ಬಹುವಚನದಲ್ಲಿ  ರಾಧಿಕಾ ವಿಹಾರ ಬಹುವಚನಂ…


Team Udayavani, Sep 8, 2017, 1:44 PM IST

08-KALA-6.jpg

ಇದು ಸಂಗೀತ, ಮಾತುಗಾರಿಕೆಗೆ ಅನ್ವಯಿಸುವ ವೇದಿಕೆಯ ಹೆಸರು. ಸಮಾನ ಮನಸ್ಸುಗಳೊಂದಿಗೆ ಪುತ್ತೂರಿನ ಕಾಲೇಜು ಉಪನ್ಯಾಸಕ ಶ್ರೀಶ ಕುಮಾರ್‌ ಸ್ಥಾಪಿಸಿ, ಬೆಳೆಸಿದ ರಂಗವೇದಿಕೆಯಿದು. ಮಂಗಳೂರಿನ ಕಲಾವಿದೆ ರಾಧಿಕಾ ಶೆಟ್ಟಿ ಅವರ ನೃತ್ಯಮಾರ್ಗಂ ಎಂಬ ಶಾಸ್ತ್ರೀಯ ಭರತನಾಟ್ಯದ ಸಂಚಾರಕ್ಕೂ ಈ ವೇದಿಕೆ ಇತ್ತೀಚೆಗೆ ಸಾಕ್ಷಿಯಾಯಿತು. 

ಅಲ್ಲಿ ಸಾಹಿತ್ಯ, ಯಕ್ಷಗಾನ, ಉಪನ್ಯಾಸದಂತಹ ಹಲವು ಬಗೆಯ ಅಭಿರುಚಿಯ ವರ್ಗದ ಪ್ರೇಕ್ಷಕರಿದ್ದರು. ರಾಧಿಕಾ ಅವರು ತಮ್ಮ ಪ್ರತಿಭೆಯಿಂದ ಒಂದು ತಾಸು ಪ್ರೌಢ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ ಯಾದರು. ತಂಜಾವೂರು ಸಹೋದರರು ಪೋಣಿಸಿದ ಚೌಕಟ್ಟಿನ “ಮಾರ್ಗಂ’ನಲ್ಲಿ ರಾಧಿಕಾ ವಿಹಾರಕ್ಕೆ ಪ್ರೇಕ್ಷಕರು ಕರತಾಡನ ಮೂಲಕ ಪ್ರಶಂಸೆಯ ಮಳೆಗೆರೆದರು. 

ಐದು ಹಾಡುಗಳಿಗೆ ರಾಧಿಕಾ ನೃತ್ಯ ಪ್ರಸ್ತುತ ಪಡಿಸಿದರು. ಅಷ್ಟಕಂ(ಜಗನ್ನಾಥಾಷ್ಟಕಂ) ಮೂಲಕ ಪ್ರತಿಭೆ ಅನಾವರಣ ಮಾಡಿದ ಕಲಾವಿದೆ, ಅನಂತರ ದೇವರನಾಮ(ಕೀರ್ತನೆಯ ರೂಪ), ಪದಂ, ದೇವರ ನಾಮದಲ್ಲಿ (ಜಾವಳಿ ರೂಪದ ಪ್ರಸ್ತುತಿ- ಪ್ರಯೋಗ)ವಿಹರಿಸಿ, ಭಜನ್‌ನಲ್ಲಿ ಕೊನೆಗೊಳಿಸಿದರು. ಒಡಿಶಾದ ಸಮಕಾಲೀನ ಕವಿ ಮಂಗಲಪ್ರಸಾದ್‌ ಪ್ರಧಾನ್‌ ರಚಿಸಿದ ಜಗನ್ನಾಥಾಷ್ಟಕಂ ಮೂಲಕ ರಾಧಿಕಾ ರಂಗವಿಹಾರ ಆರಂಭಿಸಿದರು. ಬೃಂದಾವನ ಲೀಲಾಚರಿತ… ಎಂಬ ಸಂಸ್ಕೃತ, ಒಡಿಶಾದ ರಚನೆ ವಿಷ್ಣು, ಕೃಷ್ಣ ಗುಣಗಾನ ಮಾಡುತ್ತದೆ. ಎಲ್ಲ ಧರ್ಮಗಳನ್ನು ಒಂದೇ ದೃಷ್ಟಿಯಲ್ಲಿ ನೋಡುವ ವಿರಳ ರಚನೆಯ ಈ ಹಾಡಿಗೆ ಕಲಾವಿದೆ ಪೂರ್ಣ ನ್ಯಾಯ ಒದಗಿಸಿದರು. ಹತ್ತು ಅವತಾರಗಳ ರಂಗಾವಿಷ್ಕಾರ ಆಪ್ತವಾಗಿತ್ತು. ಕಾರ್ತಿಕ್‌ ಹೆಬ್ಟಾರ್‌ ಅವರ ಸಂಗೀತ ರಚನೆ, ಹಾಡುಗಾರಿಕೆಯಿರುವ ಧ್ವನಿಮುದ್ರಿತ ನೃತ್ಯಪ್ರಸ್ತುತಿಗೆ ಸಹಜವಾಗಿ ಮಿತಿಯಿತ್ತಾದರೂ ಮನೋಧರ್ಮದ ವೃತ್ತಿಪರ ಕಲಾವಿದೆಯಾಗಿರುವ ರಾಧಿಕಾಗೆ ಈ ವೇದಿಕೆ ಮತ್ತು ಪ್ರೇಕ್ಷಕರು ಒಡ್ಡಿದ್ದು ಚಿಕ್ಕ ಸವಾಲೇನೂ ಅಲ್ಲ. ಪ್ರೌಢ ಪ್ರೇಕ್ಷಕರ ಎದುರು ಪ್ರೌಢವಾಗಿಯೇ ಈ ಕಲಾವಿದೆ ಕಾಣಿಸಿಕೊಂಡರು. 

ಅನಂತರದ ಪ್ರಸ್ತುತಿ ದೇವರನಾಮ, ಅದಕ್ಕೆ ಅವರು ಬಳಸಿಕೊಂಡದ್ದು ಪುರಂದರ ದಾಸರ ಕೃತಿ ಜಗನ್ಮೋಹನನೆ ಕೃಷ್ಣ… ದೇವರ ನಾಮದ ಕೃತಿಯ ರೂಪದ ಪ್ರಸ್ತುತಿ ರಾಧಿಕಾ ಅವರ ಆ ದಿನದ ವಿಶೇಷತೆಯಾಗಿತ್ತು. ಗೀತೋಪದೇಶ, ಯಶೋದೆಗೆ ಬಾಲಕೃಷ್ಣ ತನ್ನ ಬಾಯಲ್ಲಿ ಮೂಜಗವ ತೋರಿದ ಬಗೆ, ಕೂರ್ಮಾವತಾರದ ಚಿತ್ರಣವನ್ನೆಲ್ಲ ಸಮರ್ಥವಾಗಿ ಕಲಾವಿದೆ ನಿಭಾಯಿಸಿದರು. ರಾಗಮಾಲಿಕೆಯಲ್ಲಿ ಸಂಚರಿಸಿದ ಹಾಡು, ಆದಿತಾಳದಲ್ಲಿ ಬಂಧಿಯಾಗಿತ್ತು. 

ಹೆಣ್ಣಿನ ಬದುಕನ್ನು ಮೂರು ಹಂತಗಳಲ್ಲಿ ಚಿತ್ರಿಸುವ ತಮಿಳುಪದಂ ರಾಧಿಕಾ ಅವರ ಮೂರನೇ ಪ್ರಸ್ತುತಿ. ಅಮ್ಮ-ಮಗು, ನಾಯಕ- ನಾಯಕಿ, ದೇವರ ಬಗೆಗಿನ ಅಧ್ಯಾತ್ಮವೇ ಪ್ರೀತಿ ಎಂಬ ಮೂರು ಹಂತಗಳನ್ನು ತೇಡಿ… ತೇಡಿ ಎಂಬ ಹಾಡಿಗೆ ಹೆಜ್ಜೆ ಹಾಕುತ್ತಾ, ಮೂರು ಬಗೆಯ ಶೃಂಗಾರವನ್ನು ಚಿತ್ರಿಸಲಾಯಿತು. ಈ ಬಗ್ಗೆ ದಿಲ್ಲಿಯ ಕಾರ್ಯಾಗಾರದಲ್ಲಿ ಗುರು ರಮಾ ವೈದ್ಯನಾಥನ್‌ ಅವರನ್ನೊಮ್ಮೆ ರಾಧಿಕಾ ಪ್ರಶ್ನಿಸಿದ್ದರಂತೆ. ಅವರಿಂದ ಕಲೆ ಹಾಕಿದ ಮಾಹಿತಿಯನ್ನು ರಂಗಾವಿಷ್ಕಾರ ಮಾಡುವಲ್ಲಿ ರಾಧಿಕಾ ಸ್ವಂತಿಕೆ ಕಾಯ್ದುಕೊಂಡಿ¨ªಾರೆ. ಮಾಧವಿ ಗೋಪಾಲಕೃಷ್ಣನ್‌ ಅವರ ಈ ರಚನೆಗೆ ಸಂಗೀತ ನೀಡಿದ್ದು ಡಾ| ಎಸ್‌. ವಾಸುದೇವನ್‌ ಅಯ್ಯಂಗಾರ್‌ ಅವರು. ಕೃತಿಯ ಮೊದಲ ಭಾಗದಲ್ಲಿ ಕಲಾವಿದೆ, ಅಮ್ಮ ಮಗುವಿನ ಚಟುವಟಿಕೆಯನ್ನು ನೋಡಿ ಖುಷಿಪಡುವ ಬಗೆಯನ್ನು, ಎರಡನೇ ಭಾಗದಲ್ಲಿ ನಾಯಕನಲ್ಲಿ ಅನುರಕ್ತಳಾದ ನಾಯಕಿಯ ಬಗೆ, ಸೌಂದರ್ಯದ ವರ್ಣನೆಯನ್ನು ಚಿತ್ರಿಸಿ, ನಾಯಕನೇ ಈ ನಾಯಕಿಯ ಉಸಿರು ಎಂಬುದನ್ನು ಚಿತ್ರಿಸಲಾಗಿದೆ. “ನೀನೇ ಅಲ್ಲವೇ ಪರಬ್ರಹ್ಮ? ಭಗವಂತ ತನ್ನೊಳಗೇ ಇರಬೇಕು’ ಎಂಬ ಭಕ್ತೆಯ ಅದಮ್ಯ ಆಸೆಯ ಭಕ್ತಿ ಶೃಂಗಾರದ ಭಾಗ ಮೂರನೆಯದು. ರಾಗಮಾಲಿಕೆ, ಆದಿತಾಳದ ಈ ರಂಗಪ್ರಸ್ತುತಿ ಅರ್ಥಪೂರ್ಣವಾಗಿತ್ತು. 

ನಾಲ್ಕನೆಯ ಹಾಡು ಸದ್ದು ಮಾಡಲು ಬೇಡವೊ. ಈ ದೇವರನಾಮವನ್ನು ಜಾವಳಿ ಮಾದರಿಯಲ್ಲಿ ರಾಧಿಕಾ ಪ್ರೇಕ್ಷಕರ ಮುಂದಿಟ್ಟರು. ನಾಯಕಿಯನ್ನು “ಪರಕೀಯ ನಾಯಕಿ’ ರೂಪದಲ್ಲಿ ಚಿತ್ರಿಸ ಲಾಯಿತು. ಕೃಷ್ಣ ನಾಯಕಿ ಜತೆಗಿನ ಸಂವಾದ ಚೆನ್ನಾಗಿತ್ತು. ತುಳಸೀದಾಸರ ರಚನೆಯ ಟುಮಕ್‌ ಚಲತ್‌ ಭಜನ್ನೊಂದಿಗೆ ರಾಧಿಕಾ ಕಾರ್ಯಕ್ರಮಕ್ಕೆ ಅಂಕದ ಪರದೆ ಎಳೆದರು. ಮಿಶ್ರ ಖಮಾಚ್‌-ತಿಶ್ರ ನಡೆ ಯಲ್ಲಿದ್ದ ಈ ಪ್ರಸ್ತುತಿ ಕೌಸಲೆÂ-ರಾಮನ ನಡುವಿನ ವಾತ್ಸಲ್ಯದ ವರ್ಣನೆಯ ಜತೆಗೆ ಕವಿಯ ಪರಮಾನಂದ ಸ್ಥಿತಿಗೆ ಕನ್ನಡಿ ಹಿಡಿಯಿತು. 

ಒಟ್ಟಾರೆಯಾಗಿ, ಮಾರ್ಗಂ ಚೌಕಟ್ಟಿನಲ್ಲಿ ಅಭಿನಯ ಪ್ರಧಾನವಾಗಿ ಪದಂ, ಜಾವಳಿ, ಭಜನ್‌ ಪ್ರಸ್ತುತಿ ಮಾಡಿದ್ದು ರಾಧಿಕಾ ಅವರ ವಿಶೇಷತೆ. ಪ್ರೇಕ್ಷಕರ ಸಾಲಲ್ಲಿದ್ದ ಹಿರಿಯ ನೃತ್ಯ ಗುರು ಕುದಾRಡಿ ನಯನಾ ವಿ. ರೈ ಅವರು ಅನಂತರದ ಸಂವಾದದಲ್ಲಿ ರಾಧಿಕಾರ ಅಭಿನಯವನ್ನು ಪ್ರಶಂಸಿಸಿದ್ದು, ಕಲಾವಿದೆಯ ಪ್ರತಿಭೆಗೆ ಕಿರೀಟ ತೊಡಿಸಿದಂತಿತ್ತು. 

ನೃತ್ಯ ಕಲಾವಿದೆ ರಾಧಿಕಾ ಸನಾತನ ನಾಟ್ಯಾಲಯದ ಹೆಸರಾಂತ ನೃತ್ಯಗುರು ವಿ| ಶಾರದಾಮಣಿ ಶೇಖರ್‌ ಅವರ ಗರಡಿಯಲ್ಲಿ ಆರಂಭಿಕ ಹೆಜ್ಜೆಗಳನ್ನು ಹಾಕಿದ ರಾಧಿಕಾ, ಇಂದು ದೇಶದ ಉದ್ದಗಲಕ್ಕೂ ತಮ್ಮ ಪ್ರೌಢ ಪ್ರದರ್ಶನದ ಮೂಲಕ ಗುರುತಿಸಿಕೊಂಡಿರುವ ಮಂಗಳೂರಿನ ಶಾಸ್ತ್ರೀಯ ಭರತನಾಟ್ಯ ಕಲಾವಿದೆ. 

ನೃತ್ಯದ ಆಳ ಮತ್ತು ವಿಸ್ತಾರವನ್ನು ಹುಡುಕುತ್ತ ಇವರು ಆಕರ್ಷಿತರಾದದ್ದು ಪ್ರಸಿದ್ಧ ನೃತ್ಯಗಾತಿ ಪದ್ಮಿನಿ ರಾಮಚಂದ್ರನ್‌ ಅವರ ಕಡೆಗೆ. ಪದ್ಮಿನಿ ಅವರ ಮಾರ್ಗದರ್ಶನದಲ್ಲಿಯೇ ಬೆಂಗಳೂರಿನಲ್ಲಿ ರಂಗ ಪ್ರವೇಶ ಮಾಡಿದ ರಾಧಿಕಾ, ಮತ್ತಷ್ಟು ಅಭಿನಯ ಪ್ರೌಢಿಮೆ ಸಾಧಿಸುವಂತಾಗಲು ಕಾರಣರಾದವರು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆ ಭ್ರಗಾ ಬಸೆಲ್‌. ಅಭಿನಯ ಕಲಿಸುವಂಥದ್ದಲ್ಲ, ಅದು ಕಲಾವಿದರಿಗೆ ಆಂತರಂಗಿಕ ಎಂಬುದು ರಾಧಿಕಾ ಅವರ ವಿಷಯದಲ್ಲಿಯೂ ಸತ್ಯ. ನೃತ್ಯದಲ್ಲಿ ಹಾವ ಭಾವಾಭಿನಯವೇ ಇವರ ಸಾಮರ್ಥ್ಯ. ಅವರ ಮಾತನ್ನೇ ಉÇÉೇಖೀಸಿ ಹೇಳುವುದಾದರೆ, ಅವರೊಬ್ಬ ಸಮರ್ಥ ನೃತ್ಯಪಟುವಲ್ಲ. ನಾಟ್ಯವೇನಿದ್ದರೂ ಅವರಿಗೆ ಅಂತರಂಗವನ್ನು ಪ್ರೇಕ್ಷಕರ ಮುಂದಿಡುವ ಮಾಧ್ಯಮ ವಷ್ಟೇ. ಇವರ ನಾಟ್ಯ ನರ್ತನ ಪ್ರಧಾನವಲ್ಲ. ಅಭಿನಯವೇ ಜೀವಾಳ. 

ನಿಟ್ಟೆ ಕಾಲೇಜಿನಿಂದ ಎಂಜಿನಿಯ ರಿಂಗ್‌ ಪದವಿ ಪಡೆದ ರಾಧಿಕಾ, ಮಾಹಿತಿ ತಂತ್ರಜ್ಞಾನ ಕ್ಷೇತ್ರ ದಲ್ಲಿ 6 ವರ್ಷ ನೌಕರಿ ಯಲ್ಲಿ ಇದ್ದ ವರು. ಭಾರತದ ಮಣ್ಣಿನ ಕಲೆ, ನೆಲಕ್ಕೆ ಅಂಟಿಕೊಳ್ಳುವ ಅದಮ್ಯ ಆಸೆ ಅಮೆರಿಕದಲ್ಲಿ ನೆಲೆಸಿದ್ದ ಇವರನ್ನು ಮತ್ತೆ ಭಾರತಕ್ಕೆ ಬರುವಂತೆ ಮಾಡಿತು. ಇನ್ನಷ್ಟು ಕಲಿಯಲು ಬಾಕಿ ಇದೆ ಎಂಬುದನ್ನು ಬಹಳ ಬೇಗ ಗುರುತಿಸಿಕೊಂಡ ರಾಧಿಕಾ ಅವರಿಗೆ ಗುರುವಾಗಿ ಒಲಿದದ್ದು ದೇಶ, ವಿದೇಶಗಳಲ್ಲಿ ಖ್ಯಾತನಾಮರಾಗಿರುವ ರಮಾ ವೈದ್ಯ ನಾಥನ್‌. ದಿಲ್ಲಿಯಲ್ಲಿ ನೆಲೆಸಿರುವ ರಮಾ ಅವರ ಬಳಿಗೆ ತೆರಳಿ, ಅವರಿಂದ ನಾಟ್ಯವನ್ನು ತಿದ್ದಿಸಿ ಕೊಳ್ಳು ತ್ತಲೇ ಇದ್ದ ರಾಧಿಕಾ, ಅವರೀಗ ಸ್ವಂತ ನೃತ್ಯನಿರ್ದೇಶನ ದತ್ತ ಹೆಚ್ಚು ಉತ್ಸುಕತೆ ತೋರುತ್ತಿರುವ ಏಕವ್ಯಕ್ತಿ ಕಲಾವಿದೆ. 

ರಾಧಿಕಾ ಮುನ್ನಡೆಸುವ “ನೃತ್ಯಾಂಗನ್‌’ ಎಂಬ ಹೆಸರಿನ ಟ್ರಸ್ಟ್, ಮುಂದಿನ ಜನಾಂಗದ ಏಕವ್ಯಕ್ತಿ ಕಲಾವಿದರನ್ನು ತಯಾರು ಮಾಡುವ ಕಡೆಗೆ ದೃಷ್ಟಿ ನೆಟ್ಟಿದೆ. ಏಕವ್ಯಕ್ತಿ ಪ್ರದರ್ಶನ ನೀಡಬಲ್ಲ ಕಲಾವಿದರು ಭರತನಾಟ್ಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತಯಾರಾಗಬೇಕು ಎನ್ನುವ ಹಂಬಲ ರಾಧಿಕಾ ಅವರದು. ಜತೆಗೆ, ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದ ಮಹೋನ್ನತ ಕಲಾವಿದರ ಪ್ರದರ್ಶನ ಆಯೋಜನೆ, ನೃತ್ಯ ಕಾರ್ಯಾಗಾರ ಸಂಯೋಜನೆ… ಹೀಗೆ ಇಲ್ಲಿನ ನೃತ್ಯಾಸಕ್ತ ಪ್ರೇಕ್ಷಕರು, ನೃತ್ಯಾಭ್ಯಾಸಿಗಳು ಗುಣಮಟ್ಟದ ಏಕವ್ಯಕ್ತಿ ಪ್ರದರ್ಶನಗಳನ್ನು ನೋಡುವಂತೆ ಮಾಡುವುದು ಈ ಟ್ರಸ್ಟಿನ ಉದ್ದೇಶ. 

ಶಾಸ್ತ್ರೀಯ ನೃತ್ಯಕ್ಕೆ ಯುವ ತಲೆಮಾರಿನ ಪ್ರೇಕ್ಷಕ ರಿಲ್ಲ ಎಂಬುದು ಎಲ್ಲೆಲ್ಲಿಯೂ ಕೇಳಿಬರುತ್ತಿರುವ ಕೂಗು. ಈ ಕೊರತೆಯನ್ನು ನಿವಾರಿಸಬೇಕಿದ್ದರೆ, ಎಳೆ ಮನಸ್ಸುಗಳನ್ನು ನೃತ್ಯದ ಕಡೆಗೆ ಆಕರ್ಷಿಸಿ, ಅವರಲ್ಲಿ ಅಭಿರುಚಿ ಮೂಡಿಸಬೇಕು ಎಂಬ ಯೋಚನೆ ರಾಧಿಕಾ ಅವರದು. ಈ ದಿಸೆಯಲ್ಲಿ ಕರಾವಳಿ ಜಿಲ್ಲೆಯುದ್ದಕ್ಕೂ ಶಾಲೆಗಳಲ್ಲಿ ಜ್ಞಾನವಾಹಿನಿ ಎಂಬ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇವರು ನಡೆಸುತ್ತಿ¨ªಾರೆ. ಈ ವರ್ಷ ಇಂತಹ 15 ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಇವರು, ಇದಕ್ಕೆ ಲಭಿಸಿದ ಸಕಾರಾತ್ಮಕ ಪ್ರತಿಕ್ರಿಯೆಯಿಂದ, ಇನ್ನಷ್ಟು ಶಾಲೆಗಳಲ್ಲಿ ಜ್ಞಾನವಾಹಿನಿ ಹಮ್ಮಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.

ಜಯಶ್ರೀ ಶೇಖರ್‌

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.