ಹೆಬ್ಟಾರ್‌ಗೆ ಪರಮೇಶ್ವರ ಆಚಾರ್ಯ ಪ್ರಶಸ್ತಿ
Team Udayavani, Mar 13, 2020, 6:22 PM IST
ಹಲವಾರು ಶಿಷ್ಯಂದಿರನ್ನು ಯಕ್ಷಲೋಕಕ್ಕೆ ಸಮರ್ಪಿಸಿದ ಯಕ್ಷಗುರು ಅರಸಿನಮಕ್ಕಿ ದಿ| ಪರಮೇಶ್ವರ ಆಚಾರ್ಯ ಸಂಸ್ಮರಣ ಪ್ರಶಸ್ತಿಯನ್ನು ಅವರ ಒಡನಾಡಿ ವಿಟ್ಟಲ ಹೆಬ್ಟಾರ್ ಅವರಿಗೆ ಪ್ರದಾನ ಮಾಡಲಾಗಿದೆ.
ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ಸಮೀಪ ನೆಕ್ಕರಡ್ಕಪಳಿಕೆ ಯಕ್ಷಾಭಿಮಾನಿ ಬಳಗದ ಆಶ್ರಯದಲ್ಲಿ ಮಾ. 3ರಂದು ನಡೆದ ಶ್ರೀ ಹನುಮಗಿರಿ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಬಯಲಾಟದ ಸಂದರ್ಭದಲ್ಲಿ ಸ್ಥಳೀಯ ಇಬ್ಬರು ಕಲಾವಿದರ ಕೊಡುಗೆಗಳನ್ನು ಮೆಲುಕು ಹಾಕುವ ಸನ್ನಿವೇಶವೂ ಒದಗಿತ್ತು.
ವಾಹನ ವ್ಯವಸ್ಥೆ ಸಮರ್ಪಕವಾಗಿಲ್ಲದ ದಿನಗಳಲ್ಲಿ ಪರಮೇಶ್ವರ ಆಚಾರ್ಯರು ಕಲ್ಲುಗುಂಡಿಯಲ್ಲಿ ಯಕ್ಷಗಾನ ತರಗತಿಗಳನ್ನು ಆರಂಭಿಸಿದ್ದರು. ಶಿಷ್ಯರೂ ಕಡು ಬಡವರು. ಆರು ತಿಂಗಳ ಕಾಲ ಒಬ್ಬರಿಂದ ಒಂದು ರೂ. ಕೂಡ ಪಡೆದುಕೊಳ್ಳದೆ ನಾಟ್ಯಾಭ್ಯಾಸ, ಪ್ರಸಂಗ ಮಾಹಿತಿ ಇತ್ಯಾದಿಗಳನ್ನು ನೀಡಿದರು. ಈಗ ಹನುಮಗಿರಿ ಮೇಳದ ಪ್ರಮುಖ ಕಲಾವಿದರಾಗಿರುವ ಜಯಾನಂದ ಸಂಪಾಜೆ ಅವರಿಗೆ ಆಗ ಬಡತನದ ದಿನಗಳು. ಕಲಿಸಿದ ಗುರುಗಳ ಋಣ ಹೇಗೆ ತೀರಿಸುವುದೆಂಬ ಚಿಂತೆ. ಹೀಗೆ, ಈ ವರ್ಷ ಅವರದೇ ಊರಿನಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ತಮ್ಮ ಗುರುಗಳ ಸಂಸ್ಮರಣೆ ಮಾಡಿ ದರು. ಹಿರಿಯ ಹಿಮ್ಮೇಳ ವಾದಕರಾಗಿ ಪರಮೇಶ್ವರ ಆಚಾರ್ಯರ ಒಡ ನಾಡಿಯೂ ಆಗಿ ದ್ದ ಸೌತಡ್ಕ ನಿವಾಸಿ ವಿಟ್ಟಲ ಹೆಬ್ಟಾರ್ ಅವರಿಗೆ ಪ್ರಥಮ ವರ್ಷದ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ವಿಟ್ಟಲ ಹೆಬ್ಟಾರರೂ ಕೃಷಿಕರಾಗಿದ್ದವರು. ಗೋಪಾಲಕೃಷ್ಣ ಕುರುಪ್, ಜನಾರ್ದನ ಕುರುಪ್ ಅವರಿಂದ ಚೆಂಡೆ-ಮದ್ದಳೆ ನುಡಿಸುವುದನ್ನು ಕಲಿತರು. ಸುಂಕದಕಟ್ಟೆ, ಸುಬ್ರಹ್ಮಣ್ಯ, ಅರುವ, ರಾಜರಾಜೇಶ್ವರಿ, ಉಪ್ಪಿನಂಗಡಿ ಮೊದಲಾದ ಮೇಳಗಳಲ್ಲಿ ವಿಟ್ಟಲ ಹೆಬ್ಟಾರ್ ಹಾಗೂ ಪರಮೇಶ್ವರ ಆಚಾರ್ಯರು ಒಡaನಾಡಿಗಳಾಗಿದ್ದರು. ಇಬ್ಬರೂ ಸೇರಿ ಉರುವಾಲು, ನೆಟ್ಟಣ, ಕುಂಟಾಲಪಳಿಕೆ, ಮುಂಡಾಜೆ, ಪುತ್ತಿಗೆ, ನೇಲಡ್ಕ, ಅರಸಿನಮಕ್ಕಿ ಹಾಗೂ ದೂರದ ಮೈಸೂರಿನಲ್ಲೂ ಹಿಮ್ಮೇಳದ ತರಗತಿಗಳನ್ನು ನಡೆಸಿದ್ದಾರೆ.
ಅನಂತ ಹುದಂಗಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
Kiran Raj: ಸೂಪರ್ ಹೀರೋ ಆಗಲಿದ್ದಾರೆ ಕಿರಣ್ ರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.