ಅರ್ಥಪೂರ್ಣ ರಂಗಪ್ರವೇಶ


Team Udayavani, Jan 5, 2018, 2:50 PM IST

05-35.jpg

ಬಾಲ್ಯದಿಂದಲೇ ಭರತನಾಟ್ಯದೆಡೆಗೆ ಆಕರ್ಷಿತರಾಗಿ, ಸತತ ಸಾಧನೆಯಿಂದ ವಿದ್ಯುತ್‌ ಪದವಿ ಮುಗಿಸಿ ರಂಗಪ್ರವೇಶವನ್ನು ಮಾಡಿದ ವಿದುಷಿ ವೈಷ್ಮಾ ಶೆಟ್ಟಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ವಿದ್ಯಾರ್ಥಿನಿ. ಕಲಾ ಯಾನಕ್ಕೆ ಅಡ್ಡಿಯಾಗಬಾರದೆಂದು ಕೈತುಂಬ ಸಂಬಳ ತರುವ ನೌಕರಿ ತೊರೆದ ನಿಜವಾದ ಕಲಾಭಿಮಾನಿ ಅವರು. 

ಪ್ರಾರಂಭದಲ್ಲಿ ವೈಷ್ಮಾ ಗುರು ಶಾರದಾಮಣಿ ಶೇಖರ್‌ ರಚಿಸಿರುವ ಸ್ವರಾಗ್‌ ಕಣ್ಣೂರು ಇವರ ರಾಗ ಸಂಯೋಜನೆಯಲ್ಲಿ ಮೂಡಿ ಬಂದ ನಳಿನಕಾಂತ ರಾಗದ ಪುಷ್ಪಾಂಜಲಿಯನ್ನು ಪ್ರಸ್ತುತ ಪಡಿಸಿದರು. ಅಂಗಶುದ್ಧಿಯಲ್ಲಿ ತನ್ನ ಪಕ್ವತೆಯನ್ನು ತೋರಿದ್ದರೂ, ಮುಖದಲ್ಲಿ ಕೊಂಚ ಬಿಗು ಭಾಸವಾಯಿತು. ಇದರೊಂದಿಗೆ ಸರಸ್ವತಿ ಶ್ಲೋಕವನ್ನು ಅಭಿನಯಿಸಿದರು. ಮುಂದೆ ಮಧುರೈ ಮುರಳೀಧರನ್‌ ರಚಿಸಿರುವ ಗೌಳರಾಗ ಆದಿತಾಳದ ದೇವಿಕೃತಿ ಮಹಾಕಾಳಿ, ಮಹಾಶಕ್ತಿ, ಮಹೇಶ್ವರಿ ಎಂಬ ನೃತ್ಯವನ್ನು ಶಾರದಾಮಣಿಯವರ ಪುತ್ರಿ ಶುಭಾಮಣಿಯು ಶೋಲ್ಕಟ್ಟುಗಳನ್ನು ಅಳವಡಿಸಿ, ನೃತ್ಯ ಸಂಯೋಜನೆ ಮಾಡಿದ ರೀತಿ ಅಮೋಘವಾಗಿತ್ತು. ಜೊತೆಗೆ ಮೃದಂಗದ ನುಡಿಕಾರದಿಂದಲೂ ಮತ್ತಷ್ಟು ಶೋಭಿಸಿತು. ಜನಮೆಚ್ಚುಗೆ ಗಳಿಸಿದ ಈ ನೃತ್ಯ ವೈಷ್ಮಾಗೆ ಒಂದು ಸವಾಲಾಗಿದ್ದರೂ ತನ್ನ ಪ್ರಬುದ್ಧ ಪ್ರಸ್ತುತಿಯಿಂದ ಭೇಷ್‌ ಎನಿಸಿಕೊಂಡರು.

ಕಾರ್ಯಕ್ರಮದ ಪ್ರಮುಖ ಅಂಗ ಪದವರ್ಣ ರಾಗಮಾಲಿಕೆ ಆದಿತಾಳದಲ್ಲಿದ್ದು ಬೆಂಗಳೂರಿನ ಗುರುಮೂರ್ತಿಯವರ ರಚನೆಯಾಗಿತ್ತು. ಈ ವರ್ಣದಲ್ಲಿ ನೀಲಮೇಘ ಶ್ಯಾಮನಾದ ತನ್ನ ಸ್ವಾಮಿಯನ್ನು ನನ್ನ ಬಳಿ ಕರೆ ತಾರೆ ಸಖೀ ಎಂದು ನಾಯಕಿಯು ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ. ಮಧುರವಾದ ಮುರಳೀನಾದವನ್ನು ಆಲಿಸಲು ತನ್ನ ಮನ ಹಾತೊರೆಯುತ್ತಿದೆ. ನಿರ್ಮಲವಾದ ಮನಸ್ಸನ್ನು ಹೊಂದಿರುವ ನನ್ನ ಸ್ವಾಮಿಗೆ ಮನ ಸೋತಿದ್ದೇನೆ. ನವರಸ ರಂಜಿತ ನಯನ ಮನೋಹರ ಮೋಹನಾಂಗನಾದ ಶ್ರೀ ವೇಣುಗೋಪಾಲ ಕೃಷ್ಣನೇ ನಿನ್ನ ಚರಣ ಕಮಲಕ್ಕೆರಗುವೆ. ನಿನ್ನನ್ನಗಲಿ ಒಂದು ಕ್ಷಣವೂ ಇರಲಾರೆ. ಹೀಗೆ ಪರಿಪರಿಯಾಗಿ ಬೇಡುವ ನಾಯಕಿ ಭಾವವನ್ನು ವೈಷ್ಮಾ ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಿದರು. 

ಮಹಾಕವಿ ಸುಬ್ರಹ್ಮಣ್ಯ ಭಾರತೀಯವರ ರಾಗ ಮಾಲಿಕೆ ಆದಿತಾಳದ ಪದಂ ದಿಕ್ಕು ತೆರಿಯಾದ್‌ ಕಾಟಿಲ್‌ನಲ್ಲಿ ನಾಯಕಿ ತನ್ನ ಸ್ವಾಮಿಯ ಕೊಳಲ ನಾದವನ್ನು ಆಲಿಸಿ, ದಟ್ಟ ಕಾಡಿನೊಳಗೆ ಪ್ರವೇಶಿಸುತ್ತಾಳೆ. ಕಾಡಿನ ಸೌಂದರ್ಯವನ್ನು ಸವಿಯುತ್ತಾ ತನ್ನನ್ನು ತಾನೇ ಮರೆಯುತ್ತಾಳೆ. ನಿದ್ದೆಯಿಂದ ಎಚ್ಚರವಾದಾಗ ತನ್ನ ಮುಂದೆ ನಿಂತಿರುವ ಬೇಟೆಗಾರ ತನ್ನ ಸ್ವಾಮಿಯಾದ ಶ್ರೀಕೃಷ್ಣನೇ ಎಂದು ತಿಳಿದಾಗ ನಾಚಿ ತನ್ನನ್ನೇ ಸ್ವಾಮಿಗೆ ಸಮರ್ಪಿಸುತ್ತಾಳೆ. ಈ ಪದಂನಲ್ಲಿ ವೈಷ್ಮಾ ಭಾವಾಭಿನಯದ ಸ್ಪಷ್ಟತೆ, ನಿಖರತೆ ಮಂತ್ರ ಮುಗ್ಧಗೊಳಿಸಿತು.

ಮುಂದಿನ ಪ್ರಸ್ತುತಿಯಾದ ರಾಮ ಸಂಕೀರ್ತನೆ, ಆದಿತಾಳದ ಅಹಿರ್‌ಭೈರವ್‌ ರಾಗದ ಪಿಬರೆ ರಾಮರಸಂ ಭಕ್ತಿ ಪ್ರಧಾನವಾಗಿದ್ದು ಸದಾಶಿವ ಬ್ರಹೆ¾àಂದ್ರಿಯರ ರಚನೆಯಾಗಿತ್ತು. ಜಟಾಯು ಮೋಕ್ಷದ ಕಥೆ ಹಾಗೂ ರಾಮನಿಗಾಗಿ ತನ್ನ ಜೀವನವಿಡೀ ಕಾಯುತ್ತಿದ್ದ ಶಬರಿಯ ಕಥೆಯನ್ನು ಗುರು ಶಾರದಾಮಣಿ ಶೇಖರ್‌ರವರು ನೃತ್ಯಕ್ಕೆ ಸಂಯೋಜಿಸಿದ್ದು, ಸ್ವತಃ ಗುರುಗಳಂತೆ ಮನೋಜ್ಞವಾಗಿ ಅಭಿನಯಿಸಿದ್ದು, ಗುರುಗಳ ಶಬರಿ ಪಾತ್ರವನ್ನು ನೆನಪಿಸಿತು.

    ಕೊನೆಯ ಭಾಗದಲ್ಲಿ ವರಮು ರಾಗ, ಆದಿತಾಳದ ತಿಲ್ಲಾನದಲ್ಲಿ ಶಕ್ತಿರೂಪಿಣಿಯಾದ ಪಾರ್ವತಿಯನ್ನು ಸ್ತುತಿಸುವ ಸಾಹಿತ್ಯವನ್ನೊಳಗೊಂಡಿದ್ದು, ವಿದ್ವಾನ್‌ ಸ್ವರಾಗ್‌ ಕಣ್ಣೂರು ಸುಲಲಿತವಾಗಿ ಹಾಡಿದರೆ, ರಾಜನ್‌ ಪಯ್ಯನ್ನೂರ್‌ರವರ ಮೃದಂಗ ಛಾಪು ಹಿತಮಿತವಾಗಿತ್ತು. ದೀಪಕ್‌ ಹೆಬ್ಟಾರ್‌ರವರ ಕೊಳಲು ವಾದನ ಪ್ರೌಢಿಮೆಯಿಂದ ಕೂಡಿತ್ತು. ಗುರು ಶಾರದಾಮಣಿ ಶೇಖರ್‌ ಹಾಗೂ ಪುತ್ರಿ ಶುಭಾಮಣಿ ಚಂದ್ರಶೇಖರ್‌ ನಟುವಾಂಗದ ಪ್ರಸ್ತುತಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

 ಮಮತಾ   

ಟಾಪ್ ನ್ಯೂಸ್

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rape

Ashram;89 ವರ್ಷದ ಆಶ್ರಮ ಗುರುವಿನ ಮೇಲೆ ಆತ್ಯಾಚಾ*ರ ಪ್ರಕರಣ ದಾಖಲು

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

‌Mysore: ಮೊಬೈಲ್‌ ಜೂಜಾಟ; ನಾಲ್ವರ ಬಂಧನ

Wadi-Pro

Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್‌ ಪ್ರತಿಭಟನೆ, ವಾಡಿ ಬಂದ್

1-bharat

Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ

9

Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.