ಹಿತಮಿತ‌ ನೀಲಾ ಸಂಗೀತ ಮನೋಧರ್ಮ

Team Udayavani, Aug 23, 2019, 5:00 AM IST

8

ರಂಜನಿ ಮೆಮೋರಿಯಲ್‌ ಟ್ರಸ್ಟ್‌ ಉಡುಪಿ ಇದರ ಅಶ್ರಯದಲ್ಲಿ ಲತಾಂಗಿಯಲ್ಲಿ ಜುಲೈ ತಿಂಗಳ ಕಾರ್ಯಕ್ರಮವಾಗಿ ವಿ| ನೀಲಾ ರಾಮ್‌ಗೊಪಾಲ್‌ ಅವರ ಕಛೇರಿಯನ್ನು ಆಯೋಜಿಸಲಾಗಿತ್ತು. 84ರ ಹರೆಯದ ನೀಲಾ ಅವರ ಸಂಗೀತದಲ್ಲಿ ರಾಗಾನುಭವವು ಸಾಣೆಗೆ ಹಿಡಿದಂತೆ ಒಪ್ಪವಾಗಿ ನುಣುಪಾಗಿ ಹೊರಬರುತ್ತದೆ. ಕಲ್ಪಿತ ಸಂಗೀತದ ಭಾಗಗಳೂ ಕೂಡ ಮನೋಧರ್ಮದಿಂದ ಹೊಳೆಯುತ್ತವೆ. ಕೇವಲ ಅಕಾರಗಳ ಓಡಾಟದ ಕಸರತ್ತು ಇವರ ಸಂಗೀತದಲ್ಲಿಲ್ಲ. ಖಚಿತವಾದ ರಾಗರೂಪ, ಘನನಯ, ನಿಲುಗಡೆ ಮತ್ತು ಶೃಂಗಾರದ ಶಾಂತತೆ ನೀಲಾ ಮಾಮಿಯವರ ಸಂಗೀತದ ತುರುಫ್. ಅವರು ಆರಿಸಿಕೊಂಡ ಅಷ್ಟೂ ಆಯ್ಕೆಗಳು ತೂಕದವುಗಳು. ಶಿವತ್ರಯ ಮಹಾಗಣಪತಿ ಎಂಬ ನಾಟ ರಾಗದ ಒಂದು ರಚನೆಯಲ್ಲಿ ನಾಟ ರಾಗದ ಪೂರ್ಣ ಕಲ್ಪನೆ ಮತ್ತು ಸ್ಥಾಪನೆಯಿದೆ. ತಪ್ಪಗನೆವಚ್ಚುನಾ ಎಂಬ ರೂಪಕತಾಳದ ತ್ಯಾಗರಾಜರ ಶುದ್ಧಬಂಗಾಲದ ಕೃತಿ ಅತ್ಯಂತ ಮುದ್ದಾಗಿ ಪ್ರಸ್ತುತಗೊಂಡಿತು.

ಪಂತುವರಾಳಿಯ ಮೈಸೂರು ವಾಸುದೇವಾಚಾರ್ಯರ ಶಂಕರಿ ನಿನ್ನೆ, ಅದೇಕೋ ಇತ್ತೀಚೆಗೆ ಕೇಳಿಬರುತ್ತಲಿಲ್ಲ. ಅದರ ಸೊಗಸಾದ ಸಾಹಿತ್ಯ ಮತ್ತು ನೆರವಲ್‌ ಜಾಗಗಳನ್ನು ನೀಲಾ ಮಾಮಿ ಸುಂದರವಾಗಿ ಹಿಡಿದಿದ್ದರು. ಆನಂದಭೈರವಿಯ ಓ ಜಗದಂಬಾದಲ್ಲಿ ಅವರು ನೀಡಿದ ವರಸೆಗಳಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆ ಇರದು. ನೀಲಾ ಮಾಮಿಯವರು ಎತ್ತಿಕೊಂಡ ಕಾಣಾ ಕಣ್‌ಕೋಟಿ ವೇಣು ಎಂಬ ಕಾಂಭೋದಿ ರಚನೆಯು ಪೂರ್ಣಪ್ರಮಾಣದಲ್ಲಿ ತನ್ನ ಬೆಡಗನ್ನು ಹೊಮ್ಮಿಸಿತು. ಮೇಲ್‌ಸ್ಥಾಯಿಯಲ್ಲಿ ಹೆಚ್ಚಿನ ಸಂಚಾರವನ್ನು ಬಯಸುವ ಕಾಂಭೋದಿ ನೀಲಾಮಾಮಿಗೆ ಒಂದಿಷ್ಟೂ ತ್ರಾಸ ನೀಡಲಿಲ್ಲ. ವಯಸ್ಸಿನ ಕಡೆಗೆ ಒಂದಿಷ್ಟೂ ಗಮನ ಕೊಡದೆ ಅನಾಯಾಸವಾಗಿ ಗಾಂಧಾರ, ಮಧ್ಯಮ, ಪಂಚಮಗಳನ್ನು ಚ್ಯುತಿ ಇಲ್ಲದೆ ಶ್ರುತಿಲೀನತೆಯ ಶುದ್ಧತೆಯೊಂದಿಗೆ ಅವರು ಹಾಡಿದ ಈ ಕಾಂಭೋದಿ ಕೇಳುವುದಕ್ಕೆ ಕೋಟಿ ಕಿವಿಗಳೇ ಬೇಕು. ಇವರೊಂದಿಗೆ ಸಮರ್ಪಕವಾಗಿ ವಯಲಿನ್‌ನಲ್ಲಿ ಅನುಸರಣೆಯನ್ನು ಹಾಗೂ ತನಿಯಾಗಿ ಸುಂದರ ಆಲಾಪನೆಯನ್ನು ಸಮರ್ಪಕವಾಗಿ ನೀಡಿದ ಚಾರುಲತಾ ರಾಮಾನುಜಂ ಅಭಿನಂದನಾರ್ಹರು. ಮನ್ನಾರ್‌ಕೋಯಿಲ್‌ ಬಾಲಾಜಿಯವರ ಮೃದಂಗವಾದನದಲ್ಲಿ ನೀಲಾ ಮಾಮಿಯವರ ಮನೋಧರ್ಮಕ್ಕೆ ಅನುರಣಿಯಾಗಿ ನಡೆಯಿಸಿಕೊಂಡು ಹೋದ ಗೆಯೆ ಇದ್ದಿತು. ಅವರು ಅನಾವಶ್ಯಕವಾದ ಉರಟು ನಡೆಗಳನ್ನು ಹಾಕಿ ನೀಲಾ ಮಾಮಿಯವರು ಹಾಡುವ ಸಾಹಿತ್ಯಾಕ್ಷರಗಳನ್ನು ನುಂಗಿ ಹಾಕಲಾರರು. ಬಾಲಾಜಿಯವರದು ಜಾಣ್ಮೆಯ ನಡೆ, ಲೆಕ್ಕಾಚಾರ, ನುಡಿಕಾರ. ಬಹಳ ಕಾಲ ಸ್ಮರಣೆಯಲ್ಲಿ ಉಳಿಯಬಲ್ಲ ಸಂಗೀತ ನೀಲಾ ಮಾಮಿಯವರದು.

– ಗಾನಮೂರ್ತಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.