ಪ್ರತಿ ಮಾಸ ಹರಿಯುತ್ತಿದೆ “ಮಧುರ ಧ್ವನಿ’
Team Udayavani, Jul 19, 2019, 5:00 AM IST
“ಮಧುರಧ್ವನಿ ಉಡುಪಿ’ ಮಂಗಳೂರು ಘಟಕ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ಇದರ ಆಶ್ರಯದಲ್ಲಿ “ಸುಪ್ರಭಾತ’ ಸಂಗೀತ ಸೇವಾ ಕಾರ್ಯಕ್ರಮವನ್ನು ಪ್ರತಿ ತಿಂಗಳು ನಡೆಸಲಾಗುತ್ತಿದೆ. ಜನವರಿಯಿಂದ ಪ್ರಾರಂಭವಾದ ಈ ಕಾರ್ಯಕ್ರಮವು ಈ ತನಕ ಒಟ್ಟು ಆರು ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿದೆ. ಕರ್ನಾಟಕ ಶಾಸ್ತ್ರೀಯ ಹಾಗೂ ವಾದ್ಯ ಸಂಗೀತ ಕಲಿಕೆಯ ಯುವ-ಅಭ್ಯಾಸಿಗಳಿಗೆ ದೇವಸ್ಥಾನದಲ್ಲಿ ಇದ್ದ ವ್ಯವಸ್ಥೆಯ ಚೌಕಟ್ಟಿನೊಳಗೆ ಸರಳವಾಗಿ ಸಂಗೀತ ಸೇವಾರೂಪದಲ್ಲಿ ಪ್ರತಿಭೆ ಅನಾವರಣಕ್ಕೆ ಅನುವು ಮಾಡಿಕೊಡುವುದು ಪ್ರಮುಖ ಉದ್ದೇಶ.
ಮೊದಲ ಕಾರ್ಯಕ್ರಮವನ್ನು “ಮಧುರ ಧ್ವನಿ’ಯ ಕತೃ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರು ಪಿಟೀಲಿನಲ್ಲಿ ಶ್ರೀಧರ್ ಆಚಾರ್ ಹಾಗೂ ಮೃದಂಗದಲ್ಲಿ ಮನೋಹರ್ ರಾವ್ ಅವರ ಸಹಕಾರದೊಂದಿಗೆ ನಡೆಸಿಕೊಟ್ಟರು. ಅನಂತರದ ಕಾರ್ಯಕ್ರಮಗಳನ್ನು ಸಂಗೀತಾಭ್ಯಾಸಿಗಳಾದ ಉಷಾ ಕಾರಂತ್, ಆರಾಧನಾ ಮರಾಠೆ, ಪ್ರಭಾತ್ ಎಂ. ಗೋಖಲೆ, ಶರತ್ ಕುಮಾರ್ ಹಾಗೂ ವಂದನಾರಾಣಿ ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ಪ್ರಸನ್ನಕುಮಾರ್ ಹೊಸಬೆಟ್ಟು , ವೇಣುಗೋಪಾಲ್ ಶ್ಯಾನುಬೋಗ್, ಧನಶ್ರೀ ಶಬರಾಯ, ವಿಶ್ವಾಸ್ ಕೃಷ್ಣ ಹಾಗೂ ಹರಿಕೃಷ್ಣ ಪಾವಂಜೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.