ಮದರಾಸಿ ಗಾಯನ ನೆನಪಿಸಿದ ಗೃಹ ಸಂಗೀತ 


Team Udayavani, Jul 13, 2018, 6:00 AM IST

b-8.jpg

ವಸಂತಿ ರಾಮ ಭಟ್‌ ಅವರ ನಿವಾಸ ಕಿದಿಯೂರಿನ “ದೇವಿಕೃಪಾ’ದಲ್ಲಿ ನಡೆದ ಸಂಗೀತ ಸರಣಿ ಕಾರ್ಯಕ್ರಮದ ಏಳನೇ ಆವೃತ್ತಿಯಲ್ಲಿ, ಸರೋಜಾ ಆರ್‌. ಆಚಾರ್ಯ ಅವರ ಹಾಡುಗಾರಿಕೆ ನಡೆಯಿತು.ತೋಡಿ ರಾಗದ ಏರನಾಪೈ ವರ್ಣದ ಎರಡನೇ ಕಾಲದ ಹಾಡುವಿಕೆಯೊಂದಿಗೆ ಕಛೇರಿ ಶುರುವಾಯಿತು. ನಂತರ ಕೇದಾರಗೌಳ ರಾಗದ ನೀಲಕಂಠಂ ಭಜೇ ಹಂ ಕ್ಷಿಪ್ರ ಗತಿಯ ಆಲಾಪನೆ, ಚುಟುಕಾದ ಸ್ವರ ಕಲ್ಪನೆಯೊಂದಿಗೆ ಮೂಡಿ ಬಂತು. ತರುವಾಯ ನಟಭೈರವಿಯ ಸೊಗಸಾದ ಆಲಾಪನೆಯೊಂದಿಗೆ ಶ್ರೀ ವಲ್ಲೀದೇವಸೇನಾಪತೇ ಚಿಕ್ಕ ಚಿಕ್ಕ ಮನೋರಂಜಕವಾದ ಕಲ್ಪನಾ ಸ್ವರಗಳೊಂದಿಗೆ ಮನ ರಂಜಿಸಿತು. ಮುಂದೆ ದ್ವಿಜಾವಂತಿಯಲ್ಲಿ ನಿಧಾನ ಗತಿಯ, ಗಂಭೀರವಾದ ಅಖೀಲಾಂಡೇಶ್ವರಿ, ಕಾಪಿ ರಾಗದಲ್ಲಿ ಆಚಾರವಿಲ್ಲದ ನಾಲಗೆ ದಾಸರ- ಕೀರ್ತನೆ, ತದನಂತರ ಪ್ರಧಾನ ರಾಗವಾಗಿ ಕಲ್ಯಾಣಿಯನ್ನು ಎತ್ತಿಕೊಂಡರು.

ವಿಸ್ತಾರವಾದ ರಾಗಾಲಾಪನೆ, ತ್ಯಾಗರಾಜರ ನಿಧಿಚಾಲ ಸುಖಮಾ ಕೃತಿಯ ಸಾಂಪ್ರದಾಯಿಕ ಪಾಠಾಂತರದ ಪ್ರಸ್ತುತಿ, ಮಮತಾ ಬಂಧನದಲ್ಲಿ ಅಚ್ಚುಕಟ್ಟಾದ ನೆರೆವಲ್‌, ಸ್ವರಪಸ್ತಾರದೊಂದಿಗೆ ಮೂಡಿ ಬಂತು. ಕೊನೆಯಲ್ಲಿ ಶ್ರೀರಂಗ ಬಾರನೇ (ಖಮಾಚ್‌), ರಾಗಮಾಲಿಕೆಯಲ್ಲಿ ತೀರಾದ ವಿಳೆಯಾಡು ಪಿಳ್ಳೆ„ತಮಿಳು ರಚನೆ, ಅಘಮದ ಖಂಡನ (ದೇಶ್‌), ಪ್ರಭು ಮೇರೆ (ಸಿಂಧು ಭೈರವಿ) ಹಾಗೂ ಮಂಗಳದೊಂದಿಗೆ ಕಛೇರಿ ಸಮಾಪನಗೊಂಡಿತು. 

ಪಕ್ಕವಾದ್ಯದಲ್ಲಿ ವಸಂತಿ ರಾಮ ಭಟ್‌ ವಯೊಲಿನಿನಲ್ಲಿ, ದೇವೇಶ್‌ ಭಟ್‌ ಮೃದಂಗದಲ್ಲಿ ಸಹಕಾರವನ್ನಿತ್ತು ಭೇಷ್‌ ಎನಿಸಿಕೊಂಡರು. ಗೊಂದಲಗಳಿಲ್ಲದ‌ ಶುದ್ಧವಾದ ಸ್ವರ ಪ್ರಸ್ತಾರಗಳು, ಚುರುಕಿನ ರಾಗಾಲಾಪನೆಗಳು ಕಛೇರಿಯ ಯಶಸ್ಸಿಗೆ ಪೂರಕವಾದವು. ನಟಭೈರವಿಯ ಶ್ರೀ ವಲ್ಲೀದೇವಸೇನಾಪತೇ, ಜಾವಳಿಯನ್ನು ನೆನಪಿಸಿದ ಖಮಾಚಿನ ದೇವರ ನಾಮ, ತಮಿಳಿನ ರಾಗಮಾಲಿಕೆ ಶ್ರೋತೃಗಳಿಗೆ ಹೆಚ್ಚು ಹತ್ತಿರವಾದವು. ಒಟ್ಟಿನಲ್ಲಿ ಇಡೀ ಕಾರ್ಯಕ್ರಮ ಒಂದು ಹಳೆಯ ಮದರಾಸಿ ಗಾಯನದ ಗ್ರಾಮ್‌ಫೋನ್‌ ರೆಕಾರಿxಂಗ್‌ ಆಲಿಕೆಯಂತೆ ಭಾಸವಾಯಿತು.

 ವಿದ್ಯಾಲಕ್ಷ್ಮೀ ಕಡಿಯಾಳಿ 

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.