ರಂಗದಲ್ಲಿ ಮೆರೆದ ರಂಗನಾಯಕ
ಕಟೀಲು ಒಂದನೇ ಮೇಳದ ಪ್ರಸ್ತುತಿ
Team Udayavani, May 31, 2019, 6:00 AM IST
ರಂಗನಾಯಕ ಶ್ರೀಕೃಷ್ಣನಿಗೆ ಜಾಂಬವತಿಯಲ್ಲಿ ಜನಿಸಿದ ಮಗನಾದ ಸಾಂಬ ಹಾಗೂ ಕೃಷ್ಣನ ಕೊನೆಯ ದಿನಗಳನ್ನು ಆಧರಿಸಿ ಹೆಣೆದ ಈ ಪ್ರಸಂಗ ಒಂದು ಹೊಸ ಕಥಾಹಂದರ ಹೊಂದಿದೆ .ಪೂಂಜ , ಪಟ್ಲ , ಅಂಡಾಲರಂಥಹ ಭಾಗವತ ದಿಗ್ಗಜರ ಸಮ್ಮಿಲನವೂ ಪ್ರಸಂಗದ ಯಶಸ್ಸಿಗೆ ಕಾರಣ.
ಈ ವರ್ಷ ಕಟೀಲು ಒಂದನೇ ಮೇಳದವರು ಭಾಗವತರೂ ಆಗಿರುವ ಅಂಡಾಲ ದೇವಿ ಪ್ರಸಾದ್ ಶೆಟ್ಟಿ ರಚಿಸಿದ “ರಂಗನಾಯಕ’ ಎಂಬ ಪೌರಾಣಿಕ ಆಖ್ಯಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.ಗಟ್ಟಿಯಾದ ಕಥಾ ಹಿನ್ನೆಲೆ , ಉತ್ತಮ ಸಾಹಿತ್ಯದೊಂದಿಗೆ ಛಂದೋಬದ್ಧವಾದ ಪದ್ಯರಚನೆ , ಕಲಾವಿದರ ಸಾಂ ಕ ಪ್ರಯತ್ನ ಹಾಗೂ ಪೂಂಜ , ಪಟ್ಲ , ಅಂಡಾಲರಂಥಹ ಭಾಗವತ ದಿಗ್ಗಜರ ಸಮ್ಮಿಲನ ಎಲ್ಲವೂ ಪ್ರಸಂಗದ ಯಶಸ್ಸಿಗೆ ಕಾರಣವೆನ್ನಬಹುದು .
ರಂಗನಾಯಕ ಶ್ರೀಕೃಷ್ಣನಿಗೆ ಜಾಂಬವತಿಯಲ್ಲಿ ಜನಿಸಿದ ಮಗನಾದ ಸಾಂಬ ಹಾಗೂ ಕೃಷ್ಣನ ಕೊನೆಯ ದಿನಗಳನ್ನು ಆಧರಿಸಿ ಹೆಣೆದ ಈ ಪ್ರಸಂಗ ಒಂದು ಹೊಸ ಕಥಾಹಂದರ ಹೊಂದಿದೆ .ಸಾಂಬನ ದರ್ಪ , ವಿವಾಹ , ಪಶ್ಚಾತ್ತಾಪ , ಪ್ರದ್ಯುಮ್ನ , ಸಾತ್ಯಕಿ , ಕ್ರತವರ್ಮ ಮುಂತಾದವರೊಂದಿಗೆ ಪಾನಮತ್ತರಾಗಿ ದೂರ್ವಾಸ , ವಿಶ್ವಾಮಿತ್ರ , ಕಣ್ವ ಮಹರ್ಷಿಗಳನ್ನು ಕೆಣಕಿ , ಯಾದವ ವಂಶ ನಿರ್ಮೂಲವಾಗಲಿ ಎಂಬ ಶಾಪ, ತಾನು ಶಾಪಗ್ರಸ್ತನಾದ ಸೂರ್ಯದೇವ ಎಂದು ಶ್ರೀಕೃಷ್ಣನಿಂದ ಅರಿವು , ಬಲರಾಮನು ದೇಹತ್ಯಾಗ , ಜರನೆಂಬ ಬೇಡನ ಬಾಣಹತಿಗೊಳಗಾಗಿ ಶ್ರೀಕೃಷ್ಣ ನ ಅವತಾರ ಸಮಾಪ್ತಿ – ಇವಿಷ್ಟು ಘಟನಾವಳಿಗಳೊಂದಿಗೆ ರಂಗನಾಯಕ ಸಾಕಾರಗೊಳ್ಳುತ್ತದೆ.
ಪೂರ್ವಾರ್ಧದ ಶ್ರೀಕೃಷ್ಣನಾಗಿ ದಿನಕರ ಗೋಖಲೆಯವರ ನಿರ್ವಹಣೆ ಚೆನ್ನಾಗಿತ್ತಾದರೂ , ಬಾಲ್ಯಲೀಲೆಗಳ ಮಹತ್ವವನ್ನು ಇನ್ನಷ್ಟು ವಿವರವಾಗಿ ಹೇಳಬಹುದಿತ್ತು . ಸಾಂಬನಾಗಿ ರತ್ನಾಕರ ಹೆಗ್ಡೆ ಉತ್ತಮವಾಗಿ ಪ್ರಸ್ತುತಿ ನೀಡಿ¨ªಾರೆ .ದಾರಿಕನಾಗಿ ಸಂದೇಶ ಮಂದಾರರದ್ದು ಆಶ್ಲೀಲತೆಯಿಲ್ಲದ ಹಾಸ್ಯ . ಲಕ್ಷಣೆಯಾಗಿ ರವಿಚಂದ್ರ ಚೆಂಬುರವರು ಉತ್ತಮ ನಾಟ್ಯ , ಶೃಂಗಾರದ ಸನ್ನಿವೇಶದಲ್ಲಿ ಚುರುಕಿನ ಸಂಭಾಷಣೆ ಮೂಲಕ ಗಮನ ಸೆಳೆದರು . ವನವಿಹಾರದ ಸನ್ನಿವೇಶಕ್ಕೆ ಸಖೀಯ ಪಾತ್ರಧಾರಿಗಳು ತೀರಾ ಸಪ್ಪೆಯಾಗಿ ಕಂಡರೂ , ಆ ಕೊರತೆಯನ್ನು ತುಂಬುವಲ್ಲಿ ರವಿಚಂದ್ರ ಯಶಸ್ವಿಯಾದರು .ಕೌರವನಾಗಿ ಬೆಳ್ಳಾರೆ ಮಂಜುನಾಥ ಭಟ್ , ಬಲರಾಮನಾಗಿ ಅರಳ ಗಣೇಶರು ರಂಜಿಸಿದರು . ಉತ್ತರಾರ್ಧದ ಶ್ರೀಕೃಷ್ಣನಾಗಿ ವಿಷ್ಣುಶರ್ಮರು ಉತ್ತಮ ಮಾತುಗಾರಿಕೆಯ ಮೂಲಕ ಕೃಷ್ಣನ ಮಾನಸಿಕ ತುಮುಲವನ್ನು , ಅಂತ್ಯದ ವಿಷಾದತೆಯ ಭಾವವನ್ನು ಚೆನ್ನಾಗಿ ಚಿತ್ರಿಸಿದರು . ಉತ್ತರಾರ್ಧದ ಸಾಂಬನಾಗಿ ಬೊಳಂತೂರು ಜಯರಾಮ ಶೆಟ್ಟರು , ಪ್ರಸಂಗದ ನಡೆಯನ್ನು ಅರ್ಥೈಸಿಕೊಂಡು ಪಾತ್ರ ನಿರ್ವಹಿಸಿದರು . ಪ್ರದ್ಯುಮ್ನನಾಗಿ ಸುಕೇಶ್ ಎಲ್ಕಾನ , ಬಣ್ಣದ ವೇಷದಲ್ಲಿ ಶಾಲ್ವನಾಗಿ ಬಾಲಕೃಷ್ಣ ಮಿಜಾರ್ , ನಾರದನಾಗಿ ರಾಮ ಭಂಡಾರಿ, ಭೀಷಣನಾಗಿ ಪ್ರಕಾಶ್ ಸಾಗರ , ಅರ್ಜುನನಾಗಿ ಶಂಭುಕುಮಾರ್, ಕಾರ್ತ್ಯ ಮಂಜುನಾಥ ರೈ ಹಾಗೂ ಉಳಿದ ಕಲಾವಿದರ ಪ್ರಸ್ತುತಿಯೂ ಚೆನ್ನಾಗಿತ್ತು .
ಭಾಗವತಿಕೆಯಲ್ಲಿ ಪ್ರಾರಂಭದಲ್ಲಿ ರಾಮಚಂದ್ರ ರಾಣ್ಯರು ಚೆನ್ನಾಗಿ ಹಾಡಿದರು . ಪಟ್ಲ ಸತೀಶ್ ಶೆಟ್ಟರ ಸುಮಧುರ ಕಂಠದ ಹಾಡುಗಾರಿಕೆ ಪ್ರಸಂಗ ಯಶಸ್ವಿಯಾಗಲು ಕಾರಣವಾಯಿತು . ವನವಿಹಾರದ ಹಾಡು ಮನ ಮೆಚ್ಚಿತು . ಸಾಂಬ – ಲಕ್ಷಣೆಯರ ಸಂವಾದದ ಶೃಂಗಾರ ರಸದ ಭಾಮಿನಿ ನೀಲ ಬಾನಂಗಳದ ತಾರಾ ಹಾಡಿದ ಕೂಡಲೇ ,ಉತ್ತಮ ಸಾಹಿತ್ಯದ ಆ ಭಾಮಿನಿಗೆ ಅರ್ಥ ಹೇಳಲು ಅವಕಾಶ ನೀಡದೆ, ಮುಂದಿನ ಹೃದಯ ಪುಟದಿ ನೀ ಮಧುರ ಭಾಷೆಯಲಿ | ಮಿದುವಕ್ಕರ ಬರೆಯೆ ಪದ್ಯವನ್ನು ಹಾಡಿದ ಪಟ್ಲರ ರಂಗನಡೆಯ ಚಾಣಾಕ್ಷ ತಂತ್ರ ನಿರ್ದೇಶನದ ಸಾಮರ್ಥ್ಯ ತೋರಿಸಿ ಕೊಟ್ಟಿತು . ಅನಂತರ ಅಂಡಾಲ ದೇವಿಪ್ರಸಾದ್ ಶೆಟ್ಟರು ಸಾಂಪ್ರದಾಯಿಕ ಶೈಲಿಯಲ್ಲಿ ಚೆನ್ನಾಗಿ ಹಾಡಿದರು. ಹಿರಿಯ ಭಾಗವತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕೊನೆಯ ಭಾಗದ ಭಾವನಾತ್ಮಕ ಸನ್ನಿವೇಶಗಳಲ್ಲಿ ಉತ್ತಮವಾಗಿ ಹಾಡಿದರು .
ಅಂಡಾಲರು ಭಾಗವತ ಹಾಗೂ ಶಿವಪುರಾಣದ ಉಮಾಸಂಹಿತೆಯನ್ನು ಆಧಾರವನ್ನಾಗಿ ಬಳಸಿ , ಸ್ವಲ್ಪ ಮಟ್ಟಿನ ಸ್ವಕಲ್ಪನೆಯನ್ನೂ ಸೇರಿಸಿ ರಂಗನಾಯಕ ಪ್ರಸಂಗ ರಚಿಸಿದ್ದಾರೆ . ಪ್ರಸಂಗದ ಪದ್ಯಗಳಿಗೆ ಬಳಸಿದ ಸಾಹಿತ್ಯ ಶ್ರೇಷ್ಠ ಮಟ್ಟದ್ದಾಗಿದ್ದು ಛಂದೋಬದ್ಧ ಪದ್ಯ ರಚನೆ ಪ್ರಸಂಗದ ಯಶಸ್ಸಿಗೆ ಕಾರಣ ಎನ್ನಬಹುದು.
ಎಂ.ಶಾಂತರಾಮ ಕುಡ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.