ಸಂಗೀತ ದಾಹ ತಣಿಸಿದ ಸಂಗೀತೋತ್ಸವ 

Team Udayavani, Jan 12, 2018, 3:22 PM IST

12-47.jpg

ಮಂಗಳೂರಿನ ರಾಮಕೃಷ್ಣ ಮಠ ,ಭಾರತೀಯ ವಿದ್ಯಾ ಭವನ ಮತ್ತು ಸಂಗೀತ ಪರಿಷತ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜರಗಿದ “ಸಂಗೀತೋತ್ಸವ -2017′ ಆಸಕ್ತರ ಸಂಗೀತ ದಾಹ ತಣಿಸುವಲ್ಲಿ ಯಶಸ್ವಿಯಾಯಿತು.

ಮೊದಲ ದಿನ ಎನ್‌.ಜೆ. ನಂದಿನಿಯವರು ಕಾಂಬೋಜಿ ಅಟತಾಳ ವರ್ಣವನ್ನು ಆರಂಭಿಸಿ ತೋಡಿ ರಾಗದ ಕಾರ್ತಿಕೇಯ ಗಾಂಗೇಯ ತನಯ ಕೃತಿಯಲ್ಲಿ ಶೋತೃಗಳನ್ನು ಸೆರೆ ಹಿಡಿದರು.ಕನ್ನಡ ರಾಗದಲ್ಲಿ ನಿನ್ನಾಡನೇ ನೀರಾಜಾಕ್ಷಿ, ಅಹಿರಿ ರಾಗದ ಮಾಯಮ್ಮಾ, ಜಯಂತಿ ಶ್ರೀ ರಾಗದ ಮರುಗೇಲರಾ, ಕೇದಾರಗೌಳದ ಸರಗುಣ ಪಾಲಿಂಪ, ಪಶುಪತಿಪ್ರಿಯ ರಾಗದಲ್ಲಿ ಶರವಣ ಭವ ಕೀರ್ತನೆಗಳ ಪ್ರಸ್ತುತಿಗಳನ್ನು ನಿರೂಪಿಸಿದರು.

ಹಂಸಾನಂದಿ ರಾಗ, ತಾನ, ಪಲ್ಲವಿ ಈ ಪ್ರಸ್ತುತಿಯಲ್ಲಿ ಗೃಹಬೇಧ (ಹಿಂದೋಳ ರಾಗದಲ್ಲಿ) ,ಬೆಹಾಗ್‌ ರಾಗದ ಸಾಗರವಿಭೋ ಮತ್ತು ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು. ವಯಲಿನ್‌ನಲ್ಲಿ ಪಪ್ಪು ಜ್ಞಾನದೇವ್‌, ಮೃದಂಗದಲ್ಲಿ ಬಾಲಕೃಷ್ಣ ಕಾಮತ್‌, ಮೋರ್ಸಿಂಗ್‌ನಲ್ಲಿ ಪಯ್ಯನೂರು ಗೋವಿಂದ ಪ್ರಸಾದ್‌ ಸಹಕಾರ ನೀಡಿದರು.

ಎರಡನೇ ದಿನ ವಿನಯ ಎಸ್‌.ಆರ್‌. ಸರಸುಡ ಸಾವೇರಿ ವರ್ಣದೊಂದಿಗೆ ಕಛೇರಿ ಆರಂಭಿಸಿದರು. ಸ್ವಾಮಿನಾಥ ನಾಟ ರಾಗದಲ್ಲಿ ಸ್ವರ ಪ್ರಸ್ತಾರದ ಬಳಕೆ ಚೆನ್ನಾಗಿತ್ತು. ಆನಂದ ಭೈರವಿಯ ಮರಿವೇರೆಗತಿ ಎವ್ವರಮ್ಮಾ, ಕಮಲಾ ಮನೋಹರಿಯಲ್ಲಿ ಕಂಜದಳಾಯತಾಕ್ಷಿ ಕೃತಿಗಳ ಬಳಿಕ ಪ್ರಧಾನ ರಾಗದಲ್ಲಿ ಸಿಂಹೇಂದ್ರ ಮಧ್ಯಮ ರಾಮಾ-ರಾಮಾ ಗುಣಸೀಮಾ ರಚನೆಯನ್ನು ಆಲಾಪನೆ, ಸ್ವರ ಪ್ರಸ್ತಾರದೊಂದಿಗೆ ಪ್ರಸ್ತುತಪಡಿಸಿದರು. ಪಕ್ಕವಾದ್ಯದಲ್ಲಿ ಮತ್ತೂರು ಆರ್‌. ಶ್ರೀ ನಿಧಿಯವರು,ಮೃದಂಗದಲ್ಲಿ ತುಮಕೂರು ಬಿ. ರವಿಶಂಕರ್‌, ಘಟಂನಲ್ಲಿ ಕೊಟ್ಟಾಯಂ ಉನ್ನಿಕೃಷ್ಣನ್‌ ಸಹಕಾರ ನೀಡಿದರು.

 ಮೂರನೇ ದಿನ ಐಶ್ವರ್ಯಾ ವಿದ್ಯಾರಘುನಾಥ್‌ ಕಛೇರಿ ನಡೆಯಿತು. ಚಲಮೇಲ ನಾಟಕುರುಂಜಿ ವರ್ಣದೊಂದಿಗೆ, ತುಳಸಿದಳ ಮಾಯಾಮಾಳವಗೌಳ ರಾಗದ ರೂಪಕತಾಳದ ಕೃತಿಯು ನೆರವಲ್‌, ಸ್ವರ ಪ್ರಸ್ತಾರದೊಂದಿಗೆ ಪ್ರಸ್ತುತಗೊಂಡಿತು.ಭುವಿನಿ ದಾಸುಡನೇ ಶ್ರೀರಂಜನಿ, ಮಾಯಮ್ಮ ಪಿಲಚಿತೇ ಅಹಿರಿ ರಾಗದಲ್ಲಿ ನಿರೂಪಣೆ ಚೆನ್ನಾಗಿತ್ತು. ನಾರದಮನಿ ವೆಡಲಿನ ಕಾಮವರ್ಧಿನಿ ರಾಗದ ನೆರವಲ್‌, ಸ್ವರಪ್ರಸ್ತಾರ ಚೆನ್ನಾಗಿ ಮೂಡಿಬಂತು. ಸರಸ ಸಾಮ ಬೇಧ ದಂಡ ಚತುರ ಕಾಪಿ ನಾರಾಯಣಿ ರಾಗದಲ್ಲಿ ಉತ್ತಮವಾಗಿತ್ತು. ಶಂಖರಾಭರಣ ರಾಗವನ್ನು ಪ್ರಧಾನವಾಗಿ ಎತ್ತಿಕೊಂಡು ಅಕ್ಷಯಲಿಂಗ ವಿಭೋಕೃತಿಯನ್ನು ನಿರ್ವಹಿಸಿದರು. 

ಮುಂದೆ ಕಾನಡ ರಾಗ – ತಾನ – ಪಲ್ಲವಿ. ಪಾಲಿಂಚು…ಶ್ರೀರಾಮಚಂದ್ರಾ ನನ್ನು ಪಾಲಿಂಚು… ಖಂಡ ತ್ರಿಪುಟದಲ್ಲಿ ಸ್ವರಪ್ರಸ್ತಾರ, ರಾಗಮಾಲಿಕೆ (ಮಂದಾರಿ, ಆನಂದಭೈರವಿ ಸುರುಡಿ)ಉತ್ತಮವಾಗಿತ್ತು. ದೇವಕಿ ನಂದನ ಮಾಂಡ್‌ ರಾಗದ ದೇವರ ನಾಮದೊಂದಿಗೆ ಕಛೇರಿಯನ್ನು ಮುಕ್ತಾಯಗೊಳಿಸಿದರು. ವಯಲಿನ್‌ನಲ್ಲಿ ನಳಿನಾ ಮೋಹನ್‌ ಮತ್ತು ಮೃದಂಗದಲ್ಲಿ ಕುಂಭಕೋಣಂ ಸ್ವಾಮಿನಾಥನ್‌ ಸಹಕಾರ ನೀಡಿದರು.

ನಾಲ್ಕನೇ ದಿನ ಚಂದನ್‌ಕುಮಾರ್‌ ಅವರ ಕೊಳಲು ವಾದನ ಕಛೇರಿ ನಡೆಯಿತು.ಅವರು ನಾಟಕುರುಂಜ ಶರ್ಣದೊಂದಿಗೆ ಕಛೇರಿಯನ್ನು ಆರಂಭಿಸಿದರು. ನಾಟ ರಾಗದಲ್ಲಿ ಮಹಾಗಣಪತಿಂ, ದ್ವಿಜಾವಂತಿ ರಾಗದಲ್ಲಿ ಅಖೀಲಾಂಡೇಶ್ವರಿ, ಕುಂತಲವರಾಳಿ ರಾಗದಲ್ಲಿ ಬೋಗೀಂದ್ರ ಶಾಹಿನಂ, ಬೃಂದಾವನ ಸಾರಂಗದಲ್ಲಿ ಕಮಲಾಸ್ತಕುಲ ಕೀರ್ತನೆ ,ಬಿಂದುಮಾಲಿನಿಯಲ್ಲಿ ಎಂತ ಮಧ್ದೋ ಉತ್ತಮವಾಗಿತ್ತು. ಮತ್ತೂರು ಆರ್‌. ಶ್ರೀನಿಧಿ ವಯಲಿನ್‌ನಲ್ಲಿ ,ಅರ್ಜುನ್‌ ಕುಮಾರ್‌ ಮೃದಂಗದಲ್ಲಿ ಹಾಗೂ ಗಿರಿಧರ್‌ ಉಡುಪ ಘಟಂನಲ್ಲಿ ಸಹಕರಿಸಿದರು.

ಕೊನೆಯ ದಿನ ಅಭಿಷೇಕ್‌ ರಘುರಾಂ ಕಛೇರಿ ನೀಡಿದರು. ಪಂಚರತ್ನದಂತಹ ವಿಶಿಷ್ಟ ರಚನೆಗಳನ್ನು ಮನೋಧರ್ಮಕ್ಕೆ ಅನುಗುಣವಾಗುವ ಕೃತಿಗಳ ರೂಪದಲ್ಲಿ ಹಾಡಲು ಸಾಧ್ಯವೇ ಎನ್ನುವ ಪ್ರಯತ್ನವನ್ನು ಅವರು ಮಾಡಿ ಯಶಸ್ವಿಯಾಗಿದ್ದಾರೆ. 

ನವರಾಗಮಾಲಿಕೆಯಲ್ಲಿ ವಲಚಿ ,ವರ್ಣ, ನಾಟ ರಾಗದಲ್ಲಿ ನಿನ್ನೇ ಭಜನಾ, ದೇವಾಮೃತ ವರ್ಷಿಣಿ ರಾಗದಲ್ಲಿ ಎವರನೀ , ಕಲ್ಯಾಣಿ ರಾಗದಲ್ಲಿ ಅಮ್ಮ ದಾನಮ್ಮ ಉತ್ತಮ ಪ್ರಸ್ತುತಿಯಾಗಿತ್ತು. ರಂಜನಿ ಮಾಲದಲ್ಲಿ ರಂಜನಿ ಮೃದುಪಂಕಜಲೋಚನಿ ಕೃತಿಯಲ್ಲಿ ಅಭಿಷೇಕ್‌ ಉತ್ತಮ ಕೆಲಸ ಮಾಡಿದರು. ಖಮಾಚ್‌ ರಾಗದಲ್ಲಿ ರಾಮಜೂಟಿ ಹಾಗೂ ಕೆಲವು ದೇವರನಾಮಗಳ ಪ್ರಸ್ತುತಿಗಳೊಂದಿಗೆ ಕಛೇರಿ ಸಂಪನ್ನಗೊಂಡಿತು. ವಿಠಲ್‌ ರಂಗನ್‌ ವಯಲಿನ್‌ ನುಡಿಸಿದರೆ, ಅರ್ಜುನ್‌ ಕುಮಾರ್‌ ಹಾಗೂ ಗಿರಿಧರ್‌ ಉಡುಪ ಮೃದಂಗ, ಘಟಂನಲ್ಲಿ ಸಹಕರಿಸಿದರು.

ಈ ಉತ್ಸವದ ಕಿರಿಯರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀಶ ಪಿ. ಆರ್‌. ಖರಹರಪ್ರಿಯ ರಾಗದಲ್ಲಿ ಪಕ್ಕಲ ನಿಲಬಡಿ ಪ್ರಸ್ತುತಪಡಿಸಿದರು. ಧನಶ್ರೀ ಶಬರಾಯ ವಯಲಿನ್‌ ಸೋಲೋ ವಾದನದಲ್ಲಿ ಮಂದಾರಿ ರಾಗದ ವರ್ಣ, ವರವಲ್ಲಭ ಬೇಗಡೆ ರಾಗದಲ್ಲಿ ಶ್ರೀ ಗುರುಗುಹ ಶುದ್ಧ ಸಾವೇರಿ ರಾಗದಲ್ಲಿ, ಬಿರಾನವಲಿಚ್ಚಿ ಕಲ್ಯಾಣಿ ರಾಗದಲ್ಲಿ ವೆಂಕಟಾಚಲನಿಲಯಂ ಸಿಂಧುಭೈರವಿ ರಾಗದಲ್ಲಿ ಪ್ರಸ್ತುತಪಡಿಸಿದರು.

ರಕ್ಷಿತಾ ರಮೇಶ್‌ ವೀಣಾ ವಾದನದಲ್ಲಿ ಭೈರವಿ ರಾಗದ ತನಯುನಿ ಬ್ರೋವ ಉತ್ತಮವಾಗಿ ಮೂಡಿಬಂತು. ನಿಕ್ಷಿತ್‌ ಟಿ. ಪುತ್ತೂರು ಮೃದಂಗದಲ್ಲಿ, ಕಲಾಮಂಡಲ ಶೈಜು ಘಟಂನಲ್ಲಿ ಸಹಕರಿಸಿದರು.ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ದಿವ್ಯಶ್ರೀ ಈಗಾಗಲೇ ಕಛೇರಿಯ ಮಟ್ಟಕ್ಕೆ ಬೆಳೆದ ಪ್ರತಿಭಾವಂತೆ. 

ರಸಿಕ 

ಟಾಪ್ ನ್ಯೂಸ್

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.