ಚಂದು ಪೂಜಾರಿ ಸಂಸ್ಮರಣಾ ಪ್ರಶಸ್ತಿಗೆ ರಮೇಶಾಚಾರ್ಯ 


Team Udayavani, Nov 16, 2018, 6:00 AM IST

3.jpg

ಸಾಸ್ತಾನ ಪಂಜುರ್ಲಿ ಗರಡಿ ಪಾತ್ರಿಯಾಗಿದ್ದ ಮತ್ತು ಗೋಳಿಗರಡಿ ಮೇಳದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಸಾಸ್ತಾನ ಚಂದು ಪೂಜಾರಿ ಯವರ ನೆನಪಿಗಾಗಿ ನೀಡುವ ಪ್ರಶಸ್ತಿಗೆ ಈ ಬಾರಿ ತೆಂಕು ಬಡಗುತಿಟ್ಟುಗಳ ಸ್ತ್ರೀವೇಷದಾರಿ, ಪ್ರಸಂಗಕರ್ತ,ಅರ್ಥದಾರಿ, ಚೌಕಿಯ ಗುರು ಎಂ.ಕೆ. ರಮೇಶಾಚಾರ್ಯ ಆಯ್ಕೆಯಾಗಿದ್ದಾರೆ. ನ.20 ರಂದು ಗೋಳಿಗರಡಿ ಮೇಳದ ಪ್ರಥಮ ಸೇವೆ ಆಟದಂದು ಪ್ರಶಸ್ತಿ ಪ್ರದಾನಿಸಲಾಗುವುದು. 

 ತೀರ್ಹಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಗ್ರಾಮದವರಾದ ಆಚಾರ್ಯರು ತಂದೆ ಸ್ಥಾಪಿಸಿದ ಶ್ರೀ ಜಗದಂಬಾ ಯಕ್ಷಗಾನ ಮಂಡಳಿಯಲ್ಲಿ ವೇಷ ಮಾಡ ತೊಡಗಿದರು. ಬಚ್ಚನಕೊಡಗೆ ನರಸಿಂಹ ಆಚಾರ್ಯರಿಂದ ತಾಳ ಲಯದ ಅಭ್ಯಾಸಮಾಡಿ ಪೂರ್ಣ ಪ್ರಮಾಣದ ಕಲಾವಿದರಾಗಿ ರೂಪುಗೊಂಡರು.ಬಳಿಕ ಬಡಗುತಿಟ್ಟಿನ ಗುರು ವೀರಭದ್ರ ನಾಯ್ಕರಿಂದ ಹೆಚ್ಚಿನ ಅಭ್ಯಾಸ ಪಡೆದು ಮಂದಾರ್ತಿ ಮೇಳಕ್ಕೆ ಪೂರ್ಣಾವಧಿಯ ಕಲಾವಿದರಾಗಿ ಸೇರ್ಪಡೆಗೊಂಡರು. ಕುರಿಯ ವಿಠಲ ಶಾಸ್ತ್ರಿಗಳ ಪ್ರೇರಣೆಯಂತೆ ಧರ್ಮಸ್ಥಳ ಮೇಳ ಸೇರಿದ ಅವರು ತೆಂಕುತಿಟ್ಟಿನ ಮೇರು ಕಲಾವಿದರಾಗಿ ಮೂಡಿ ಬಂದರು. 20 ವರ್ಷ ಸುರತ್ಕಲ್‌ ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಶೇಣಿ, ಸಾಮಗರೊಂದಿಗೆ ಕುಳಿತು ಅರ್ಥ ಹೇಳುವಷ್ಟು ತಾಳಮದ್ದಳೆಯ ಅರ್ಥದಾರಿಯಾಗಿ ರೂಪುಗೊಂಡರು. ಶನೀಶ್ವರ ಮಹಾತ್ಮೆ,ಬಪ್ಪನಾಡು ಕ್ಷೇತ್ರ ಮಹಾತ್ಮೆ,ಪಾಪಣ್ಣ ವಿಜಯ-ಗುಣಸುಂದರಿ, ನಳ ದಮಯಂತಿ ಮುಂತಾದ ಪ್ರಸಂಗಗಳಲ್ಲಿ ಇವರ ದಮಯಂತಿ, ಸೀತೆ, ಚಂದ್ರಮತಿ, ದಾಕ್ಷಾಯಣಿ ಮುಂತಾದ ಪಾತ್ರಗಳು ಮೆಚ್ಚುಗೆ ಗಳಿಸಿದ್ದವು. ಶೃಂಗ ಸಾರಂಗ, ಸಿಂಧು ಭೈರವಿ, ಸಮರಸಿಂಹ ಶಿವರಂಜಿನಿ , ನಾಗಮಚ್ಚೆ ಮುಂತಾದ ಹೊಸ ಪ್ರಸಂಗಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.ಪ್ರಸ್ತುತ ತೆಂಕಿನ ಹನುಮಗಿರಿ ಮೇಳದ ಪ್ರಧಾನ ಕಲಾವಿದರಾಗಿ ತಿರುಗಾಟ ನಡೆಸುತಿದ್ದಾರೆ. 

 ತಾಳಮದ್ದಳೆಯಲ್ಲಿಯೂ ಅವರಿಗೆ ಸ್ತ್ರೀ ಪಾತ್ರ ಅರ್ಥಗಾರಿಕೆ ಹುಡುಕಿ ಕೊಂಡು ಬರುತಿತ್ತು. ಶ್ರೇಣಿಯವರ ವಾಲಿಗೆ-ತಾರೆ,ಭೀಮನಿಗೆ-ದ್ರೌಪದಿ, ರಾವಣನಿಗೆ-ಮಂಡೋದರಿ ಹೀಗೆ ಶೇಣಿಯವರೇ ತನ್ನನ್ನು ತಿದ್ದಿ ತೀಡಿದವರು ಎಂದು ಸೌಜನ್ಯದಿಂದ ಹೇಳುತ್ತಾರೆ.

 ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ 

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.