ಹಿಂದುಸ್ಥಾನಿ ಘರಾನಾಗಳ ನಾದಸಂಗಮವಾದ ಪಂಚಮದ ಇಂಚರ


Team Udayavani, Nov 22, 2019, 4:00 AM IST

pp-8

ಶ್ರೀ ರಾಮಕೃಷ್ಣ ಮಠ ಹಾಗೂ ಚಿರಂತನ ಚಾರಿಟೇಬಲ್‌ ಟ್ರಸ್ಟ್‌ ಇದರ ಪಂಚಮದ ಇಂಚರ ಬಳಗದ ಕಲಾ ಸಹಯೋಗದಲ್ಲಿ ಪಂಚ‌ಮದ ಇಂಚ‌ರ ವಿವೇಕ ಸ್ಮತಿ -2019 ಸಂಗೀತ ಮಹೋತ್ಸವ ಸಂಪನ್ನವಾಯಿತು. ಈ ಬಾರಿ ಹಿಂದುಸ್ಥಾನಿಯ ಹೆಚ್ಚಿನ ಘರಾನಾಗಳ ಸಂಗೀತ ಗೋಷ್ಠಿಗಳ ಮೂಲಕ ಉತ್ಸವಕ್ಕೆ ಹೆಚ್ಚಿನ ವೈವಿದ್ಯ ಹಾಗೂ ವಿಸ್ತಾರ ಪ್ರಾಪ್ತವಾಯಿತು.

ಮೊದಲ ಕಛೇರಿ ಮಂಗಳೂರಿನ ಚೈತನ್ಯ ಜಿ. ಭಟ್‌ ಇವರಿಂದ ನಡೆಯಿತು. ಮುಂಜಾನೆಯ ರಾಗ ಲಲತ್‌ನ ವಿಸ್ತಾರವಾದ ಪ್ರಸ್ತುತಿಯಲ್ಲಿ “ರೇನ್‌ ಕಾ ಸಪನಾ’ ಎಂಬ ಪಾರಂಪರಿಕ ಭಂದಿಶ್‌ನ್ನು ವಿಲಂಬಿತ್‌ ಏಕ್‌ ತಾಲ್‌ನಲ್ಲಿ ಹಾಡಿದರು ಹಾಗೂ ದೃತ್‌ ತೀನ್‌ ತಾಲದಲ್ಲಿ “ಭೋರ ಭಯೀ ಶ್ಯಾಮ ನಹಿ ಆಯೇ’ ಭಂದಿಶ್‌ನ್ನು ಪ್ರಸ್ತುತ ಪಡಿಸಿದರು. ಬಳಿಕ ರಾಗ್‌ ದೇವಗಿರಿ ಬಿಲಾವಲ್‌ನಲ್ಲಿ “ಮನ್‌ ಮೇ ಸಮಾಯ ಮೇ ಬೈಠೀ’ ದೃತ್‌ ತೀನ್‌ ತಾಲ್‌ನ ಭಂದಿಶ್‌ನ್ನು ಹಾಡಿ ತರಾನಾದೊಂದಿಗೆ ಗಾಯನವನ್ನು ಪೂರ್ಣಗೊಳಿಸಿದರು.

ಎರಡನೆಯ ಕಛೇರಿಯನ್ನು ನಡೆಸಿಕೊಟ್ಟವರು ಡಾ| ಮಿಥುನ್‌ ಚಕ್ರವರ್ತಿಯವರು. ಜೈಪುರ್‌ ಅತೌÅಲಿ ಘರಾನೆಯ ವೈಶಿಷ್ಟéವನ್ನು ರಾಗ್‌ ಸಂಪೂರ್ಣ ಬಿಬಾಸ್‌ನ ಪ್ರಸ್ತುತಿಯಲ್ಲಿ ತೋರಿಸಿಕೊಟ್ಟರು. ವಿಲಂಬಿತ್‌ ತೀನ್‌ ತಾಳದ “ಏ ಹೋ ನರಹರ ನಾರಾಯಣ’ ಹಾಗೂ ದ್ರುತ್‌ ತೀನ್‌ ತಾಳದಲ್ಲಿ ಪ್ರಸ್ತುತಗೊಂಡ “ಮೋರಾರೆ ಮೀತೆ ಹರವ’ ಭಾವೋದ್ದೀಪಕವಾಗಿ ಸಮ್ಮೊಹನಗೊಳಿಸಿದವು. ಸಾಮಾನ್ಯವಾಗಿ ಭೈರವ್‌ ಥಾಟ್‌ನಲ್ಲಿ ಹಾಡಲಾಗುವ ಬಿಬಾಸ್‌ ರಾಗವನ್ನು ಜೈಪುರ್‌ ಅತೌಲಿ ಘರಾನೆಯಲ್ಲಿ ಮಾರ್ವಾ ಥಾಟ್‌ನಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಶುದ್ಧ ದೈವತದ ಪ್ರಯೋಗವು ನಿಶಾದಕ್ಕೆ ಹತ್ತಿರವೆಂಬಂತೆ ಭಾಸವಾಗುತ್ತದೆ. ಈ ಸ್ವರಸ್ಥಾನವು ಸಂವಾದಿನಿಯ ನಿಲುಕಿಗೆ ಸಿಗುವುದಿಲ್ಲ ಕೂಡ. ಚಕ್ರವರ್ತಿಯವರು ಹಾಡಿದ ಎರಡನೆಯ ರಾಗ ಜೌನ್‌ಪುರಿ ವಿಲಂಬಿತ್‌ ಹಾಗೂ ದೃತ್‌ ತೀನ್‌ ತಾಲ್‌ಗ‌ಳಲ್ಲಿ ಹೂ ತೋ ಜಯ್ಯೋ ಹಾಗೂ ಹಮ್‌ ರಯ್ಯ ರಾತ್‌ ಬಿರಹರನಕೆ ಪಾಸ್‌ ಭಂದಿಶ್‌ಗಳೊಂದಿಗೆ ಪ್ರಸ್ತುತಗೊಂಡಿತು. ಜೈಪುರ್‌ ಅತೌಲಿ ಘರಾನಾದ ವಿಶೇಷತೆಯಾಗಿರುವ ಲಯಕಾರಿ ತಾನ್‌ಗಳಲ್ಲದೆ ಚಕ್ರವರ್ತಿಯವರ ನಿಯಂತ್ರಿತ ಪ್ರಕಾರ್‌ಗಳಿಂದ ಸೌಂದರ್ಯಾನುಭೂತಿಯುಂಟಾಯಿತು. ಮಿಯಾಕಿ ತೋಡಿ ರಾಗದ ಮಾದರ ಚೆನ್ನಯ್ಯ ಹಾಗೂ ಪಟದೀಪ್‌ ರಾಗದ ಕಳಬೇಡ ಕೊಲಬೇಡ ಈ ಎರಡು ಬಸವಣ್ಣನವರ ವ‌ಚನಗಳೊಂದಿಗೆ ಮಿಥುನ್‌ ಕಾರ್ಯಕ್ರಮ ಪೂರ್ಣಗೊಳಿಸಿದರು.

ಮೂರನೇ ಕಛೇರಿಯನ್ನು ನಡೆಸಿಕೊಟ್ಟವರು ಮುಂಬಯಿಯ ಆಗ್ರಾ ಘರಾನೆಯ ಪ್ರಿಯಾ ಪುರುಷೋತ್ತಮನ್‌. ದೃಪದ್‌ ಮಾದರಿಯ ನೋಂತೊಂ ಆಲಾಪದೊಂದಿಗೆ ಮೈದುಂಬಿದ ರಾಗ್‌ ಸಾಲಗವರಾಳಿಯಲ್ಲಿ ವಿಲಂಬಿತ್‌ ಖ್ಯಾಲ್‌ ಆಜ್‌ ಬದಾಯಿ ಬಾಜೇ ಹಾಗೂ ದೃತ್‌ ಏಕ್‌ ತಾಲ್‌ನಲ್ಲಿ ಜಿಯಾರಾ ನಹೀ ಮಾನ್‌ ಏಕ್‌ ಎಂಬ ಬಂದಿಶ್‌ಗಳನ್ನು ಪ್ರಸ್ತುತ ಪಡಿಸಿದರು. ಮುಂದೆ ಯಮನೀ ಬಿಲಾವಲ್‌ನಲ್ಲಿ ಪಾರಂಪರಿಕ ಭಂದಿಶ್‌ನ್ನು ಆದ್ಧಾ ತೀನ್‌ ತಾಲ್‌ನಲ್ಲಿ ಹಾಗೂ ತರಾನವನ್ನು ಪ್ರಸ್ತುತಪಡಿಸಿದರು. ಗಾಯನದಲ್ಲಿ ವಿಶೇಷವಾಗಿ ಕರ್ನಾಟಕಿ ಸಂಗೀತ ಪದ್ಧತಿಯ ಗಮಕ ಪರಿಣಾಮಕಾರಿಯಾಗಿ ಬಳಸುವುದು ಕಂಡುಬರುತ್ತದೆ.

ಬೆಳಗ್ಗಿನ ಕೊನೆಯ ಕಛೇರಿಯನ್ನು ಮೊಹಸಿನ್‌ಖಾನ್‌ ಸಿತಾರ್‌ ವಾದನದ ಮೂಲಕ ನಡೆಸಿಕೊಟ್ಟರು. ಬೀನ್‌ಕಾರ್‌ ಘರಾನಾ ಅಥವಾ ಈಗ ಧಾರವಾಡ ಘರಾನಾ ಎಂದೇ ಖ್ಯಾತವಾಗಿರುವ ಶೈಲಿಯಲ್ಲಿ ಸಿಂಹೇಂದ್ರ ಮಧ್ಯಮ ರಾಗವನ್ನು ವಿಸ್ತಾರವಾದ ಆಲಾಪ್‌ ಜೋಡ್‌, ಝಾಲಾ ಹಾಗೂ ವಿಲಂಬಿತ್‌ ಹಾಗೂ ದ್ರುತ್‌ ತೀನ್‌ ತಾಳಗಳ ಗತ್‌ಗಳೊಂದಿಗೆ ಪ್ರಸ್ತುತಪಡಿಸಿದ ಇವರು ಧುನ್‌ನೊಂದಿಗೆ ಕೊನೆಗೊಳಿಸಿದರು.

ಅಪರಾಹ್ನದ ಗಾಯನ‌ ಗೋಷ್ಠಿಯನ್ನು ನಡೆಸಿಕೊಟ್ಟವರು ಸ್ವಾಮಿ ಕೃಪಾಕರಾನಂದಜಿ . ಇವರು ತಮ್ಮ ಗಾಯನಕ್ಕೆ ಭೀಮ್‌ ಪಲಾಸಿ ರಾಗವನ್ನು ಆಯ್ದುಕೊಂಡು ವಿಲಂಬಿತ್‌ ಏಕ್‌ ತಾಲ್‌ನ ಅಬ ತೋ ಮಹಾದೇವ್‌ ಹಾಗೂ ದೃತ್‌ ತೀನ್‌ ತಾಳದ ಬಿರಜ್‌ ಮೆ ಧೂಮ ಮಚಾಯೇ ಕಾನಃ ಪ್ರಸ್ತುತಿಯ ಬಳಿಕ ಸ್ವಾಮೀ ವಿವೇಕಾನಂದ ವಿರಚಿತ ದರ್ಬಾರಿ ರಾಗದ ಹಾಗೂ ಸೂಲಕ್ತಾ ತಾಳದ ಹರ ಹರ ಹರ ಭೂತನಾಥ‌ ಹಾಗೂ ದುರ್ಗಾರಾಗ‌ದ ಮಾತೇ ಭವಾನಿ ಎಂಬ ಎರಡು ಭಜನ್‌ಗಳನ್ನು ಹಾಡಿದರು.

ಸಹೋದರಿಯರಾದ ದೇಬೊಪ್ರಿಯಾ ಹಾಗೂ ಸುಚಿಸ್ಮಿತಾ ಚಟರ್ಜಿ ಇವರಿಂದ ಕೊಳಲು ವಾದನ ನಡೆಯಿತು. ರಾಗ ಮಧುವಂತಿಯಲ್ಲಿ ವಿಸ್ತಾರವಾದ ಆಲಾಪ್‌ , ಮಧ್ಯಲಯ ರೂಪಕ್‌ ತಾಳ ಹಾಗೂ ದೃತ್‌ ತೀನ್‌ ತಾಳದ ಗತ್‌ಗಳನ್ನು ನುಡಿಸಿದರು. ಬಳಿಕ ಪೀಲೂ ರಾಗದ ಧುನ್‌ನೊಂದಿಗೆ ಕಛೇರಿಯನ್ನು ಸಮಾಪ್ತಗೊಳಿಸಿದರು.

ಏಳನೆಯ ಕಛೇರಿಯನ್ನು ನಡೆಸಿಕೊಟ್ಟವರು ಗುರುದತ್‌ ಅಗ್ರಹಾರ ಕೃಷ್ಣಮೂರ್ತಿ. ರಾಗ್‌ ಪುರಿಯಾ ಕಲ್ಯಾಣ್‌ನಿಂದ ಆರಂಭಿಸಿ ವಿಲಂಬಿತ್‌ ಏಕ್‌ ತಾಲ್‌ನಲ್ಲಿ ನಿಬದ್ಧವಾದ ಕರಿಯೇ ತಿನಕೋ ಸಲಾಮ್‌ ಮಧ್ಯಲಯ ತೀನ್‌ ತಾಲ್‌ನ ಅಬ್‌ ಮೋರಿ ಸುದಲಿ ಜೊ ಕರ್‌ತಾರ್‌ ಹಾಗೂ ದೃತ್‌ ತೀನ್‌ ತಾಲ್‌ನಲ್ಲಿ ಲಾಖೊ ಮೆ ಏಕ್‌ ಚುನ್‌ ಚುನ್‌ ಬುಲಾವೊ ಭಂದಿಶ್‌ಗಳನ್ನು ಪ್ರಸ್ತುತ ಪಡಿಸಿದರು. ಮೀರಾಬಾಯಿ ಮಲ್ಹಾರ್‌ ರಾಗದಲ್ಲಿ ತನ್ನ ಗುರುಗಳ ರಚನೆಯ ಜಗತ ಜನನಿ ಮಾತಾ ಚಂಡಿ ಎಂಬ ಭಂದಿಶ್‌ ಹಾಡಿದರು. ಪೀಲೂ ರಾಗದ ಒಂದು ಠುಮ್ರಿಯನ್ನು ಚುಟುಕಾಗಿ ಪ್ರಸ್ತುತಪಡಿಸಿದರು.

ಕೊನೆಯ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ನಾಗಭೂಷಣ ಹೆಗಡೆ. ತೂ ಹಿ ಕರ್‌ತಾರ ಎಂಬ ವಿಲಂಬಿತ್‌ ಏಕ್‌ ತಾಲ್‌ನ ಹಾಗೂ ದೃತ್‌ ತೀನ್‌ ತಾಲ್‌ನ ಹಮರೀ ಸುಧಾ ಎಂಬ ಭಂದಿಶ್‌ಗಳೊಂದಿಗೆ ಹೇಮಂತ್‌ ರಾಗವನ್ನು ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದರು ಹಾಗೂ ಮಧುಕಂಸ್‌ ರಾಗದ ಮೋರಾ ಮನ್‌ ಲುಭಾಯೆ ಮೂಲಕ ತಾರ ಸ್ಥಾಯಿಯಲ್ಲಿ ಲೀಲಾಜಾಲದ ಪ್ರಸ್ತುತಿ, ಸರ್‌ಗಮ್‌, ತಾನ್‌ಕಾರಿಗಳಿಂದ ಮನ ತಣಿಸಿದರು. ಭೈರವಿಯ ದಯಾನಿ ಬವಾನಿ ಭಜನ್‌ನೊಂದಿಗೆ ಸಂಪನ್ನಗೊಂಡಿತು.

ರಾಮ ಪ್ರಸಾದ ಕಾಂಚೋಡು

ಟಾಪ್ ನ್ಯೂಸ್

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

1-sun

Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

de

Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು

4

Udupi: ಗಾಂಜಾ ಮಾರಾಟ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.