ಭರತನಾಟ್ಯದಲ್ಲಿ ರಾಮಾಯಣದ ಘಟನಾವಳಿ
Team Udayavani, May 18, 2018, 6:00 AM IST
ಪುತ್ತೂರಿನ ಜನತೆಗೆ ಕಲೆಯ ರಸದೌತಣ ನೀಡುತ್ತಾ ಬಂದಿರುವ ಸಂಸ್ಥೆಗಳಲ್ಲಿ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.)ಯೂ ಒಂದು. ಈ ಸಂಸ್ಥೆಯು “ನೃತ್ಯಾಂತರಂಗ’ ಎಂಬ ಸರಣಿ ಕಾರ್ಯಕ್ರಮದ ಮೂಲಕ ಹಲವಾರು ನೃತ್ಯಪಟುಗಳಿಗೆ ಅವಕಾಶವನ್ನು ನೀಡುತ್ತಾ ಬಂದಿದೆ. ಈ ಕಾರ್ಯಕ್ರಮದ 42 ನೇ ಸರಣಿಯಲ್ಲಿ ರಾಮಾಯಣದ ಸನ್ನಿವೇಶಗಳ ರಸದೌತಣವನ್ನು ವಿ| ಬಿ. ದೀಪಕ್ ಕುಮಾರ್ ಹಾಗೂ ಅವರ ಪತ್ನಿ ಪ್ರೀತಿಕಲಾ ಉಣಬಡಿಸಿದ್ದಾರೆ.
ನೃತ್ಯವು ವಿಶ್ವಾಮಿತ್ರ ಮಹರ್ಷಿಗಳ ಹೋಮಕ್ಕೆ ಯಾವುದೇ ಲೋಪ ಉಂಟಾಗದಂತೆ ರಾಮ ಕಾವಲಾಗಿ ನಿಂತು, ಅಹಲೆಗೆ ಜೀವ ತುಂಬುವ ಸನ್ನಿವೇಶದೊಂದಿಗೆ ಪ್ರಾರಂಭವಾಯಿತು. ಇಲ್ಲಿ ರಾಮನ ಶಾಂತತೆ, ಅಹಲೆಯ ಭಕ್ತಿಯನ್ನು ತಮ್ಮ ಅಭಿನಯದ ಮೂಲಕ ತೋರಿಸಿದರು.
ಸೀತಾಕಲ್ಯಾಣದಲ್ಲಿ ರಾಮನು ಶಿವಧನುಸ್ಸನ್ನು ಮುರಿದು ಸೀತೆಯನ್ನು ವಿವಾಹವಾದ ಕಥೆಯನ್ನು ಅಭಿನಯಿಸಿದರು. ನಂತರ ಮಂಥರೆಯು ಕೈಕೇಯಿಗೆ ರಾಮನನ್ನು ವನವಾಸಕ್ಕೆ ಕಳುಹಿಸಿ, ಭರತನಿಗೆ ಪಟ್ಟಾಭಿಷೇಕ ಮಾಡುವ ಮೋಸದ ಸಲಹೆ ನೀಡಿ ಆಕೆ ಈ ವರವನ್ನು ದಶರಥನಲ್ಲಿ ಪಡೆದ ರೀತಿ ಮತ್ತು ದಶರಥನ ದುಃಖವನ್ನು ಕಣ್ತುಂಬಿ ಬರುವಂತೆ ಅಭಿನಯಿಸಿದರು.
ಚಿತ್ರಕೂಟದ ಕಥೆಯನ್ನು ಭರತ ರಾಮನಿಗೆ ದಶರಥನ ಮರಣದ ವಾರ್ತೆಯನ್ನು ತಿಳಿಸಿ ರಾಜ್ಯಕ್ಕೆ ಬಾ ಎಂದು ಕರೆಯುವುದು, ಅದರಲ್ಲಿ ಸಫಲನಾಗದೆ ರಾಮನ ಪಾದುಕೆಯನ್ನು ತೆಗೆದುಕೊಂಡು ಹೋಗುವ ಭಾತೃತ್ವದ ಸನ್ನಿವೇಶವನ್ನು ಸೊಗಸಾಗಿ ಮೂಡಿಬಂತು. ಕೊನೆಯಲ್ಲಿ ಸೀತಾಪಹರಣ, ಲಂಕಾದಹನ, ರಾವಣನ ವಿನಾಶವನ್ನು ಮತ್ತು ಈ ವಿನಾಶ ಕಾರ್ಯದಲ್ಲಿ ಹನುಮಂತ ಹಾಗೂ ಅವನ ಸೈನ್ಯದ ಸಹಾಯ ಹಸ್ತವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಮನಗೆದ್ದರು.
ಈ ಎಲ್ಲಾ ಸನ್ನಿವೇಶಗಳ ನಡುವೆ ಜತಿಗಳೂ ಒಳಗೊಂಡಿದ್ದು ಎಲ್ಲಿಯೂ ಸುಸ್ತು ಅಥವಾ ಅರೆಮಂಡಿ ಕಡಿಮೆಯಾದದ್ದು ಕಂಡುಬಂದಿಲ್ಲ. ಒಟ್ಟಾರೆಯಾಗಿ ಕಥೆ ಹಾಗೂ ಅಭಿನಯ ಜತಿಗಳನ್ನೊಳಗೊಂಡ ಈ ರಾಮಾಯಣ ಕಥಾವಸ್ತುವಿನ ಪ್ರಸ್ತುತಿ ಉತ್ತಮವಾಗಿತ್ತು.
ನಿಶಿತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.