ವನಿತೆಯರೇ ನೆರವೇರಿಸಿದ ಮೀನಾಕ್ಷಿ ಕಲ್ಯಾಣ
ಯಕ್ಷಸಿರಿ ವನಿತಾ ಬಳಗದ ಪ್ರಸ್ತುತಿ
Team Udayavani, Jan 10, 2020, 6:46 PM IST
ನೆರೆಹೊರೆಯ ರಾಜರನ್ನ ಗೆದ್ದ ಬಳಿಕ ಕಾಶ್ಮೀರದ ಅರಸ ಶೂರ ಸೇನನಲ್ಲಿ ಕಾದಾಡುತ್ತಾಳೆ.ಆ ಸಂದರ್ಭಕ್ಕೆ ನಾರದರ ಪ್ರವೇಶವಾಗಿ ಶೂರಸೇನನಲ್ಲಿ ಈಕೆ ನಿನ್ನ ಮಗಳಾದ ಕಾಂಚನಮಾಲೆಯ ಮಗಳು ಎಂದು ತಿಳಿ ಹೇಳಿದ ಬಳಿಕ ಆಕೆಯನ್ನು ಸತ್ಕರಿಸುತ್ತಾನೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರಿನ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ವನಿತಾ ಬಳಗದ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನ ರಂಜಿಸಿತು. ಯಕ್ಷಗಾನದಲ್ಲಿ ತನ್ನದೇ ಛಾಪು ಮೂಡಿಸಿ ಭರವಸೆ ಇಮ್ಮಡಿಗೊಳಿಸಿರುವ “ಯಕ್ಷಸಿರಿ ವನಿತಾ ಬಳಗ, ಬ್ರಹ್ಮಾವರ’ ತಂಡವು ಶಾಲಾ ವಾರ್ಷಿಕೋತ್ಸವ ಸಮಿತಿಯ ಸಹಕಾರದೊಂದಿಗೆ “ಮೀನಾಕ್ಷಿ ಕಲ್ಯಾಣ’ ಯಕ್ಷಗಾನ ಪ್ರಸಂಗ ಕಾಲಮಿತಿ ಪ್ರದರ್ಶನದೊಂದಿಗೆ ಕಲಾಭಿಮಾನಿಗಳ ಮನಸೂರೆಗೊಳಿಸಿತು.
ಧೀರೆ,ರೂಪವತಿ ಮೀನಾಕ್ಷಿ ಹುಟ್ಟಿನಿಂದಲೇ ಹೊಂದಿದ ಅಧಿಕ ಸ್ತನದಿಂದಾಗಿ ನೆರೆಹೊರೆಯ ಪ್ರಜಾ ಸಮೂಹದ ಮೂದಲಿಕೆಗೆ ಒಳಗಾದಾಗ ತಂದೆ ಮಲಯಧ್ವಜ ಭೂಪತಿಯ ಚಿಂತೆ ದ್ವಿಗುಣಗೊಳಿಸಿತು.ಆ ಸಂದರ್ಭದಲ್ಲಿ ಆಗಮಿಸಿದ ದೇವ ಋಷಿ ನಾರದರು ಮುಂದೆ ಈಕೆ ದಿಗ್ವಿಜಯ ಮಾಡುವ ಸಮಯಕ್ಕೆ ಯಾರಿಂದ ಈಕೆ ಸೋಲುತ್ತಾಳ್ಳೋ ಆಗ ಈಕೆಯ ಅಧಿಕ ಸ್ತನ ಮಾಯವಾಗುವುದರೊಂದಿಗೆ ಆತನೆ ಈಕೆಯನ್ನು ವರಿಸುತ್ತಾನೆ ಎಂದು ಹೇಳುತ್ತಾರೆ. ತಂದೆಯ ಕಾಲನಂತರ ಪಟ್ಟವೇರಿದ ಮೀನಾಕ್ಷಿ ದಿಗ್ವಿಜಯ ಕೈಗೊಳ್ಳುವುದರ ಮೂಲಕ ತನಗೆ ಅನುರೂಪನಾದ ವರನನ್ನು ತಾನೇ ಆರಿಸಿಕೊಳ್ಳುವ ಪಣತೊಟ್ಟು ತನ್ನ ಸುಸಜ್ಜಿತ ಸೇನೆಯೊಂದಿಗೆ ಅಣಿಯಾಗುತ್ತಾಳೆ.ನೆರೆಹೊರೆಯ ರಾಜರನ್ನ ಗೆದ್ದ ಬಳಿಕ ಕಾಶ್ಮೀರದ ಅರಸ ಶೂರ ಸೇನನಲ್ಲಿ ಕಾದಾಡುತ್ತಾಳೆ.ಆ ಸಂದರ್ಭಕ್ಕೆ ನಾರದರ ಪ್ರವೇಶವಾಗಿ ಶೂರಸೇನನಲ್ಲಿ ಈಕೆ ನಿನ್ನ ಮಗಳಾದ ಕಾಂಚನಮಾಲೆಯ ಮಗಳು ಎಂದು ತಿಳಿ ಹೇಳಿದ ಬಳಿಕ ಆಕೆಯನ್ನು ಸತ್ಕರಿಸುತ್ತಾನೆ.ಮುಂದುವರಿದು ಸ್ತ್ರೀ ಮಲಯಾಳ ರಾಜ್ಯ ಪ್ರವೇಶಿಸಿ ರಾಣಿ ಪದ್ಮಗಂಧಿನಿಯನ್ನು ಸೋಲಿಸಿ ಕಪ್ಪ ಪಡೆದು ದಿಗ್ವಿಜಯ ಮುಂದುವರಿಸಿ ಕಡೆಯ ದಿಕ್ಕಿನ ಒಡೆಯನಾದ ಶಿವನಲ್ಲಿ ಕಾದಾಡಲು ಮುಂದಾಗುತ್ತಾಳೆ.ಶಿವನ ಗಣಗಳನ್ನು ಸೋಲಿಸಿ ಶಿವನಲ್ಲಿಯೇ ಹೋರಾಡುವ ಸಂದರ್ಭದಲ್ಲಿ ಮೀನಾಕ್ಷಿಯ ಅಧಿಕ ಸ್ತನ ಮಾಯವಾಗುತ್ತದೆ. ಬಳಿಕ ನಾರದರ ಮಾತಿನಂತೆ ಶಿವನನ್ನೆ ವರಿಸುತ್ತಾಳೆ.
ಈ ಕಥಾಹಂದರವನ್ನು ರಂಗದಲ್ಲಿ ಕಟ್ಟಿಕೊಡುವುದರ ಮೂಲಕ ಪ್ರೇಕ್ಷಕರ ಮನತಣಿಸುವಲ್ಲಿ ವನಿತಾ ಬಳಗದ ಕಲಾ ಪ್ರೌಢಿಮೆ ಶ್ಲಾಘನೀಯವಾದದ್ದು. ಮುಮ್ಮೇಳದಲ್ಲಿ ಧೀರೆ ಮೀನಾಕ್ಷಿಯಾಗಿ ಚುರುಕು ಹೆಜ್ಜೆಗಾರಿಕೆ ಮತ್ತು ಸ್ಪುಟವಾದ ಮಾತಿನ ಮೂಲಕ ಶಿಕ್ಷಕಿ ನಾಗರತ್ನ ಹೇಳೆì ತಮ್ಮ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದರು.ಶೂರಸೇನನ ಗತ್ತು,ಗಾಂಭಿರ್ಯತೆ ಹಾಗೂ ಈಶ್ವರನ ಕೋಪಾವೇಶವನ್ನು ಭಾಗೀರಥಿ ಎಂ.ರಾವ್ ಅಚ್ಚುಕಟ್ಟಾಗಿ ತೋರ್ಪಡಿಸಿದ ರೀತಿ ಅಮೋಘವಾಗಿತ್ತು.ಪಾತ್ರಕ್ಕೆ ಬೇಕಾದ ಪೋಷಣೆಯನ್ನು ನೀಡಿ ಪದ್ಮಗಂಧಿನಿ ಪಾತ್ರವನ್ನು ಕುಮಾರಿ ಅಶ್ವಿನಿ ಸೊಗಸಾಗಿ ನಿರ್ವಹಿಸಿದರು.ನಂದಿಯ ಪಾತ್ರ ವನ್ನು ಗಾಯತ್ರಿ ಶಾಸ್ತ್ರಿಯವರು ನಿರ್ವಹಿಸಿದರು. ಭಾಗವತಿಕೆಯಲ್ಲಿ ಸುಶ್ರಾವ್ಯವಾಗಿ ಹಾಡಿ ರಂಗಕ್ಕೆ ಮೆರುಗು ತಂದವರು ಕೇಶವ ಆಚಾರ್, ಚಂಡೆಯಲ್ಲಿ ಕೃಷ್ಣಾನಂದ ಶೆಣೈ ಶಿರಿಯಾರ,ಮದ್ದಳೆಯಲ್ಲಿ ಭರತ್ ಚಂದನ್ ಕೋಟೇಶ್ವರ ಸಹಕರಿಸಿದರು.ಒಟ್ಟಾರೆಯಾಗಿ ಮೀನಾಕ್ಷಿ ಕಲ್ಯಾಣ ಪ್ರೇಕ್ಷಕರನ್ನು ರಂಜಿಸಿತು.
ರಾಘವೇಂದ್ರ ಡಿ.ಆಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.