ವರ್ಷಾಕಾಲದ ನಡುವೆ ಮೀನಾಕ್ಷಿ ಕಲ್ಯಾಣ

Team Udayavani, Jul 13, 2018, 6:00 AM IST

b-5.jpg

ಯಕ್ಷಸಿರಿ ವನಿತಾ ಬಳಗ, ಬ್ರಹ್ಮಾವರ ಇವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಕಾರದೊಂದಿಗೆ ಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಮೀನಾಕ್ಷಿ ಕಲ್ಯಾಣ ಎನ್ನುವ ಯಕ್ಷಗಾನ ಪ್ರದರ್ಶನವನ್ನು ನಡೆಸಿಕೊಟ್ಟರು. ಪಾಂಡ್ಯ ದೇಶದ ಅರಸ ಮಲಯಧ್ವಜನ ಮಗಳು ಮೀನಾಕ್ಷಿಗೆ ಹುಟ್ಟುತ್ತಲೆ ಮೂರು ಸ್ತನಗಳು. ಹಾಗಾಗಿ ಚಿಂತಾಕ್ರಾಂತನಾದ ಅರಸನಿಗೆ ನಾರದರು ಸಮಾಧಾನಿಸಿ ಮುಂದೆ ಈಕೆ ದಿಗ್ವಿಜಯಕ್ಕೆ ಹೋಗುವ ಸಂದರ್ಭದಲ್ಲಿ ಯಾವಾತನಿಂದ ಘಾಸಿಗೊಂಡು ಮೂರನೇ ಸ್ತನ ಮಾಯವಾಗುತ್ತದೋ ಆತನೇ ಇವಳ ಪತಿಯಾಗುತ್ತಾನೆ ಎಂದು ತಿಳಿಸಿರುತ್ತಾರೆ. ತಂದೆಯ ನಂತರ ಅಧಿಕಾರ ಪಡೆದ ಮೀನಾಕ್ಷಿ ಮಂತ್ರಿ ವೀರಸೇನನೊಂದಿಗೆ ದಿಗ್ವಿಜಯಕ್ಕೆ ಹೊರಟು, ಸುತ್ತುಮುತ್ತಲಿನ ರಾಜರನ್ನು ಸೋಲಿಸಿ, ಕಾಶ್ಮೀರದರಸ ಶೂರಸೇನನಲ್ಲಿ ಯುದ್ಧಗೈಯುವ ಸಂದರ್ಭ ನಾರದರು ತಡೆದು ಈಕೆ ನಿನ್ನ ಮಗಳಾದ ಕಾಂಚನಮಾಲೆಯ ಮಗಳು ಎಂದಾಗ ಮೊಮ್ಮಗಳಾದ ಆಕೆಯನ್ನು ಉಪಚರಿಸುತ್ತಾನೆ. ಮುಂದೆ ಸ್ತ್ರೀ ಮಲಯಾಳ ರಾಜ್ಯ ಪ್ರವೇಶಿಸಿ ರಾಣಿ ಪದ್ಮಗಂಧಿನಿಯನ್ನು ಸೋಲಿಸಿ ಕಪ್ಪ ಪಡೆದು, ಕೊನೆಯಲ್ಲಿ ಕೈಲಾಸಕ್ಕೆ ಲಗ್ಗೆಯಿಟ್ಟು ಶಿವನ ಗಣಗಳನ್ನು ಸೋಲಿಸಿ ಶಿವನೊಂದಿಗೆ ಸೆಣೆದಾಡಿ ಸೋತ ಸಂದರ್ಭದಲ್ಲಿ ಆಕೆಯ ಮೂರನೇ ಸ್ತನ ಮಾಯವಾಗುತ್ತದೆ. 

ನಾರದರ ಮಾತಿನಂತೆ ಈರ್ವರ ವಿವಾಹವಾಗುವಲ್ಲಿಗೆ ಪ್ರಸಂಗ ಮುಕ್ತಾಯವಾಗುತ್ತದೆ. ಮೀನಾಕ್ಷಿಯಾಗಿ ಭಾಗೀರಥಿ ಎಂ. ರಾವ್‌ ಅವರು ತನ್ನ ಲವಲವಿಕೆಯ ಹೆಜ್ಜೆ ಮತ್ತು ಧೀರತನದ ಮಾತಿನ ಶೈಲಿಯ ಮೂಲಕ ಪಾತ್ರವನ್ನು ಅನಾವರಣಗೊಳಿಸಿದ ಪರಿ ಸೊಗಸಾಗಿತ್ತು. ಶೂರಸೇನನ ಗಾಂಭೀರ್ಯತೆ ಮತ್ತು ಈಶ್ವರನ ಕೋಪಾವೇಷವನ್ನು ನಾಗರತ್ನಾ ಹೇಳೆìಯವರು ಉತ್ತಮವಾಗಿ ಅಭಿವ್ಯಕ್ತಿಗೊಳಿಸಿದ್ದರು. ಪದ್ಮಗಂಧಿನಿಯಾಗಿ ಕು| ಸಹನಾರವರ ಪಾತ್ರ ನಿರ್ವಹಣೆ ಚೆನ್ನಾಗಿದ್ದು, ಮಂತ್ರಿ ವೀರಸೇನನಾಗಿ ಕು| ವಿಶ್ರುತಾ ಹೇಳೆì, ನಾರದ ಮತ್ತು ನಂದಿಯಾಗಿ ಗಾಯತ್ರಿ ಶಾಸ್ತ್ರಿಯವರು ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದರು. ಬಾಲಗೋಪಾಲರಾಗಿ ಮಾ| ವಿಭಾವನ ಹೇಳೆì ಮತ್ತು ಮಾ| ಸೃಜನ್‌ ಕುಂದರ್‌, ಪೀಠಿಕಾ ಸ್ತ್ರೀವೇಷದಲ್ಲಿ ಮಾ| ರೋಹನ್‌ ಹೆಬ್ಟಾರ್‌ ಮತ್ತು ಮಾ| ಪ್ರಣವ್‌ ಹೊಳ್ಳ ಇವರುಗಳು ಪೂರ್ವರಂಗದ ಚೆಲುವನ್ನು ಹೆಚ್ಚಿಸಿದರೆ, ಭಾಗವತರಾಗಿ ಉದಯ ಕುಮಾರ್‌ ಹೊಸಾಳ, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ ಹಿಮ್ಮೇಳದ ಸೊಗಸನ್ನು ಹೆಚ್ಚಿಸಿದರು. ವೇಷಭೂಷಣ ಬಾಲಕೃಷ್ಣ ನಾಯಕ್‌ ಹಂದಾಡಿಯವರದ್ದಾಗಿತ್ತು. ಎರಡು ಗಂಟೆ ಅವಧಿಯ ಈ ಯಕ್ಷಗಾನ ಪ್ರೇಕ್ಷಕರಿಂದ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಯಿತು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.