ಒಡ್ಡೋಲಗ, ಪೂರ್ವರಂಗಗಳ ರಸರಂಗ ಪರ್ವ
Team Udayavani, Jul 27, 2018, 6:00 AM IST
ಯಕ್ಷಗಾನದ ಪ್ರಸಂಗ ಪ್ರಾರಂಭವಾಗುವ ಪೂರ್ವಭಾಗದ ರಂಗ ವಿಧಿಗಳ ಸಾಂಪ್ರದಾಯಿಕ ವಿಭಾಗವೇ ರಂಸರಂಗ ಪರ್ವ ಅಥವಾ ಪೂರ್ವರಂಗ. ಯಕ್ಷದೇಗುಲದ ಪುಟ್ಟ, ಪುಟ್ಟ ಮಕ್ಕಳು ಬನಶಂಕರಿ 2ನೇ ಹಂತದಲ್ಲಿರುವ ಅವರ್ ಸ್ಕೂಲ್ ಸಭಾಂಗಣದಲ್ಲಿ ಧೀರ ವಯ್ನಾರೋ…ಬಹುಪರಾಕ್, ಕಸ್ತೂರಿ ಕೋಲಾಹಲೋ ….ಬಹುಪರಾಕ್, ಸ್ವಾಮಿಪರಾಕ್…. ದೇವ ಪರಾಕ್…ಹೀಗೆ ದೀವಟಿಗೆಯೊಂದಿಗೆ ಚೌಕಿಯಲ್ಲಿ ಗಣಪತಿ ಪೂಜೆ ಮುಗಿಸಿ, ಬಹು ಪರಾಕ್ ಹೇಳುತ್ತಾ ರಂಗದಲ್ಲಿ ದೀವಟಿಗೆ ಬೆಳಗಿಸುವುದರೊಂದಿಗೆ ಮಕ್ಕಳೇ ರಸರಂಗಪರ್ವದ ಉದ್ಘಾಟನೆಯನ್ನು ನೆರವೇರಿಸಿದರು.
ಕೆ. ಮೋಹನ್, ಬಾಲಕೃಷ್ಣ ಭಟ್ಟರ ಸಾರಥ್ಯದಲ್ಲಿ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ಕೋಟ ಸುದರ್ಶನ ಉರಾಳ ಸಂಯೋಜನೆಯಲ್ಲಿ, ಡಾ| ಪ್ರೀತಿ ಕೆ.ಮೋಹನ್, ನವೀನ್ ಕೋಟ ಇವರ ನಿರೂಪಣೆಯೊಂದಿಗೆ, ಕೋಡಂಗಿ, ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ, ರಾಜವೇಷದ ಒಡ್ಡೋಲಗ, ಪಾಂಡವರ ಒಡ್ಡೋಲಗ, ಶ್ರೀಕೃಷ್ಣನ ಒಡ್ಡೋಲಗ, ಬಣ್ಣದ ವೇಷದ ಒಡ್ಡೋಲಗ, ಯುದ್ಧಕುಣಿತ, ಪ್ರಯಾಣ ಕುಣಿತವನ್ನು ಲಂಬೋದರ ಹೆಗಡೆ, ಪ್ರಿಯಾಂಕ ಕೆ. ಮೋಹನ್, ಭಾಸ್ಕರ ಭಂಡಾರಿ, ಮಂಜುನಾಥ ನಾವಡರ ಹಿಮ್ಮೇಳದೊಂದಿಗೆ 30 ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.
ಯಾವುದೇ ಪ್ರಸಂಗವಿಲ್ಲದ ಬರೇ ಯಕ್ಷಗಾನದ ಪೂರ್ವರಂಗ, ವಿವಿಧ ಒಡ್ಡೋಲಗಗಳ ಅಪರೂಪದ ಯಕ್ಷದೇಗುಲದ ಈ ಪ್ರದರ್ಶನವು ಪ್ರಥಮ ಬಾರಿಗೆ ಪ್ರದರ್ಶನವಾಗಿ ಯಶಸ್ವಿಯಾಯಿತು.
ಕೋಟ ಸುದರ್ಶನ ಉರಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.