ತೆಂಕಬೈಲು ಭಾಗವತರಿಗೆ ಪದ್ಯಾಣ ಪ್ರಶಸ್ತಿ
Team Udayavani, Nov 23, 2018, 6:00 AM IST
ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರಿಗೆ ಈಗ ಎಪ್ಪತ್ತೆçದರ ಹರೆಯ. ಐದು ದಶಕಕ್ಕೂ ಮಿಕ್ಕಿದ ಕಲಾಯಾನದಲ್ಲಿ ಮಾಗಿದ ಅನುಭವ ಸಂಪತ್ತು. ಮೇಳ ತಿರುಗಾಟ ಹದಿನಾರು ವರುಷ. ಮಿಕ್ಕಂತೆ ಹವ್ಯಾಸಿ ರಂಗಕ್ಕೆ ಸಮರ್ಪಿತ.
ಸೋದರ ಮಾವಂದಿರಿಂದ ಮದ್ದಳೆ, ಭಾಗವತಿಕೆಗೆ ಶ್ರೀಕಾರ. ಗುರು ಮಾಂಬಾಡಿ ನಾರಾಯಣ ಭಾಗವತರಿಂದ ಶಿಲ್ಪಕ್ಕೆ ಆಕಾರ. ಯಾರದ್ದೇ ಪ್ರತಿಯಾಗದ ಭಾಗವತಿಕೆ. ಪ್ರತ್ಯೇಕವಾದ ತೆಂಕಬೈಲು ಮಟ್ಟಿನ ಜನಸ್ವೀಕೃತಿ.ಭಾಗವತರಾದ ಬಳಿಕ ಬದುಕಿಗೆ ಹೊಸ ತಿರುವು. ಕೂಟ, ಆಟಗಳಿಗೆ ಬೇಡಿಕೆ. ನಿಜಾರ್ಥದ ರಂಗನಿರ್ದೇಶಕನಾಗಿ ಬಿಡುವಿರದ ದುಡಿತ. ದಕ್ಷಾಧ್ವರ, ಕಂಸವಧೆ, ಕರ್ಣಪರ್ವ ಪ್ರಸಂಗಗಳು ಇಷ್ಟದವುಗಳು. ರಸಗಳೇ ಕುಣಿವ ಸೌಂದರ್ಯ. ಈ ಪ್ರಸಂಗಗಳಿದ್ದರೆ ಪದ್ಯ ಕೇಳಲೆಂದೇ ಬರುವ ಪ್ರೇಕ್ಷಕ ವರ್ಗ. ಪದ್ಯ ಮುಗಿದಾಗ ವೇಷಧಾರಿ ಅರ್ಥ ಹೇಳಬೇಕಾಗಿಲ್ಲ. ಆ ಸನ್ನಿವೇಶವೇ ಅರ್ಥ ಹೇಳುತ್ತಿತ್ತು! “ಪುತ್ತೂರಿನ ದಭೆìಯಲ್ಲಿ ಜರುಗಿದ ದûಾಧ್ವರ ಪ್ರಸಂಗದ ಆಟದಲ್ಲಿ ನೋಟಿನ ಮಾಲೆ ಹಾಕಿದ್ದರು’ ಎನ್ನುವಾಗ ಶಾಸ್ತ್ರಿಗಳಿಗೆ ನಾಚಿಕೆ! ಆ ನಾಚಿಕೆಯ ಸೊಗಸಿನಲ್ಲಿ ಆರ್ಧ ಶತಮಾನದ ಅನುಭವ ಇಣುಕುತ್ತಿತ್ತು. ಕಾಳಿಕಾಂಬ ಕ್ಷೇತ್ರ ಮಹಾತ್ಮೆ, ಏಕವೀರಚಕ್ರ ಪ್ರಸಂಗಗಳ ರಚಯಿತರು. ಹಲವಾರು ಮಂದಿ ಶಿಷ್ಯರನ್ನು ರೂಪಿಸಿದ ಗುರು. “ನನ್ನ ಶಿಷ್ಯಂದಿರು ವಿದ್ಯಾವಂತರು. ಅವರೆಲ್ಲಾ ಪೂರ್ಣಕಾಲಿಕ ಮೇಳದ ಕಲಾವಿದರಲ್ಲ. ಹಾಗಾಗಿಯೋ ಏನೋ ನಾನು ಹೆಚ್ಚು ಪಬ್ಲಿಕ್ ಇಲ್ಲ’ ಎಂದು ನಗುತ್ತಾ, “ಕಲಾವಿದನಾಗಬೇಕಾದರೆ ಮೇಳದ ತಿರುಗಾಟ ಮಾಡಲೇ ಬೇಕು’ ಎಂದರು.
ಕಾಲದ ಓಟದಲ್ಲಿ ರಂಗವು ಪಲ್ಲಟದೆಡೆಗೆ ಹೊರಳಿದೆ. ಈ ವಿಚಾರವನ್ನು ಶಾಸ್ತ್ರಿಗಳ ಗಮನಕ್ಕೆ ತಂದಾಗ ಒಂದೆರಡು ವಾಕ್ಯದಲ್ಲಿ ವರ್ತಮಾನವನ್ನು ಕಟ್ಟಿಕೊಟ್ಟರು “ಒಂದೆರಡು ದಶಕಗಳ ಹಿಂದೆ ಭಾಗವತನಿಗೆ ಸಂಭಾವನೆ ಸಿಗದಿದ್ದರೂ ರಂಗತೃಪ್ತಿಯಿತ್ತು. ಈಗ ಸಂಭಾವನೆಯ ಮೊತ್ತ ಜಾಸ್ತಿಯಿದೆ. ರಂಗತೃಪ್ತಿಯು ಅರ್ಥ ಕಳೆದುಕೊಂಡಿದೆ.’
ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ನೂರಾರು ಸಮ್ಮಾನಗಳಿಂದ ಪುರಸ್ಕೃತರು. ಪ್ರಶಸ್ತಿಗಳಿಂದ ಮಾನಿತರು. ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಡ ಅಭಿಮಾನಿ ಬಳಗವಿದೆ. ಈಗವರಿಗೆ ಪ್ರತಿಷ್ಠಿತ ಪದ್ಯಾಣ ಪ್ರಶಸ್ತಿಯ ಬಾಗಿನ. 2018 ನವಂಬರ್ 26ರಂದು ಅಪರಾಹ್ನ ಬಂಟ್ವಾಳ ತಾಲೂಕಿನ ಕರೋಪಾಡಿಯ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ.
ನಾ ಕಾರಂತ ಪೆರಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.