ಮಂಜರಿ ತಂಡದವರ ನೃತ್ಯ ಮಂಜರಿ
ಸೃಷ್ಟಿ ನೃತ್ಯ ಕಲಾ ಕುಟೀರ ಪ್ರಸ್ತುತಿ
Team Udayavani, Jul 12, 2019, 5:00 AM IST
ನೃತ್ಯಾರ್ಚನೆಯ ಕೊನೆಯಲ್ಲಿ ಪಾಪನಾಶಂ ಶಿವಂರವರ ಕೃತಿ ನವರಸ ಶಿವಂ ಪ್ರಸ್ತುತಿಯಲ್ಲಿ ನವರಸಗಳನ್ನು ಪ್ರತ್ಯೇಕವಾಗಿ ಅದರಲ್ಲೂ ಶೇಷವಾಗಿ ಲಾಸ್ಯ ಹಾಗೂ ರುದ್ರ ತಾಂಡವವನ್ನು ಅಳವಡಿಸಿಕೊಂಡು ಸುದೀರ್ಘವೆನಿಸಿದರೂ ಅಮೋಘವಾಗಿ ಪ್ರದರ್ಶಿಸಿದರು.
ಕೊಡವೂರು ದೇವಳದಲ್ಲಿ ಇತ್ತೀಚೆಗೆ ಡಾ| ಮಂಜರಿಚಂದ್ರ ನೇತೃತ್ವದ ಸೃಷ್ಟಿ ನೃತ್ಯ ಕಲಾ ಕುಟೀರ, ಉಡುಪಿ ಇವರಿಂದ ಭರತ ನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು. ಪ್ರಾರಂಭದಲ್ಲಿ ನೃತ್ಯಾಧಿಪತಿ ನಟರಾಜ ಸ್ತುತಿಯನ್ನೊಳಗೊಂಡ ಪುಷ್ಪಾಂಜಲಿಯೊಂದಿಗೆ ನೃತ್ಯ ಕುಸುಮಗಳು ರಂಗದಲ್ಲಿ ಅರಳುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಧ್ವನಿ ಮುದ್ರಿತ ಸಂಗೀತವಾಗಿದ್ದರೂ ಹಿತಮಿತವಾಗಿ ಕೇಳುಗರ ಕಿವಿಗಳಿಗೆ ಅಪ್ಯಾಯಮಾನವಾಗಿ ನೃತ್ಯದ ಚಲನವಲನಗಳಿಗೆ ಅನುಗುಣವಾಗಿತ್ತು. ಅನಂತರ ಡಾ| ಮಂಜರಿಚಂದ್ರರವರ ಪ್ರಧಾನ ಭೂಮಿಕೆಯಲ್ಲಿ ತೋಡೆಯ ಮಂಗಲಮ್ ರಾಗ ಮಾಲಿಕೆಯನ್ನು ವಿವಿಧ ತಾಳಗಳಲ್ಲಿ ವೈವಿಧ್ಯಮಯವಾಗಿ ಸಹನರ್ತಕಿಯರ ಸಹಕಾರದೊಂದಿಗೆ ಸಾಕಾರಗೊಂಡಿತು. ಮುಂದೆ ದೇವರ ನಾಮವೊಂದನ್ನು ಆದಿ ತಾಳದಲ್ಲಿ ನೃತ್ಯತಂಡ ಪ್ರದರ್ಶಿಸಿತು. ಜಿತೇಶ್ ಬಂಗೇರ ಇವರ ಪದಾಭಿನಯದ ಮಾರಮಣನ ಉಮಾರಮಣನ ಎನ್ನುವ ದೇವರ ನಾಮ ಮುದ ನೀಡಿತು. ಭರತನಾಟ್ಯ ಕಲಾವಿದರ ಆರಾಧ್ಯ ದೇವರಾದ ಈಶ್ವರನ ಕುರಿತಾದ ಒಂದಾದರೂ ನೃತ್ಯ ಪ್ರತಿಯೊಂದು ಕಾರ್ಯಕ್ರಮದಲ್ಲಿ ನೀಡುವ ಪರಿಪಾಠ ಬೆಳೆದು ಬಂದಿದೆ. ಅಂತೆಯೇ ಅಭೋಗಿರಾಗ ಆದಿತಾಳದಲ್ಲಿ ಪ್ರಸ್ತುತಿಗೊಂಡ ಶಿವಸ್ತುತಿ ಕ್ಷಿಪ್ರಗತಿಯ ನಡೆ, ಶಿಷ್ಟ ಅಡವುಗಳನ್ನೊಗೊಂಡು, ಮಂದಗತಿಯಿಂದ ತೀವ್ರಗತಿಗೆ, ವೈಧ್ಯಮಯ ಭಾವ ಮುದ್ರೆಗಳೊಂದಿಗೆ ಮನಗೆದ್ದಿತು.
ಸಂಪ್ರದಾಯಬದ್ಧ ಭರತನಾಟ್ಯದಿಂದ ಜಾನಪದ ಲೋಕಕ್ಕೆ ಜಾರಿದ ನೃತ್ಯ ತಂಡದ ಕಿರಿಯ ಕಲಾದೆಯರು ಎಂಥಾ ಮೋಜಿನ ಕುದರಿ ಎನ್ನುವ ಹಾಡಿಗೆ ಲವಲಕೆಯಿಂದ ಹೆಜ್ಜೆ ಹಾಕಿ ಮೆಚ್ಚುಗೆ ಗಳಿಸಿಕೊಂಡರು. ಮುಂದೆ ಪಂಡರಾಪುರ ವಿಠಲನ ಕುರಿತಾದ ಭಕ್ತಿಪ್ರದಾನ ಮರಾಠಿ ಅಭಂಗವೊಂದಕ್ಕೆ ಜಿತೇಶ್ ಬಂಗೇರ ಭಕ್ತಿಪೂರ್ವಕವಾಗಿ ನರ್ತಿಸಿದರು. ರಾಗಮಾಲಿಕೆಯಲ್ಲಿ ಸುಲಭದಿ ಒದಗದು ಎನ್ನುವ ದಾಸರ ಪದವನ್ನು ಮಂಜರಿಚಂದ್ರ ಆದಿತಾಳದಲ್ಲಿ ಅಭಿನಯಪೂರ್ವಕವಾಗಿ ಪ್ರದರ್ಶಿಸಿದರು. ನೃತ್ಯಾರ್ಚನೆಯ ಕೊನೆಯಲ್ಲಿ ಪಾಪನಾಶಂ ಶಿವಂರವರ ಕೃತಿ ನವರಸ ಶಿವಂ ಪ್ರಸ್ತುತಿಯಲ್ಲಿ ನವರಸಗಳನ್ನು ಪ್ರತ್ಯೇಕವಾಗಿ ಅದರಲ್ಲೂ ಶೇಷವಾಗಿ ಲಾಸ್ಯ ಹಾಗೂ ರುದ್ರ ತಾಂಡವವನ್ನು ಅಳವಡಿಸಿಕೊಂಡು ಸುದೀರ್ಘವೆನಿಸಿದರೂ ಅಮೋಘವಾಗಿ ಪ್ರದರ್ಶಿಸಿ ನೃತ್ಯಕಾರ್ಯಕ್ರಮ ಮಂಗಳವಾಯಿತು. ಬಾಲ ಕಲಾವಿದರಾದ ಅನ್ವಿತಾ, ಅಪೇಕ್ಷಾ, ಧನ್ಯಶ್ರೀ, ಚಿನ್ಮಯಿ, ಅಮೃತಾ, ಕವಿತಾ, ಪನ್ನಗ, ರುಕ್ಮಿಣಿ, ಅನ್ನಪೂರ್ಣ, ತುಷಾರ, ಸಾನ್ವಿ, ಮಾನಸಿ, ಪ್ರಜ್ಞಾ, ಶ್ರೇಷ್ಠಾ ಇವರ ಪ್ರತಿಭೆಗೆಪ್ರೇಕ್ಷಕರು ಮೆಚ್ಚುಗೆ ಸೂಚಿಸಿದರು.
ಜನನಿ ಭಾಸ್ಕರ ಕೊಡವೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.