ನಾದಸುಖದ ಪಲ್ಲವ ರಾಗಧನ – ಸಂಗೀತೋತ್ಸವ


Team Udayavani, Mar 3, 2017, 3:50 AM IST

01-KALA-1.jpg

ಯಾವುದೇ ಕಲೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಆಗಿಂದಾಗ ಮಾಡಲಾಗುವ ಸೃಜನಶೀಲ ಬದಲಾವಣೆಗಳು ಅಗತ್ಯವಾಗುತ್ತವೆ. ಈ ನಿಟ್ಟಿನಲ್ಲಿ ಸದಾ ನಾವೀನ್ಯವನ್ನೂ ಹೊಸ ಪ್ರಯೋಗಗಳನ್ನೂ ನಿರೀಕ್ಷಿಸುವ, ಸಂಗೀತ ರಸಿಕ ವರ್ಗಕ್ಕೆ ಸಂತಸವನ್ನು ನೀಡಿದವರು ಪುತ್ತೂರಿನ ಸುಚಿತ್ರಾ ಹೊಳ್ಳ!

ಫೆಬ್ರವರಿ 3, 4 ಮತ್ತು 5ರಂದು ಉಡುಪಿ ಎಂಜಿಎಂ  ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ “ರಾಗಧನ’ದ ವಾರ್ಷಿಕೋತ್ಸವದಲ್ಲಿ ಈ ವರ್ಷದ “ರಾಗಧನ ಪಲ್ಲವಿ’ ಪ್ರಶಸ್ತಿಯಿಂದ ಪುರಸ್ಕೃತರಾದವರು ಸುಚಿತ್ರಾ. ಪ್ರಶಸ್ತಿ ಪ್ರದಾನಾನಂತರ ಅವರು ನೀಡಿದ ಕಛೇರಿ ರೂಢಿಗತವಾದ ಹಾಡುಗಾರಿಕೆಗಳಿಗಿಂತ ಭಿನ್ನವೆನಿಸಿದ್ದು, ಸಂಪ್ರದಾಯವಾದಿಗಳ ಹುಬ್ಬೇರುವಂತೆ ಮಾಡಿದ್ದು ಅಷ್ಟೇ ಸತ್ಯ! ಸಾಮಾನ್ಯ ಅನುಕ್ರಮಣಿಕೆಯಾದ ವರ್ಣ, ಮಧ್ಯಮ, ವಿಳಂಬ ಕೃತಿಗಳು… ಮುಂತಾದ ವಿಂಗಡಣೆಗಳೇನೂ ಇಲ್ಲದೆ ನೇರವಾಗಿ ಎರಡು ಪಲ್ಲವಿಗಳನ್ನು ವಿಸ್ತರಿಸಲಾದದ್ದು ಕಛೇರಿಯ ವೈಶಿಷ್ಟ!

ಬಹುದಾರಿ (ಭಜಮಾನಸ) ಕೃತಿ, ಹಿಂದೋಳ (ಹಣ್ಣು ಬಂದಿದೆ) ದೇವರನಾಮ ಮತ್ತು ಕದನ ಕುತೂಹಲದ ಚುರುಕಾದ ತಿಲ್ಲಾನ! ಇವುಗಳನ್ನು ಹೊರತುಪಡಿಸಿದರೆ ಕಛೇರಿಯ ಸಮಯ ಅಪೂರ್ವವಾದ ರಾಗಗಳು ಮತ್ತು ಕ್ಲಿಷ್ಟವಾದ ತಾಳಗಳಿಂದ ನೇಯಲಾಗಿದ್ದ ಎರಡು ಪಲ್ಲವಿಗಳಿಗೇ ಮೀಸಲಿರಿಸಲಾಯಿತು. ಜನರಂಜನಿಯ ಆಲಾಪನೆ, ತಾನಂ ಅನಂತರ ಸಂಕೀರ್ಣ ಜಾತಿ ಝಂಪೆ ತಾಳದಲ್ಲಿ (ಘಾತಗಳು ಖಂಡ ನಡೆಯಲ್ಲಿ) ಕ್ರಮಪ್ರಕಾರವಾಗಿ ಪಲ್ಲವಿಯನ್ನು ವಿದ್ವತೂ³ರ್ಣವಾಗಿ ನಿರೂಪಿಸಿದ ಕಲಾವಿದೆ ಎರಡನೆಯದಾಗಿ ವಕುಳಾಭರಣವನ್ನು ಆಯ್ದುಕೊಂಡರು. ಈ ರಾಗವನ್ನು ಗ್ರಹಭೇದಗಳ ಸಹಿತ, ದೋಷರಹಿತವಾಗಿ ವಿಸ್ತರಿಸಿದ ಗಾಯಕಿ “ತಾನಂ’ ಅನಂತರ ಚತುರಸ್ರ ಜಾತಿ ತ್ರಿಪುಟ ತಾಳದಲ್ಲಿ ಪಲ್ಲವಿಯನ್ನು ಪ್ರಸ್ತುತಪಡಿಸಿದರು. ಈ ತಾಳದ ಲಘುವಿನ ನಾಲ್ಕು ಘಾತಗಳನ್ನು ಕ್ರಮವಾಗಿ ತಿಸ್ರ, ಖಂಡ, ಮಿಶ್ರ, ಸಂಕೀರ್ಣ ನಡೆಗಳಲ್ಲೂ ಎರಡು ಧ್ರುತದ ನಾಲ್ಕು ಘಾತಗಳನ್ನು ಚತುರಸ್ರ ನಡೆಯಲ್ಲೂ ನಿರೂಪಿಸಿದ್ದು ಲಯಪ್ರಿಯರಿಗೆ ಸವಾಲಿನ ಸಂತಸವನ್ನು ನೀಡಿತು. ಪಲ್ಲವಿಯನ್ನು ಅನುಲೋಮ, ಪ್ರತಿಲೋಮಗಳೊಂದಿಗೆ ಮೂರು ಕಾಲಗಳಲ್ಲಿ ಹಾಡಿ, ಎರಡು ಬೇರೆ ಬೇರೆ ಎಡುಪ್ಪುಗಳಿಗೆ ಸ್ವರ ಕಲ್ಪನೆ ನೀಡಿದರು. ಮುಂದೆ ಬೆಹಾಗ್‌, ಬೃಂದಾವನಿ, ರೇವತಿ, ರಂಜನಿ ರಾಗಗಳಲ್ಲಿ ಸ್ವರ ವಿನಿಕೆಗಳನ್ನು ನೀಡಿ, ಮರಳಿ ಆವರ್ತಕ್ಕೊಂದು ರಾಗದಂತೆ ಹಾಡುತ್ತ, ಪ್ರಧಾನ ರಾಗವನ್ನು ಕೂಡಿಕೊಂಡ ಪರಿ ಹರ್ಷದಾಯಕವಾಗಿತ್ತು. 

ಎಚ್ಚರಿಕೆಯಿಂದ ನಿರ್ವಹಿಸಿದ ಲೆಕ್ಕಾಚಾರದ ತಂತ್ರಗಾರಿಕೆ ಯಿಂದಾಗಿ ರಾಗ ಲಾಲಿತ್ಯ ತುಸು ಕುಂಠಿತವಾಯಿತೇನೋ ಅನಿಸಿತು.
ಉತ್ಸಾಹಪೂರ್ಣವಾಗಿ ಪಿಟೀಲಿನಲ್ಲಿ ಸಹಕರಿಸಿದ ಗಣೇಶ್‌ಕುಮಾರ್‌, ಅಂತೆಯೇ ಗಾಯಕಿಯನ್ನು ಸಮರ್ಥವಾಗಿ ಅನುಸರಿಸುತ್ತ, ತನಿಯಲ್ಲೂ ಮಿಂಚಿದ ಎ.ಎಸ್‌.ಎನ್‌. ಸ್ವಾಮಿ (ಮೃದಂಗ) ಮತ್ತು ಸುನಾದ ಆನೂರು (ಖಂಜೀರ) ಈ ಕಛೇರಿಯ ಯಶೋಭಾಗಿಗಳಾಗಿದ್ದಾರೆ.

ಫೆ.3ರಂದು ಕಛೇರಿಯನ್ನು ನಡೆಸಿದವರು ವಿನಯ ಸಿ.ಆರ್‌. ತೋಡಿ ವರ್ಣ, ಹಂಸಧ್ವನಿ (ವಾತಾಪಿ), ಬಿಂದುಮಾಲಿನಿ (ಎಂತ ಮುಧ್ದೋ), ಸಾಳಗ ಭೈರವಿ (ಪದವಿನಿ) ಕೃತಿಗಳಲ್ಲದೆ ಪ್ರಧಾನವಾಗಿ ಪಂತುವರಾಳಿ (ಸುಂದರ ತರ ದೇಹಂ) ಮತ್ತು ಶಂಕರಾಭರಣ (ಅಕ್ಷಯಲಿಂಗ) ರಾಗಗಳನ್ನು ಆಲಾಪನೆ, ನೆರವಲ್‌ ಮತ್ತು ಸ್ವರವಿನಿಕೆಗಳೊಂದಿಗೆ ನಿರೂಪಿಸಲಾಯಿತು.

ಒಳ್ಳೆಯ ಗಂಭೀರವಾದ ಶಾರೀರವಾದರೂ ಗಂಟಲು ಸರಿಯಾಗಿ ಸಹಕರಿಸದೆ ಹೋದದ್ದು ಬೇಸರವೆನಿಸಿತು. ಪ್ರೋತ್ಸಾಹ ದಾಯಕವಾಗಿ ವಯಲಿನ್‌ನಲ್ಲಿ ಸಹಕರಿಸಿದ ವೇಣುಗೋಪಾಲ ಶಾನುಭೋಗ್‌, ಅಂತೆಯೇ ಒಳ್ಳೆಯ ತಿಳಿವಳಿಕೆಯಿಂದ ಮೃದಂಗ ನುಡಿಸಿದ ನಿಕ್ಷಿತ್‌ ಪುತ್ತೂರು ಅಭಿನಂದನೀಯರು.

ಫೆ.5ರಂದು ಬೆಳಿಗ್ಗೆ ಧಾರವಾಡದ ಕು| ಶಾಲಿನಿ ಮಿರಜ್‌ಕರ್‌ ಅವರ ಸುಶ್ರಾವ್ಯವಾದ ಹಿಂದುಸ್ತಾನಿ ಕಛೇರಿ ನಡೆಯಿತು. ಮೂರು ಸಪ್ತಕಗಳಲ್ಲೂ ಸುಖವಾಗಿ ಸಂಚರಿಸುವ ಇಂಪಾದ ಕಂಠಸಿರಿಯ ಗಾಯಕಿ ಸುಮಾರು ಎರಡು ತಾಸು ಕಾಲ ತನ್ನ ಗಾನಲಹರಿಯಿಂದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.

ರಾಗ ನಟ ಭೈರವ್‌, ಪ್ರತಿಯೊಂದು ಸ್ವರ ಮೆಟ್ಟಿಲಲ್ಲೂ ನಿಂತು ನಿಂತು ಸಾಗಿದ ರಾಗವಿಸ್ತಾರ! ವಿಳಂಬ (ತೋಹೆ ಆರಾಧನಾ) ಮಧ್ಯಮ (ಜಾಜಾರೆ…) ಧ್ರುತ (ಉನಬಿನ್‌…) ಈ ಮೂರು ಕಾಲಗಳಲ್ಲೂ “ತಾನ್‌’ಗಳಲ್ಲಿ ಒಡಮೂಡಿದ ರಾಗಲಕ್ಷಣ, ಧ್ರುತ ಗತಿಯಲ್ಲೂ ಮುತ್ತಿನ ಮಣಿಗಳಂತೆ ಮೂಡಿಬಂದ ಸ್ವರ ಸ್ಥಾನಗಳ ನಿಖರತೆ ರಸಿಕರ ಮೆಚ್ಚುಗೆ ಪಡೆಯಿತು. ಜೋನ್‌ಪುರಿ ಪ್ರಸ್ತುತಿಯೂ ಪಾಂಡಿತ್ಯ ಮತ್ತು ಮಾಧುರ್ಯದ ಹಿತವಾದ ನೇಯ್ಗೆಗಳಿಂದ ಅಲಂಕೃತವಾಗಿತ್ತು. ಸರಸ್ವತಿ ರಾಗದ ದೇವರನಾಮದೊಂದಿಗೆ ಕಛೇರಿ ಯಶಸ್ವಿಯಾಗಿ ಕೊನೆಗೊಂಡಿತು. 

ಇವರಿಗೆ ಶಶಿಕಿರಣ್‌ ಹಾರ್ಮೋನಿಯಂನಲ್ಲೂ ಶ್ರೀಧರ ಮಾಂಡ್ರೆ ತಬಲಾದಲ್ಲೂ ಉತ್ತಮವಾದ ಸಾಥ್‌ ನೀಡಿದ್ದಾರೆ.
ಏರು ಹಗಲಿನಲ್ಲಿ ವಯಲಿನ್‌ ದ್ವಂದ್ವ ವಾದನವನ್ನು ನಡೆಸಿಕೊಟ್ಟ ಅವಳಿ ಬಾಲಕಿಯರಾದ ಕು| ಅದಿತಿ ಮತ್ತು ಕು| ಅರುಂಧತಿ ಅವರದು ಒಳ್ಳೆಯ ಪಾಠಾಂತರ, ಆತ್ಮವಿಶ್ವಾಸದ ಬೆರಳುಗಾರಿಕೆ, ಯಾವುದೇ ಪಿಸಿರಿಲ್ಲದ ಪ್ರೌಢವಾದ ನುಡಿಸಾಣಿಕೆ! ನವರಾಗ ಮಾಲಿಕಾ ವರ್ಣ, ಹಂಸಧ್ವನಿ (ವಾತಾಪಿ), ಬಹುದಾರಿ (ಭೊವಭಾರಮ), ಸಿಂಧು ಮಂದಾರಿ ರಾಗಗಳ ಮಧ್ಯಮ ಕಾಲ ಕೃತಿಗಳಲ್ಲದೆ, ಸಣ್ಣ ಆಲಾಪನೆಯನ್ನನುಸರಿಸಿದ ಆನಂದ ಭೈರವಿ (ಮರಿವೇರೆ ) ವಿಳಂಬ ಕಾಲದ ಕೃತಿ ತೂಕದ್ದಾಗಿದ್ದು, ಮಿತವಾಗಿ ಬಳಸಲಾದ ಅಂತರ ಗಾಂಧಾರ, ಕಾಕಲಿ ನಿಷಾಧಗಳು ರಾಗದ ಘನತೆಯನ್ನು ಎತ್ತಿ ಹಿಡಿದವು. ಅಮೃತ ವರ್ಷಿಣಿ (ಆನಂದಾಮೃತ) ಸೊಗಸಾದ ರಾಗವಿಸ್ತಾರ, ಚೊಕ್ಕವಾದ ಸ್ವರಕಲ್ಪನೆಗಳು, ಖಚಿತವಾಗಿ ಹೊಂದಿಕೊಂಡ ಮುಕ್ತಾಯಗಳಿಂದ ಶೋಭಿಸಿತು.

ನಿಕ್ಷಿತ್‌ ಪುತ್ತೂರು ಪ್ರೋತ್ಸಾಹದಾಯಕವಾದ ಮೃದಂಗ ಸಹವಾದನ ನೀಡಿದರು. ಕಾಪಿ ರಾಗದ ದೇವರನಾಮದೊಂದಿಗೆ ಕಛೇರಿ ಸಮಾಪನಗೊಂಡಾಗ ರಸಿಕರು ಮನದುಂಬಿ ಈ ಮಕ್ಕಳಿಗೆ ಶುಭ ಹಾರೈಸಿದರು.

ಇಳಿ ಹಗಲಿನಲ್ಲಿ ಪದ್ಮಾ ಸುಗವನಂ ಅವರು ನಡೆಸಿಕೊಟ್ಟ ಕಛೇರಿ ಒಂದು ಅವಿಸ್ಮರಣೀಯ ಅನುಭವವಾಗಿದ್ದು, ಉತ್ಸವದ ಕಛೇರಿಗಳ ಮಕುಟಮಣಿಯಂತೆ ವಿಜೃಂಭಿಸಿತು. ಇಷ್ಟಕ್ಕೂ ಅವರೇನೂ ಸ್ವರ ಚಮತ್ಕಾರಗಳಾಗಲಿ, ಆಧುನಿಕ ಕಸರತ್ತುಗಳಾಗಲಿ ಮಾಡಿರಲಿಲ್ಲವೆನ್ನುವುದು ಉಲ್ಲೇಖಾರ್ಹ! ಮುಖದಲ್ಲಿ ಮಾಸದ ನಗು, ಮುಕ್ತವಾದ, ಗತ್ತಿನಿಂದ ಕೂಡಿದ ಕಂಠಸಿರಿ, ಶ್ರೋತೃಗಳು ಮತ್ತು ಸಹ ಕಲಾವಿದರೊಂದಿಗೆ ಆತ್ಮೀಯ ಸಂವಹನ! ತ್ವರಿತಗತಿಯ ಬಿರ್ಕಾಗಳನ್ನೂ ಸೂಕ್ತವಾದಲ್ಲಿ ಮಾತ್ರ ಹಿತಮಿತವಾಗಿ ಬಳಸುತ್ತಾ ಹಾಡಿದ ಈ ಕಲಾವಿದೆ, ತಮ್ಮ ಶುದ್ಧ ಸಂಗೀತದಲ್ಲಿ ಪುನರುಕ್ತವಾಗದ ನೂರಾರು ಸಂಚಾರಗಳನ್ನು ಮೊಗೆದು ಕೊಟ್ಟು ಕೇಳುಗರಿಗೆ ಸಂತೋಷಾಶ್ಚರ್ಯಗಳನ್ನು ಉಂಟು ಮಾಡಿದರು.

ತ್ರಿಮೂರ್ತಿಗಳ ಕೃತಿಗಳನ್ನೇ ಆಯ್ದುಕೊಂಡ ಕಲಾವಿದೆ ಮಾಯಾಮಾಳವ (ತುಲಸೀದಳ ) ಕೃತಿಯನ್ನು ಸವಿಸ್ತಾರವಾದ ನೆರವಲ್‌, ಸ್ವರಗಳಿಂದ ಅಲಂಕರಿಸಿದರು. ಸುಂದರವಾದ ಸಂಗತಿಗಳೊಂದಿಗೆ ರಾಗದ ಎಲ್ಲ ಮಗ್ಗುಲುಗಳನ್ನೂ ಮೃದುವಾಗಿ ನೇವರಿಸಿದ ಆನಂದಭೈರವಿ (ಹಿಮಾಚಲತನಯೇ), ಅನಂತರ ಗಮಕಯುಕ್ತವಾಗಿ, ವಿಳಂಬ ಕಾಲದಲ್ಲಿ ಸರ್ವವಿಧವಾದ ಪೋಷಣೆಗಳನ್ನು ಪಡೆದ ಕೇದಾರ (ಆನಂದ ನಟನ ಪ್ರಕಾಶಂ), ಸಾಳಗ ಭೈರವಿ (ಪದವಿನಿ), ನಾಸಿಕ ಭೂಷಿಣಿ (ಶ್ರೀ ರಮಾ), ದೇಶ್‌ (ಈಶ ನಿನ್ನ ) ಪ್ರಸ್ತುತಿಗಳ ಆರೈಕೆ ಹೃದ್ಯವೆನಿಸಿತು. ಪ್ರಧಾನ ರಾಗಗಳು ಪೂರ್ವಿ ಕಲ್ಯಾಣ (ನಿನ್ನು ವಿನಾಗಮರಿ) ಮತ್ತು ತೋಡಿ (ಕದ್ದನು ವಾರಿಕಿ ). ಒಂದೊಂದೇ ಎಸಳುಗಳು ಬಿಡಿಸಿಕೊಳ್ಳುತ್ತಾ ಪರಿಮಳ ಬೀರುವ ಸುಮದಂತೆ ರಾಗವನ್ನು ಅರಳಿಸಿದ ಪರಿ ಅನನ್ಯವಾಗಿತ್ತು. ನೆರವಲ್‌ ಮತ್ತು ಕಲ್ಪನಾಸ್ವರಗಳೂ ಅಷ್ಟೇ ಸಂತಸ ನೀಡಿದವು. ನಳಿನಾ ಮೋಹನ್‌ ಅವರ ವಯಲಿನ್‌ ವಾದನ ಹೊಂದಾಣಿಕೆಯಿಂದ ಕೂಡಿದ್ದು ಮನಸ್ಸಿಗೆ ಆಪ್ಯಾಯಮಾನವೆನಿಸಿತು. ಮುಖ್ಯ ಕಲಾವಿದರ ಶೈಲಿಯನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲ ಲಯ ವಿದ್ವಾನ್‌ ಸುನಾದ ಕೃಷ್ಣ ಕಛೇರಿಗೆ ಕಳೆ ನೀಡಿದ್ದಾರೆ.

ದಿನದ ಕೊನೆಯಲ್ಲಿ ತ್ರಿವಾದ್ಯ ಕಾರ್ಯಕ್ರಮವನ್ನು ಅಶ್ವಿ‌ನ್‌ ಆನಂದ್‌ (ವೀಣೆ), ಜಿ. ರವಿಕಿರಣ್‌ (ಕೊಳಲು) ಮತ್ತು ಎಚ್‌.ಕೆ. ವೆಂಕಟರಾಂ (ವಯಲಿನ್‌) ನಡೆಸಿಕೊಟ್ಟರು. ಶ್ರೀ ರಾಗ ವರ್ಣ, ನಾಟ (ಮಹಾಗಣಪತಿಂ), ಗಾನಮೂರ್ತಿ (ಗಾನಮೂರ್ತಿ), ರೀತಿ ಗೌಳ (ಜನನಿ), ಕದನ ಕುತೂಹಲ (ರಘುವಂಶ ) ಮುಂತಾಗಿ ಬಹುಶ್ರುತ ಪ್ರಸ್ತುತಿಗಳನ್ನೇ ನುಡಿಸಲಾಗಿ ಒಂದು ಅಬ್ಬರದ ವಾದ್ಯಗೋಷ್ಠಿ ಎನಿಸಿತು. 

ಆದರೆ ಕಛೇರಿಯ ಉತ್ತರಾರ್ಧದಲ್ಲಿ ನೀಡಲಾದ ಕಲ್ಯಾಣಿ ಕೃತಿ (ಒರಾನವಿರಾ) ಮತ್ತು ಬೃಂದಾವನಿಯ ರಾಗಂ- ತಾನಂ-ಪಲ್ಲವಿಯ ರಾಗವಿಸ್ತಾರ, ಸ್ವರವಿನಿಕೆಗಳು ಮತ್ತು ರಾಗ ಮಾಲಿಕೆಗಳಲ್ಲಿ ವೇದಿಕೆಯ ಪ್ರತಿಯೊಬ್ಬ ಕಲಾವಿದರ ವೈಯಕ್ತಿಕವಾದ ಅಂತಃಸತ್ವ ಹೊರಹೊಮ್ಮಿ ರಸಿಕರಿಗೆ ಮುದ ನೀಡಿತು. ಎಲ್ಲರೂ ಉನ್ನತ ಮಟ್ಟದ ಕಲಾವಿದರೇ ಆಗಿದ್ದರೂ ಅದ್ಭುತವಾದ ಹೊಂದಾಣಿಕೆಯಿಂದ ತಂತಮ್ಮ ವಾದ್ಯಗಳನ್ನು ನುಡಿಸಿ ರಸಿಕರ ಮನ ತಣಿಸಿದರು. ಎಚ್‌.ಎನ್‌. ಸುಧೀಂದ್ರ (ಮೃದಂಗ) ಮತ್ತು ಫ‌ಣೀಂದ್ರ ಭಾಸ್ಕರ್‌ (ಘಟಂ) ಮುಖ್ಯ ವಾದ್ಯಗಳನ್ನು ಘನವಾಗಿ ಹಾಗೂ ನಯವಾಗಿ ಅನುಸರಿಸುತ್ತ ಕಛೇರಿಯ ಯಶಸ್ಸಿನಲ್ಲಿ ಭಾಗ ಪಡೆದಿದ್ದಾರೆ.

ಸರೋಜಾ ಆರ್‌. ಆಚಾರ್ಯ

ಟಾಪ್ ನ್ಯೂಸ್

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.