ನಾದಸುಧಾ ಸಂಗೀತ ವಿದ್ಯಾಲಯ: ಶಾಸ್ತ್ರೀಯ ಸಂಗೀತ ಕಛೇರಿ
Team Udayavani, Feb 2, 2018, 3:18 PM IST
ನಾದಸುಧಾ ಸಂಗೀತ ವಿದ್ಯಾಲಯ (ರಿ.) ಮಂಗಳೂರು ಇದರ ಹನ್ನೊಂದನೇ ವಾರ್ಷಿಕೋತ್ಸವ ಹಾಗೂ ತ್ಯಾಗರಾಜ ಆರಾಧನೆಯ ಅಂಗವಾಗಿ ಇತ್ತೀಚೆಗೆ ವಿದ್ವಾನ್ ವಿಷ್ಣುದೇವ ನಂಬೂದಿರಿ,ಚೆನ್ನೈ ಅವರ ಶಾಸ್ತ್ರೀಯ ಸಂಗೀತ ಕಛೇರಿ ಜರಗಿತು. ಶಹನಾ ರಾಗದ ವರ್ಣದೊಂದಿಗೆ ಪ್ರಾರಂಭವಾದ ಕಛೇರಿ ಶ್ರೀ ಮಹಾಗಣಪತಿ ರವತು ಮಾಂ… ಗೌಳರಾಗದ ಸ್ತುತಿಯಿಂದ ರಂಜಿಸಿತು. ಮಾಕೇಲರಾ ಕೃತಿಯ ಬಳಿಕ ಉಪಪ್ರಧಾನ ರಾಗವಾಗಿ ಪಂತುವರಾಳಿಯ ಎನ್ನಗಾನು ರಾಮಭಜನ… ಮನಗೆದ್ದಿತು. ಪ್ರಧಾನ ರಾಗ ಭೈರವಿಯ ರಕ್ಷ ಬೆಟ್ಟರೆಯ ಆಲಾಪನೆ, ನೆರವಲ್ ಸ್ವರಕಲ್ಪನೆಯು ಅತೀತ ಎಡುಪ್ಪಿನೊಂದಿಗೆ ಮೂಡಿಬಂತು. ಆರಭಿ ರಾಗದ ದೇವರ ನಾಮದ ಅನಂತರ ಹಮೀರ್ ಕಲ್ಯಾಣಿ ರಾಗದಲ್ಲಿ ಮಾಯೇ ಸಮುದಾಯೇ ಶಿವಜಾಯೇ ಪಾಹಿಮಾಂ… ಸಾಹಿತ್ಯದ ಮಿಶ್ರ ತ್ರಿಪುಟ ಗತಿಯ ರಾಗತಾನ ಪಲ್ಲವಿಯನ್ನು ರಾಗಮಾಲಿಕೆಯೊಂದಿಗೆ ಹಾಡಿದರು. ಗೋವಿಂದ ನಿನ್ನ ನಾಮವೇ ಚಂದ… ದೇವರನಾಮ ಜನಸಮ್ಮೊàಹಿನಿಯಲ್ಲಿ ಹಾಗೂ ಮೋಹನ ಕಲ್ಯಾಣಿಯ ತಕ ತಝಣ ಧೀಂತ… ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು. ವಯಲಿನ್‌ನಲ್ಲಿ ವಿದ್ವಾನ್ ಗಣರಾಜ ಕಾರ್ಲೆ ಮತ್ತು ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಿದರು.
ಇದಕ್ಕೂ ಮೊದಲು ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ಹಾಗೂ ಶಿಕ್ಷಕಿ ವಿದುಷಿ ಅರುಣಾ ಕೆ.ಎಸ್.ಭಟ್ ನೇತೃತ್ವದಲ್ಲಿ ತ್ಯಾಗರಾಜ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನೆರವೇರಿತು. ವಿದ್ವಾನ್ ಶ್ರೀಧರ ರೈ ಕಾಸರಗೋಡು ಮೃದಂಗದಲ್ಲಿ ಮತ್ತು ಸುಮೇಧ ಅಮೈ ವಯಲಿನ್‌ನಲ್ಲಿ ಸಹಕರಿಸಿದರು.
ಶ್ರೋತೃ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.