ಜಗಳಾಡುವ ದೇವರುಗಳು


Team Udayavani, Jun 22, 2018, 8:53 PM IST

b-1.jpg

ದೇವಿ ಮಹಾತ್ಮೆ ಪ್ರಸಂಗದಲ್ಲಿ ಆಟ ಆರಂಭವಾಗುವಾಗ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮ ಹುಟ್ಟಿನ ಗುಟ್ಟನ್ನರಿಯದೆ ಓಂಕಾರವನ್ನುಚ್ಚರಿಸಿದಾಗ ದೇವಿ ಪ್ರತ್ಯಕ್ಷಳಾಗಿ ಅವರಿಗೆ ಹೆಸರು, ಗುಣ, ಕರ್ತವ್ಯಾದಿಗಳನ್ನು ತಿಳಿಸಿ ಅಂತರ್ಧಾನಳಾಗುತ್ತಾಳೆ. ಅಲ್ಲಿ ತನಕ ಮುಗ್ಧರಾಗಿ, ದೇವಿಯ ಮಕ್ಕಳಾಗಿ ಭಕ್ತಿಭಾವವನ್ನು ಮೈತುಂಬಿಕೊಂಡಿದ್ದ ತ್ರಿಮೂರ್ತಿ ದೇವರುಗಳು, ದೇವಿ ಅಂತರ್ಧಾನಳಾದ ಮರುಕ್ಷಣದಲ್ಲಿ ಜಗಳಾಡಲು ತೊಡಗುತ್ತಾರೆ.

ತ್ರಿಮೂರ್ತಿಗಳ ಈ ವಾದ ಸುಮಾರು ಮುಕ್ಕಾಲು ಗಂಟೆ ತೆಗೆದು ಕೊಳ್ಳುತ್ತದೆ. ಇರಲಿ ಬಿಡಿ. ಆದರೆ ಆ ವಾದ ಮತ್ತು ವಾಕ್ಯಗಳ ಪ್ರಯೋಗ, ಸಮರ್ಥನೆಗೆ ನೀಡುವ ಉದಾಹರಣೆಗಳು ಯಕ್ಷಗಾನದ ಸಂದರ್ಭಕ್ಕೆ ಹೊಂದಿಕೊಳ್ಳುವುದಿಲ್ಲ. ಪಾತ್ರಗಳು ಬ್ರಹ್ಮ, ವಿಷ್ಣು ಮಹೇಶ್ವರರದ್ದಲ್ಲವೇ? ಪಾತ್ರಧಾರಿಗಳು ಅದನ್ನು ಮರೆತು ಸಾಮಾನ್ಯ ಮನುಷ್ಯರು ಬೀದಿಬದಿಯಲ್ಲಿ ನಿಂತು ಜಗಳವಾಡುವ ರೀತಿಯಲ್ಲಿ ಸಂವಾದ ಮಾಡಬಹುದೆ? ಪಾತ್ರದ ಗೌರವ ಮತ್ತು ಕಥೆಯ ಮಹತ್ವಕ್ಕೆ ಕುಂದುಂಟಾಗುವ ರೀತಿಯಲ್ಲಿ ಆ ದೃಶ್ಯವನ್ನು ಅಭಿನಯಿಸುವುದು ಸರಿಯೇ? ಮತ, ಬಹುಮತ, ಪಕ್ಷ, ಪಕ್ಷಾಂತರ, ಮುಂತಾದ ಪದಗಳನ್ನು ಬಳಸುತ್ತಾ ಸಮಕಾಲೀನ ರಾಜಕೀಯ ಪಕ್ಷಗಳ, ರಾಜಕೀಯ ನಾಯಕರನ್ನು ಅವಹೇಳನ ಮಾಡುವಂತಹ ತರ್ಕಗಳನ್ನು ಪ್ರಸ್ತುತಪಡಿಸುವುದು ಸರಿಯೇ?

ತಾವು ನಿಭಾಯಿಸುವ ಪಾತ್ರ ವಾದದಲ್ಲಿ ಗೆಲ್ಲಲೇಬೇಕೆಂಬ ಹಠ ಯಾಕೆ? ಮಾತಿನ ಮೂಲಕ ಇದಿರಾಳಿ ಪಾತ್ರವನ್ನು ಸೋಲಿಸುವುದು ಅಂದರೆ ನಿಜವಾಗಿ ಇದಿರಾಳಿ ಪಾತ್ರಧಾರಿಯನ್ನು ಸೋಲಿಸುವುದಲ್ಲವೇ? ಅಂತಹ ಸಂದರ್ಭಗಳಲ್ಲಿ ಪ್ರೇಕ್ಷಕರಿಗೆ ಆ ದೃಶ್ಯ ತ್ರಿಮೂರ್ತಿಗಳ ಸಂವಾದವಾಗಿ ಕಾಣಿಸುವ ಬದಲು ಕಲಾವಿದರ ಮಾತುಗಾರಿಕೆಯ ಪೈಪೋಟಿಯಾಗಿ ಕಾಣುತ್ತದೆ. ಅದರಲ್ಲೂ ದೇವರ ಪಾತ್ರಗಳು ಈ ರೀತಿ ಜಗಳವಾಡುವುದರಿಂದ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯೂ ಇದೆ. 

ಯಕ್ಷಗಾನದಲ್ಲಿ ಯಾವುದೇ ಪಾತ್ರವಾಗಲಿ ಜನಸಾಮಾನ್ಯರಾಡುವ ಭಾಷೆಯನ್ನು ಬಿಟ್ಟು ಸ್ವಲ್ಪ ಮೇಲ್ಮಟ್ಟದ ಅಂದರೆ ಯಕ್ಷಗಾನೀಯ ಶೈಲಿಯ ಎನ್ನಬಹುದಾದ ಭಾಷಾ ಶೈಲಿಯನ್ನು ಪ್ರಯೋಗಿಸಬೇಕಾಗುತ್ತದೆ. ಆದರೆ ಈಗ ಯಕ್ಷಗಾನದಲ್ಲಿ ಭಾಷಾ ಬಳಕೆಯ ಬಗೆಗಿನ ಆ ಒಂದು ಎಚ್ಚರ ಹೆಚ್ಚಿನ ಕಲಾವಿದರಲ್ಲಿ ಕಾಣಬರುವುದಿಲ್ಲ.

ಪ್ರಸಂಗದ ಆಶಯವನ್ನು ಮನಸ್ಸಿನಲ್ಲಿಟ್ಟುಕೊಂಡು, ವೈಯಕ್ತಿಕ ಹೆಚ್ಚು ಗಾರಿಕೆಯನ್ನು ಪ್ರದರ್ಶಿಸುವ ಚಪಲ ಕೈಬಿಡಬೇಕು. ಕನಿಷ್ಠ ಪಾತ್ರದ ಗೌರವ, ಸಂದರ್ಭದ ಔಚಿತ್ಯವನ್ನು ಗಮನಿಸಿಯಾದರೂ ತಮ್ಮ ತಮ್ಮ ಪಾತ್ರಗಳನ್ನು ಯೋಗ್ಯರೀತಿಯಲ್ಲಿ ಚಿತ್ರಿಸುವ ಪ್ರಯತ್ನ ಮಾಡಬಾರದೇ? ಭಾಷಾ ಪ್ರಯೋಗ, ವಾದಿಸುವ ವಿಧಾನ, ಅಭಿನಯಗಳಲ್ಲಾದರೂ ಪಾತ್ರಗಳ ವೈಶಿಷ್ಟéವನ್ನು ತೋರಿಸುವ ಪ್ರಯತ್ನ ಮಾಡಬಾರದೇ?

 ಯಕ್ಷಪ್ರಿಯ

ಟಾಪ್ ನ್ಯೂಸ್

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.