ರಮಣ ಬಾಲಚಂದ್ರ ನೀಡಿದ ಸರ್ವಾಂಗಭೂಷಿತ ವೀಣೆ ಕಛೇರಿ


Team Udayavani, Jul 14, 2017, 9:39 AM IST

14-KALA-4.jpg

ಅದರ ಸೌಂದರ್ಯ ಅಥವಾ ಮೌಲ್ಯವೇ ಬೇರೆ ತೆರನಾದದ್ದು. ನೈಜತೆಯೊಂದಿಗೆ ಸಂಪ್ರದಾಯದ ಮಾರ್ಗದಲ್ಲಿ ಸಾಗಿ, ಅದರ ಭದ್ರ ತಳಹದಿಯಲ್ಲಿ ನಡೆಯುವ ಸೃಜನಶೀಲ ಚಟುವಟಿಕೆಯನ್ನು  ಸಮೀಪದಿಂದ ಗಮನಿಸುವುದೇ ಒಂದು ಆನಂದ. ಇಂತಹ ಒಂದು ಆನಂದದ ವಾತಾವರಣವನ್ನು ಜುಲೈ 1, 2017ರಂದು ಅದ್ಭುತ ಪ್ರತಿಭೆಯನ್ನು ಹೊಂದಿದ ಯುವ ವೈಣಿಕ ಬೆಂಗಳೂರಿನ ವಿ| ರಮಣ ಬಾಲಚಂದ್ರ ಪುತ್ತೂರಿನಲ್ಲಿ ಮೂಡಿಸಿದರು. 

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಈ ವೀಣಾ ಕಛೇರಿ ಜರಗಿತು.
ಕೇವಲ 17 ವರ್ಷ ವಯಸ್ಸಿನ ಈ ಪ್ರತಿಭೆ, ವೀಣೆಯಲ್ಲಿ ಗಮಕಯುಕ್ತವಾಗಿ ಬೇಗಡೆಯಂತಹ ಘನರಾಗದ ಎಲ್ಲ ಮಜಲು ಗಳನ್ನು, ದೀಕ್ಷಿತರ ರಚನೆಯಾದ ವಲ್ಲಭ ನಾಯಕಸ್ಯದ ಪ್ರಸ್ತುತಿ ಮತ್ತು ಚುಟುಕಾದ ಸ್ವರ ವಿನ್ಯಾಸದ ಮೂಲಕ ಕಛೇರಿಯನ್ನು  ಆರಂಭಿಸಿದರು; ಅದರ ಹಿಂದಿನ ಸಾಧನೆ ಮತ್ತು ಪ್ರತಿಭೆ ಕೇಳುಗರನ್ನು ಬೆರಗುಗೊಳಿಸಿತು ಅಂದರೆ ಅತಿಶಯೋಕ್ತಿಯಲ್ಲ. ಇದಾದ ಅನಂತರ ಪುರಂದರದಾಸರ ರಚನೆ ಎಂಥ ಚೆಲುವಗೆ ಅಭೇರಿ ರಾಗದಲ್ಲಿ ಚುರುಕಾಗಿ ಮೂಡಿಬಂದು ಕಛೇರಿಯಲ್ಲಿ “ಘನ – ಲಘು’ ಇವೆರಡರ ಸಮ ಮಿಶ್ರಣದ ಸುಳಿವನ್ನು ನೀಡಿತು. ಅನಂತರ ತ್ಯಾಗರಾಜರ ಕೀರ್ತನೆ ಅನುಪಮ ಗುಣಾಂಬುಧಿ  ಅಠಾಣ ರಾಗದಲ್ಲಿ ಲವಲವಿಕೆಯಿಂದ ಪ್ರಸ್ತುತಗೊಂಡಿತು. ಬಳಿಕ ಹದವರಿತ ಗಮಕಗಳೊಂದಿಗೆ ಮೂಡಿ ಬಂದುದು ಅಪರೂಪದ ರಾಗ ಧೇನುಕ. ಅವರು ವೀಣೆಯಲ್ಲಿ ರಾಗಾಲಾಪನೆ ಮಾಡುತ್ತಾ ಮಾಡುತ್ತಾ ಮಧ್ಯದಲ್ಲಿ ನೀಡುವ ಸಣ್ಣ ವಿರಾಮಗಳು ಮನಸ್ಸನ್ನು ತಟ್ಟುವ ಗುಣ ಹೊಂದಿದ್ದು, ರಸಾನುಭವದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾದವು. ತ್ಯಾಗರಾಜರ ಕೀರ್ತನೆ ತೆಲಿಯಲೇದು ರಾಮ ಭಕ್ತಿ ಸಹಿತವಾಗಿ, ಗಾಯಕಿ ಮನೋಧರ್ಮದಲ್ಲಿ ಕಲ್ಪನಾ ಸ್ವರಗಳೊಂದಿಗೆ ಪ್ರಸ್ತುತಿಗೊಂಡು ವಿಶಿಷ್ಟ ಅನುಭವವನ್ನು ನೀಡಿತು. ವೀಣೆಯ ಝೇಂಕಾರ ಅನುರಣನಗೊಂಡದ್ದು ಪೂರ್ವಿಕಲ್ಯಾಣಿ ರಾಗದ ಆಲಾಪನೆಯಲ್ಲಿ. ಪೂರ್ವಿ ಕಲ್ಯಾಣಿ ರಾಗದ ವಿವಿಧ ಭಾವಗಳನ್ನು ಎಳ್ಳಷ್ಟೂ ಪಾಕ ಮೀರದಂತೆ, ಹದವರಿತು ವಿಸ್ತರಿಸುತ್ತಾ ಹೋದವರು ವಿ| ರಮಣ ಬಾಲಚಂದ್ರ. ತ್ಯಾಗರಾಜರ ಕೃತಿ ಜ್ಞಾನಮುಸಗಾ ರಾಗ ಅನಾವರಣಗೊಳ್ಳುತ್ತಾ ಹೋದಂತೆ, ವೀಣೆ ಮತ್ತು ಮೃದಂಗಗಳ ಹದವಾದ ನಾದ ಮಿಳಿತಗೊಂಡು ಮನಸ್ಸನ್ನು ಮುದಗೊಳಿಸಿತು. ಕಲ್ಪನಾ ಸ್ವರದ ವಿನ್ಯಾಸಗಳು ಈ ಯುವ ವೈಣಿಕನ ಅಸಾಮಾನ್ಯ ಪ್ರತಿಭೆಯನ್ನು ಅನಾವರಣಗೊಳಿಸಿದವು. 

ಕಛೇರಿಯ ಮುಖ್ಯ ರಾಗವಾಗಿ ವಿಸ್ತಾರಗೊಂಡದ್ದು ಕಾಂಭೋಜಿ. ಯಾವುದೇ ಗಡಿಬಿಡಿಯಿಲ್ಲದೆ ನಿರಾಯಾಸವಾಗಿ, ಸ್ವಲ್ಪ  ಸ್ವಲ್ಪವೇ ಅನಾವರಣಗೊಂಡು ವೀಣೆಗೆ ವಿಶಿಷ್ಟವಾದ ತಾನಂನೊಂದಿಗೆ ಮೂಡಿಬಂತು. ಅತ್ಯಂತ ಪ್ರಸಿದ್ಧ ಕೃತಿ ತ್ಯಾಗರಾಜರ ಓ ರಂಗಶಾಯಿ ಸಾವಧಾನವಾಗಿ ನಿರೂಪಿಸಲ್ಪಟ್ಟು ನೆರವಲ್‌, ಸ್ವರಪ್ರಸ್ತಾರ, ಮುಕುಟ ಮುಕ್ತಾಯ ಹಾಗೂ ತನಿ ಆವರ್ತನಗಳೊಂದಿಗೆ  “ಸರ್ವಾಂಗ ಶೋಭಿತೆ’ಯಾಗಿ ಪ್ರಸ್ತುತಗೊಂಡಿತು. ಈ ಪ್ರಸ್ತುತಿಯುದ್ದಕ್ಕೂ ಕಾಯ್ದುಕೊಂಡ ಲಯಪ್ರಮಾಣ ಮತ್ತು ಆ ಲಯದಲ್ಲಿ ವಿಳಂಬ ಕೀರ್ತನೆಯನ್ನು “ಸಂಗತಿ’ಗಳ ಮೂಲಕ ಸುಂದರಗೊಳಿಸಿದುದು ಪಂಡಿತರು ಅಂತೆಯೇ ಪಾಮರರೂ ತಲೆದೂಗುವಂತಿತ್ತು. 

ದ್ವಂದ್ವ ಮೃದಂಗಗಳಲ್ಲಿ ಸಹಕರಿಸಿದ ಹಿರಿಯ ವಿದ್ವಾಂಸರಾದ ಡಾ| ರವಿ ಮಂದಪಾಕಂ ಮತ್ತು  ಕಿರಿಯ ವಿದ್ವಾಂಸ ವಿ| ನಿಕ್ಷಿತ್‌ ಟಿ. ಪುತ್ತೂರು – ಇಬ್ಬರೂ ಕಛೇರಿಯುದ್ದಕ್ಕೂ ಪರಸ್ಪರ ಪೂರಕವಾಗಿ, ಮುಖ್ಯ ಕಲಾವಿದರನ್ನು ಹುರಿದುಂಬಿಸುತ್ತಾ ಕೀರ್ತನೆಗಳ  “ಸಂಗತಿ’ಗಳನ್ನು ನುಡಿಸುತ್ತಾ ಸಾಗಿಬಂದು ತನಿ ಆವರ್ತನದಲ್ಲಿ ಮತ್ತಷ್ಟು ಗಮನ ಸೆಳೆದರು. ಕಲ್ಪನಾ ಸ್ವರದಲ್ಲಿ ವೀಣೆ ಮತ್ತು ಎರಡು ಮೃದಂಗಗಳೊಂದಿಗೆ ನಡೆದ “ಸವಾಲ್‌ – ಜವಾಬ್‌’ ತುಸು ದೀರ್ಘ‌ವಾದರೂ ಒಂದಷ್ಟು ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟಿತು. ಡಾ| ರವಿ ಮಂದಪಾಕಂ ತಂಡವನ್ನು ಮುನ್ನಡೆಸುವಲ್ಲಿ ಕೆಲವೊಮ್ಮೆ ಮಾರ್ಗದರ್ಶಕರಂತೆಯೂ ನುಡಿಸಿ ತಮ್ಮ ಸಹೃದಯತೆಯನ್ನು ತೋರಿದರು. ಯುವ ಕಲಾವಿದ ನಿಕ್ಷಿತ್‌ ಟಿ. ಪುತ್ತೂರು ಲವಲವಿಕೆಯಿಂದ ಪೂರಕವಾಗಿ ನುಡಿಸಿ ರಸಾನುಭವವನ್ನು ಕಟ್ಟಿಕೊಡುವಲ್ಲಿ ಸಹಕರಿಸಿದರು. 

ಆಂಧ್ರಪ್ರದೇಶ ಶೈಲಿಯ ಮೃದಂಗ ನುಣಿಸಾಣಿಕೆಯವ ರಾಗಿರುವ ಡಾ| ರವಿ ಮಂದಪಾಕಂ ಮತ್ತು ತಮಿಳುನಾಡಿನ ಪಳನಿ ಬಾಣಿಯ ಮೃದಂಗ ಕಲಾವಿದರಾದ ನಿಕ್ಷಿತ್‌ ಟಿ. ಅಪೂರ್ವ ಹೊಂದಾಣಿಕೆಯ ದ್ವಂದ್ವ ವಾದನದ ಮೂಲಕ ಕಛೇರಿಯನ್ನು ಮೇಲ್ಮಟ್ಟಕ್ಕೇರಿಸಿದರು. ಚುರುಕಾದ ಮತ್ತು ಚುಟುಕಾದ ತನಿ ಆವರ್ತನದಲ್ಲಿ ಈ ಹಿರಿಯ – ಕಿರಿಯ ಲಯವಾದಕರು ಚತುರಶ್ರ- ತಿಶ್ರ, ಖಂಡ ನಡೆ ಮತ್ತು ಮಿಶ್ರನಡೆಗಳಲ್ಲಿ ಲಯ ವಿನ್ಯಾಸವನ್ನು ಪ್ರಸ್ತುತಪಡಿಸಿ ತಮ್ಮ ನೈಪುಣ್ಯವನ್ನು ತೋರಿದರು. ಮಿಶ್ರ ಕೊರಪಿನ ಅನಂತರ ಜತೆಯಾಗಿ ಮೊಹರ ಮುಕ್ತಾಯಗಳನ್ನು ನುಡಿಸಿದ್ದರಿಂದ ತನಿ ಆವರ್ತನಕ್ಕೆ ಒಂದು ಸುಂದರವಾದ ಅಂತ್ಯ ಒದಗಿತು. 

ಮುಂದೆ ಪುರಂದರದಾಸರ ರಚನೆ ಚಂದ್ರಚೂಡ ಶಿವಶಂಕರ ದರ್ಬಾರಿ ಕಾನಡದಲ್ಲಿ ವೀಣೆಯ ಝೇಂಕಾರದೊಂದಿಗೆ, ಮೃದಂಗಗಳ ಸುನಾದದೊಂದಿಗೆ  ಮನಸೂರೆಗೊಂಡಿತು. ಅರುಣಾಚಲ ಶಿವ ರಚನೆ ಆ ದಿನದ ಕಛೇರಿಯಲ್ಲಿ ಕೊನೆಯ ಪ್ರಸ್ತುತಿ. ಇಡೀ ಕಛೇರಿಯಲ್ಲಿ ಸಹೃದಯರೆಲ್ಲ ಪ್ರಧಾನವಾಗಿ ಗಮನಿಸಿದ ಅಂಶವೆಂದರೆ, ಚೆನ್ನಾಗಿ ಹಾಡಬಲ್ಲವರೂ ಆಗಿರುವ ವೀಣೆ ಕಲಾವಿದ ರಮಣ ಬಾಲಚಂದ್ರ ಅವರು ಕೀರ್ತನೆಯ ಆರಂಭದಲ್ಲಿ ಮತ್ತು ಚರಣಗಳಲ್ಲಿ ವೀಣೆಯ ವಾದನದೊಂದಿಗೆ ಹಾಡುತ್ತಲೂ ಇದ್ದರು. ಇದರಿಂದ ಕೇಳುಗರು ಅವರು ನುಡಿಸುವ ಕೀರ್ತನೆಗಳ ಸಾಹಿತ್ಯವನ್ನು ಮನದಲ್ಲಿಯೇ ಗುನುಗುವುದಕ್ಕೆ, ಆ ಮೂಲಕ ಕಛೇರಿಯಲ್ಲಿ ವಿಶಿಷ್ಟವಾಗಿ ಒಳಗೊಳ್ಳುವುದಕ್ಕೆ ಅನುವಾಯಿತು. ವೀಣೆಯು ಮುಖ್ಯ ನೆಲೆಯಲ್ಲಿದ್ದುಕೊಂಡೇ ಹಿನ್ನೆಲೆಯಲ್ಲಿ ಹಾಡಿ, ಕೇಳುಗರು ಮನಸ್ಸಿನಲ್ಲೇ ಹಾಡಿಕೊಳ್ಳುವಂತೆ ಮಾಡಿದ ರಮಣ ಬಾಲಚಂದ್ರ ಅಭಿನಂದನಾರ್ಹರು.

ಇಂತಹದೊಂದು ವೀಣೆಯ ವಿಶಿಷ್ಟ ಅನುಭವಕ್ಕೆ ಕಾರಣರಾದವರು ಸ್ವತಃ ಕಲಾವಿದರೂ ಆಗಿರುವ ಪುತ್ತೂರಿನ ಡಾ| ಶ್ರೀಪ್ರಕಾಶ್‌. ಮಹಾಬಲ – ಲಲಿತ ಕಲಾಸಭಾ (ರಿ.)ದ ಮೂಲಕ ಈ ಆಷಾಢ ಮಾಸದ ವೀಣೆ ಕಛೇರಿಯು ಬಹಳ ಅದ್ಭುತವಾಗಿ ಮೂಡಿಬಂತು. ಪುತ್ತೂರಿನ ಮತ್ತು ಹತ್ತೂರಿನ ಸಂಗೀತಾಸಕ್ತರ ಪರವಾಗಿ ಅವರಿಗೆ ಮನದಾಳದ ಅಭಿನಂದನೆಯನ್ನು ಹೇಳದಿರುವುದು ಹೇಗೆ!

ವಿ| ಬಾಲಕೃಷ್ಣ  ಹೊಸಮನೆ, ಪುತ್ತೂರು

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.