ಮೊಳಹಳ್ಳಿ ಕೃಷ್ಣ ನಾಯ್ಕಗೆ ಯಕ್ಷ ಸೌರಭ ಪ್ರಶಸ್ತಿ
Team Udayavani, May 10, 2019, 5:50 AM IST
ಕೋಟದ ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಯಕ್ಷ ಸೌರಭ ಪ್ರಶಸ್ತಿಗೆ ಈ ಬಾರಿ ಮಟಪಾಡಿ ಶೈಲಿಯ ಸ್ತ್ರೀವೇಷದಾರಿ ಮೊಳಹಳ್ಳಿ ಕೃಷ್ಣ ನಾಯ್ಕರು ಪಾತ್ರರಾಗುತ್ತಿದ್ದಾರೆ.ಪ್ರಶಸ್ತಿ ಪ್ರದಾನ ಮೇ 11ರಂದು ಯಕ್ಷದೀವಿಗೆ-19ರ ಕಾರ್ಯ ಕ್ರಮದಲ್ಲಿ ನೆರವೇರಲಿದೆ.
ನಡುತಿಟ್ಟಿನ ವಿವಿಧ ರೀತಿಯ ನೃತ್ಯ ವೈವಿಧ್ಯತೆಯಿಂದ ಸಂಪ್ರದಾಯದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿ ಸ್ತ್ರೀ ವೇಷಧಾರಿ ಗಳಾದ ಅರಾಟೆ ಮಂಜುನಾಥ, ಕೋಟ ವೈಕುಂಠ,ಎಂ.ಎ ನಾಯ್ಕ, ದಯಾನಂದ ನಾಗೂರ್, ಹೊಸಂಗಡಿ ರಾಜೀವ ಶೆಟ್ಟಿ ಮುಂತಾದವರ ಸಾಲಿನಲ್ಲಿ ಗುರುತಿಸಲ್ಪಡುವ ಇನ್ನೊಂದು ಹೆಸರು ಮೊಳಹಳ್ಳಿ ಕೃಷ್ಣರದ್ದು. ಬಡಗುತಿಟ್ಟಿನ ಗರತಿ ಸ್ತ್ರೀವೇಷದ ನಿಲುವು ಹೇಗೆ ಇರಬೇಕೆಂಬುದನ್ನು ಅವರ ದ್ರೌಪದಿ,ಮಂಡೋದರಿ,ದಮಯಂತಿ ಮುಂತಾದ ವೇಷಗಳಲ್ಲಿ ನೋಡಬಹುದು.ಗರತಿ ವೇಷಗಳಿಗೆ ಉತ್ತಮವಾದ ಪ್ರಾತ್ಯಕ್ಷಿಕೆ ಅವರ ಯಾವುದೇ ಸ್ತ್ರೀವೇಷಗಳು.
ಹದಿನೈದರ ಹರೆಯದಲ್ಲಿ ದಶಾವತಾರಿ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು.ಬಳಿಕ ಅಮೃತೇಶ್ವರಿ, ಸಾಲಿಗ್ರಾಮ ಇಡಗುಂಜಿ, ಮಾರಣಕಟ್ಟೆ ಹೀಗೆ 35 ವರ್ಷ ಕಲಾಯಾತ್ರೆ ನಡೆಸಿ ಸದ್ಯ ಶ್ರೀ ಅಮೃತೇಶ್ವರಿ ಮೇಳದ ಪ್ರಧಾನ ಸ್ತ್ರೀವೇಷದಾರಿಗಳಲ್ಲಿ ಒಬ್ಬರಾಗಿದ್ದಾರೆ.
ಸೌಮ್ಯ ಹಾಗೂ ಗಂಭೀರ ನಡೆಯ ಸ್ತ್ರೀವೇಷಗಳನ್ನು ಸಮಾನ ಸಾಮರ್ಥ್ಯದೊಂದಿಗೆ ಪೋಷಿಸುವ ಇವರು ಕಸೆ ವೇಷಗಳಾದ ಮೀನಾಕ್ಷಿ, ಪದ್ಮಗಂಧಿ,ಪ್ರಮೀಳೆ, ಮದನಾಕ್ಷಿ ತಾರಾವಳಿ, ಭ್ರಮರಕುಂತಳೆ ಮುಂತಾದ ಪಾತ್ರಗಳಿಗೆ ಗರಿಷ್ಟ ಮಟ್ಟದ ನ್ಯಾಯ ಒದಗಿಸಿದ್ದಾರೆ. ಶ್ರುತಿಬದ್ಧವಾದ ಅಪರೂಪದ ಸ್ವರ ಇವರ ಹೆಚ್ಚುಗಾರಿಕೆ.ಉತ್ತರದ ಇಡಗುಂಜಿ ಮೇಳದಲ್ಲಿ ಇವರ ಹೆಜ್ಜೆಗಾರಿಕೆ ನೋಡಿ ಕೆರೆಮನೆ ಶಂಭು ಹೆಗಡೆ ಮತ್ತು ಮಹಾಬಲ ಹೆಗಡೆಯವರು ಶಹಬ್ಟಾಸ್‌ಗಿರಿ ನೀಡಿದ್ದು ಅಲ್ಲಿನ ಮಯ ಯಕ್ಷಗಾನ ಕೇಂದ್ರದಲ್ಲಿ ನೃತ್ಯಗುರುವಾಗಿ ಕೆಲಕಾಲ ಸೇವೆ ಸಲ್ಲಿಸಿದ್ದರು.
ಪ್ರೊ|ಎಸ್.ವಿ.ಉದಯ ಕುಮಾರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.