ ದರ್ಶನ ಯಕ್ಷಗಾನ ಪ್ರಸಂಗ ಸಾಹಿತ್ಯಗಳಲ್ಲೇ ಅನನ್ಯವೆಂದರೆ ಅತಿಶಯೋಕ್ತಿಯಾಗಲಾರದು. ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ ಕಾವ್ಯ ಜ್ಞಾನಪೀಠ ಪ್ರಶಸ್ತಿ ಪಡೆದ ಸುವರ್ಣಸಂಭ್ರಮದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ನೀಡಲ್ಪಟ್ಟ ಬೆಲೆಬಾಳುವ ಉಡುಗೊರೆಯಿದು.

ತಾರಾನಾಥ ವರ್ಕಾಡಿ 

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.