ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ತಂತಿ ಮೀಟಿದ ಭಾವಾಂತರಂಗ
Team Udayavani, Aug 24, 2018, 5:40 PM IST
ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಈ ವರ್ಷ ಮಕ್ಕಳ ಭಾವನೆಗಳಿಗೆ ಮೂರ್ತ ರೂಪ ನೀಡುವ, ಪ್ರತಿಭೆಗೆ ಸ್ಫೂರ್ತಿ ನೀಡುವ ಭಾವಾಂತರಂಗ-2018 ಎನ್ನುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಪೇಪರ್ ಆರ್ಟ್,ಗಾಳಿಪಟ ತಯಾರಿಕೆ, ಗ್ರೀಟಿಂಗ್ ಕಾರ್ಡ್ ತಯಾರಿಕೆ, ಮರದ ಕೆತ್ತನೆ, ಗೂಡುದೀಪ ತಯಾರಿಕೆ, ಗ್ಲಾಸ್ ಪೈಂಟಿಂಗ್‌ನಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿಯನ್ನು ಹೆಚ್ಚಿಸುವ ವೇದಿಕೆಯಾಗಿತ್ತು ಅದು. ಶೈಕ್ಷಣಿಕ ಚಟುವಟಿಕೆಗಳ ಏಕತಾನತೆಯಿಂದ ಹೊರಗೆ ಮನಸ್ಸಿಗೆ ಮುದ ಕೊಡುವ ತರಕಾರಿ ಕಲೆ, ಕಸದಿಂದ ರಸ, ಆಭರಣ ತಯಾರಿಕೆ, ಆಫ್ರಿಕನ್ ಡಾಲ್ ನಿರ್ಮಾಣದಂತಹ ಪ್ರಾತ್ಯಕ್ಷಿಕೆಗಳು ಮಕ್ಕಳ ಮನಸೂರೆಗೊಂಡವು. ಹಿಂದೆಲ್ಲಾ ಮನೆ ಮನೆಗಳಲ್ಲಿ ರಾರಾಜಿಸುತ್ತಿದ್ದ ರಂಗೋಲಿ, ವಿಶೇಷ ಸಂದರ್ಭಗಳ ವೈಶಿಷ್ಟ್ಯಮಯ ಮೆಹಂದಿಯಂತಹ ನೇಪಥ್ಯಕ್ಕೆ ಸರಿಯುತ್ತಿರುವ ಕಲಾ ಪ್ರಕಾರಗಳನ್ನು ಪರಿಚಯಿಸುವ ಪ್ರಯತ್ನವೂ ನಡೆಯಿತು. ಆಯುರ್ವೇದದಲ್ಲಿ ಉಲ್ಲೇಖೀತ ಔಷಧೀಯ ಸಸ್ಯಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ, ಸಾವಯವ ಕೃಷಿಯ ಮಹತ್ವ ಬಣ್ಣಿಸುವ ಕಾರ್ಯಾಗಾರಗಳು ಒಂದೆಡೆಯಾದರೆ ಮಕ್ಕಳ ಆಸಕ್ತಿಗನುಗುಣವಾಗಿ ರಂಗಕಲೆ, ಬೆಂಕಿ ಬಳಸದೆ ಅಡುಗೆ, ಕಥೆ ಹೇಳುವ, ಭಾಷಣ, ಲೇಖನ ಕೌಶಲ್ಯಕ್ಕೆ ಪುಟವಿಡುವ ಬರೋಬ್ಬರಿ 22 ಕಾರ್ಯಾಗಾರಗಳ ಸಂಗಮವಾಗಿತ್ತು ಆ ಕಾರ್ಯಕ್ರಮ.
ಸ್ವದೇಶೀ ಪರಿಕಲ್ಪನೆಯ ಹೊಸ ಚಿಂತನೆಯನ್ನು ಹುಟ್ಟು ಹಾಕುವ ಅಚ್ಚುಕಟ್ಟಿನ ಹಾಗೂ ಶಿಸ್ತುಬದ್ದ ಕಾರ್ಯಾಗಾರ ಸಂಪನ್ಮೂಲ ವ್ಯಕ್ತಿಗಳನ್ನು ಪ್ರಸನ್ನಗೊಳಿಸಿತು. ಕೌಶಲ್ಯ ವರ್ಧನೆ, ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಕಾರ್ಯಕ್ರಮದಲ್ಲಿ ಮಕ್ಕಳು ಆಸಕ್ತಿ, ಅತ್ಯುತ್ಸಾಹದಿಂದಪಾಲ್ಗೊಂಡರು. ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳಿಗೆ ಅವರ ಅನುಭವದ ರಸಾಮೃತ ನೀಡಿ ಪ್ರತಿಭೆಗೆ ಹೊಳಪು ನೀಡಬೇಕೆನ್ನುವ ಪ್ರಾಂಶುಪಾಲರ ಸಂಕಲ್ಪ, ಶಿಕ್ಷಕ ತಂಡದ ಸಹಕಾರ ಕಾರ್ಯಾಗಾರವನ್ನು ಯಶಸ್ಸಾಗಿಸಿತು.
ಬೈಂದೂರು ಚಂದ್ರಶೇಖರ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.