ಹವಿಗನ್ನಡದಲ್ಲಿ ರಂಜಿಸಿದ ಕುಶಾಲಿನ ಲಡಾಯಿ
Team Udayavani, Nov 30, 2018, 6:00 AM IST
ಮಹತೋಬಾರ ಶ್ರೀ ಮಹಾಗಣಪತಿ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಸಹಕಾರದಲ್ಲಿ ಪುತ್ತೂರಿನ ಯಕ್ಷರಂಗ ಆಯೋಜಿಸಿದ ಕುಶಾಲಿನ ಲಡಾಯಿ ತಾಳಮದ್ದಳೆ ಒಂದು ವಿನೂತನ ಪ್ರಯೋಗವಾಗಿ ಪ್ರದರ್ಶನಗೊಂಡಿತು. ಹಾಡುಗಾರಿಕೆ ಮತ್ತು ಅರ್ಥ ವಿವರಣೆಗಳು ಹವ್ಯಕರ ಆಡುನುಡಿ (ಹವಿಗನ್ನಡ)ದಲ್ಲಿ ಮೂಡಿಬಂದಿರುವುದು ಕುತೂಹಲಕರ ಅಂಶವಾಗಿದೆ.
ಕೃಷ್ಣಾರ್ಜುನ ಕಾಳಗ ಕನ್ನಡ ಕಥಾನಕವನ್ನು ಆಧರಿಸಿ ಹವ್ಯಕರ ಮಾತೃಭಾಷೆಯಲ್ಲಿ ಸೇರಾಜೆ ಸೀತಾರಾಮ ಭಟ್ಟ ವಿರಚಿತ ಪದ್ಯಗಳನ್ನು ಹಾಡಿ ಕಳೆಯೇರಿಸಿದವರು ಭಾಗವತ ಪುತ್ತೂರು ರಮೇಶ ಭಟ್ಟರು. ಅಡೂರು ಲಕ್ಷ್ಮೀನಾರಾಯಣ ಮತ್ತು ರಾಮಮೂರ್ತಿ ಚೆಂಡೆಮದ್ದಳೆವಾದಕರಾಗಿ ಮೆರುಗಿತ್ತರು. ವಿ| ಹಿರಣ್ಯ ವೈಂಕಟೇಶ್ವರ ಭಟ್ (ಬಲರಾಮ), ಶಂಭುಶರ್ಮ ವಿಟ್ಲ (ಅರ್ಜುನ), ರಾಧಾಕೃಷ್ಣ ಕಲ್ಚಾರ್ (ಕೃಷ್ಣ), ಪ್ರಸಂಗಕರ್ತ ಸೇರಾಜೆಯವರು (ಸುಭದ್ರೆ), ಪಶುಪತಿ ಶಾಸ್ತ್ರಿ (ಭೀಮ), ಡಾ| ಹರೀಶ್ ಜೋಶಿ ವಿಟ್ಲ(ದಾರುಕ) ಅರ್ಥಧಾರಿಗಳಾಗಿ ನಿರ್ವಹಿಸಿದ್ದರು.
ಈ ಎಲ್ಲಾ ಕಲಾವಿದರ ಮನೆಮಾತು ಹವ್ಯಕ ಭಾಷೆ ಆಗಿರುವುದರಿಂದ ಅರ್ಥಗಾರಿಕೆಯಲ್ಲಿ ಸಂವಾದವನ್ನು ಸುಲಲಿತವಾಗಿ ನಡೆಸಿದರು. ಭಾಷಾ ಲಾಲಿತ್ಯ ಸಕಾಲದಲ್ಲಿ ಕಾರ್ಯಕ್ರಮ ಮುಗಿಸಲು ಅಡಚಣೆಯಾಗಿ ತೋರಿ ಬಂದಿತು.ಕೆಲವು ಕಡೆಗಳಲ್ಲಿ ಕುಶಾಲು ತುಸು ಲಂಭಿಸಿತೆನ್ನಬೇಕು. ಎಲ್ಲಾ ಅರ್ಥ ದಾರಿಗಳು ಅರ್ಥಗಾರಿಕೆಯಲ್ಲಿ ಮಿಂಚಿದರು. ಭೀಮನ ಆಟೋಪ, ದಾರುಕನ ನುಡಿಗಳಲ್ಲಿ ಉಕ್ಕಿದ ಹಾಸ್ಯ ಗಮನಾರ್ಹ. ಹಿಂದೊಮ್ಮೆ ಇದೇ ವೇದಿಕೆಯಲ್ಲಿ ಬಹುತೇಕ ಇದೇ ಕಲಾವಿದರ ಕೂಡುವಿಕೆಯಲ್ಲಿ “ಸನ್ಯಾಸಿ ಮದಿಮ್ಮಾಯ’ (ಸುಭದ್ರಾ ಕಲ್ಯಾಣ)ಪ್ರಸಂಗ ಪ್ರದರ್ಶನಗೊಂಡು ಜನರ ಮನಗೆದ್ದಿತ್ತು.
ಹರಿನಾರಾಯಣ ಮಾಡಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.