ದುಬಾಯಿ ಬಾಲಕಲಾವಿದರ ಮೋಹಿನಿ ಏಕಾದಶಿ
Team Udayavani, Jun 8, 2018, 6:00 AM IST
ಯಕ್ಷಮಿತ್ರರು ದುಬಾಯಿ ಇದರ ಬಾಲಕಲಾವಿದರು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಶಾರದಾ ಮಂಟಪದಲ್ಲಿ ಮೇ 26 ರಂದು “ಏಕಾದಶಿ ವ್ರತ ಮಹಾತ್ಮೆ’ ಪೌರಾಣಿಕ ಆಖ್ಯಾನದ “ಮೋಹಿನಿ ಏಕಾದಶಿ’ ಪ್ರಸಂಗವನ್ನು ಪ್ರದರ್ಶಿಸಿ ಜನಮನ ಸೂರೆಗೊಂಡರು. ಪುಟಾಣಿಗಳ ಪಾತ್ರ ನಿರ್ವಹಣೆ ಅಚ್ಚುಕಟ್ಟುತನ ಮತ್ತು ನೃತ್ಯ, ಅಭಿನಯಗಳಲ್ಲಿ ಪಕ್ವತೆಯಿತ್ತು. ದಿನೇಶ ಶೆಟ್ಟಿ ಕೊಟ್ಟಿಂಜ ಸಂಯೋಜನೆ, ಶೇಖರ್ ಶೆಟ್ಟಿಗಾರ್ ಕಿನ್ನಿಗೋಳಿ ಅವರ ಪದ್ಯ ರಚನೆ, ಸಂಭಾಷಣೆ, ನಿರ್ದೇಶನದಲ್ಲಿ ಪೌರಾಣಿಕ ಪ್ರದರ್ಶನ ಯಶಸ್ಸು ಕಂಡಿತು.
ಹಾಡುಗಾರಿಕೆಯಲ್ಲಿ ಪ್ರಪುಲ್ಲಚಂದ್ರ ನೆಲ್ಯಾಡಿಯವರ ಸುಮಧುರ ಗಾಯನ, ಚೆಂಡೆಯಲ್ಲಿ ದಯಾನಂದ ಶೆಟ್ಟಿಗಾರ್, ಮದ್ದಲೆಯಲ್ಲಿ ಮಯೂರ ನಾಯ್ಕ್ ಮತ್ತು ಸವಿನಯ ಉತ್ತಮ ಹಿಮ್ಮೇಳದ ಸಾಥ್ ನೀಡಿದ್ದರು. ಪಾತ್ರ ವರ್ಗದಲ್ಲಿ ರುಕಾ¾ಂಗದನಾಗಿ ಅದಿತಿ ದಿನೇಶ ಶೆಟ್ಟಿ ಕೊಟ್ಟಿಂಜ, ಧರ್ಮಾಂಗದನಾಗಿ ಶರತ್ ಕುಮಾರ್, ಸುನೀತಿಯಾಗಿ ಆದಿತ್ಯ ದಿನೇಶ ಶೆಟ್ಟಿ ಕೊಟ್ಟಿಂಜ, ಭರತನಾಗಿ ಪ್ರತೀಕ್ ಜಯಾನಂದ ಪಕ್ಕಳ, ಸುಧರ್ಮನಾಗಿ ಯಶಸ್ವಿನಿ ಶೇಖರ್ ಪೂಜಾರಿ, ಮೋಹಿನಿಯಾಗಿ ಪ್ರಾಪ್ತಿ ಜಯಾನಂದ ಪಕ್ಕಳ ಮತ್ತಿತರರು ತಮ್ಮ ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರು ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದ್ದರು. ಯು. ಸದಾಶಿವ ಶೆಟ್ಟಿ, ಮಕ್ಕಳು ಮತ್ತು ಕುಟುಂಬಸ್ಥರು ಕಾರ್ಯಕ್ರಮ ಆಯೋಜಿಸಿದ್ದರು. ದೂರದ ದುಬಾಯಿಯಿಂದ ಬಂದ ಪುಟಾಣಿಗಳು ತಮ್ಮ ಪ್ರಬುದ್ದ ಅಭಿನಯ, ಸ್ಪಷ್ಟ ಸಂಭಾಷಣೆಯಿಂದ ಭರವಸೆ ಮೂಡಿಸಿದ್ದಾರೆ. ಮೇ 27 ರಂದು ಮಂಗಳೂರು ಅಡ್ಯಾರ್ ಗಾರ್ಡನಿನಲ್ಲಿ ನಡೆದ “ಪಟ್ಲ ಸಂಭ್ರಮ 2018’ರಲ್ಲೂ ಪಟ್ಲ ಸತೀಶ್ ಶೆಟ್ಟಿ ಹಾಡುಗಾರಿಕೆಯಲ್ಲಿ ಇದೇ ಪ್ರಸಂಗ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟು ಸಹಸ್ರಾರು ಕಲಾಭಿಮಾನಿಗಳ ಮನಸೂರೆಗೊಂಡಿತು.
ಸಾಂತೂರು ಶ್ರೀನಿವಾಸ ತಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.