ಮಂಗಳೂರು ಸಂಗೀತೋತ್ಸವ ಖುಷಿ ನೀಡಿದ ಕಛೇರಿಗಳು


Team Udayavani, Jan 24, 2020, 7:11 PM IST

jan-8

ಮಂಗಳೂರಿನಲ್ಲಿ ಸಂಗೀತ ಪರಿಷತ್‌ ಆಯೋಜಿಸಿದ್ದ ವಿವಿಧ ಸಂಗೀತ ಕಛೇರಿಗಳು ಕೇಳುಗರಿಗೆ ಮನೋಜ್ಞ ಅನುಭೂತಿಯನ್ನು ನೀಡಿದವು.

ಮಂಗಳೂರು ಸಂಗೀತ ಪರಿಷತ್‌ ತನ್ನ 26ನೇ ವಾರ್ಷಿಕ ಸಂಗೀತೋತ್ಸವವನ್ನೂ ಗಟ್ಟಿಯಾದ ಹೆಜ್ಜೆ ಇರಿಸಿ ಸಂಭ್ರಮಿಸಿತು. 4 ದಿನಗಳ ಅವಧಿಯ ಈ ಉತ್ಸವದಲ್ಲಿ ಸಂಸ್ಥೆಯು ಯುವ ಪ್ರತಿಭೆಗಳ ಕಛೇರಿಗಳು, ಘನವೆತ್ತ ವಿದ್ವಾಂಸರ ಸಂಗೀತ ಸುಧೆ, ವಾದ್ಯಗಳ ಅಪರೂಪದ ಕಚೇರಿ-ವಿಸ್ತƒತ ಹಿಮ್ಮೇಳ ಕಲಾವಿದರ ಗಡಣ, ಇತ್ಯಾದಿಗಳ ಸಂಯೋಜನೆಯಿಂದ ಸಂಸ್ಥೆಯ ಉದ್ದೇಶ ಮತ್ತು ಸಾಮಾಜಿಕ ಬದ್ಧತೆಯನ್ನು ಅಚ್ಚುಕಟ್ಟಾಗಿ ಪೂರೈಸಿತು.

ಪ್ರಾರಂಭದ ದಿನದ ಕಛೇರಿಯು ಚೆನ್ನೈಯ ವಯೋಲಿನ್‌ ವಾದಕ ಮತ್ತು ಗಾಯಕ ವಿ| ಶ್ರೀರಾಂ ಕುಮಾರ್‌ರವರಿಂದ ನಡೆದಿದ್ದು, ಗಾಯಕರ ಧ್ವನಿಯ ಸ್ವರಭಾರದ ಅಡಚಣೆಯಿಂದಾಗಿ ಕಛೇರಿ ಹೆಚ್ಚು ಪರಿಣಾಮ ಬೀರದೆ ಹೋಯಿತು. ಕಛೇರಿ ಶಾಸ್ತ್ರೀಯ ಚೌಕಟ್ಟಿನಲ್ಲೇ ಇದ್ದು, ಶಿಷ್ಯೆ ಅಮೃತಾ ಮುರಳಿಯವರ ಸಹಕಾರ, ವಿ| ಚಾರುಲತಾ ರಾಮಾನುಜಂರವರ ವಯೋಲಿನ್‌ ಪಕ್ಕವಾದ್ಯ, ಜೆ. ವೈದ್ಯನಾಥ್‌ರವರ ಹಿತವಾದ ಮೃದಂಗ ನುಡಿಸಾಣಿಕೆ ಕಛೇರಿಗೆ ಪುಷ್ಟಿ ಒದಗಿಸಿತು. ಎರ ಡನೇ ದಿನದ ಅತ್ಯಂತ ಪ್ರಬುದ್ಧ ಶುದ್ಧ ಶಾಸ್ತ್ರೀಯ ಪರಂಪರೆಯ ಹಾಗೂ ಆಪ್ಯಾಯಮಾನ ಕಛೇರಿ ನೀಡಿದವರು ಚೆನ್ನೈಯ ವಿಜಯಶಿವಂ. ಘನವಾದ ಶಾರೀರ, ಸಮತೋಲನ ಕಾಪಿಟ್ಟ ಕೃತಿಗಳ ಆಯ್ಕೆ, ಮೇಲ್ಮಟ್ಟದ ರಾಗಾಲಾಪನೆ, ನೆರವಲ್‌, ಕಲ್ಪನಾ ಸ್ವರಗಳ ಮನೋಧರ್ಮಗಳ ವಿಭಿನ್ನ ಶೈಲಿ, ಶಿಸ್ತಿನ ನಿರ್ವಹಣೆ, ವಯೋಲಿನ್‌ ವಾದಕ ರಾಂಕುಮಾರ್‌ರ ಹದವರಿತ ನುಡಿಸಾಣಿಕೆ ಸೊಗಸಾಗಿ ಮೃದಂಗ ವಾದನ ಮತ್ತು ತನಿ ಆವರ್ತನದಲ್ಲಿ ರಂಜಿಸಿ ಕಛೇರಿ ಕಳೆಗಟ್ಟಿಸಿದ ವಿ.ಜೆ. ವೈದ್ಯನಾಥನ್‌ರವರ ಪ್ರೌಢಿಮೆ, ಸುನಿಲ್‌ರವರ ಖಂಜಿರದ ಹಿತಮಿತದ ಅನುಸರಣೆ, ಗಾಯಕನಿಗೆ ಗಾಯನದಲ್ಲಿ ಉತ್ತಮವಾಗಿ ಆಧಾರವಿತ್ತ ಯುವ ಗಾಯಕರಾದ ಪ್ರಮೋದ್‌ ಗೋಖಲೆ ಹಾಗೂ ಪ್ರಭಾತ್‌ ಗೋಖಲೆಯವರ ಗಾಯನ ಇವರೆಲ್ಲರ ಸಂಘಟಿತ ಪ್ರಯತ್ನದಿಂದ ಈ ಕಛೇರಿ ಅತ್ಯಂತ ಪ್ರಭಾವಿ ಕಛೇರಿಯಾಗಿ ಮೂಡಿ ಬರಲು ಸಾಧ್ಯವಾಯಿತು.

ಆರಂಭದಲ್ಲೇ ಕಛೇರಿ ಬಿಗುತನಕ್ಕೆ ಸೂಚ್ಯಂಕವಾದ ಅಟ್ಟತಾಳದ ಭೈರವಿಯ ವೀರಿಬೋಣಿ ವರ್ಣ 2 ಕಾಲಗಳಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟಿತು. ವೈಶಿಷ್ಟ್ಯ ಮೆರೆದ ರಾಗಗಳು, ವಾಗ್ಗೇಯಕಾರ ತಾಳಗಳಿಂದಲೂ ಪರಿಪೂರ್ಣವಾದ ಯೋಗ್ಯವಾದ ಆಲಾಪನೆ, ನೆರವಲ್‌ ಸ್ವರಪ್ರಸ್ತಾರಗಳಿಂದಲೂ ರಂಜಿಸಿದರು. ತೋಡಿಯ ಒಳಹೊರಗನ್ನೂ ಆಳವಾಗಿ ನಿಧಾನವಾಗಿ ಮೊಗೆಮೊಗೆದು ಉಣ್ಣಿಸಿದ ರೀತಿ ಅನನ್ಯ. ಶ್ರೀ ಕೃಷ್ಣಂನ ದಷ್ಟಪುಷ್ಟ ಸಂಗತಿಗಳು, ನೆರವಲ್‌ ಇವೂ ಕೇಳ್ಮಗೆ ಬಹು ಸೌಖ್ಯ ನೀಡಿದವು. ಕಾಫಿ ರಾಗದ ರಾಗಂ ತಾನಂ ಪಲ್ಲವಿಯು ಚುಟುಕಾದ ರಾಗತಾನಗಳೊಂದಿಗೆ ಮಾಂದೇಹಿಯು ಬಿಲಹರಿ, ಕಮಾಚ್‌ ರಾಗಮಾಲಿಕೆಯಿಂದ ಆಕರ್ಷಿಸಲ್ಪಟ್ಟಿತು. ಮಾತಾಡಬಾರದೇನೋ ಜಾವಳಿ, ಫ‌ರಜ್‌ ರಾಗದ ತಿರುಪ್ಪುಗಳ್‌, ಕಛೇರಿಯನ್ನು ಭಜನ್‌ನಿಂದ ವಿದ್ಯುಕ್ತವಾಗಿ ಕೊನೆಗೊಳಿಸಿದರು.

ಮೂರನೇ ದಿನದ ಕಚೇರಿಯನ್ನು ಮೈಸೂರಿನ ಯುವ ಗಾಯಕಿ ಸುಧಾರವರು ಪ್ರಸ್ತುತಿಗೊಳಿಸಿದರು. ತಮ್ಮ ಕಛೇರಿಯಲ್ಲಿ ಜಿ.ಎನ್‌. ಬಿ., ಎಂ.ಎಲ್‌.ವಿ. ಬಾಣಿಯನ್ನು ಎತ್ತಿಹಿಡಿದರು. ಮೈಸೂರಿನ ವಾಗ್ಗೇಯಕಾರರ, ಪುರಂದರದಾಸರ ಕೃತಿಗಳ ಆಯ್ಕೆ ಇವರ ತವರಿನ ಪ್ರೀತಿ, ಕಾಳಜಿಯನ್ನು ಸೂಚಿಸಿತು. ಪಕ್ಕವಾದ್ಯದಲ್ಲಿ ಯುವ ಕಲಾವಿದ ವೈಭವ್‌ರಮಣಿ ವಯೋಲಿನ್‌ ಹಾಗೂ ಮೃದಂಗದಲ್ಲಿ ಹಿರಿಯ ಕಲಾವಿದ ಚೆಲುವರಾಜ್‌ ಸಾಥ್‌ ನೀಡಿದರು.

ಸಮಾರೋಪದಂದು ಸುಪ್ರಭಾತ ಕಛೇರಿಯು ಚೆನ್ನೈಯ ಯುವ ಕಲಾವಿದ ಅನನ್ಯ ಅಶೋಕ್‌ರಿಂದ ನಡೆಯಿತು. ಕು. ಅದಿತಿಕೃಷ್ಣ ಪ್ರಕಾಶ್‌ ವಯೋಲಿನ್‌, ಜಿ.ಎಸ್‌. ನಾಗರಾಜ್‌ ಮೃದಂಗ ಹಾಗೂ ಫ‌ಣೀಂದ್ರ ಭಾಸ್ಕರ್‌ರವರು ಘಟಂನಲ್ಲಿ ನೆರವಿತ್ತರು. ಈ ಗಾಯಕಿ ಆರಿಸಿದ ರಾಗಗಳು, ಕೃತಿಗಳು, ಸ್ಪಷ್ಟ ಸಾಹಿತ್ಯ ಉಚ್ಛಾರ ರಾಗಂ ತಾನಂ ಪಲ್ಲವಿ, ನೆರವಲ್‌, ಕಲ್ಪನಾ ಸ್ವರಗಳು-ಇವೆಲ್ಲವೂ ಕಛೇರಿಯನ್ನು ಮೆರಗುಗೊಳಿಸಿದ ರೀತಿ ಅನನ್ಯವಾಗಿತ್ತು.

ಸಮಾರೋಪದ ಕಛೇರಿಯಾಗಿ ಕರ್ನಾಟಕ ಶಾಸ್ತ್ರೀಯ ಚೌಕಟ್ಟಿನ ಚತುಷ್ಟಯ ಎಂಬ ವಿನೂತನ ಶೈಲಿಯ ವಯೋಲಿನ್‌ (ಶ್ರೀಯಾ ವೈದ್ಯನಾಥನ್‌). ನಾದಸ್ವರ (ಮೈಲೇ ಕಾರ್ತಿಕೇಯನ್‌). ತವಿಲ್‌ (ಜಿ. ಸಿಲಂಬರಸನ್‌) ಹಾಗೂ ಮೃದಂಗ (ಪ್ರವೀಣ್‌ ಸ್ಪರ್ಶ್‌) ಗಳು ಚೆನ್ನೈಯ ಮೇರುಕಲಾವಿದರುಗಳಿಂದ ಜುಗಲ್‌ಬಂದಿಯಾಗಿ ಅಚ್ಚರಿ ಮೂಡುವಂತೆ ನೆರವೇರಿತು. ಅತ್ಯಂತ ಕ್ಲಿಷ್ಟಕರವಾದ ತಂತಿ ಹಾಗೂ ಸುಷಿರವಾದ್ಯಗಳ ಈ ಸಮ್ಮಿಲನ ಯಾವ ರೀತಿಯ ಅಸಮತೋಲನವೂ ಇಲ್ಲದೆ ಸುಲಲಿತವಾಗಿ ಹರಿದುಬಂದದ್ದು ವಿಸ್ಮಯವೇ ಸೈ.

ವಿ| ಪ್ರತಿಭಾ ಎಂ. ಎಲ್‌. ಸಾಮಗ , ಮಲ್ಪೆ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.