ಚೈಲ್ಡ್ ಹಾರ್ಟ್‌ನಲ್ಲಿ ಮಕ್ಕಳ ಮನಸ್ಸಿನ ಚಿತ್ರಗಳ ಪ್ರದರ್ಶನ
Team Udayavani, May 18, 2018, 6:00 AM IST
ಮಕ್ಕಳ ಕೈಗೆ ಬಣ್ಣವನ್ನು ಕೊಟ್ಟರೆ ಏನಾಗಬಹುದು? ಅವರು ಏನೆಲ್ಲಾ ಮೂಡಿಸಬಹುದು? ಒಂದಷ್ಟು ಬಣ್ಣ ಚಿತ್ರಕ್ಕೆ, ಒಂದಷ್ಟು ಬಣ್ಣ ಮೈ ಕೈಗೆ, ಒಂದಷ್ಟು ಬಣ್ಣ ನೆಲಕ್ಕೆ ಗೋಡೆಗೆ, ಮತ್ತೂಂದಷ್ಟು ಬಣ್ಣದ ನೀರಿಗೆ… ಒಟ್ಟಿನಲ್ಲಿ ಬಣ್ಣದ ಹೋಳಿಯಾಟವನ್ನು ಆಡುತ್ತಾರೆ.ಬಣ್ಣದಾಟ ಮಕ್ಕಳಿಗೆ ಬಹಳ ಇಷ್ಟ. ಮಕ್ಕಳೇ ಬಣ್ಣದದಲ್ಲಿ ಆಟವಾಡುತ್ತಲೇ ರಚಿಸಿದ ಕಲಾಕೃತಿಗಳ ವಿಶಿಷ್ಟ ಕಲಾಪ್ರದರ್ಶನವೊಂದು ಇತ್ತೀಚೆಗೆ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು. ಕಲಾವಿದ ಹರೀಶ್ ಸಾಗಾ ಅರಳು ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿ ಸ್ಥಳದಲ್ಲಿಯೇ ಅವರಿಂದ ಸೃಜನಾತ್ಮಕ ಚಿತ್ರ ಕಲಾಕೃತಿಗಳನ್ನು ರಚಿಸಿಕೊಂಡು “ಚೈಲ್ಡ್ ಹಾರ್ಟ್’ ಶೀರ್ಷಿಕೆಯಡಿ ಕಲಾ ಪ್ರದರ್ಶನ ನಡೆಸಿದರು. ವಿಶಿಷ್ಟ ಕಲಾ ವ್ಯಕ್ತಿತ್ವದ ಹರೀಶ್ ಸಾಗಾ ಮಣಿಪಾಲದಲ್ಲಿ ತ್ರಿವರ್ಣ ಆರ್ಟ್ ಸೆಂಟರನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿದ್ದು, ಎಳೆಯ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಚಿತ್ರಕಲಾ ಪ್ರದರ್ಶನವನ್ನು ನೋಡಿದ ಮಕ್ಕಳು ತಮ್ಮ ಸೃಷ್ಟಿಯೆದುರು ತಾವೇ ಬೆರಗಾಗುವಂತೆ, ತಮ್ಮ ಕೈಚಳಕವನ್ನು ಕಂಡು ತಾವೇ ಪುಳಕಿತಗೊಂಡಿದ್ದಾರೆ.
“ಚೈಲ್ಡ್ ಹಾರ್ಟ್’ ಹೆಸರೇ ಸೂಚಿಸುವಂತೆ ಮಕ್ಕಳ ಹೃನ್ಮನಗಳ ಭಾವಾಭಿವ್ಯಕ್ತಿ ಚಿತ್ರಗಳಲ್ಲಿ ಮೂಡಿದೆ. ಹಿರಿಯರ ಹಸ್ತಕ್ಷೇಪವಿಲ್ಲದೆ ಮೂಡಿದ ಈ ಚಿತ್ರಗಳಲ್ಲಿ ಸೀದಾ ಸಾದಾ ರೇಖೆಗಳು, ವಿಷಯದ ನೇರ ಪ್ರಸ್ತಾಪನೆ, ನೇರ ಬಣ್ಣಗಳ ಪ್ರಸರಣ, ಮುಗ್ಧತೆ, ಪ್ರೀತಿ-ಪ್ರೇಮಗಳ ಅನಾವರಣ ಕಾಣುತ್ತದೆ. ಆ ಪ್ರಾಯದಲ್ಲಿ ಗ್ರಹಿಸಬಹುದಾದಷ್ಟು ವಿಷಯಗಳ ಅಭಿವ್ಯಕ್ತಿ ಚಿತ್ರದಲ್ಲಿ ಮೂಡಿದೆ. ಮೂರ್ತ-ಅಮೂರ್ತ ಎರಡು ದೃಷ್ಟಿಯಿಂದಲೂ ವೀಕ್ಷಕರು ಚಿತ್ರಗಳನ್ನು ಗ್ರಹಿಸಬಹುದಾಗಿತ್ತು.
ಮಕ್ಕಳ ಮೆಚ್ಚಿನ ವಿಷಯಗಳಾದ ಗುಡ್ಡ-ಬೆಟ್ಟಗಳಿರುವ ನಿಸರ್ಗ, ಮಳೆಗಾಲದ ದೃಶ್ಯ, ತನ್ನ ಮನೆ ಹಾಗೂ ಸುತ್ತಲಿನ ವಾತಾವರಣ, ನನ್ನ ತಮ್ಮ ತಂಗಿ, ನನ್ನ ಶಾಲೆ, ನನ್ನ ಅಜ್ಜಿಮನೆ, ನನ್ನ ಮೆಚ್ಚಿನ ನಾಯಿ, ದೀಪಾವಳಿ-ಕ್ರಿಸ್ಮಸ್ ಹಬ್ಬ, ಬರ್ತ್‌ಡೇ ಆಚರಣೆ, ತಾನು ಆಡುವ ಆಟ, ಬೆಲೂನ್ ಆಟ, ಆಟದ ಮೈದಾನ, ರಾಕೆಟ್ ಉಡಾವಣೆ ಇತ್ಯಾದಿ ಚಿತ್ರದೊಳಗೆ ಮೂಡಿದ್ದವು.
ಅಮೋಘ… ರಾವ್, ಅನಿಕೇತ್, ಅಥರ್ವ ನಾವಡ, ಆತ್ರೆಯ ಅಡಿಗ, ಭೂಮಿಕ, ದೈವಿಕ್ ಡಿ. ಭಂಡಾರಿ, ದû… ಜೆ. ಶೆಟ್ಟಿ, ಧೀಮಂತ್ ಎಸ್. ಪ್ರಕಾಶ್, ಧ್ರುವ್ ಗುರುಪ್ರಸಾದ್ ಕಲ್ತಾರ್, ಗಾಯತ್ರಿ ಎ.ಪೈ, ಇಶಾನ್‌ವೀರ್ ಸಿಂಗ್ ದಿಲ್, ಜನಕ್ ಎಸ್.ಶೆಟ್ಟಿ, ಜ್ಞಾನ ಡಿ., ಕೆ.ತನ್ಮಯ್ ಶೆಟ್ಟಿ, ಮನ್ವಿತಾ, ನೀರಜಾ ಪಿ., ನೇಹ ಕೆ.ಟಿ., ನಿದೀಶಾ, ಪಿ.ಕಾರ್ತಿಕೇಯ, ಪ್ರಣತಿ ಪಿ.ಭಟ್, ಪ್ರಣವ್ ಡಿ.ಕಾಮತ್, ಪ್ರತೀಕ್ ಭಂಡಾರ್ಕರ್, ರಾಘವ್ ಕೃಷ್ಣ ಭಟ್, ರಾನಕ್ ಮೋಹನ್ ಅಂಬಾರ್ಕರ್, ರಿಧಾನ್ ಗುಪ್ತ, ರಿಷಬ್ ಶೆಣೈ, ರಿತಿಕಾ ಎಸ್., ರಿತ್ವಿಕ್, ಸಾಯಿಶ್ ಜಿ.ಶೆಟ್ಟಿ, ಸಾನಿಧ್ಯ, ಶರಧಿ ಸುಧಾಕರ್, ಶರಣ್ಯಾ ಎನ್., ಶೋಧನ್ ಕಾಮತ್, ಶ್ರೀಲಕ್ಷ್ಮೀ ಎಸ್. ಪ್ರಭು, ಶ್ರೇಯಾ ನಾಯಕ್, ಸ್ಟೇಫಿ°à ಆಂಡ್ರ್ಯೂಸ್, ಶ್ರೀನಿತಾ ಎಸ್., ತನಿಷ್ಕಾ ಡಿ.ಪಿ., ವಂಶಿ ಡಿ., ವಿಭಾ ಅಮೀನ್, ವ್ಯೋಮ್ ಆರ್. ಪಹುಜಾ ಮೊದಲಾದವರ ಚಿತ್ರಗಳು ಒಂದೇ ತೆರನಾದ ಚೌಕಟ್ಟಿನಲ್ಲಿ ಪ್ರದರ್ಶಿಸಲ್ಪಟ್ಟಿದ್ದವು.
ಉಪಾಧ್ಯಾಯ ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.